ಭಾರತದಲ್ಲಿ Oppo ಇಂದು ತನ್ನ F ಸರಣಿಯ ಹೊಸ ಸ್ಮಾರ್ಟ್‌ಫೋನ್ 'Oppo F15' ಬಿಡುಗಡೆಗೊಳಿಸಲಿದೆ. ಕಂಪನಿಯು ಸುಮಾರು ಎರಡು ವಾರಗಳಿಂದ ಈ ಫೋನ್ ಬಗ್ಗೆ ಮಾಹಿತಿಗಳು ಒಂದರ ನಂತರ ಒಂದರಂತೆ ಬರುತ್ತಿತ್ತು. ಈ ಫೋನಿನ ಸ್ಟೈಲಿಶ್ ಮತ್ತು ನಯವಾದ ಬಾಡಿ ನಿಮ್ಮ ತನ್ನತ ಸೆಳೆಯುತ್ತದೆ. ಭಾರತದಲ್ಲಿ ಈ ಫೋನ್ ಬೆಲೆ ಸುಮಾರು 20,000 ರೂಗಿಂತ ಕಡಿಮೆಯಿರಬಹುದು ಎಂದು ನಿರೀಕ್ಷಿಸಲಾಗಿದೆ. ಭಾರತದಲ್ಲಿ ಈ ಫೋನ್ ಇಂದು ಮಧ್ಯಾಹ್ನ 12:00pm ಗಂಟೆಗೆ ನಡೆಯಲಿದೆ. ಇದರ ಉತ್ತಮ ವಿನ್ಯಾಸ ಹೊಂದಿರುವ ಈ ಫೋನ್ ಕಂಪನಿಯು ತನ್ನ ಅಧಿಕೃತ ಯೂಟ್ಯೂಬ್ ಚಾನೆಲ್ ಮತ್ತು ಇತರ ಸೋಶಿಯಲ್ ಮೀಡಿಯಾ ಪ್ಲಾಟ್‌ಫಾರ್ಮ್‌ಗಳಲ್ಲಿ ಕಾರ್ಯಕ್ರಮ ನೇರ ಪ್ರಸಾರವನ್ನು ಮಾಡುತ್ತದೆ.
ಇಲ್ಲಿಯವರೆಗೆ ಸ್ಮಾರ್ಟ್ಫೋನ್ನ ವಿಶೇಷಣಗಳಿಗೆ ಸಂಬಂಧಿಸಿದಂತೆ ಕಂಪನಿಯು ಹೆಚ್ಚಿನ ಮಾಹಿತಿಯನ್ನು ಬಹಿರಂಗಪಡಿಸಿಲ್ಲ. ಕಂಪನಿಯ ಸೋಶಿಯಲ್ ಮೀಡಿಯಾ ಪ್ರೊಫೈಲ್‌ನಲ್ಲಿ ನೋಡಿದ ಚಿತ್ರವೊಂದರಲ್ಲಿ ಈ ಸ್ಮಾರ್ಟ್‌ಫೋನ್‌ನಲ್ಲಿ ಬಳಕೆದಾರರಿಗೆ 48MP ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾ ಸೆಟಪ್ ನೀಡಲಾಗುವುದು ಎಂದು ತಿಳಿದುಬಂದಿದೆ. ಇದಲ್ಲದೆ ಹೊಸ ಸ್ಮಾರ್ಟ್‌ಫೋನ್ VOOC ಫ್ಲ್ಯಾಶ್ ಚಾರ್ಜ್ 3.0 ತಂತ್ರಜ್ಞಾನದೊಂದಿಗೆ ಬೆಂಬಲಿತವಾಗಲಿದೆ. ಮತ್ತು ಅದರ ಮೂರನೇ ಹೈಲೈಟ್ ಮಾಡಲಾದ ವೈಶಿಷ್ಟ್ಯವೆಂದರೆ ಇದರಲ್ಲಿ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ 3.0 ಸ್ಕ್ಯಾನರ್ ನೀಡಿರುವುದು ಕಾಣುತ್ತದೆ.
ಇಂದಿನ ವರದಿಗಳ ಪ್ರಕಾರ ಇದರಲ್ಲಿ VOOC ಫ್ಲ್ಯಾಶ್ ಚಾರ್ಜ್ 3.0 ಸಹಾಯದಿಂದ ಕೇವಲ 5 ನಿಮಿಷಗಳ ಚಾರ್ಜ್ ಮಾಡುವುದರಿಂದ 2 ಗಂಟೆಗಳ ಟಾಕ್ ಟೈಮ್ ನೀಡುತ್ತದೆಯಂತೆ ಇದರೊಂದಿಗೆ ಬಳಕೆದಾರರು 48MP ಮೆಗಾಪಿಕ್ಸೆಲ್ ಕ್ವಾಡ್ ಕ್ಯಾಮೆರಾದಿಂದ ಅತ್ಯುತ್ತಮ ಫೋಟೋಗ್ರಾಫಿ ಆಯ್ಕೆಯನ್ನು ಸಹ ಪಡೆಯುತ್ತಾರೆ. ಕಂಪನಿಯ ಪ್ರಕಾರ ಮೂರನೇ ವೈಶಿಷ್ಟ್ಯ ಅದೇ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ 3.0 ಸಹಾಯದಿಂದ ಫೋನನ್ನು ಕೇವಲ 0.32 ಸೆಕೆಂಡುಗಳಲ್ಲಿ ಅನ್ಲಾಕ್ ಮಾಡುತ್ತದೆಯಂತೆ. ಈ ಫೋನ್‌ನ ನಯವಾದ ವಿನ್ಯಾಸವು 7.9 ಮಿಮೀ ದಪ್ಪವಾಗಿರುತ್ತದೆ. ಸುಮಾರು 172 ಗ್ರಾಂ ವರೆಗೆ ತೂಗುತ್ತದೆ. ಈ ಫೋನ್ 6GB ಮತ್ತು 8GB ಯ RAMನೊಂದಿಗೆ ಬಿಡುಗಡೆಯಾಗುವ ನಿರೀಕ್ಷೆಯಿದೆ.