ಇಂದು ಭಾರತದಲ್ಲಿ ಒಪ್ಪೋ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರೊಂದಿಗೆ ಹೊಚ್ಚ ಹೊಸ Oppo K1 ಸ್ಮಾರ್ಟ್ಫೋನ್ ಅನ್ನು ಸದ್ದಿಲ್ಲದೇ ಬಿಡುಗಡೆಗೊಳಿಸಿದೆ. ಇದನ್ನು ಕೆಲವೇ ಘಂಟೆಗಳಲ್ಲಿ ಆರಂಭಿಸಲು YouTube ಅಲ್ಲಿ ಹೊಂದಿಸಲಾಗಿದೆ. ಇದು ಮಧ್ಯ ಶ್ರೇಣಿಯ ಸ್ಮಾರ್ಟ್ಫೋನ್ ಆಗಿದ್ದು ಈ ಫೋನ್ ಪ್ರತ್ಯೇಕವಾಗಿ ಫ್ಲಿಪ್ಕಾರ್ಟ್ ಮೂಲಕ ಲಭ್ಯವಾಗಲಿದೆ. ಇದರ ಲೈವ್ ನೀವು ಕೆಳಗೆ ನೀಡಿರುವ ವಿಡಿಯೋ ಮೇಲೆ ಕ್ಲಿಕ್ ಮಾಡಿ ಮಧ್ಯಾಹ್ನ 12:00 PM ರಂದು ಬಿಡುಗಡೆಯ ಕಾರ್ಯಕ್ರಮವನ್ನು ಲೈವ್ ಸ್ಟ್ರೀಮಿಂಗ್ ನೋಡಬವುದು. ಇದನ್ನು ತಿಳಿಯದವರೊಂದಿಗೆ ಶೇರ್ ಮಾಡಿಕೊಳ್ಳಿ.
ಈ ಹೊಸ Oppo K1 ಅನ್ನು ಈಗಾಗಲೇ ಚೀನಾದಲ್ಲಿ ಪ್ರಾರಂಭಿಸಲಾಗಿದ್ದು ಇದರ ವಿಶೇಷತೆಗಳು ಬಹಿರಂಗವಾಗಿವೆ. ಚೀನಾದಲ್ಲಿ CNY 1599 (ಸುಮಾರು ರೂ 16,000 ರೂಗಳು) ದರದಲ್ಲಿ ಪ್ರಾರಂಭವಾಗುತ್ತದೆ. ಮತ್ತು ನಾವು ಇದೇ ಬೆಲೆಯಲ್ಲಿ ಭಾರತೀಯ ಮಾರುಕಟ್ಟೆಯಲ್ಲಿ ನಿರೀಕ್ಷಿಸಬಹುದು. Oppo K1 ಭಾರತದಲ್ಲಿ ಒಂದು ಕೈಗೆಟುಕುವ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಸ್ಮಾರ್ಟ್ಫೋನ್ ಆಗಿದೆ.
ಈ ಸ್ಮಾರ್ಟ್ಫೋನ್ ನಿಮಗೆ 19: 9 ಅಸ್ಪೆಟ್ ರೀಷುವಿನೊಂದಿಗೆ 91% ಪ್ರತಿಶತ ಸ್ಕ್ರೀನ್ ಟು ಬಾಡಿ ಅನುಪಾತದೊಂದಿಗೆ 6.4 ಇಂಚಿನ ಡಿಸ್ಪ್ಲೇ ಅನ್ನು ಪ್ಯಾಕ್ ಮಾಡುತ್ತದೆ. ಇದು ಪೂರ್ಣ HD+ (1080 x 2340 ಪಿಕ್ಸೆಲ್ಗಳು) ರೆಸಲ್ಯೂಶನ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಓಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 660 ಚಿಪ್ಸೆಟ್ ನಲ್ಲಿ ನಡೆಯುತ್ತದೆ. 4GB / 6GB ಯ RAM ಮತ್ತು 64GB ಯ ಆನ್ಬೋರ್ಡ್ ಸ್ಟೋರೇಜ್ ಬೆಂಬಲಿಸಿ ಮೈಕ್ರೊ SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಿಕೊಳ್ಳಬವುದು.
ಇದರ ಹಿಂಭಾಗದಲ್ಲಿ ಡ್ಯೂಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 16MP ಮೆಗಾಪಿಕ್ಸೆಲ್ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಸೆನ್ಸರ್ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 25MP ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ. ಇದು 3D ಗ್ಲಾಸ್ ಪ್ಯಾನಲನ್ನು ಹೊಂದಿದ್ದು 3600mAh ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಇದು ಆಂಡ್ರಾಯ್ಡ್ 8.1 ಓರಿಯೊವನ್ನು ಆಧರಿಸಿ ColorOS 5.2 ಪ್ರೊಸೆಸರ್ ಅನ್ನು ರನ್ ಮಾಡುತ್ತದೆ.