ಭಾರತದ ಇಂಡಿಯಾ ಟುಡೆ ನ್ಯೂಸ್ ಪೇಪರ್ ಹಿರಿಯ ಪತ್ರಕರ್ತರಾದ ಚೈತಿ ನರುಲಾ (Chaiti Narula) ಅವರು ಬುಧವಾರ ಕಳುಹಿಸಿದ ಟ್ವೀಟ್ ಮೂಲಕ OnePlus One ಸ್ಮಾರ್ಟ್‌ಫೋನ್ ಅಂದು ಸ್ವಯಂಪ್ರೇರಿತವಾಗಿ ಇದ್ದಕಿದ್ದಂತೆ ಬೆಂಕಿ ಕಾಣಿಸಿಕೊಂಡ ಸುದ್ದಿ ಅಂತರ್ಜಾಲದಲ್ಲಿ ಭಾರಿ ಸದ್ದು ಮಾಡುತ್ತಿದೆ. OnePlus ಫೋನ್ ಕಂಪನಿಯ ಮಾಲೀಕರಾದ ರಾಹುಲ್ ಹಿಮಾಲಿಯನ್ OnePlus Care ವಿಭಾಗಕ್ಕೆ ನೀಡಿದ ಸಂದೇಶದಲ್ಲಿ ಫೋನ್ ಒಂದು ಪ್ರಶೆಯಾಗಿ ಉಳಿದಿದೆ. ಏಕೆಂದರೆ ಬೆಂಕಿ ಕಾಣಿಸಿಕೊಂಡಾಗ ಫೋನ್ “ಸ್ವಿಚ್ ಆಫ್” ಮತ್ತು “ಅನ್ಪ್ಲಗ್ಡ್ ಮೋಡ್” ನಲ್ಲಿತ್ತು ಎಂದು ಹೇಳಿದ್ದಾರೆ. ಅಲ್ಲದೆ ಒನ್ಪ್ಲಸ್ ಇಂತಹ ದುರದೃಷ್ಟಕರ ಸಂದರ್ಭಗಳಲ್ಲಿನ ಘಟನೆಗಳಿಗೆ ಬಳಕೆದಾರರಿಗೆ ಮತ್ತು ಡಿಜಿಟ್ ನೀಡಿದ ಹೇಳಿಕೆಗಳಿಗೆ ಪ್ರತಿಕ್ರಿಯೆ ಇಡುತ್ತ ಬಂದಿದೆ.
“ನಾವು ಇಂತಹ ಘಟನೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ನಮ್ಮ ತಂಡವು ಈಗಾಗಲೇ ಬಳಕೆದಾರರ ಬಳಿ ತಲುಪಿದೆ. ಮತ್ತು ಫೋನ್ ಮತ್ತು ನಡೆದ ಘನಟನೆಯನ್ನು ಇನ್ನಷ್ಟು ಸುಧೀರ್ಘವಾಗಿ ತನಿಖೆ ಮಾಡುತ್ತಿದ್ದೇವೆ”ಎಂದು ಒನ್‌ಪ್ಲಸ್ ಇಂಡಿಯಾ ತನ್ನ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ಒನ್‌ಪ್ಲಸ್ ಕೇರ್‌ಗೆ ನೀಡಿದ ತನ್ನ ಮೂಲ ಸಂದೇಶದಲ್ಲಿ ಹಿಮಾಲಿಯನ್ ಅವರು ಬುಧವಾರ ಮುಂಜಾನೆ ಅವರ “ಹೊಗೆಯಾಡಿಸುವ ಮತ್ತು ಉರಿಯುತ್ತಿರುವ” ಒನ್‌ಪ್ಲಸ್ ಒನ್ ಸ್ಮಾರ್ಟ್‌ಫೋನ್‌ನಿಂದ ಬಂದ “ಹೊಗೆಯನ್ನು ಉಸಿರುಗಟ್ಟಿಸುವ ಮತ್ತು ವಾಕರಿಕೆ ನೀಡುವಂತಹ ವಾತಾವರಣ ಸೃಷ್ಟಿಸಿತ್ತು ಈ ಮೂಲಕ ಇದ್ದಕ್ಕಿದ್ದಂತೆ ಎಚ್ಚರಗೊಂಡು ಬಂದು ನೋಡಿದೆ” ಎಂದು ಬರೆದಿದ್ದಾರೆ. ಆ ಸಮಯದಲ್ಲಿ ಅವರ ಹವಾನಿಯಂತ್ರಣವನ್ನು ಆನ್ ಮಾಡಲಾಗಿದ್ದು ಮತ್ತು ಕೋಣೆಯ ಉಷ್ಣತೆಯು 19 ಡಿಗ್ರಿ ಸೆಲ್ಸಿಯಸ್ ಆಗಿತ್ತು ಎಂದು ಅವರು ಹೇಳಿದರು..
ಈ ಘಟನೆ ನಡೆದಾಗ ಹಿಮಲಿಯನ್ ತನ್ನ ಒನ್‌ಪ್ಲಸ್ ಒನ್‌ಗೆ ಐದು ವರ್ಷಕ್ಕಿಂತ ಮೇಲ್ಪಟ್ಟು ಬಳಸುತ್ತಿದ್ದರೆಂದು ಒನ್‌ಪ್ಲಸ್ ಕೇರ್‌ಗೆ ನೀಡಿದ ಸಂದೇಶದಲ್ಲಿ ಹೇಳಿದ್ದಾರೆ. ಕೋಣೆಯು ಹೊಗೆಯನ್ನು ಹೊಗೆಯನ್ನು ನೋಡಿದಾಗ ಬೆಂಕಿಯನ್ನು ನಂದಿಸಲು ಫೋನಿನ ಮೇಲೆ ನೀರನ್ನು ಚೆಲ್ಲಿಲಾಗಿತ್ತು. ಒನ್‌ಪ್ಲಸ್ ಕೇರ್‌ಗೆ ಕಳುಹಿಸಲಾದ ಹಿಮಾಲಿಯನ್ ಸಂದೇಶವು ಈ ಘಟನೆಯ ಬಗ್ಗೆ ಬಳಕೆದಾರರ ನಿರಾಶೆ ಮತ್ತು ಅಸಹ್ಯತೆಯನ್ನು ವ್ಯಕ್ತಪಡಿಸುತ್ತದೆ. "ನನಗೆ ಮಾನಸಿಕ ಸಂಕಟವನ್ನು ಉಂಟುಮಾಡಿದೆ ಆದರೆ ಮಾರಣಾಂತಿಕವಾಗಿದ್ದ ಸಮಸ್ಯೆಯನ್ನು ಪರಿಹರಿಸಲು ಗ್ರಾಹಕ ಬೆಂಬಲ ತಂಡವನ್ನು ಸಂಪರ್ಕಿಸಲು ನಾನು ಒತ್ತಾಯಿಸುತ್ತೇನೆ" ಎಂದು ಅವರ ಸಂದೇಶದ ಕೊನೆಯ ಸಾಲು ಬರೆದಿದ್ದರೆ.
ಚೀನಾದ ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕರು ವಿನ್ಯಾಸಗೊಳಿಸಿ ತಯಾರಿಸಿದ ಈ ಮೊದಲ ಮಾದರಿ ಒನ್‌ಪ್ಲಸ್ ಒನ್ ಇದರ ಪ್ರಸ್ತುತ ಮಾದರಿಗಳಲ್ಲಿ ಇತ್ತೀಚೆಗೆ ಬಿಡುಗಡೆಯಾದ ಒನ್‌ಪ್ಲಸ್ 7 ಮತ್ತು ಒನ್‌ಪ್ಲಸ್ 7 ಪ್ರೊ ಸ್ಮಾರ್ಟ್ಫೋನ್ ಸಹ ಸೇರಿವೆ. ನಿರ್ದಿಷ್ಟವಾಗಿ ಬ್ಯಾಟರಿ ದೋಷದ ಹಿಂದಿನ ಇತಿಹಾಸವಿಲ್ಲದ ಒನ್‌ಪ್ಲಸ್ ಒನ್, ತೆಗೆಯಲಾಗದ 3100mAh ಲಿಥಿಯಂ-ಐಯಾನ್ ಪಾಲಿಮರ್ ಬ್ಯಾಟರಿಯನ್ನು ಹೊಂದಿದೆ. ಒನ್‌ಪ್ಲಸ್ ಒನ್ ಅನ್ನು ಮೂಲತಃ 2014 ರಲ್ಲಿ ಅನಾವರಣಗೊಳಿಸಲಾಯಿತು. ಇದು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 801 ಚಿಪ್‌ಸೆಟ್‌ನಿಂದ 3GB ಯ RAM ಅನ್ನು ಹೊಂದಿದೆ. ಇಂಟರ್ನಲ್ ಸ್ಟೋರೇಜ್ 16GB ಯಿಂದ 64GB ವರೆಗೆ ಒಳಗೊಂಡಿದೆ.
https://twitter.com/Chaiti/status/1146424809506713600?ref_src=twsrc%5Etfw