50MP ಸೆಲ್ಫಿ ಕ್ಯಾಮೆರಾದ OPPO Find N3 Flip ಬಿಡುಗಡೆ! Amazing ಟಾಪ್ 5 ಫೀಚರ್ ಮತ್ತು ಬೆಲೆ ಎಷ್ಟು? | Tech News
Oppo Find N3 Flip ಫೋನ್ 50MP ಸೆಲ್ಫಿ ಕ್ಯಾಮೆರಾದೊಂದಿಗೆ ಮೀಡಿಯಾ ಟೆಕ್ 9200 ಪ್ರೊಸೆಸರ್ ಅನ್ನು ಹೊಂದಿದೆ
ಭಾರತದಲ್ಲಿ Oppo Find N3 Flip ಅನ್ನು 12GB+256GB ರೂಪಾಂತರಕ್ಕಾಗಿ 94,999 ರೂಗಳಲ್ಲಿ ಬಿಡುಗಡೆ ಮಾಡಲಾಗಿದೆ.
ಒಪ್ಪೋ ಕಂಪನಿಯ ಲೇಟೆಸ್ಟ್ ಫೋನ್ OPPO Find N3 Flip ಫೋನ್ 12ನೇ ಅಕ್ಟೋಬರ್ 2023 ರಂದು ಅಧಿಕೃತವಾಗಿ ಬಿಡುಗಡೆಯಾಗಿದೆ.
ಭಾರತದಲ್ಲಿ ಅತಿ ಹೆಚ್ಚು ಸಡ್ಡು ಮಾಡುತ್ತಿರುವ ಒಪ್ಪೋ ಕಂಪನಿಯ ಲೇಟೆಸ್ಟ್ ಫೋನ್ OPPO Find N3 Flip ನೆನ್ನೆ ಅಂದ್ರೆ 12ನೇ ಅಕ್ಟೋಬರ್ 2023 ರಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ಈ ಫ್ಲಿಪ್ ಸ್ಮಾರ್ಟ್ಫೋನ್ (Flip Smartphone) ಆಕರ್ಷಕ ಡಿಸೈನ್ ಮತ್ತು ಯೋಗ್ಯವಾದ ಕ್ಯಾಮೆರಾ ಸಾಮರ್ಥ್ಯಗಳೊಂದಿಗೆ ಸೊಗಸಾದ ಮತ್ತು ವಿಶ್ವಾಸಾರ್ಹವಾದ ಫ್ಲಿಪ್ ಫೋನ್ ಆಗಿದೆ. ಇದು ಮೃದುವಾದ ಕಾರ್ಯಕ್ಷಮತೆ, ವಿಶ್ವಾಸಾರ್ಹ ಬ್ಯಾಟರಿ ಬಾಳಿಕೆ ಮತ್ತು ಮಲ್ಟಿ ಡಿಸ್ಪ್ಲೇ ಸೆಟಪ್ ಅನ್ನು ನೀಡುತ್ತದೆ. ಇದರಲ್ಲಿ 12GB+256GB ರೂಪಾಂತರಕ್ಕಾಗಿ ಫೋನ್ ಅನ್ನು 94,999 ರೂಗಳಲ್ಲಿ ಬಿಡುಗಡೆ ಮಾಡಲಾಗಿದೆ.
Oppo Find N3 Flip ಸ್ಟೈಲಿಶ್ ಡಿಸೈನ್
ಇದರ ವಿನ್ಯಾಸದೊಂದಿಗೆ ಪ್ರಭಾವ ಬೀರುತ್ತದೆ. ಇದು ಕಾಂಪ್ಯಾಕ್ಟ್, ನಯವಾದ ಮತ್ತು ನಿಮ್ಮ ಕೈಯಲ್ಲಿ ಪ್ರೀಮಿಯಂ ಅನ್ನು ಅನುಭವಿಸುತ್ತದೆ. ಗಾಜಿನ ಹಿಂಭಾಗ ಮತ್ತು ಲೋಹದ ಚೌಕಟ್ಟು ಅದರ ಲುಕ್ನಲ್ಲಿ ಸಕ್ಕತ್ತಾಗಿ ಕಾಣುತ್ತದೆ. ಆದರೆ ಇದರ ಬ್ಯಾಕ್ ಗ್ಲಾಸ್ ಸ್ವಲ್ಪ ಜಾರುವಂತ್ತಿದೆ ಕೊಂಚ ಗಮನದಲ್ಲಿಡಬೇಕು. ಹ್ಯಾಸೆಲ್‌ಬ್ಲಾಡ್ ಬ್ರ್ಯಾಂಡಿಂಗ್‌ನಂತೆಯೇ ವೃತ್ತಾಕಾರದ ಕ್ಯಾಮೆರಾ ಮಾಡ್ಯೂಲ್ ವಿಶಿಷ್ಟ ಲುಕ್ ನೀಡುತ್ತದೆ. ಈ ಫೋನ್‌ನ ಒಟ್ಟಾರೆ ಸೌಂದರ್ಯಶಾಸ್ತ್ರವು ಗಮನಾರ್ಹವಾಗಿದ್ದು ವಿಶೇಷವಾಗಿ ಇದರ ಕ್ರೀಮ್ ಕಲರ್ ರೂಪಾಂತರ ಹೆಚ್ಚು ಆಕರ್ಷಕವಾಗಿದೆ.
ಡ್ಯುಯಲ್ ಡಿಸ್ಪ್ಲೇಗಳು
ಈ ಸ್ಮಾರ್ಟ್ಫೋನ್ ಎರಡು ವಿವಿಧ ಡಿಸ್ಪ್ಲೇಗಳನ್ನು ಹೊಂದಿದ್ದು ಕವರ್ ಸ್ಕ್ರೀನ್ ಮತ್ತು ಇಂಟರ್ನಲ್ ಸ್ಕ್ರೀನ್ ಎಂದು ಹೇಳಬಹುದು. ಇದರ ಕವರ್ ಸ್ಕ್ರೀನ್ 17:9 ಅಸ್ಪೆಟ್ ರೇಷುವಿನೊಂದಿಗೆ ಕನಿಷ್ಠ ಬೆಜೆಲ್‌ಗಳನ್ನು ಹೊಂದಿದೆ. ಇದರ ಪ್ರೈಮರಿ ಡಿಸ್ಪ್ಲೇ 6.8 ಇಂಚಿನ AMOLED ಡಿಸ್ಪ್ಲೇಯನ್ನು 1600 ನಿಟ್ಸ್ ಗಮನಾರ್ಹ ಗರಿಷ್ಠ ಬ್ರೈಟ್‌ನೆಸ್ ಮತ್ತು 120Hz ರಿಫ್ರೆಶ್ ರೇಟ್ ಅನ್ನು ಹೊಂದಿದೆ. ಇದನ್ನು ನೇರ ಸೂರ್ಯನ ಬೆಳಕಿನಲ್ಲಿಯೂ ಸಹ ಸ್ಕ್ರೀನ್ ಬಳಸಲು ಅನುವು ಮಾಡಿಕೊಡುತ್ತದೆ. ಕವರ್ ಸ್ಕ್ರೀನ್ ಸದಾ ಆನ್ ಆಗಿರುವ ಫೀಚರ್ (Always On Display) ಫೀಚರ್ ಅನ್ನು ಹೊಂದಿದೆ.
ಇದನ್ನೂ ಓದಿ: ಹೊಸ Jio AirFiber ಕನೆಕ್ಷನ್ ಬೇಕಾ? ಮೊದಲು ಬೆಲೆ, ಪ್ಲಾನ್ ಮತ್ತು Installation ಬಗ್ಗೆ ತಿಳಿಯಿರಿ
ಕ್ಯಾಮೆರಾ ಡೀಟೇಲ್ಸ್
ಇದು OIS ಬೆಂಬಲದೊಂದಿಗೆ 50MP ಮೆಗಾಪಿಕ್ಸೆಲ್ ಸೋನಿ IMX890 ಪ್ರೈಮರಿ ಸೆನ್ಸರ್ 48MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಮತ್ತು 32MP ಮೆಗಾಪಿಕ್ಸೆಲ್ ಪೋರ್ಟ್ರೇಟ್ ಸೆನ್ಸರ್ ಅನ್ನು ಒಳಗೊಂಡಿದೆ. ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಹೊಂದಿದೆ. ಇದರಲ್ಲಿ 5X ಟೆಲಿಫೋಟೋ ಲೆನ್ಸ್ ದೂರದಿಂದ ಸೆರೆಹಿಡಿಯಲು ಅತ್ಯುತ್ತಮವಾಗಿದೆ. ಇದರ ಕವರ್ ಸ್ಕ್ರೀನ್ ಅಲ್ಲಿ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾವನ್ನು ಸೆಲ್ಫಿ ಕ್ಯಾಮೆರಾದಂತೆ ಬಳಸಬಹುದು. ಇದರಲ್ಲಿ ವಿಶೇಷವಾಗಿ ನೀವು ಜಲ್ದಿಯಲ್ಲಿದ್ದರೆ ತ್ವರಿತ ಸೆಲ್ಫಿಗಾಗಿ ಪ್ರತಿ ಬಾರಿ ಫೋನ್ ಪೂರ್ತಿಯಾಗಿ ತೆರೆಯಬೇಕಿಲ್ಲ.
Oppo Find N3 Flip ಪರ್ಫಾರ್ಮೆನ್ಸ್ ಡೀಟೇಲ್ಸ್
Oppo Find N3 Flip ಪರ್ಫಾರ್ಮೆನ್ಸ್ ನೋಡುವುದಾದರೆ ಈ ಫೋನ್ ಆಂಡ್ರಾಯ್ಡ್ 13 ಆಧಾರಿತ ColorOS 13.1 ನೊಂದಿಗೆ ನಡೆಯುತ್ತದೆ. ಇದರಲ್ಲಿ ನಿಮಗೆ ಮಾಲಿ G715 ಮತ್ತು GPU MP11 ಜೊತೆಗೆ MediaTekಮೀಡಿಯಾಟೆಕ್ ಡೈಮೆನ್ಸಿಟಿ 9200 ಅನ್ನು ಹೊಂದಿದೆ. OPPO ತನ್ನ ಹೊಸ ಫೋಲ್ಡಬಲ್ ಫ್ಲಿಪ್ 12GB RAM ಮತ್ತು 256GB ಅಥವಾ 512GB ಸ್ಟೋರೇಜ್ ಆಯ್ಕೆಗಳೊಂದಿಗೆ ಬರುತ್ತದೆ. ನೀವು ಸೈಡ್-ಮೌಂಟೆಡ್ ಫಿಂಗರ್‌ಪ್ರಿಂಟ್ ರೀಡರ್, ಅಲರ್ಟ್ ಸ್ಲೈಡರ್, ಯುಎಸ್‌ಬಿ-ಸಿ ಸಾಕೆಟ್, ಸ್ಟಿರಿಯೊ ಸ್ಪೀಕರ್‌ಗಳು, ಎನ್‌ಎಫ್‌ಸಿ ಮತ್ತು 5G ಬೆಂಬಲವನ್ನು ಸಹ ನಿರೀಕ್ಷಿಸಬಹುದು.
Oppo Find N3 Flip ಬ್ಯಾಟರಿ ಡೀಟೇಲ್ಸ್
ಡ್ಯುಯಲ್ ಡಿಸ್‌ಪ್ಲೇಗಳು ಮತ್ತು ಯಾವಾಗಲೂ ಆನ್ ಆಗಿರುವ ವೈಶಿಷ್ಟ್ಯವನ್ನು ಪರಿಗಣಿಸಿ ಬ್ಯಾಟರಿ ಬಾಳಿಕೆ ಬಗ್ಗೆ ಕಾಳಜಿ ವಹಿಸಿದೆ. ಈ ಫೋನ್ ವೀಡಿಯೊ ಸ್ಟ್ರೀಮಿಂಗ್, ಗೇಮಿಂಗ್ ಮತ್ತು ಸಾಮಾಜಿಕ ಮಾಧ್ಯಮ ಬಳಕೆಯಂತಹ ಸಾಮಾನ್ಯ ಚಟುವಟಿಕೆಗಳೊಂದಿಗೆ ಸಹ ಒಂದೇ ಚಾರ್ಜ್‌ನಲ್ಲಿ ಒಂದು ದಿನವನ್ನು ಸುಲಭವಾಗಿ ನಿರ್ವಹಿಸಬಹುದು. 4300mAh ಬ್ಯಾಟರಿಯು ಸಾಕಷ್ಟು ವಿಶ್ವಾಸಾರ್ಹವಾಗಿ 44W ಚಾರ್ಜರ್‌ನೊಂದಿಗೆ ಕೇವಲ ಅರ್ಧ ಗಂಟೆಯಲ್ಲಿ 50% ಪ್ರತಿಶತದಷ್ಟು ಚಾರ್ಜ್ ಮಾಡಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile