ದೇಶದಲ್ಲಿ ತನ್ನ ಜನಪ್ರಿಯತೆ ಮತ್ತು ಅತಿ ಹೆಚ್ಚು ಪವರ್ಫುಲ್ ಸ್ಮಾರ್ಟ್‌ಫೋನ್‌ಗಳಿಗೆ ಹೆಸರಾಗಿರುವ ಒನ್ಪ್ಲಸ್ (OnePlus) ಈಗ ತನ್ನ ಸ್ಮಾರ್ಟ್ಫೋನ್ ಬಳಕೆದಾರರ ಸಮಸ್ಯೆಗೆ ಹೊಸ ಸಮಾಧಾನವನ್ನು ನೀಡಲು ಮುಂದಾಗಿದೆ. ಅಂದ್ರೆ ಇತ್ತೀಚೆಗೆ OnePlus ಫೋನ್ಗಳ ಡಿಸ್ಪ್ಲೇಯಲ್ಲಿ ಹೊಸ ತಲೆನೋವೊಂದು ಶುರುವಾಗಿದ್ದು ಸ್ಕ್ರೀನ್ ಮೇಲೆ ಹಸಿರು ರೇಖೆ (Green Line) ಸಮಸ್ಯೆಯಿಂದ ಹೆಚ್ಚು ಜನರು ಪ್ರಭಾವಿತವಾಗಿರುವ ಕಾರಣ ಇದಕ್ಕೊಂದು ಯೋಜನೆಯನ್ನು ಘೋಷಿಸಿದೆ. ಈ ಯೋಜನೆಯಲ್ಲಿ ಎಲ್ಲಾ OnePlus ಮಾಡೆಲ್ಗಳು ತಮ್ಮ ವಾರಂಟಿಯನ್ನು ಒಳಗೊಂಡಿದ್ದು ಮುಖ್ಯವಾಗಿ OnePlus 8 Pro, OnePlus 8T, OnePlus 9 ಮತ್ತು OnePlus 9R ಸೇರಿದಂತೆ ಹಳೆಯ OnePlus ಸ್ಮಾರ್ಟ್ಫೋನ್ಗಳನ್ನು ಒಳಗೊಂಡಿದೆ.
ಈ ಸಮಸ್ಯೆಯನ್ನು ಪರಿಹರಿಸಲು ಕಂಪನಿಯ ಬಳಿ ಸದ್ಯಕ್ಕೆ ಯಾವುದೇ ಬಿಡಿ ಭಾಗಗಳಿಲ್ಲದ ಕಾರಣ ಕಂಪನಿ ತನ್ನ ಬಳಕೆದಾರರಿಗೆ ತಮ್ಮ ಸ್ಮಾರ್ಟ್ಫೋನ್ ಅನ್ನು ವಿಶೇಷವಾಗಿ OnePlus 10R ಹೊಸ ಸ್ಮಾರ್ಟ್ಫೋನ್ ಖರೀದಿಸಲು ಅಥವಾ ಅಪ್‌ಗ್ರೇಡ್ ಮಾಡಿಕೋಳ್ಳಲು ಸುಮಾರು ರೂ 30,000 ವರೆಗೆ ರಿಯಾಯಿತಿ ವೋಚರ್ ನೀಡುವುದಾಗಿ ಭರವಸೆಯನ್ನು ನೀಡುತ್ತಿದೆ. ಇದರರ್ಥ ಯಾವ ಬಳಕೆದಾರರ ಸ್ಕ್ರೀನ್ ಮೇಲೆ ಹಸಿರು ರೇಖೆ (Green Line) ಸಮಸ್ಯೆ ಹೊಂದಿದ್ದರೋ ಅವರು 5000 ರಿಂದ 10000 ರೂಪಾಯಿಗಳನ್ನು ಪಾವತಿಸಿ ಹೊಸ OnePlus 10R ಅನ್ನು ಖರೀದಿಸಬಹುದು ಎಂದು ಹೇಳಿದ್ದಾರೆ.
ವಕ್ತಾರರ ಹೇಳಿಕೆ "ಈ ಸಮಸ್ಯೆಯು ಪೀಡಿತ ಬಳಕೆದಾರರಿಗೆ ಹೆಚ್ಚಿನ ಅನಾನುಕೂಲತೆಯನ್ನು ಉಂಟುಮಾಡಿದೆ ಎಂದು ನಾವು ಅರಿತುಕೊಂಡಿದ್ದೇವೆ ಮತ್ತು ಅದಕ್ಕಾಗಿ ನಾವು ಕ್ಷಮೆಯಾಚಿಸುತ್ತೇವೆ. ನಮ್ಮ ಅಚಲವಾದ ಬದ್ಧತೆಗೆ ಅನುಗುಣವಾಗಿ ನೀವು ಹತ್ತಿರದ OnePlus ಸೆಂಟರ್ಗೆ ಭೇಟಿ ಮಾಡಲು ಬಳಕೆದಾರರನ್ನು ಪ್ರೋತ್ಸಾಹಿಸುತ್ತೇವೆ. ಈ ಫೋನ್ ರೋಗನಿರ್ಣಯಕ್ಕಾಗಿ ಕೇಂದ್ರ ಮತ್ತು ಪರಿಸ್ಥಿತಿಯಿಂದ ಪ್ರಭಾವಿತವಾಗಿರುವ ಎಲ್ಲಾ ಸ್ಮಾರ್ಟ್ಫೋನ್ಗಳಿಗೆ ನಾವು ಉಚಿತ ಸ್ಕ್ರೀನ್ ರಿಪ್ಲೇಸ್‌ಮೆಂಟ್ ಅನ್ನು ಒದಗಿಸುತ್ತೇವೆ ಎಂದು ಹೇಳಿದ್ದಾರೆ.
ಕಳೆದ ಕೆಲವು ವಾರಗಳಲ್ಲಿ ಭಾರತದಲ್ಲಿ ಮತ್ತು ಜಾಗತಿಕವಾಗಿ ಕೆಲವು OnePlus ಬಳಕೆದಾರರು ವಿಚಿತ್ರವಾದ ಸ್ಕ್ರೀನ್ ಮೇಲೆ ಹಸಿರು ರೇಖೆ (Green Line) ಸಮಸ್ಯೆಯನ್ನು ವರದಿ ಮಾಡಲು ಸೋಶಿಯಲ್ ಮೀಡಿಯಾವನ್ನು ತೆಗೆದುಕೊಂಡಿದ್ದಾರೆ. OnePlus ಫೋನ್‌ಗಳಲ್ಲಿ ಸಾಮಾನ್ಯವಾಗಿ ಕಾರ್ಯನಿರ್ವಹಿಸುತ್ತಿರುವಾಗ ಅಚಾನಕ್ ಈ ಹಸಿರು ರೇಖೆಯು ಉಳಿಯುತ್ತದೆ ಮತ್ತು ಒಟ್ಟಾರೆ ಬಳಕೆದಾರರ ಸ್ಕ್ರೋಲಿಂಗ್ ಅನುಭವವನ್ನು ಅಡ್ಡಿಪಡಿಸುತ್ತದೆ. ಅಲ್ಲದೆ ಇವು AMOLED ಡಿಸ್ಪ್ಲೇ ಹೊಂದಿರುವ OnePlus ಫೋನ್‌ಗಳಲ್ಲಿ ಈ ಸಮಸ್ಯೆ ಹೆಚ್ಚು ಸಾಮಾನ್ಯವಾಗಿದೆ.