8000mAh ಬ್ಯಾಟರಿ ಮತ್ತು 2.4K ಡಿಸ್ಪ್ಲೇಯೊಂದಿಗೆ OPPO Pad Air 2 ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?

Updated on 24-Nov-2023

ಒಂದೂವರೆ ವರ್ಷಗಳ ನಂತರ ಕಂಪನಿಯು ಇಂದು ಚೀನಾದಲ್ಲಿ ಒಪ್ಪೋ ತನ್ನ ಎರಡನೇ ಬಜೆಟ್ ಟ್ಯಾಬ್ ಅನ್ನು ಕೈಗೆಟಕುವ ಬೆಲೆಗೆ ಲೇಟೆಸ್ಟ್ ಫೀಚರ್ಗಳೊಂದಿಗೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದೆ. ಈ ಲೇಖಾನದಲ್ಲಿ OPPO Pad Air 2 ಟ್ಯಾಬ್ಲೆಟ್ ಕುರಿತು ಒಂದಿಷ್ಟು ಮಾಹಿತಿಗಳನ್ನು ನೀಡಿದ್ದೇವೆ. ಇದರಲ್ಲಿ 8000mAh ಬ್ಯಾಟರಿಯೊಂದಿಗೆ 33W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ. ಅಲ್ಲದೆ 2.4K ಡಿಸ್ಪ್ಲೇಯೊಂದಿಗೆ ಪವರ್ಫುಲ್ ಚಿಪ್‌ಸೆಟ್‌ ಸಹ ಹೊಂದಿದ್ದು ಇದರ ಒಂದಿಷ್ಟು ಮಾಹಿತಿಯನ್ನು ಮುಂದೆ ತಿಳಿಯೋಣ.

Also Read: Instagram ಪಬ್ಲಿಕ್ ಖಾತೆಗಳಿಂದ ನಿಮಗಿಷ್ಟ ಬಂದ ರೀಲ್‌ಗಳನ್ನು ಡೌನ್‌ಲೋಡ್ ಮಾಡುವುದು ಹೇಗೆ ಗೊತ್ತಾ?

Oppo Pad Air 2 ಟ್ಯಾಬ್ಲೆಟ್ ವಿಶೇಷಣಗಳು

ಈ ಲೇಟೆಸ್ಟ್ Oppo Pad Air 2 ಬ್ಯಾಕ್ ಕ್ಯಾಮೆರಾವನ್ನು ಮಧ್ಯದಲ್ಲಿ ಇರಿಸಲಾಗಿದೆ. ಹಿಂಭಾಗದ ಪ್ಯಾನಲ್ ಡ್ಯುಯಲ್-ಟೋನ್ ಫಿನಿಶ್‌ನಲ್ಲಿ ಬರುತ್ತದೆ. ಈ ಟ್ಯಾಬ್ಲೆಟ್ 2408×1720 (2.4K) ಪಿಕ್ಸೆಲ್ ರೆಸಲ್ಯೂಶನ್ ಬೆಂಬಲದೊಂದಿಗೆ 11.35 ಇಂಚಿನ LCD ಡಿಸ್ಪ್ಲೇಯನ್ನು 90Hz ರಿಫ್ರೆಶ್ ಮತ್ತು 180Hz ಟಚ್ ಸ್ಯಾಂಪ್ಲಿಂಗ್ ನೊಂದಿಗೆ 400 ನಿಟ್ಸ್ ಗರಿಷ್ಠ ಹೊಳಪನ್ನು ನೀಡುತ್ತದೆ. ಟ್ಯಾಬ್ಲೆಟ್ ಅನ್ನು MediaTek Helio G99 ಚಿಪ್‌ಸೆಟ್‌ನಿಂದ ನಡೆಸಲಾಗುತ್ತಿದೆ. ಈ ಟ್ಯಾಬ್ LPDDR4x RAM ಮತ್ತು UFS 2.2 ಸ್ಟೋರೇಜ್‌ನೊಂದಿಗೆ ಆಂಡ್ರಾಯ್ಡ್ 13 ಆಧಾರಿತ ColorOS 13.2 ಅನ್ನು ಬೂಟ್ ಮಾಡುತ್ತದೆ.

ಟ್ಯಾಬ್ಲೆಟ್ ಕ್ಯಾಮೆರಾ ಮತ್ತು ಬ್ಯಾಟರಿ

ಈ ಟ್ಯಾಬ್ಲೆಟ್ ಹಿಂಬದಿಯಲ್ಲಿ ಒಂದೇ ಒಂದು 8MP ಮೆಗಾಪಿಕ್ಸೆಲ್ ಕ್ಯಾಮರಾ ಹೊಂದಿದ್ದು ಇದರ ಕ್ರಮವಾಗಿ ಮುಂಭಾಗದಲ್ಲೂ 8MP ಮೆಗಾಪಿಕ್ಸೆಲ್ ಕ್ಯಾಮರಾವನ್ನು ಫೋಟೋಗ್ರಫಿ ಮತ್ತು ವೀಡಿಯೊ ಕರೆಗಾಗಿ ಹೊಂದಿದೆ. ಆದರೆ ಇದರಲ್ಲಿ ಮೈಕ್ರೊ SD ಕಾರ್ಡ್ ಸ್ಲಾಟ್ ಮತ್ತು 3.5mm ಹೆಡ್‌ಫೋನ್ ಜ್ಯಾಕ್ ಹೊಂದಿಲ್ಲ. ಆದರೆ ಇದು ಪವರ್ಫುಲ್ ವಾಯ್ಸ್‌ಗಾಗಿ ಡಾಲ್ಬಿ ಅಟ್ಮಾಸ್ ಬೆಂಬಲದೊಂದಿಗೆ ಕ್ವಾಡ್ ಸ್ಪೀಕರ್ ಸೆಟಪ್ ಅನ್ನು ಹೊಂದಿದೆ. ಟ್ಯಾಬ್ಲೆಟ್‌ನಲ್ಲಿನ ಸಂಪರ್ಕವು ಡ್ಯುಯಲ್-ಬ್ಯಾಂಡ್ ವೈಫೈ, ಬ್ಲೂಟೂತ್ 5.2 ಮತ್ತು ಯುಎಸ್‌ಬಿ ಟೈಪ್-ಸಿ ಅನ್ನು ಒಳಗೊಂಡಿದೆ. ಟ್ಯಾಬ್ 8000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಈ ಟ್ಯಾಬ್ಲೆಟ್ 33W SuperVOOC ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಬರುತ್ತದೆ.

Oppo Pad Air 2 ಟ್ಯಾಬ್ಲೆಟ್ ಬೆಲೆ ಮತ್ತು ಲಭ್ಯತೆ:

6GB RAM + 128GB ಸ್ಟೋರೇಜ್ – $185 (ರೂ.15,424)
8GB RAM + 128GB ಸ್ಟೋರೇಜ್ – $210 (ರೂ.17,509)
8GB RAM + 256GB ಸ್ಟೋರೇಜ್ – $240 (ರೂ.20,010)

ಈ ಲೇಟೆಸ್ಟ್ ಒಪ್ಪೋ ತನ್ನ ಹೊಸ Oppo Pad Air 2 ಟ್ಯಾಬ್ಲೆಟ್ ನೀವು ಎರಡು ಸ್ಪೇಸ್ ಗ್ರೇ ಮತ್ತು ಸ್ಟ್ರೀಮರ್ ಸಿಲ್ವರ್ ಬಣ್ಣದ ಆಯ್ಕೆಗಳಲ್ಲಿ ಬಿಡುಗಡೆ ಮಾಡಿದೆ. ಪ್ರಸ್ತುತ ಇದು ಮುಂಗಡ-ಕೋರಿಕೆಗೆ ಲಭ್ಯವಿದ್ದು ಇದರ ಮಾರಾಟವು 25ನೇ ನವೆಂಬರ್ 2023 ರಿಂದ ಮೊದಲ ಮಾರಾಟ ಪ್ರಾರಂಭವಾಗಲಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :