ಚೀನಾದ ಜನಪ್ರಿಯ ಸ್ಮಾರ್ಟ್ಫೋ ತಯಾರಕ ಒಪ್ಪೋ ತನ್ನ ಲೇಟೆಸ್ಟ್ OPPO Find X7 ಸರಣಿಯ ಸ್ಮಾರ್ಟ್‌ಫೋನ್‌ಗಳನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದರಲ್ಲಿ OPPO Find X7 ಮತ್ತು OPPO Find X7 Ultra ಎಂಬ ಎರಡು ಸ್ಮಾರ್ಟ್‌ಫೋನ್‌ಗಳನ್ನು ಕಾಣಬಹುದು. ಸ್ಮಾರ್ಟ್‌ಫೋನ್‌ಗಳು ಚೀನಾದಲ್ಲಿ ಬಿಡುಗಡೆಯಾಗಿದ್ದು 12 ಜನವರಿ 2024 ರಿಂದ ಮಾರಾಟಕ್ಕೆ ಲಭ್ಯವಾಗಲಿದೆ. ಇದರ ಗಮನಾರ್ಹವಾಗಿ ಕಂಪನಿಯು ಫೈಂಡ್ ಸರಣಿಯಲ್ಲಿ ಅಲ್ಟ್ರಾ ಆವೃತ್ತಿಯನ್ನು ಬೆಸ್ಟ್ ಫೀಚರ್ಸ್‌ಗಳೊಂದಿಗೆ ಪರಿಚಯಿಸಿದೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ ಡ್ಯುಯಲ್ ಪೆರಿಸ್ಕೋಪ್ ಸೆನ್ಸರ್ ಮತ್ತು ಮುಂಭಾಗದಲ್ಲಿ 32MP ಸೆಲ್ಫಿ ಕ್ಯಾಮೆರಾ ಹೊಂದಿರುವ ಮೊದಲ ಸ್ಮಾರ್ಟ್‌ಫೋನ್ ಆಗಿದೆ.
Also Read: 13 ತಿಂಗಳ ವ್ಯಾಲಿಡಿಟಿಯೊಂದಿಗೆ Unlimited ಕರೆ ಮತ್ತು ಡೇಟಾ ನೀಡುವ ಬೆಸ್ಟ್ BSNL ಪ್ಲಾನ್ ಬೆಲೆ ಎಷ್ಟು?
ಈ ಒಪ್ಪೋ ಫೈಂಡ್ ಎಕ್ಸ್7 ಅಲ್ಟ್ರಾ ಸ್ಮಾರ್ಟ್ಫೋನ್ 3168 × 1440 ಪಿಕ್ಸೆಲ್‌ಗಳ ರೆಸಲ್ಯೂಶನ್‌ನೊಂದಿಗೆ 6.82 ಇಂಚಿನ AMOLED LTPO ಕರ್ವ್ಡ್ ಡಿಸ್ಪ್ಲೇ ಜೊತೆಗೆ QHD+ ರೆಸಲ್ಯೂಶನ್ ಮತ್ತು 120Hz ರಿಫ್ರೆಶ್ ರೇಟ್‌ಗೆ ಬೆಂಬಲ. ಸ್ಮಾರ್ಟ್‌ಫೋನ್ 2160Hz PWM ಮಬ್ಬಾಗಿಸುವಿಕೆ 4500 ನಿಟ್‌ಗಳ ಗರಿಷ್ಠ ಬ್ರೈಟ್‌ನೆಸ್‌ನೊಂದಿಗೆ ProXDR ಅನ್ನು ಸಪೋರ್ಟ್ ಮಾಡುತ್ತದೆ. ಇದರಿಂದ ಡಿಸ್ಪ್ಲೇ ಡೈನಾಮಿಕ್ ಶ್ರೇಣಿಯನ್ನು ಹೆಚ್ಚಿಸಿ HDR ಇಮೇಜ್‌ಗಳನ್ನು ಉತ್ತಮವಾಗಿ ಕಾಣುವಂತೆ ಮಾಡಲು ಸಹಾಯ ಮಾಡುತ್ತದೆ.
ಈ ಪ್ರೀಮಿಯಂ ಸ್ಮಾರ್ಟ್‌ಫೋನ್ 50MP ಸೋನಿ LYT-900 ಸೆನ್ಸರ್‌ನೊಂದಿಗೆ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS), 50MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ OIS ಜೊತೆಗೆ 50MP 3X ಟೆಲಿಫೋಟೋ ಲೆನ್ಸ್ ಮತ್ತು 50MP 6X ಪೆರಿಸ್ಕೋಪ್ ಟೆಲಿಸ್ಕೋಪ್ ಲೆನ್ಸ್‌ನೊಂದಿಗೆ ಹಿಂಭಾಗಕ್ಕೆ ಕ್ವಾಡ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. Oppo Find X7 Ultra ಮಾರುಕಟ್ಟೆಯಲ್ಲಿ 1 ಇಂಚಿನ Sony LYT-900 ಸೆನ್ಸರ್ ಅನ್ನು ಪ್ಯಾಕ್ ಮಾಡಿದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. ಅಲ್ಲದೆ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ ಮುಂಭಾಗದಲ್ಲಿ 32MP ಕ್ಯಾಮೆರಾ ಸೆನ್ಸರ್ ಅನ್ನು ಹೊಂದಿದೆ.
ಈ ಸ್ಮಾರ್ಟ್ಫೋನ್ ಹಾರ್ಡ್ವೇರ್ ಬಗ್ಗೆ ಮಾತನಾಡುದಾದ್ರೆ ಫೋನ್ ತನ್ನದೆಯಾದ ಒಪ್ಪೋ ColorOS 14 ಆಧಾರಿತ ಇತ್ತೀಚಿನ ಆಂಡ್ರಾಯ್ಡ್ 14 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ. ಸ್ಮಾರ್ಟ್ರ್ಫೋನ್ ಕ್ವಾಲ್‌ಕಾಮ್‌ನ ಇತ್ತೀಚಿನ ಚಿಪ್‌ಸೆಟ್ Qualcomm, the Snapdragon 8 Gen 3 ಮೂಲಕ ಚಾಲಿತವಾಗಿದೆ. 16GB LPDDR5X RAM ಮತ್ತು ಸುಮಾರು 512GB UFS 4.0 ಸ್ಟೋರೇಜ್ ಅನ್ನು ಒಳಗೊಂಡಿದೆ.
ಈ ಸ್ಮಾರ್ಟ್‌ಫೋನ್‌ಗಳು 100W SuperVOOC ಫಾಸ್ಟ್ ಚಾರ್ಜಿಂಗ್‌ನೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಫೋನ್‌ಗಳು NFC, 5G, 4G LTE, Wi-Fi 7, ಬ್ಲೂಟೂತ್ ಜೊತೆಗೆ ಸ್ಯಾಟಿಲೈಟ್ ಕಾನ್ವರ್ಸೇಶನ್ ಫೀಚರ್ ಸಹ ಒಳಗೊಂಡಿವೆ. OPPO Find X7 Ultra ಓಷನ್ ಮತ್ತು ಸ್ಕೈ, ಡೆಸರ್ಟ್ ಸಿಲ್ವರ್ ಮೂನ್ ಮತ್ತು ಪೈನ್ ಶ್ಯಾಡೋ ಬ್ಲೂ ಬಣ್ಣಗಳಲ್ಲಿ ಬರುತ್ತದೆ.
ಈ ಲೇಟೆಸ್ಟ್ ಫೈಂಡ್ ಎಕ್ಸ್7 ಅಲ್ಟ್ರಾ ಪ್ರಸ್ತುತ ಚೀನಾದಲ್ಲಿ ಒಟ್ಟಾರೆಯಾಗಿ 4 ವೇರಿಯೆಂಟ್ಗಳಲ್ಲಿ ಬಿಡುಗಡೆಯಾಗಿದೆ. ಮೊದಲದನೇಯದಾಗಿ 12GB+256GB – ¥3999 (46,8075 ರೂಗಳು) ಮತ್ತೊಂದು 16GB+256GB – ¥4299 (50,307 ರೂಗಳು) ಮತ್ತೊಂದು 16GB+512GB – ¥4599 (53,818 ರೂಗಳು) ಕೊನೆಯದಾಗಿ ಟಾಪ್-ಎಂಡ್ ಮಾಡೆಲ್ 16GB+1024GB – ¥4999 (58,499 ರೂಗಳು) ಆಗಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಭಾರತದಲ್ಲಿ ಯಾವಾಗ ಬಿಡುಗಡೆಯಾಗಲಿದೆ ಮತ್ತು ಇದರ ಬೆಲೆಗಳ ಬಗ್ಗೆ ಇನ್ನು ಪ್ರಸ್ತುತ ಯಾವುದೇ ಅಧಿಕೃತ ಮಾಹಿತಿಗಳಿಲ್ಲ. ಸ್ಮಾರ್ಟ್‌ಫೋನ್‌ಗಳು ಚೀನಾದಲ್ಲಿ ಬಿಡುಗಡೆಯಾಗಿದ್ದು 12 ಜನವರಿ 2024 ರಿಂದ ಮಾರಾಟಕ್ಕೆ ಲಭ್ಯವಾಗಲಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ