ಭಾರತದಲ್ಲಿ ಒಪ್ಪೋ ಕಂಪನಿ ತನ್ನ ಲೇಟೆಸ್ಟ್ ಮತ್ತು ಪ್ರಮುಖ 5G ಸ್ಮಾರ್ಟ್‌ಫೋನ್ OPPO F27 Pro Plus 5G ಅನ್ನು ಬಿಡುಗಡೆ ಮಾಡಿದೆ. ಸಾಮಾನ್ಯವಾಗಿ ನೀವು ಈವರೆಗೆ ಸ್ಮಾರ್ಟ್ಫೋನ್ ಮಾರುಕಟ್ಟೆಯಲ್ಲಿ ವಾಟರ್ ಪ್ರೂಫ್ ಮತ್ತು ಬಾಳಿಕೆಗಾಗಿ IP69, IP68 ಮತ್ತು IP66 ರೇಟಿಂಗ್‌ಗಳೊಂದಿಗೆ ಪ್ರಮಾಣೀಕರಿಸಲ್ಪಟ್ಟಿರುವ ಬಗ್ಗೆ ಕೇಳಿರಬಹುದು. ಈಗ ಇದಕ್ಕಿಂತ ಮುಂದೆ ಸಾಗಿ ನೀರಿನಲ್ಲಿ ಬಿದ್ದರು ಏನೂ ಆಗದ IP69 ರೇಟಿಂಗ್ ಅನ್ನು ಸಾಧಿಸಿರುವ ಭಾರತದ ಮೊದಲ ಸ್ಮಾರ್ಟ್‌ಫೋನ್ ಆಗಿದೆ. OPPO F27 Pro Plus 5G ಸ್ಮಾರ್ಟ್ಫೋನ್ IP69 ರೇಟಿಂಗ್ ಹೊಂದಿರುವ ಭಾರತದ ಮೊಟ್ಟ ಮೊದಲ ಸ್ಮಾರ್ಟ್‌ಫೋನ್ ಆಗಿದೆ.
Also Read: 160 ದಿನಗಳ ವ್ಯಾಲಿಡಿಟಿಯೊಂದಿಗೆ ಪ್ರತಿದಿನ 2GB ಡೇಟಾ ನೀಡುವ BSNL ಪ್ಲಾನ್ ಬೆಲೆ ಎಷ್ಟು?
ಈ ಫೋನ್ ಈಗಲೇ ಲಭ್ಯವಿರುವ ಹತ್ತಾರು ಪ್ರಮುಖ Flagship ಸ್ಮಾರ್ಟ್ಫೋನ್ಗಳಲ್ಲಿ ಕಂಡುಬರದ ವಾಟರ್ ಮತ್ತು ಡಸ್ಟ್ ರಕ್ಷಣೆಯ ಮಟ್ಟವನ್ನು ಒಳಗೊಂಡಿದೆ. ಭಾರತದಲ್ಲಿ ನೆನ್ನೆ ಬಿಡುಗಡೆಯಾದ ಈ OPPO F27 Pro Plus 5G ಸ್ಮಾರ್ಟ್ಫೋನ್ 6.7 ಇಂಚಿನ ಪೂರ್ಣ HD+ 3D ಕರ್ವ್ಡ್ AMOLED ಡಿಸ್ಪ್ಲೇ ಜೊತೆಗೆ 120Hz ರಿಫ್ರೆಶ್ ದರ ಮತ್ತು 93% ಪ್ರತಿಶತ ಸ್ಕ್ರೀನ್-ಟು-ಬಾಡಿ ಅನುಪಾತವನ್ನು ಹೊಂದಿದೆ. ವರ್ಧಿತ ಆಡಿಯೊಗಾಗಿ ಇದು 300% ಪ್ರತಿಶತ ಅಲ್ಟ್ರಾ ವಾಲ್ಯೂಮ್ ಮೋಡ್ ಅನ್ನು ಒಳಗೊಂಡಿದೆ.
ಸ್ಮಾರ್ಟ್‌ಫೋನ್ ಕಾಸ್ಮಿಕ್ ರಿಂಗ್ ಮಾದರಿಯೊಂದಿಗೆ ಚರ್ಮದ ಹಿಂಭಾಗವನ್ನು ಹೊಂದಿದೆ. ಇದು MIL-STD-810H ರೇಟಿಂಗ್‌ಗಳೊಂದಿಗೆ ಮಿಲಿಟರಿ ದರ್ಜೆಯ ಬಾಳಿಕೆ ಮತ್ತು ಪ್ರದರ್ಶನ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಅನ್ನು ಹೊಂದಿದೆ. ಇದರ ಫೋಟೋಗ್ರಾಫಿಯಲ್ಲಿ Oppo F27 Pro Plus 5G ಸ್ಮಾರ್ಟ್ಫೋನ್ 64MP ಪ್ರೈಮರಿ ಕ್ಯಾಮೆರಾದೊಂದಿಗೆ ಡ್ಯುಯಲ್ ಹಿಂಬದಿಯ ಕ್ಯಾಮೆರಾ ವ್ಯವಸ್ಥೆಯನ್ನು ಹೊಂದಿದೆ. ಸ್ಮಾರ್ಟ್ಫೋನ್ ಮುಂಭಾಗದಲ್ಲಿ ಇದು ಸೆಲ್ಫಿಗಳನ್ನು ಹೆಚ್ಚಿಸಲು ಆರ್ಟಿಫಿಶಿಯಲ್ ಇಂಟೆಲಿಜೆಂಟ್ (AI) ಸಾಮರ್ಥ್ಯಗಳೊಂದಿಗೆ 2MP ಡೆಪ್ತ್ ಕ್ಯಾಮೆರಾವನ್ನು ಹೊಂದಿದೆ.
ಕಾರ್ಯಕ್ಷಮತೆಯನ್ನು ಸುಧಾರಿಸಲು ಮತ್ತು ಪವರ್ ಬಳಕೆಯನ್ನು ಕಡಿಮೆ ಮಾಡಲು 6nm ಪ್ರಕ್ರಿಯೆ ತಂತ್ರಜ್ಞಾನದೊಂದಿಗೆ ನಿರ್ಮಿಸಲಾದ MediaTek Dimensity 7050 ಪ್ರೊಸೆಸರ್ನೊಂದಿಗೆ ಫೋನ್ ಚಾಲಿತವಾಗಿದೆ. ಇದು 8GB RAM ಮತ್ತು 256GB ಸ್ಟೋರೇಜ್‌ವರೆಗೆ ನೀಡುತ್ತದೆ. ಸ್ಮಾರ್ಟ್‌ಫೋನ್ 5000mAh ಬ್ಯಾಟರಿಯಿಂದ 80W SUPERVOOC ಫಾಸ್ಟ್ ಚಾರ್ಜಿಂಗ್‌ನೊಂದಿಗೆ ಬೆಂಬಲಿತವಾಗಿದೆ ಮತ್ತು ColorOS 14 ನೊಂದಿಗೆ ಆಂಡ್ರಾಯ್ಡ್ 14 ನಲ್ಲಿ ಕಾರ್ಯನಿರ್ವಹಿಸುತ್ತದೆ.
ಈ ಲೇಟೆಸ್ಟ್ ಒಪ್ಪೋ ಸ್ಮಾರ್ಟ್ಫೋನ್ ಬೆಲೆ ಬಗ್ಗೆ ಮಾತನಾಡುವುದಾದರೆ Oppo F27 Pro Plus 5G ಎರಡು ಬಣ್ಣ ಆಯ್ಕೆಗಳಲ್ಲಿ ಲಭ್ಯವಿದೆ. ಕಂಪನಿ ಈ ಸ್ಮಾರ್ಟ್ಫೋನ್ ಅನ್ನು Midnight Navy ಮತ್ತು Dusk Pink ಎಂಬ ಎರಡು ಆಕರ್ಷಿಕ ಬಣ್ಣಗಳಲ್ಲಿ ಬಿಡುಗಡೆಗೊಳಿಸಿದೆ. ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕಾಗಿ 27,999 ರೂಗಳಿಗೆ ನಿಗದಿಪಡಿಸಿದೆ. ಅಲ್ಲದೆ ಒಪ್ಪೋನ ಅಧಿಕೃತ ವೆಬ್‌ಸೈಟ್ ಮತ್ತು ಇತರ ಚಿಲ್ಲರೆ ಅಂಗಡಿಗಳಲ್ಲಿ ಇದೇ 20ನೇ ಜೂನ್ 2024 ರಿಂದ ಸ್ಮಾರ್ಟ್‌ಫೋನ್ ಖರೀದಿಸಲು ಮೊದಲ ಮಾರಾಟ ಆರಂಭಿಸಲಿದೆ.