OPPO F25 Pro 5G ಭಾರತದಲ್ಲಿ ಬಿಡುಗಡೆ! ಖರೀದಿಸಲು ಬೆಲೆಯೊಂದಿಗೆ ಈ 5 ಇಂಟ್ರೆಸ್ಟಿಂಗ್ ಫೀಚರ್‌ಗಳನ್ನು ಪರಿಶೀಲಿಸಿ!
ಭಾರತದಲ್ಲಿ ಬಹು ನಿರೀಕ್ಷಿತ OPPO F25 Pro 5G ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ.
OPPO F25 Pro 5G ಸ್ಮಾರ್ಟ್ಫೋನ್ ಆರಂಭಿಕ 128GB ರೂಪಾಂತರಕ್ಕೆ 23,999 ರೂಗಳಾಗಿವೆ.
OPPO F25 Pro 5G ಸ್ಮಾರ್ಟ್ಫೋನ್ 32MP ಸೆಲ್ಫಿ ಕ್ಯಾಮೆರಾ 4K ವೀಡಿಯೊ ರೆಕಾರ್ಡಿಂಗ್ AI ವೈಶಿಷ್ಟ್ಯಗಳೊಂದಿಗೆ ತುಂಬಿಕೊಂಡಿದೆ.
ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಒಪ್ಪೋ ಇಂಡಿಯಾ (OPPO India) ಈಗ ಭಾರತೀಯ ಮಾರುಕಟ್ಟೆಯಲ್ಲಿ ಮಧ್ಯಮ ಶ್ರೇಣಿಯ ತನ್ನ ಲೇಟೆಸ್ಟ್ 5G ಸ್ಮಾರ್ಟ್ಫೋನ್ ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇಂದು 29ನೇ ಫೆಬ್ರವರಿ 2024 ರಂದು ಬಿಡುಗಡೆಯಾದ OPPO F25 Pro 5G ಸ್ಮಾರ್ಟ್ಫೋನ್ ನಿಮಗೆ ಅತ್ಯುತ್ತಮ ಫೀಚರ್ ಮತ್ತು ವಿಶೇಷತೆಗಳಿಂದ ತುಂಬಿ ತುಳುಕುತ್ತಿದೆ. OPPO F25 Pro 5G ಸ್ಮಾರ್ಟ್ಫೋನ್ ಹೈಲೈಟ್ ನೋಡುವುದಾದರೆ 32MP ಸೆಲ್ಫಿ ಕ್ಯಾಮೆರಾ 4K ವೀಡಿಯೊ ರೆಕಾರ್ಡಿಂಗ್ AI ವೈಶಿಷ್ಟ್ಯಗಳೊಂದಿಗೆ ಆರಂಭಿಕ 128GB ರೂಪಾಂತರಕ್ಕೆ 23,999 ರೂಗಳಾಗಿವೆ. ನೀವು ಈ ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಇದರ ಟಾಪ್ 5 ಫೀಚರ್ಗಳನೊಮ್ಮೆ ಪರಿಶೀಲಿಸಲು ಇದರ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ.
Also Read: WhatsApp Search by Date: ವಾಟ್ಸಾಪ್‌ನ ಹೊಸ ಫೀಚರ್‌ನಿಂದ ಚುಟಾಕಿಯೊಳಗೆ ನಿಮ್ಮೆಲ್ಲ ಹಳೆ ಮೆಸೇಜ್ ಪಡೆಯಬಹುದು!
ಭಾರತದಲ್ಲಿ OPPO F25 Pro 5G ಸ್ಮಾರ್ಟ್ಫೋನ್ ಡಿಸ್ಪ್ಲೇ ವಿವರ
ಈ ಸ್ಮಾರ್ಟ್ಫೋನ್ ಮೊದಲ ಫೀಚರ್ ಇದರ ಡಿಸ್ಪ್ಲೇ ಮಾಹಿತಿಯ ಬಗ್ಗೆ ಮಾತನಾಡುವುದಾದರೆ ಸ್ಮಾರ್ಟ್ಫೋನ್ 6.7 ಇಂಚಿನ AMOLED ಡಿಸ್ಪ್ಲೇಯು FHD+ 2412×1080 ಪಿಕ್ಸೆಲ್ ರೆಸುಲ್ಯೂಷನ್ ಜೊತೆಗೆ 120Hz ಅಲ್ಟ್ರಾ ಹೈ ಡಿಸ್ಪ್ಲೇ ರಿಫ್ರೆಶ್ ರೇಟ್‌ನೊಂದಿಗೆ 394 ಪಿಪಿಐ ಪಿಕ್ಸೆಲ್ ಡೆನ್ಸಿಟಿಯೊಂದಿಗೆ ದಿನದ ಸಮಯದಲ್ಲೂ ಹೊರಗಡೆ ಅತ್ಯುತ್ತಮವಾಗಿ ಸ್ಮಾರ್ಟ್ಫೋನ್ ಬಳಕೆಯ ಅನುಭವನ್ನು ಪಡೆಯಬಹುದು. ಅಲ್ಲದೆ ಫೋನ್ 2.5D flexible OLED ಪ್ಯಾನಲ್ ಜೊತೆಗೆ ಪಂಡಾ ಗ್ಲಾಸ್ ಪ್ರೊಟೆಕ್ಷನ್ ಹೊಂದಿದೆ.
ಭಾರತದಲ್ಲಿ ಒಪ್ಪೋ F25 Pro 5G ಸ್ಮಾರ್ಟ್ಫೋನ್ ಕ್ಯಾಮೆರಾ ವಿವರ
ಈ ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಮಾತನಾಡುವುದಾದ್ರೆ ಸ್ಮಾರ್ಟ್‌ಫೋನ್ ಹಿಂಭಾಗದಲ್ಲಿ ಓಮ್ನಿವಿಷನ್ OV64B ಸೆನ್ಸರ್‌ನೊಂದಿಗೆ 64MP ಮೆಗಾಪಿಕ್ಸೆಲ್ ಪ್ರೈಮರಿ ಸೋನಿ IMX355 ಸೆನ್ಸರ್‌ನೊಂದಿಗೆ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದೆ. ಮತ್ತೊಂದು 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಕ್ಯಾಮೆರಾ ಮತ್ತು 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಹೊಂದಿದೆ. ಸೆಲ್ಫಿಗಳಿಗಾಗಿ ಸೋನಿ IMX615 ಸೆನ್ಸರ್‌ನೊಂದಿಗೆ 32MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಇದೆ.ಈ ಇದರಲ್ಲಿ ಇಂಟ್ರೆಸ್ಟಿಂಗ್ ವಿಷೇಯವೆಂದರೆ ಸ್ಮಾರ್ಟ್ಫೋನ್ ಹಿಂಬದಿ ಮತ್ತು ಮುಂಭಾಗದ ಕ್ಯಾಮೆರಾಗಳಿಂದ ಬೆರಗುಗೊಳಿಸುವ 4K ಅಲ್ಟ್ರಾ-ಕ್ಲಿಯರ್ ವೀಡಿಯೊಗಳನ್ನು ನೀವು ಸೆರೆಹಿಡಿಯುವ ಸಾಮರ್ಥ್ಯವನ್ನು ಈ ಫೋನ್ ಹೊಂದಿದೆ.
ಭಾರತದಲ್ಲಿ OPPO F25 Pro 5G ಸ್ಮಾರ್ಟ್ಫೋನ್ ಹಾರ್ಡ್ವೇರ್ ವಿವರ
Oppo F25 Pro 5G ಅನ್ನು ಪವರ್ ಮಾಡುವುದು MediaTek ಡೈಮೆನ್ಸಿಟಿ 7050 ಪ್ರೊಸೆಸರ್ ಆಗಿದ್ದು ಅತ್ಯಾಧುನಿಕ TSMC 6nm ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. ಇದು ಸ್ವಿಫ್ಟ್ ಅಪ್ಲಿಕೇಶನ್ ಲಾಂಚ್‌ಗಳು ಮತ್ತು ಡೇಟಾ ವರ್ಗಾವಣೆಗಾಗಿ LPDDR4X RAM ಮತ್ತು UFS 3.1 ಸ್ಟೋರೇಜ್‌ನೊಂದಿಗೆ ಸಂಯೋಜಿಸಲ್ಪಟ್ಟಿದೆ. ಆಂಡ್ರಾಯ್ಡ್ 14.0 ಆಧಾರಿತ ColorOS 14 ನಲ್ಲಿ ಸ್ಮಾರ್ಟ್‌ಫೋನ್ ಕಾರ್ಯನಿರ್ವಹಿಸುತ್ತದೆ. 8GB RAM ಜೊತೆಗೆ 128GB ಮತ್ತು 256GB ಸ್ಟೋರೇಜ್ ರೂಪಾಂತರಗಳೊಂದಿಗೆ ಬರುತ್ತದೆ. ಇದರ ಆಪರೇಟಿಂಗ್ ಸಿಸ್ಟಮ್ ಸ್ಮಾರ್ಟ್ AI ಫೀಚರ್ ಆಪ್ಡೇಟೆಡ್ ಸ್ವಾಮ್ಯದ ತಂತ್ರಜ್ಞಾನ ಮತ್ತು ವರ್ಧಿತ ಸುರಕ್ಷತೆ ಮತ್ತು ಗೌಪ್ಯತೆಗಾಗಿ ಬಳಕೆದಾರ ಸ್ನೇಹಿ ಸ್ಮಾರ್ಟ್ಫೋನ್ ಒಳಗೊಂಡಿದೆ.
ಭಾರತದಲ್ಲಿ OPPO F25 Pro 5G ಸ್ಮಾರ್ಟ್ಫೋನ್ ಬ್ಯಾಟರಿ ವಿವರ
Oppo F25 Pro 5G ಸ್ಮಾರ್ಟ್ಫೋನ್ ಬ್ಯಾಕ್ ಪ್ಯಾನಲ್ ಒಳಗೆ 67W SUPERVOOC ಫಾಸ್ಟ್ ಚಾರ್ಜಿಂಗ್ ಜೊತೆಗೆ 5000mAh ಬ್ಯಾಟರಿಯನ್ನು ಹೊಂದಿದೆ. ಇದರ ಈ ಫಾಸ್ಟ್ ಚಾರ್ಜ್ ಟೆಕ್ನಾಲಜಿ ಬಳಕೆದಾರರು ತಮ್ಮ ಸ್ಮಾರ್ಟ್ಫೋನ್ ತ್ವರಿತವಾಗಿ ರೀಚಾರ್ಜ್ ಮಾಡಲು ಮತ್ತು ದಿನವಿಡೀ ಚಾಲಿತವಾಗಿರಲು ಅನುವು ಮಾಡಿಕೊಡುತ್ತದೆ. ಈ ಸ್ಮಾರ್ಟ್ಫೋನ್ Ocean Blue ಮತ್ತು Lava Red ಬಣ್ಣಗಳಲ್ಲಿ ಬಿಡುಗಡೆಯಾಗಿದೆ.
ಭಾರತದಲ್ಲಿ ಒಪ್ಪೋ F25 Pro 5G ಸ್ಮಾರ್ಟ್ಫೋನ್ ಬೆಲೆ ಮತ್ತು ಆಫರ್
OPPO F25 Pro 5G ಎರಡು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು 8GB RAM ಮತ್ತು 128GB ಆರಂಭಿಕ ರೂಪಾಂತರಕ್ಕಾಗಿ 23,999 ರೂಗಳಾದರೆ ಇದರ 8GB RAM ಮತ್ತು 256GB ರೂಪಾಂತರಕ್ಕಾಗಿ 25,999 ರೂಗಳಾಗಿವೆ. ಈ ಸ್ಮಾರ್ಟ್ಫೋನ್ 5ನೇ ಮಾರ್ಚ್ 2024 ಮೊದಲ ಮಾರಾಟ OPPO ಇ-ಸ್ಟೋರ್, ಅಮೆಜಾನ್, ಫ್ಲಿಪ್ಕಾರ್ಟ್ ಮತ್ತು ಹತ್ತಿರದ ಚಿಲ್ಲರೆ ಔಟ್‌ಲೆಟ್‌ಗಳಲ್ಲಿ ಖರೀದಿಸಬಹುದು. ಸ್ಮಾರ್ಟ್ಫೋನ್ ಮೇಲೆ SBI ಮತ್ತು ICICI ಆಯ್ದ ಬ್ಯಾಂಕ್ ಕಾರ್ಡ್‌ಗಳನ್ನು ಬಳಸುವಾಗ ಗ್ರಾಹಕರು 10% ಪ್ರತಿಶತದಷ್ಟು ತ್ವರಿತ ಕ್ಯಾಶ್‌ಬ್ಯಾಕ್‌ನಿಂದ ಪ್ರಯೋಜನ ಪಡೆಯಬಹುದು. ಹೆಚ್ಚುವರಿಯಾಗಿ 9 ತಿಂಗಳವರೆಗೆ ಯಾವುದೇ ವೆಚ್ಚವಿಲ್ಲದ EMI ಗಾಗಿ ಆಯ್ಕೆ ಇದೆ ಮತ್ತು ಬಳಕೆದಾರರು 180 ದಿನಗಳ ಸ್ಕ್ರೀನ್ ಡ್ಯಾಮೇಜ್ ಪ್ರೊಟೆಕ್ಷನ್ ಲಾಭವನ್ನು ಸಹ ಪಡೆಯಬಹುದು.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile