OPPO F29 Series 5G launch Date Confirmed
OPPO F29 Series 5G launch Date Confirmed: ಭಾರತದಲ್ಲಿ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಒಪ್ಪೋ (OPPO) ತನ್ನ ಮುಂಬರಲಿರುವ ಹೊಚ್ಚ ಹೊಸ OPPO F29 Series 5G ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದರ ಬಗ್ಗೆ ಸ್ವತಃ ಕಂಪನಿ ಟ್ವಿಟ್ಟರ್ ಮೂಲಕ ಪೋಸ್ಟ್ ಮಾಡಿದ್ದೂ ಇದೆ 20ನೇ ಮಾರ್ಚ್ 2025 ರಂದು ಮಧ್ಯಾಹ್ನ 12:00PM ಗಂಟೆಗೆ ಬಿಡುಗಡೆಯಾಗಲಿದೆ. ಈ OPPO F29 Series 5G ಸ್ಮಾರ್ಟ್ಫೋನ್ ವಿಶೇಷತೆಗಳನ್ನು ನೋಡುವುದದಾದ್ರೆ ಪ್ರಸ್ತುತ ಡುಯಲ್ ಕ್ಯಾಮೆರಾ ಸೆಟಪ್‌ನೊಂದಿಗೆ ಗಟ್ಟಿಮುಟ್ಟಾದ ಆರ್ಮೋರ್ ಬಾಡಿಯೊಂದಿಗೆ ಹೊಸ ಫೀಚರ್ಗಳನ್ನು ಹೊಂದಿದೆ.
Also Read: Best AC Deal: ಅತಿ ಕಡಿಮೆ ಬೆಲೆಗೆ ಜಬರ್ದಸ್ತ್ ಏರ್ ಕಂಡಿಷನರ್! ಯಾರಿಗುಂಟು ಯಾರಿಗಿಲ್ಲ ಈ ಆಫರ್ ಡೀಲ್!
ಭಾರತದಲ್ಲಿ ಈ OPPO F29, OPPO F29 Pro ಮತ್ತು OPPO F29 Pro+ ಸ್ಮಾರ್ಟ್ಫೋನ್ಗಳು ಆರಂಭಿಕ ಬೆಲೆ ₹25,000 ಕ್ಕಿಂತ ಕಡಿಮೆ ಇರುವ ನಿರೀಕ್ಷೆಯಿದೆ. ಇದು ಮಧ್ಯಮ ಶ್ರೇಣಿಯ 5G ಸ್ಮಾರ್ಟ್‌ಫೋನ್ ವಿಭಾಗದಲ್ಲಿ ಆಕರ್ಷಕ ಆಯ್ಕೆಯಾಗಿದೆ. ಈ ಸ್ಮಾರ್ಟ್ಫೋನ್ ಸ್ಟೋರೇಜ್ ಒಟ್ಟು 2 ರೂಪಾಂತರಗಳಲ್ಲಿ ಬರಲಿದೆ ಎಂದು ವರದಿಗಳು ಸೂಚಿಸುತ್ತವೆ.
ಆರಂಭಿಕ 6GB RAM ನೊಂದಿಗೆ 128GB ಸ್ಟೋರೇಜ್ ಹೊಂದಿದ್ದರೆ ಮತ್ತು 8GB RAM ನೊಂದಿಗೆ 256GB ಸಂಗ್ರಹಣೆಯನ್ನು ನೀಡುವ ಉನ್ನತ-ಮಟ್ಟದ ಮಾದರಿಯೊಂದಿಗೆ ಸಾಕಷ್ಟು ಸ್ಟೋರೇಜ್ ಮತ್ತು ಸುಗಮ ಬಹುಕಾರ್ಯಕ ಸಾಮರ್ಥ್ಯಗಳೊಂದಿಗೆ ಫೋನ್ಗಳು ಸ್ಪರ್ಧಾತ್ಮಕ ಬೆಲೆಯಲ್ಲಿ ಪ್ರಬಲ ಮತ್ತು ಪರಿಣಾಮಕಾರಿ ಬಳಕೆದಾರ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ.