50MP ಕ್ಯಾಮೆರಾ ಮತ್ತು Powerful ಬ್ಯಾಟರಿಯ OPPO A2 ಫೋನ್‌ನ ಬೆಲೆ ಮತ್ತು ಫೀಚರ್ಗಳೇನು?

Updated on 14-Nov-2023
HIGHLIGHTS

OPPO ತನ್ನ ಹೊಚ್ಚ ಹೊಸ OPPO A2 ಎಂಬ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

ಫೋನ್ MediaTek Dimension 6020 ಪ್ರೊಸೆಸರ್‌ನೊಂದಿಗೆ ಲಭ್ಯವಿದ್ದು 50MP ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ

ನೀವು ಒಪ್ಪೋ ಫ್ಯಾನ್ ಆಗಿದ್ದು ನೀವೊಂದು ಲೇಟೆಸ್ಟ್ 5G ಸ್ಮಾರ್ಟ್‌ಫೋನ್ ಖರೀದಿಸಲು ಯೋಜಿಸುತ್ತಿದ್ದರೆ ಕಂಪನಿ ತನ್ನ ಹೊಚ್ಚ ಹೊಸ OPPO A2 ಎಂಬ ಬಜೆಟ್ ಸ್ಮಾರ್ಟ್‌ಫೋನ್ ಅನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಈ ಹೊಸ ಒಪ್ಪೋ A ಸರಣಿಯ ಸ್ಮಾರ್ಟ್‌ಫೋನ್ 12GB RAM ಜೊತೆಗೆ 512GB ವರೆಗಿನ ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಈ ಫೋನ್ MediaTek Dimension 6020 ಪ್ರೊಸೆಸರ್‌ನೊಂದಿಗೆ ಲಭ್ಯವಿದ್ದು 50MP ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಕೊನೆಯದಾಗಿ ಫೋನ್ 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ. ಇದರ ಒಂದಿಷ್ಟು ಹೈಲೈಟ್ ಮಾಹಿತಿಗಳನ್ನು ಮುಂದೆ ತಿಳಿಯೋಣ.

Also Read: ನಿಮ್ಮ PAN Card ಕಳೆದೋಯ್ತಾ! ಕೆಲವೇ ನಿಮಿಷಗಳಲ್ಲಿ Online ಮೂಲಕ ಮತ್ತೆ ಪಡೆಯುವುದು ಹೇಗೆ?

OPPO A2 ಫೀಚರ್ ಮತ್ತು ವಿಶೇಷಣಗಳು

ಸ್ಮಾರ್ಟ್ಫೋನ್ 6.72 ಇಂಚಿನ ಫುಲ್ HD+ ಅನ್ನು LTPS LCD ಸ್ಕ್ರೀನ್ ಜೊತೆಗೆ 90Hz ರಿಫ್ರೆಶ್ ರೇಟ್ ನೀಡುತ್ತದೆ. ಎಗೆಗಳೇ ಮೇಲೆ ತಿಳಿಸಿರುವಂತೆ ಫೋನ್ ಆಕ್ಟಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 6020 ಪ್ರೊಸೆಸರ್‌ನೊಂದಿಗೆ ಚಾಲಿತವಾಗಿದೆ. ಇದರಲ್ಲಿ 12GB LPDDR4X RAM ಮತ್ತು ವರ್ಚುವಲ್ RAM ಫೀಚರ್ ಅನ್ನು ಸಹ ಫೋನ್ ಬಳಸಿಕೊಂಡು ಆನ್‌ಬೋರ್ಡ್ ಮೆಮೊರಿಯನ್ನು 24GB ವರೆಗೆ ವಿಸ್ತರಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ಹ್ಯಾಂಡ್‌ಸೆಟ್ 512GB ವರೆಗೆ UFS2.2 ಸ್ಟೋರೇಜ್ ಅನ್ನು ಪ್ಯಾಕ್ ಮಾಡುತ್ತದೆ.

OPPO A2 ಕ್ಯಾಮೆರಾ ವಿವರ

ಇದರ ಕ್ಯಾಮೆರಾದ ಬಗ್ಗೆ ನೋಡುವುದಾದರೆ ಫೋನ್ ಡ್ಯುಯಲ್ ಬ್ಯಾಕ್ ಕ್ಯಾಮೆರಾ ಸೆನ್ಸರ್ ಹೊಂದಿದೆ. ಇದರ ಪ್ರೈಮರಿ f/1.8 ಅಪರ್ಚರ್ ಮತ್ತು 77° ಡಿಗ್ರಿ ಫೀಲ್ಡ್ ಆಫ್ ವ್ಯೂ ಜೊತೆಗೆ 50MP ಮೆಗಾಪಿಕ್ಸೆಲ್ ಒಳಗೊಂಡಿರುತ್ತದೆ. ಮತ್ತೊಂದು f/2.4 ಅಪರ್ಚರ್ ಲೆನ್ಸ್‌ನೊಂದಿಗೆ 2MP ಮೆಗಾಪಿಕ್ಸೆಲ್ ಸೆನ್ಸರ್ ಅನ್ನು ಹೊಂದಿದೆ. ಇದರಲ್ಲಿ ಸೆಲ್ಫಿಗಳು ಮತ್ತು ವೀಡಿಯೊ ಚಾಟ್‌ಗಳಿಗಾಗಿ f/2.0 ಅಪರ್ಚರ್ ಲೆನ್ಸ್‌ನೊಂದಿಗೆ 8MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾ ಹೊಂದಿದೆ.

OPPO A2 ಬ್ಯಾಟರಿ ಮತ್ತು ಸೆನ್ಸರ್‌ಗಳು

ಈ ಫೋನಲ್ಲಿ ಕನೆಕ್ಟಿವಿಟಿ ಆಯ್ಕೆಗಳಲ್ಲಿ Wi-Fi, ಬ್ಲೂಟೂತ್, USB 2.0, 3.5mm ಆಡಿಯೋ ಜ್ಯಾಕ್, USB ಟೈಪ್-C ಪೋರ್ಟ್, GPS ಮತ್ತು A-GPS ಸೇರಿವೆ. Accelerometer, Ambient light sensor, Geomagnetic sensor, Gravity sensor, ಮತ್ತು Proximity sensor ಅನ್ನು ಫೋನ್ ಹೊಂದಿದೆ. ಮತ್ತಷ್ಟು ಸೆಕ್ಯೂರಿಟಿಗಾಗಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಫೇಸ್ ಅನ್‌ಲಾಕ್ ವೈಶಿಷ್ಟ್ಯವನ್ನು ಬೆಂಬಲಿಸುತ್ತದೆ. ಕೊನೆಯದಾಗಿ ಈ ಹ್ಯಾಂಡ್ಸೆಟ್ IP54 ರೇಟಿಂಗ್ ಮೂಲಕ ಡಸ್ಟ್ ಮತ್ತು ವಾಟರ್ ಪ್ರೂಫ್ ಆಗಿದೆ.

ಬೆಲೆ ಮತ್ತು ಲಭ್ಯತೆ

ಕೊನೆಯದಾಗಿ ಇದರ ಬೆಲೆ ಮತ್ತು ಲಭ್ಯತೆಯಲ್ಲಿ Oppo A2 ಆರಂಭಿಕ 12GB RAM + 256GB ಸ್ಟೋರೇಜ್ ರೂಪಾಂತರಕ್ಕಾಗಿ CNY 1,699 (ಸುಮಾರು ರೂ. 16,500) ಗೆ ನಿಗದಿಪಡಿಸಲಾಗಿದೆ. ಮತ್ತೊಂದು 12GB RAM + 512GB ಸ್ಟೋರೇಜ್ ಹೊಂದಿರುವ ಟಾಪ್-ಎಂಡ್ ಮಾಡೆಲ್ ಬೆಲೆ CNY 1,799 (ಸುಮಾರು ರೂ. 20,000) ಬೆಲೆಗೆ ಬಿಡುಗಡೆಗೊಳಿಸಿದೆ. ಇದು ಪ್ರಸ್ತುತ ಚೀನಾದಲ್ಲಿ ಬಿಡುಗಡೆಯಾಗಿ ಐಸ್ ಕ್ರಿಸ್ಟಲ್ ವೈಲೆಟ್, ಜಿಂಘೈ ಬ್ಲಾಕ್ ಮತ್ತು ಕಿಂಗ್ಬೋ ಎಮರಾಲ್ಡ್ ಬಣ್ಣ ಆಯ್ಕೆಗಳಲ್ಲಿ ಒಪ್ಪೋ ಸ್ಟೋರ್ ಮೂಲಕ ಖರೀದಿಸಲು ಲಭ್ಯವಿದೆ. ಆದರೆ ಈ ಸ್ಮಾರ್ಟ್ಫೋನ್ ಭಾರತ ಸೇರಿದಂತೆ ಇತರ ಮಾರುಕಟ್ಟೆಗಳಲ್ಲಿ ಯಾವಾಗ ಬಿಡುಗಡೆಯಾಗುತ್ತೆ ಮತ್ತು ಯಾವ ಬೆಲೆಗೆ ಮಾರಾಟವಾಗುತ್ತೆ ಎನ್ನವುದನ್ನು ಕಂಪನಿ ಇನ್ನು ಅಧಿಕೃತವಾಗಿ ದೃಢೀಕರಿಸಲಾಗಿಲ್ಲ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :