OPPO K12x 5G ಹೊಸ ಬಣ್ಣದ ವೇರಿಯಂಟ್ ₹4000 ರೂಗಳ ಆಫರ್‌ಗಳೊಂದಿಗೆ ಇಂದಿನಿಂದ ಮಾರಾಟ!

OPPO K12x 5G ಹೊಸ ಬಣ್ಣದ ವೇರಿಯಂಟ್ ₹4000 ರೂಗಳ ಆಫರ್‌ಗಳೊಂದಿಗೆ ಇಂದಿನಿಂದ ಮಾರಾಟ!
HIGHLIGHTS

ಭಾರತದಲ್ಲಿ ಇಂದು ಈ ಲೇಟೆಸ್ಟ್ OPPO K12x 5G Feather Pink ಸ್ಮಾರ್ಟ್‌ಫೋನ್ ಮೊದಲ ಬಾರಿಗೆ ಮಾರಾಟ.

ಈ OPPO K12x 5G Feather Pink ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 4000 ರೂಗಳ ಹೆಚ್ಚುವರಿಯ ದಿಸ್ಕೌಂಟ್ ನೀಡುತ್ತಿದೆ.

ಈ ಆಫರ್ ಕೇವಲ ಫ್ಲಿಪ್‌ಕಾರ್ಟ್ ಪ್ಲಸ್ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ ಎನ್ನುವುದನ್ನು ಗಮನದಲ್ಲಿಡಬೇಕು.

ಭಾರತದಲ್ಲಿ ಇಂದು ಈ ಲೇಟೆಸ್ಟ್ OPPO K12x 5G ಸ್ಮಾರ್ಟ್‌ಫೋನ್ ಹೊಸ ಬಣ್ಣದ ರೂಪಾಂತರವು ಮೊದಲ ಬಾರಿಗೆ ಭಾರಿ ಕೊಡುಗೆಯೊಂದಿಗೆ ಇಂದಿನಿಂದ ಶುರುವಾಗಿರುವ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಮಾರಾಟದಲ್ಲಿ (Flipkart Big Billion Day 2024) ಮಾರಾಟವಾಗುತ್ತಿದೆ. ಈ ಸೇಲ್ ಮೊದಲು ಫ್ಲಿಪ್‌ಕಾರ್ಟ್ ಮಾರಾಟವು ಪ್ಲಸ್ ಬಳಕೆದಾರರಿಗೆ ಇಂದಿನಿಂದ ಪ್ರಾರಂಭವಾಗುತ್ತದೆ. OPPO K12x 5G ಹೊಸ ಬಣ್ಣದ ರೂಪಾಂತರವು ಇಂದಿಂದ ಮೊದಲ ಬಾರಿಗೆ ಭಾರಿ ಕೊಡುಗೆಯೊಂದಿಗೆ ಮಾರಾಟವಾಗಲಿದೆ. ಒಪ್ಪೋ ಇತ್ತೀಚೆಗೆ ಬಿಡುಗಡೆಯಾದ ತನ್ನ ಸ್ಮಾರ್ಟ್‌ಫೋನ್‌ನ ಹೊಸ ಫೆದರ್ ಪಿಂಕ್ ರೂಪಾಂತರವನ್ನು ಬಜೆಟ್ ಬೆಲೆಯಲ್ಲಿ ಬಿಡುಗಡೆ ಮಾಡಿದೆ.

OPPO K12x 5G ಬೆಲೆ ಮತ್ತು ಆಫರ್ಗಳು:

ಈ ಹೊಸ ರೂಪಾಂತರದ ಮಾರಾಟ ಸಹ ಇಂದಿನಿಂದ ಪ್ರಾರಂಭವಾಗುವ ಫ್ಲಿಪ್‌ಕಾರ್ಟ್‌ನ ಬಿಲಿಯನ್ ಡೇಸ್ ಮಾರಾಟದಿಂದ (Flipkart Big Billion Day 2024) ಮಾರಾಟಕ್ಕೆ ಲಭ್ಯವಿರುತ್ತದೆ. ಪ್ಲಸ್ ಬಳಕೆದಾರರಿಗೆ ಫ್ಲಿಪ್‌ಕಾರ್ಟ್ ಬಿಬಿಡಿ ಮಾರಾಟ ಇಂದಿನಿಂದ ಪ್ರಾರಂಭವಾಗುತ್ತದೆ. Oppo K12x 5G ಹೊಸ ಫೆಧರ್ ಪಿಂಕ್ ಬಣ್ಣದ ರೂಪಾಂತರವನ್ನು 6GB RAM ಮತ್ತು 128GB ಸ್ಟೋರೇಜ್ ಆರಂಭಿಕ 12,999 ರೂಗಳ ಬೆಲೆಯಲ್ಲಿ (ಫ್ಲಿಪ್‌ಕಾರ್ಟ್ ಪ್ಲಸ್ ಗ್ರಾಹಕರಿಗೆ 10,999 ಮಧ್ಯ ರಾತ್ರಿ ಮಾರಾಟದಲ್ಲಿ) ಲಭ್ಯವಿದೆ. ಈ ಆಫರ್ ಕೇವಲ ಫ್ಲಿಪ್‌ಕಾರ್ಟ್ ಪ್ಲಸ್ ಗ್ರಾಹಕರಿಗೆ ಮಾತ್ರ ಲಭ್ಯವಿರುತ್ತದೆ ಎನ್ನುವುದನ್ನು ಗಮನದಲ್ಲಿಡಬೇಕು

OPPO K12x 5G Feather Pink variant first sale

ಸಾಮಾನ್ಯವಾಗಿ 16,999 ರೂಗಳಿಗೆ ಬಿಡುಗಡೆಗೆ ಪಟ್ಟಿ ಮಾಡಲಿರುವ ಈ ಸ್ಮಾರ್ಟ್ಫೋನ್ ಮೇಲೆ ಬರೋಬ್ಬರಿ 4000 ರೂಗಳ ಹೆಚ್ಚುವರಿಯ ದಿಸ್ಕೌಂಟ್ ನೀಡುವುದರೊಂದಿಗೆ ಈ ಫೋನ್ ಫ್ಲಿಪ್‌ಕಾರ್ಟ್‌ನ ಬಿಗ್ ಬಿಲಿಯನ್ ಡೇಸ್ ಸೇಲ್‌ನಿಂದ HDFC ಬ್ಯಾಂಕ್ ಕಾರ್ಡ್ ಮೂಲಕ 1,000 ರೂಗಳ ರಿಯಾಯಿತಿ ಕೊಡುಗೆಯೊಂದಿಗೆ ಖರೀದಿಸಬಹುದು. ಈ ಕೊಡುಗೆಯೊಂದಿಗೆ ನೀವು ಫೋನ್ ಅನ್ನು ಕಡಿಮೆ ಬೆಲೆಗೆ ಪಡೆಯಬಹುದು ಮತ್ತು ವಿನಿಮಯ ಬೋನಸ್ ಅನ್ನು ಸಹ ಪಡೆಯಬಹುದು.

Also Read: Amazon Festival Sale 2024 ಪ್ರೈಮ್ ಸದಸ್ಯರಿಗೆ ಆರಂಭ! ಲೇಟೆಸ್ಟ್ ಲ್ಯಾಪ್ಟಾಪ್ ಮತ್ತು ಸ್ಮಾರ್ಟ್ ಟಿವಿಗಳ ಮೇಲೆ ಭರ್ಜರಿ ಡೀಲ್‌ಗಳು

OPPO K12x 5G ವಿಶೇಷಣ ಮತ್ತು ವೈಶಿಷ್ಟ್ಯಗಳು:

OPPO K12x 5G ಸ್ಮಾರ್ಟ್‌ಫೋನ್ ಸ್ಪ್ಲಾಶ್ ಟಚ್ ಮತ್ತು 120Hz ರಿಫ್ರೆಶ್ ರೇಟ್ ಬೆಂಬಲದೊಂದಿಗೆ 6.67 ಇಂಚಿನ HD ಸ್ಕ್ರೀನ್ ಅನ್ನು ಹೊಂದಿದೆ. OPPO K12x 5G ಫೋನ್ ಮೀಡಿಯಾ ಟೆಕ್ ಡೈಮೆನ್ಸಿಟಿ 6300 ಚಿಪ್‌ಸೆಟ್ ಜೊತೆಗೆ 6GB ಮತ್ತು 8GB RAM ಮತ್ತು 128GB ಮತ್ತು 256GB ಎಂಬ ಎರಡು ವಿಧದ ಇಂಟರ್ನಲ್ ಸ್ಟೋರೇಜ್ನೊಂದಿಗೆ ಬರುತ್ತದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಮಿಲಿಟರಿ ದರ್ಜೆಯ MIL-STD 81H ಪ್ರಮಾಣೀಕರಣದೊಂದಿಗೆ ಹಾನಿ ನಿರೋಧಕ ದೇಹದೊಂದಿಗೆ ಬರುತ್ತದೆ.

ಈ ಲೇಟೆಸ್ಟ್ OPPO K12x 5G ಫೋನ್‌ಗಳು ಡ್ಯುಯಲ್ ರಿಯರ್ ಕ್ಯಾಮೆರಾ ಬೆಂಬಲವನ್ನು ಹೊಂದಿವೆ. ಇದು ಮುಂಭಾಗದಲ್ಲಿ 32MP ಪ್ರೈಮರಿ ಮತ್ತು 2MP ಪೋರ್ಟ್ರೇಟ್ ಕ್ಯಾಮೆರಾವನ್ನು ಹೊಂದಿದೆ. ಈ ಫೋನ್ 8MP ಸೆಲ್ಫಿ ಕ್ಯಾಮೆರಾವನ್ನು ಸಹ ಹೊಂದಿದೆ. ಈ ಫೋನ್ 45W SuperOok ವೇಗದ ಚಾರ್ಜ್ ಬೆಂಬಲದೊಂದಿಗೆ 5100mAh ಬ್ಯಾಟರಿಯನ್ನು ಹೊಂದಿದೆ. ಈ ಫೋನ್ ಬಜೆಟ್ ಬೆಲೆಯಲ್ಲಿ ಉತ್ತಮ ವೈಶಿಷ್ಟ್ಯಗಳನ್ನು ಹೊಂದಿರುವ ಫೋನ್ ಎಂದು ಬಳಕೆದಾರರಿಂದ ಹೊಗಳಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo