OnePlus Open Apex Edition: ಡ್ಯೂಯಲ್ ಡಿಸ್ಪ್ಲೇಯೊಂದಿಗೆ ಒನ್ ಪ್ಲಸ್ ಮೊದಲ ಫೋಲ್ಡಬಲ್‌ ಸ್ಮಾರ್ಟ್‌ಫೋನ್ ಬಿಡುಗಡೆ

Updated on 08-Aug-2024
HIGHLIGHTS

OnePlus ತನ್ನ ಮೊದಲ ಫೋಲ್ಡಬಲ್‌ (OnePlus Apex Open Edition) ಸ್ಮಾರ್ಟ್‌ಫೋನ್ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ.

OnePlus Apex Edition ಸ್ಮಾರ್ಟ್‌ಫೋನ್ 16GB LPDDR5X RAM ಮತ್ತು 512GB UFS 4.0 ಸ್ಟೋರೇಜ್ ಹೊಂದಿದೆ.

ಇದರಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫೋನ್ 20MP ಪ್ರೈಮರಿ ಕ್ಯಾಮೆರಾ ಮತ್ತೊಂದು 32MP ದ್ವಿತೀಯ ಕ್ಯಾಮೆರಾವನ್ನು ಹೊಂದಿದೆ.

ಭಾರತದಲ್ಲಿ ಒನ್ ಪ್ಲಸ್ (OnePlus) ಸ್ಮಾರ್ಟ್‌ಫೋನ್ ತಯಾರಕ ಕಂಪನಿ ತನ್ನ ಮೊದಲ ಫೋಲ್ಡಬಲ್‌ (OnePlus Open Apex Edition) ಸ್ಮಾರ್ಟ್‌ಫೋನ್ ವಿಶೇಷ ಆವೃತ್ತಿಯನ್ನು ಬಿಡುಗಡೆ ಮಾಡಿದೆ. ಅಂದ್ರೆ ಭಾರತದಲ್ಲಿ ಡ್ಯೂಯಲ್ ಸೆಲ್ಫಿ ಕ್ಯಾಮೆರಾ ಮತ್ತು ಡ್ಯೂಯಲ್ ಡಿಸ್ಪ್ಲೇಯೊಂದಿಗೆ ತನ್ನ ಮೊಟ್ಟ ಮೊದಲ OnePlus Open Apex Edition ಫೋಲ್ಡಬಲ್‌ ಸ್ಮಾರ್ಟ್‌ಫೋನ್ ಬಿಡುಗಡೆಗೊಳಿಸಿದೆ. 16GB RAM ಮತ್ತು 512GB ಸ್ಟೋರೇಜ್ ಪ್ರಸ್ತುತ 1,39,999 ರೂಗಳಿಗೆ ಬಿಡುಗಡೆಗೊಳಿಸಿದೆ. ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಹೊಂದಿರುವ ವಿಶೇಷ ವೈಶಿಷ್ಟ್ಯಗಳನ್ನು ಹೊಂದಿದೆ.

OnePlus Open Apex Edition foldable launched in India, know features price details

Also Read: Amazon ಫ್ರೀಡಂ ಫೆಸ್ಟಿವಲ್ ಸೇಲ್‌ನಲ್ಲಿ OnePlus 12 ಮೇಲೆ ಭಾರಿ ರಿಯಾಯಿತಿಯನ್ನು ನೀಡುತ್ತದೆ

OnePlus Apex Edition ಸ್ಮಾರ್ಟ್‌ಫೋನ್

ಈ ಒನ್ ಪ್ಲಸ್ (OnePlus) ಸ್ಮಾರ್ಟ್ಫೋನ್ AI ಎರೇಸರ್ ಮತ್ತು AI ಸ್ಮಾರ್ಟ್ ಕಟೌಟ್‌ನಂತಹ ಹೊಸ ತಂತ್ರಜ್ಞಾನವನ್ನು ಈ OnePlus Open Apex Edition ಫೋನ್‌ನಲ್ಲಿ ಬಳಸಲಾಗಿದೆ. ಇದರರ್ಥ ಫೋನ್ ನಿಮಗಾಗಿ ಕೆಲವು ಕೆಲಸಗಳನ್ನು ಮಾಡಬಹುದು. ಉದಾಹರಣೆಗೆ ಫೋಟೋದಿಂದ ಏನನ್ನಾದರೂ ಅಳಿಸಬಹುದು ಅಥವಾ ಬೇರ್ಪಡಿಸುವುದು.

ಫೋನ್‌ನ ಹಿಂಭಾಗವು ಚರ್ಮದಂತೆ ಕಾಣುತ್ತದೆ ಮತ್ತು ಇದು ಕಿತ್ತಳೆ ಬಣ್ಣದ ಸ್ಲೈಡರ್ ಅನ್ನು ಸಹ ಹೊಂದಿದೆ. ಈ OnePlus Open Apex Edition ಫೋನ್ ಸಾಕಷ್ಟು ಹಗುರವಾಗಿದ್ದು ಅತಿ ಸರಳ ಮತ್ತು ಸಿಂಪಲ್ ಬಳಕೆಗೆ ಉತ್ತಮವಾಗಿದೆ. ಈ ಫೋನ್‌ನ ಬೆಲೆಯನ್ನು ನೋಡುವುದಾದರೆ 16GB RAM ಮತ್ತು 512GB ಸ್ಟೋರೇಜ್ ಪ್ರಸ್ತುತ 1,39,999 ರೂಗಳಿಗೆ ಬಿಡುಗಡೆಗೊಳಿಸಿದೆ. ನೀವು ಇದನ್ನು Amazon ಮತ್ತು OnePlus ವೆಬ್‌ಸೈಟ್ ಮತ್ತು ಸ್ಟೋರ್‌ಗಳಿಂದ ಖರೀದಿಸಬಹುದು. ಇದು ಆಗಸ್ಟ್ 10 ರಿಂದ ಮಾರಾಟಕ್ಕೆ ಲಭ್ಯವಿರುತ್ತದೆ.

OnePlus Open Apex Edition foldable launched in India, know features price details

OnePlus Open Apex Edition ಸ್ಮಾರ್ಟ್‌ಫೋನ್ ಫೀಚರ್

ಈ ಸ್ಮಾರ್ಟ್‌ಫೋನ್‌ ಎರಡು ಸ್ಕ್ರೀನ್‌ಗಳನ್ನು ಹೊಂದಿದ್ದು ಒಂದು ಸಣ್ಣ ಮತ್ತು ಒಂದು ದೊಡ್ಡದು. ಎರಡೂ ಡಿಸ್ಪ್ಲೇಗಳು ಉತ್ತಮ ಗುಣಮಟ್ಟದ ಮತ್ತು ವೇಗವಾಗಿ ಕಾರ್ಯನಿರ್ವಹಿಸುತ್ತವೆ. OnePlus ಓಪನ್ ಅಪೆಕ್ಸ್ ಆವೃತ್ತಿಯು 120Hz ರಿಫ್ರೆಶ್ ದರದೊಂದಿಗೆ 6.31 ಇಂಚಿನ 2K LTPO 3.0 Super Fluid AMOLED ಕವರ್ ಸ್ಕ್ರಿನ್ ಹೊಂದಿದೆ. ಅಲ್ಲದೆ ಪ್ರೈಮರಿ ಡಿಸ್ಪ್ಲೇ 7.82 ಇಂಚಿನ AMOLED 2K Flexi-fluid LTPO 3.0 ಡಿಸ್ಪ್ಲೇಯನ್ನು 120Hz ರಿಫ್ರೆಶ್ ದರ ಮತ್ತು 2,800 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ. ಎರಡೂ ಡಿಸ್ಪ್ಲೇಗಳು ಡಾಲ್ಬಿ ವಿಷನ್ ಅನ್ನು ಬೆಂಬಲಿಸುತ್ತವೆ.

OnePlus Open Apex Edition ಸ್ಮಾರ್ಟ್‌ಫೋನ್ 16GB LPDDR5X RAM ಮತ್ತು 1TB UFS 4.0 ಸ್ಟೋರೇಜ್ ಅನ್ನು ಸಹ ಹೊಂದಿದೆ. ಇದು ಬಹಳಷ್ಟು ಇದು ಹಿಂದಿನ ಓಪನ್ ಫೋನ್‌ನ Qualcomm’s Snapdragon 8 Gen 2 ಪ್ರೊಸೆಸರ್ ಅನ್ನು ಹೊಂದಿದೆ. ಆದರೆ ಸಾಫ್ಟ್‌ವೇರ್ ಹೊಸದಾಗಿದ್ದು OnePlus ಈ ಫೋನ್‌ಗೆ ಮೂರು ವರ್ಷಗಳವರೆಗೆ ಸಾಫ್ಟ್‌ವೇರ್ ನವೀಕರಣಗಳನ್ನು ಮತ್ತು ನಾಲ್ಕು ವರ್ಷಗಳವರೆಗೆ ಭದ್ರತಾ ನವೀಕರಣಗಳನ್ನು ಒದಗಿಸುತ್ತದೆ. ಈ ಫೋನ್‌ನಲ್ಲಿ ವಿಶೇಷ ಮೋಡ್ ಕೂಡ ಇದೆ. ಇದನ್ನು VIP ಮೋಡ್ ಎಂದು ಕರೆಯಲಾಗುತ್ತದೆ. ಈ ಕ್ರಮದಲ್ಲಿ ಫೋನ್‌ನ ಮೈಕ್ರೊಫೋನ್ ಮತ್ತು ಕ್ಯಾಮೆರಾ ಸ್ವಿಚ್ ಆಫ್ ಆಗಿರುತ್ತದೆ.

OnePlus Open Apex Edition foldable launched in India, know features price details

OnePlus Open Apex Edition ಸ್ಮಾರ್ಟ್‌ಫೋನ್ ಬ್ಯಾಟರಿ ಮತ್ತು ಕ್ಯಾಮೆರಾ

OnePlus Open Apex Edition ಫೋನ್ 4805mAh ಬ್ಯಾಟರಿಯನ್ನು ಹೊಂದಿದೆ. ಇದು 67W ಚಾರ್ಜರ್‌ನೊಂದಿಗೆ ಬರುತ್ತದೆ. ಈ ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರಲ್ಲಿ 48MP ಪ್ರೈಮರಿ Sony LYT-T808 CMOS ಕ್ಯಾಮೆರಾದೊಂದಿಗೆ ಬಂದ್ರೆ ಮತ್ತೊಂದು 64MP ಟೆಲಿಫೋಟೋ OmniVision OV64B ಕ್ಯಾಮೆರಾ ಸೆನ್ಸರ್ ಹೊಂದಿದೆ. ಕೊನೆಯದಾಗಿ 48MP ಅಲ್ಟ್ರಾವೈಡ್ Sony IMX581 ಸೆನ್ಸರ್ ಕ್ಯಾಮೆರಾ ಒಳಗೊಂಡಿದೆ. ಅಲ್ಲದೆ ಇದರಲ್ಲಿ ಸೆಲ್ಫಿ ಮತ್ತು ವೀಡಿಯೊ ಕರೆಗಾಗಿ ಫೋನ್ 20MP ಪ್ರೈಮರಿ ಕ್ಯಾಮೆರಾ ಮತ್ತೊಂದು 32MP ದ್ವಿತೀಯ ಕ್ಯಾಮೆರಾವನ್ನು ಹೊಂದಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :