ಸ್ಮಾರ್ಟ್ಫೋನ್ ಉತ್ಪಾದಕ ಒಪ್ಪೋ ಅಂತಿಮವಾಗಿ ಭಾರತದಲ್ಲಿ Oppo K1 ಎಂಬ ಹ್ಯಾಂಡ್ಸೆಟನ್ನು ಬಿಡುಗಡೆಗೊಳಿಸಿದೆ. ಈ ಫೋನ್ನ ಅತಿ ದೊಡ್ಡ ವಿಶೇಷತೆ ಅಂದ್ರೆ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್. ಅಲ್ಲದೆ ಈ ಫೋನ್ ಡ್ಯೂಯಲ್ ಹಿಂಬದಿಯ ಕ್ಯಾಮೆರಾ, ವಾಟರ್ ಡ್ರಾಪ್ ನಾಚ್ ಡಿಸ್ಪ್ಲೇ, ಮತ್ತು 25MP ಮೆಗಾಪಿಕ್ಸೆಲ್ ಫ್ರಂಟ್ ಕ್ಯಾಮೆರಾ. ಅಲ್ಲದೆ ಈ ಫೋನ್ 4GB ಯ RAM ಮತ್ತು 64GB ಯ ಸ್ಟೋರೇಜ್ ಜೋತೆಗೆ ಕೇವಲ 16,990 ರೂಗಳಲ್ಲಿ ಬಿಡುಗಡೆಗೊಂಡಿದೆ.
ಈ ಸ್ಮಾರ್ಟ್ಫೋನ್ ಬಿಡುಗಡೆಯೊಂದಿಗೆ ಹಲವಾರು ಹೊಸ ಆಫರ್ಗಳನ್ನು ಸಹ ನೀಡುತ್ತದೆ. ಇದು 12ನೇ ಫೆಬ್ರವರಿಯಂದು ಮಧ್ಯಾಹ್ನ 12 ಘಂಟೆಗೆ ಫ್ಲಿಪ್ಕಾರ್ಟ್ ಮೂಲಕ ಮಾರಾಟ ಆಗಲಿದೆ. ಇದರೊಂದಿಗಿನ ಕೆಲ ಆಫರ್ಗಳೆಂದರೆ CITI ಬ್ಯಾಂಕ್ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡಿನ ಪೇಮೆಂಟ್ ಮೇಲೆ 10% ತತ್ಕ್ಷಣದ ರಿಯಾಯಿತಿಯನ್ನು ನೀಡುತ್ತದೆ. ಅಲ್ಲದೆ ನೋ ಕಾಸ್ಟ್ EMI ಸೇರಿದಂತೆ ಸಂಪೂರ್ಣ ಮೊಬೈಲ್ ಪ್ರೊಟೆಕ್ಷನ್ ಸಹ ಪ್ರಸ್ತಾಪವಿದೆ.
ಈ ಸ್ಮಾರ್ಟ್ಫೋನ್ ನಿಮಗೆ 19: 9 ಅಸ್ಪೆಟ್ ರೀಷುವಿನೊಂದಿಗೆ 91% ಪ್ರತಿಶತ ಸ್ಕ್ರೀನ್ ಟು ಬಾಡಿ ಅನುಪಾತದೊಂದಿಗೆ 6.4 ಇಂಚಿನ ಡಿಸ್ಪ್ಲೇ ಅನ್ನು ಪ್ಯಾಕ್ ಮಾಡುತ್ತದೆ. ಇದು ಪೂರ್ಣ HD+ (1080 x 2340 ಪಿಕ್ಸೆಲ್ಗಳು) ರೆಸಲ್ಯೂಶನ್ನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು ಓಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 660 ಚಿಪ್ಸೆಟ್ ನಲ್ಲಿ ನಡೆಯುತ್ತದೆ. 4GB / 6GB ಯ RAM ಮತ್ತು 64GB ಯ ಆನ್ಬೋರ್ಡ್ ಸ್ಟೋರೇಜ್ ಬೆಂಬಲಿಸಿ ಮೈಕ್ರೊ SD ಕಾರ್ಡ್ ಮೂಲಕ 256GB ವರೆಗೆ ವಿಸ್ತರಿಸಿಕೊಳ್ಳಬವುದು.
ಇದರ ಹಿಂಭಾಗದಲ್ಲಿ ಡ್ಯೂಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. 16MP ಮೆಗಾಪಿಕ್ಸೆಲ್ ಸೆನ್ಸರ್ ಮತ್ತು 2MP ಮೆಗಾಪಿಕ್ಸೆಲ್ ಸೆನ್ಸರ್ ಒಳಗೊಂಡಿದೆ. ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 25MP ಮೆಗಾಪಿಕ್ಸೆಲ್ ಸೆನ್ಸರ್ ಹೊಂದಿದೆ. ಇದು 3D ಗ್ಲಾಸ್ ಪ್ಯಾನಲನ್ನು ಹೊಂದಿದ್ದು 3600mAh ಬ್ಯಾಟರಿಯನ್ನು ಹೊಂದಿದೆ. ಅಲ್ಲದೆ ಇದು ಆಂಡ್ರಾಯ್ಡ್ 8.1 ಓರಿಯೊವನ್ನು ಆಧರಿಸಿ ColorOS 5.2 ಪ್ರೊಸೆಸರ್ ಅನ್ನು ರನ್ ಮಾಡುತ್ತದೆ.