OPPO F29 Pro Launched in India
OPPO F29 Pro Launched in India: ಚೀನಾದ ಸ್ಮಾರ್ಟ್ಫೋನ್ ತಯಾಕರ ಕಂಪನಿ ಒಪ್ಪೋ ಇಂದು ಭಾರತದಲ್ಲಿ ತನ್ನ ಹೊಸ OPPO F29 Series ಅನ್ನು ಅಧಿಕೃತವಾಗಿ ಪರಿಚಯಿಸಿದೆ. ಕಂಪನಿ ಭಾರತದಲ್ಲಿ ಈ ಸರಣಿಯಡಿಯಲ್ಲಿ OPPO F29 5G ಮತ್ತು OPPO F29 Pro ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಆದರೆ ಇಲ್ಲಿ ಕೇವಲ OPPO F29 Pro ಸ್ಮಾರ್ಟ್ಫೋನ್ ಬಗ್ಗೆ ಮಾತ್ರ ಒಂದಿಷ್ಟು ಸಂಕ್ಷಿಪ್ತ ವಿವರಗಳನ್ನು ಹಂಚಿಕೊಂಡಿದ್ದೇನೆ. ಈ OPPO F29 Pro ಸ್ಮಾರ್ಟ್ಫೋನ್ ಆರಂಭಿಕ ರೂಪಾಂತರ ಬ್ಯಾಂಕ್ ಆಫರ್ ಜೊತೆಗೆ ಕೇವಲ 25,999 ರೂಗಳಿಗೆ ಘೋಷಿಸಿದೆ.
OPPO F29 Pro ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಮೂರು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹27,999 ರೂಗಳಿಗೆ ಮತ್ತು ಇದರ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹29,999 ರೂಗಳಿಗೆ ಪರಿಚಯಿಸಿದೆ.
ಮತ್ತು ಕೊನೆಯದಾಗಿ 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹32,999 ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು SBI ಮತ್ತು Axis ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 10% ಹೆಚ್ಚುವರಿ ಡಿಸ್ಕೌಂಟ್ ಮತ್ತು 2000 ರೂಗಳ ವಿನಿಮಯ ಬೋನಸ್ ಸಹ ಪಡೆಯುವ ಮೂಲಕ ಈ ಸ್ಮಾರ್ಟ್ಫೋನ್ ಆರಂಭಿಕ ಮಾದರಿಯನ್ನು ಕೇವಲ 25,999 ರೂಗಳಿಗೆ ಖರೀದಿಸಬಹುದು.
Also Read: ಹೈಸೆನ್ಸ್‌ನಿಂದ 43 ಇಂಚಿನ ಲೇಟೆಸ್ಟ್ Google Smart TV ಭರ್ಜರಿ ಡಿಸ್ಕೌಂಟ್‌ಗಳೊಂದಿಗೆ ಮಾರಾಟವಾಗುತ್ತಿದೆ!
OPPO F29 5G ಸ್ಮಾರ್ಟ್ಫೋನ್ 120Hz ರಿಫ್ರೆಶ್ ರೇಟ್ನೊಂದಿಗೆ 6.7 ಇಂಚಿನ Quad-Curved FHD+ AMOLED (2412×1080 ಪಿಕ್ಸೆಲ್‌ಗಳು) ಹೊಂದಿದೆ. ಫೋಟೋಗಳು ಮತ್ತು ವೀಡಿಯೊಗಳಿಗಾಗಿ OPPO F29 Pro 5G ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು f/1.8 ಅಪಾರ್ಚರ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ ಮತ್ತೊಂದು 2MP ಮೆಗಾಪಿಕ್ಸೆಲ್ ಡೆಪ್ತ್ ಕ್ಯಾಮೆರಾವನ್ನು ಹೊಂದಿದೆ. ಅಲ್ಲದೆ ಇದರ ಮುಂಭಾಗದಲ್ಲಿ ಸೇಲ್ಫಿ ಮತ್ತು ವಿಡಿಯೋ ಕರೆಗಾಗಿ 16MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ನೀಡಲಾಗಿದೆ. ಸ್ಮಾರ್ಟ್ಫೋನ್ ವಾಟರ್ ಮತ್ತು ಡಸ್ಟ್ ಪ್ರೊಟೆಕ್ಷನ್‌ಗಾಗಿ IP69 ರೇಟಿಂಗ್ ಅನ್ನು ಸಹ ಈ ಫೋನ್ ಹೊಂದಿದೆ.
OPPO F29 Pro ಸ್ಮಾರ್ಟ್ಫೋನ್ MediaTek Dimensity 7300 Energy ಪ್ರೊಸೆಸರ್‌ನೊಂದಿಗೆ ಬರುತ್ತದೆ. 8GB RAM ಆನ್‌ಬೋರ್ಡ್ ಮೆಮೊರಿಯನ್ನು ವಿಸ್ತರಿಸುವ ಆಯ್ಕೆಯನ್ನು ಹೊಂದಿದೆ. ಇದರ ಕನೆಕ್ಟಿವಿಟಿ ಆಯ್ಕೆಗಳಲ್ಲಿ ಮುಖ್ಯವಾಗಿ Bluetooth, GPS, WiFi, 3.5mm Audio Jack, USB Type C Charge Port ಮತ್ತು AGPS/GPS, GLONASS, BDS, Galileo ಸೆನ್ಸರ್‌ಗಳನ್ನು ಹೊಂದಿದೆ. ಕೊನೆಯದಾಗಿ ಈ ಸ್ಮಾರ್ಟ್ಫೋನ್ 6000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ ಮತ್ತು 80W ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.