ಭಾರತದಲ್ಲಿ ಒಪ್ಪೋ (OPPO) ಕಂಪನಿ ತನ್ನ ಮುಂಬರಲಿರುವ OPPO F27 5G ಸ್ಮಾರ್ಟ್‌ಫೋನ್ ಭಾರತದಲ್ಲಿ ಬಿಡುಗಡೆಗೊಳಿಸಲು ಸಜ್ಜಾಗಿದೆ. ಇದನ್ನು ಕಂಪನಿ ಕೈಗೆಟಕುವ ಬಜೆಟ್ ವಿಭಾಗದಲ್ಲಿ ಅನಾವರಣಗೊಳಿಸಿದ್ದು ಇದರ ಒಂದಿಷ್ಟು ನಿರೀಕ್ಷಿತ ಫೀಚರ್ ಮತ್ತು ಬೆಲೆಯನ್ನು ಈ ಕೆಳಗೆ ಕಾಣಬಹುದು. ಪ್ರಸ್ತುತ 91 ಮೊಬೈಲ್ ವರದಿಯ ಪ್ರಕಾರ ನೋಡುವುದಾದರೆ ಈ OPPO F27 5G ಸ್ಮಾರ್ಟ್‌ಫೋನ್ ಬ್ಯಾಕ್ ಮತ್ತು ಫ್ರಂಟ್ ಕ್ಯಾಮೆರಾ ಮಾಡ್ಯೂಲ್ ಹೇಗಿರಲಿದೆ ಎನ್ನುವುದನ್ನು ಹೊರೆತುಪಡಿಸಿ ಬೇರೆ ಯಾವುದೇ ಮಾಹಿತಿಗಳನ್ನು ಅಧಿಕೃತವಾಗಿ ಸದ್ಯಕ್ಕೆ ಬಹಿರಂಗಪಡಿಸಿಲ್ಲ. ಸರ್ಕಲ್ ಕ್ಯಾಮೆರಾ ಸೆಟಪ್‌ನೊಂದಿಗೆ OPPO F27 5G ಸ್ಮಾರ್ಟ್‌ಫೋನ್ ಅನ್ನು ಮೆಟಲ್ ಬಾಡಿ ಬಾರ್ಡರ್ ನೀಡಿರುವುದನ್ನು ಕಾಣಬಹುದು ಈ ಸ್ಮಾರ್ಟ್‌ಫೋನ್ ಸುಮಾರು 20,000 ರೂಗಳೊಳಗೆ ಬಿಡುಗಡೆಯಾಗುವುದನ್ನು ನಿರೀಕ್ಷಿಸಬಹುದು.
Also Read: Jio, Airtel ಮತ್ತು Vi ಸೋಶಿಯಲ್ ಮೀಡಿಯಾ ಅಪ್ಲಿಕೇಶನ್‌ಗಳಿಗೆ ಹೊಸ ನಿಯಮ ತರಲು TRAI ಮುಂದೆ ಬೇಡಿಕೆಗೆ ಕಾರಣವೇನು?
ಈ ಸ್ಮಾರ್ಟ್‌ಫೋನ್ ನಿರೀಕ್ಷಿತ ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡುವುದಾದರೆ ಇದರ ಬಗ್ಗೆ ಟಿಪ್‌ಸ್ಟಾರ್ ಮಾಹಿತಿಯನ್ನು ನೋಡುವುದಾದರೆ ಒಟ್ಟಾರೆಯಾಗಿ 2 ರೂಪಾಂತರಗಳಲ್ಲಿ ಬಿಡುಗಡೆಯಲಿದ್ದ್ದುಮೊದಲನೇಯದು 8GB RAM ಮತ್ತು 128GB ಇದನ್ನು ಕಂಪನಿ ಸುಮಾರು 17,999 ರೂಗಳಿಗೆ ಬಿಡುಗಡೆಗೊಳಿಸಿದರೆ ಮತ್ತೊಂದು 8GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ಸುಮಾರು 19,999 ರೂಗಳಿಗೆ ನಿರೀಕ್ಷಿಸಲಾಗಿದೆ. ಇದನ್ನು ಇದನ್ನು ಕಂಪನಿ ಫ್ಲಿಪ್ಕಾರ್ಟ್ (Flipkart) ಮೂಲಕ ಖರೀದಿಗೆ ಲಭ್ಯವಾಗಲಿದ್ದು ಇದನ್ನು ಬ್ಯಾಂಕ್ ಆಫರ್ಗಳೊಂದಿಗೆ ಮತ್ತಷ್ಟು ಕಡಿಮೆ ಬೆಲೆಗೆ ಸಿಗುವ ನಿರೀಕ್ಷೆಗಳಿವೆ.
ಕೆಲವೇ ದಿನಗಳಲ್ಲಿ ಬಿಡುಗಡೆಯಾಗಲಿರುವ ಒಪ್ಪೋವಿನ ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಟೀಸರ್ ಹ್ಯಾಂಡ್‌ಸೆಟ್ ಅನ್ನು ವೃತ್ತಾಕಾರದ ಆಕಾರದ ಕ್ಯಾಮೆರಾ ಮಾಡ್ಯೂಲ್ ಹೊಂದಿರುವ ಡ್ಯುಯಲ್ ರಿಯರ್ ಕ್ಯಾಮೆರಾಗಳನ್ನು ತೋರಿಸುತ್ತದೆ. ಮೊದಲ ನೋಟದಲ್ಲಿ, ಕ್ಯಾಮೆರಾ ವ್ಯವಸ್ಥೆಯು ಜೂನ್‌ನಲ್ಲಿ ಅಧಿಕೃತವಾದ Oppo F27 Pro+ 5G ನಲ್ಲಿ ನಾವು ನೋಡಿದಂತೆಯೇ ಕಾಣುತ್ತದೆ.
91ಮೊಬೈಲ್ಸ್ ವರದಿಯ ಪ್ರಕಾರ OPPO F27 5G ಲೈವ್ ಚಿತ್ರಗಳನ್ನು ಹಂಚಿಕೊಂಡಿದೆ. ಚಿತ್ರಗಳು ಪಂಚ್ ಹೋಲ್ ಡಿಸ್ಪ್ಲೇ ಮತ್ತು ಸ್ಕ್ರೀನ್ ಮೇಲೆ ಗಮನಾರ್ಹವಾದ ಬೆಜೆಲ್ಗಳನ್ನು ಸೂಚಿಸುತ್ತವೆ. ಇದು ಗ್ರೇಡಿಯಂಟ್ ಮುಕ್ತಾಯದೊಂದಿಗೆ ಡ್ಯುಯಲ್ ಟೋನ್ ವಿನ್ಯಾಸವನ್ನು ಹೊಂದಿರುವಂತೆ ತೋರುತ್ತಿದೆ. ಇದು ಈಗಾಗಲೇ ಬಿಡುಗಡೆಯಾಗಿರುವ OPPO F27 Pro+ 5G ಸ್ಮಾರ್ಟ್ಫೋನ್ನಂತೆ ಲೆದರ್ ಬ್ಯಾಕ್‌ನಿಂದ ನಿರ್ಗಮಿಸುತ್ತದೆ.
Oppo F27 Pro+ 5G ಮೀಡಿಯಾ ಟೆಕ್ ಡೈಮೆನ್ಸಿಟಿ 7050 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸುತ್ತದ್ದು ಮತ್ತು 67W ವೈರ್ಡ್ ಫಾಸ್ಟ್ ಚಾರ್ಜಿಂಗ್ ಅನ್ನು ಬೆಂಬಲಿಸುವ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ. ಇದು 64MP ಮೆಗಾಪಿಕ್ಸೆಲ್ ಡ್ಯುಯಲ್ ರಿಯರ್ ಕ್ಯಾಮೆರಾ ಘಟಕವನ್ನು ನಿರೀಕ್ಷಿಸಲಾಗಿದೆ. ಅಲ್ಲದೆ ಫೋನ್ ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP69 ರೇಟಿಂಗ್ ಅನ್ನು ಹೊಂದಿರಬಹುದು.