ಭಾರತದಲ್ಲಿ ಕ್ಯಾಮೆರಾ ಮತ್ತು ಕೈಗೆಟಕುವ ಬೆಲೆಗೆ ಜನಪ್ರಿಯವಾಗಿರುವ ಸ್ಮಾರ್ಟ್ಫೋನ್ ಬ್ರಾಂಡ್ ಒಪ್ಪೋ (OPPO) ಈಗ ತನ್ನ ಮುಂಬರಲಿರುವ OPPO K12x 5G ಭಾರತದಲ್ಲಿ ಇದೆ 29ನೇ ಜೂಲೈ 2024 ರಂದು ಬಿಡುಗಡೆಯಾಗಲು ಸಜ್ಜಾಗಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಅನ್ನು ಕಂಪನಿ ಎರಡು ವಿಶೇಷ ಬಣ್ಣಗಳಲ್ಲಿ ಬಿಡುಗಡೆಗೊಳಿಸುವುದಾಗಿ ಮಾಹಿತಿ ನೀಡಿದೆ. ಇದನ್ನು ಭಾರತದಲ್ಲಿ ಮಿಲಿಟರಿ ಗ್ರೇಡ್ ಮತ್ತು ಸುಮಾರು 5100mAh ಬ್ಯಾಟರಿಯೊಂದಿಗೆ ಬರುವುದಾಗಿ ತಿಳಿಸಲಾಗಿದೆ. ಈ ಸ್ಮಾರ್ಟ್ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಬಿಡುಗಡೆಯಾಗಿ ಮಾರಾಟವಾಗಲಿದೆ.
Also Read: ಪ್ರತಿದಿನ ಡೇಟಾ ಮತ್ತು Unlimited Calling ಪೂರ್ತಿ ಒಂದು ವರ್ಷಕ್ಕೆ ಬೇಕಿದ್ದರೆ ಯಾವ ಪ್ಲಾನ್ ಬೆಸ್ಟ್?
ಈ ಮುಂಬರಲಿರುವ OPPO K12x 5G ಸ್ಮಾರ್ಟ್ಫೋನ್ 360-ಡಿಗ್ರಿ ಡ್ಯಾಮೇಜ್ ರೆಸಿಸ್ಟೆಂಟ್ ನಿರೋಧಕ ರಕ್ಷಾಕವಚವನ್ನು ಹೊಂದಿರುತ್ತದೆಂದು ಒಪ್ಪೋ ಹೇಳಿದೆ. ಸ್ಮಾರ್ಟ್ಫೋನ್ ಅದರ ಇಂಟರ್ನಲ್ ಯೂನಿಟ್ ಮೆತ್ತೆಗಿಡಲು ಸ್ಪಂಜಿನ ರಚನೆಯಿಂದ ಪ್ರೇರಿತವಾದ ಡ್ರಾಪ್-ರೆಸಿಸ್ಟೆಂಟ್ ವಸ್ತುಗಳನ್ನು ಬಳಸುತ್ತದೆ. ಡಿಸ್ಪ್ಲೇ ಡಬಲ್-ರೀನ್ಫೋರ್ಸ್ಡ್ ಪಾಂಡ ಗ್ಲಾಸ್ನಿಂದ ರಕ್ಷಿಸಲ್ಪಡುತ್ತದೆ ಮತ್ತು ಸ್ಮಾರ್ಟ್ಫೋನ್ ಬಾಳಿಕೆಗಾಗಿ MIL-STD-810H ಮಿಲಿಟರಿ ಪ್ರಮಾಣಿತ ಪ್ರಮಾಣೀಕರಣವನ್ನು ಹೊಂದಿರುತ್ತದೆ. OPPO K12x 5G ಹೆಚ್ಚುವರಿ ರಕ್ಷಣೆಗಾಗಿ ಏರ್ ಕುಶನ್ ಆರ್ಮರ್ ಕೇಸ್ ಅನ್ನು ಒಳಗೊಂಡಿರುತ್ತದೆಂದು ಹೇಳುತ್ತಿದೆ.
OPPO K12x 5G ಸ್ಮಾರ್ಟ್ಫೋನ್ 6.67 ಇಂಚಿನ OLED ಡಿಸ್ಪ್ಲೇಯನ್ನು 2400-1080 ರೆಸಲ್ಯೂಶನ್ ಮತ್ತು 2100 ನಿಟ್ಸ್ ಗರಿಷ್ಠ ಹೊಳಪನ್ನು ಹೊಂದಿದ್ದು ನಿಮ್ಮ ಒದ್ದೆಯಾದ ಕೈಗಳಿಂದ ಸ್ಪರ್ಶಿಸಲು ಸ್ಕ್ರಿನ್ ಸ್ಪಂದಿಸುತ್ತದೆ ಮತ್ತು 120Hz ಅಥವಾ 60Hz ನ ರಿಫ್ರೆಶ್ ದರವನ್ನು ನೀಡುತ್ತದೆ. ಸ್ಮಾರ್ಟ್ಫೋನ್ 50MP ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾವನ್ನು f/1.8 ಅಪರ್ಚರ್ ಮತ್ತು ಆಟೋಫೋಕಸ್‌ನೊಂದಿಗೆ ಹೊಂದಿದೆ. ಹೆಚ್ಚುವರಿಯಾಗಿ f/2.4 ಅಪರ್ಚರ್ ಜೊತೆಗೆ 2MP ಮೆಗಾಪಿಕ್ಸೆಲ್ ಪೋರ್ಟ್ರೇಟ್ ಲೆನ್ಸ್ ಇದೆ.
ಸ್ಮಾರ್ಟ್ಫೋನ್ ಮುಂಭಾಗದಲ್ಲಿ ಇದು 16MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು f/2.4 ಅಪರ್ಚರ್ ಜೊತೆಗೆ 82° ಕ್ಷೇತ್ರವನ್ನು ಹೊಂದಿದೆ. ಅಲ್ಲದೆ ಫೋನ್ 2.2GHz ನಲ್ಲಿ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 695 5G ಪ್ರೊಸೆಸರ್ನಿಂದ ನಡೆಸಲ್ಪಡುತ್ತದೆ. ಅಲ್ಲದೆ LPDDR4x RAM ಮತ್ತು UFS 2.2 ಸ್ಟೋರೇಜ್ ಜೋಡಿಸಲಾಗಿದೆ. ಇದರ 5500mAh ಬ್ಯಾಟರಿಯು SuperVOOC, VOOC 3.0, PD3.0, ಮತ್ತು UFCS ಸೇರಿದಂತೆ ವಿವಿಧ ಪ್ರೋಟೋಕಾಲ್‌ಗಳ ಮೂಲಕ ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.