108MP ಕ್ಯಾಮೆರಾದೊಂದಿಗೆ OnePlus Nord N30 5G ಸದ್ದಿಲ್ಲದೇ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು ತಿಳಿಯಿರಿ!
ಸದ್ದಿಲ್ಲದೇ ಅಮೇರಿಕದ ಮಾರುಕಟ್ಟೆಯಲ್ಲಿ ತನ್ನ ಲೇಟೆಸ್ಟ್ OnePlus Nord N30 5G ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ
OnePlus Nord N30 5G ಸ್ಮಾರ್ಟ್‌ಫೋನ್‌ನ ಬೆಲೆ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತಿಳಿಯಿರಿ.
ಚೀನಾದ ಸ್ಮಾರ್ಟ್‌ಫೋನ್ ಕಂಪನಿ ಒನ್ ಪ್ಲಸ್ (OnePlus) ಮಧ್ಯಮ ಶ್ರೇಣಿಯ ಮಾರುಕಟ್ಟೆಗೆ ಮತ್ತೊಂದು ಹೆಜ್ಜೆ ಇಟ್ಟಿದೆ. ಈಗ ಕಂಪನಿ ಸದ್ದಿಲ್ಲದೇ ಅಮೇರಿಕದ ಮಾರುಕಟ್ಟೆಯಲ್ಲಿ ತನ್ನ ಲೇಟೆಸ್ಟ್ OnePlus Nord N30 5G ಸ್ಮಾರ್ಟ್ಫೋನ್ ಬಿಡುಗಡೆಯೊಂದಿಗೆ ಹೊಸ ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ 108MP ಕ್ಯಾಮೆರಾದೊಂದಿಗೆ ದೊಡ್ಡ ಬ್ಯಾಟರಿ ಮತ್ತು ಉತ್ತಮ 5G ಪ್ರೊಸೆಸರ್ ಅನ್ನು ಹೊಂದಿದೆ. ಸ್ಮಾರ್ಟ್ಫೋನ್ ಪ್ರಸ್ತುತ ಅಮೇರಿಕಾದಲ್ಲಿ ಬಿಡುಗಡೆಯಾದ ಕಾರಣ ಇದರ ಸಂಪೂರ್ಣ ಮಾಹಿತಿಯನ್ನು ಅಧಿಕೃತ OnePlus US ವೆಬ್‌ಸೈಟ್ ಆಧಾರದ ಮೇರೆಗೆ ಪಟ್ಟಿ ಮಾಡಲಾಗಿದೆ. ಈ ಹೊಸ ಮಧ್ಯಮ ಶ್ರೇಣಿಯ OnePlus Nord N30 5G ಸ್ಮಾರ್ಟ್‌ಫೋನ್‌ನ ಬೆಲೆ ವಿಶೇಷಣಗಳು ಮತ್ತು ವೈಶಿಷ್ಟ್ಯಗಳ ಬಗ್ಗೆ ಒಂದಿಷ್ಟು ಮಾಹಿತಿಗಳನ್ನು ತಿಳಿಯಿರಿ.
Also Read: ಇಂದಿನಿಂದ Amazon Prime ವಿಡಿಯೋಗಳಲ್ಲಿ ಜಾಹೀರಾತು ಆರಂಭ! ಈ ಆಡ್‌ಗಳನ್ನು ನಿಲ್ಲಿಸುವುದು ಹೇಗೆ?
OnePlus Nord N30 5G ವಿಶೇಷಣಗಳು
ಈ ಒನ್ ಪ್ಲಸ್ ಫೋನ್ 6.72 ಇಂಚಿನ LTPS LCD ಜೊತೆಗೆ 2400 x 1080 ಪಿಕ್ಸೆಲ್‌ಗಳ 120Hz ಡಿಸ್ಪ್ಲೇ ರಿಫ್ರೆಶ್ ರೇಟ್ನೊಂದಿಗೆ FHD+ ರೆಸಲ್ಯೂಶನ್‌ನೊಂದಿಗೆ ಬರುತ್ತದೆ. ಸ್ಮಾರ್ಟ್ಫೋನ್ OLED ಡಿಸ್ಪ್ಲೇಯೊಂದಿಗೆ ಬರುವುದಿಲ್ಲವಾದ್ದರಿಂದ ಫೋನ್ ಪವರ್ ಬಟನ್‌ನಲ್ಲಿ ಸೈಡ್ ಮೌಂಟೆಡ್ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ. ಹುಡ್ ಅಡಿಯಲ್ಲಿ ಸ್ಮಾರ್ಟ್ಫೋನ್ Qualcomm Snapdragon 695 5G ಪ್ರೊಸೆಸರ್‌ನೊಂದಿಗೆ ಚಾಲಿತವಾಗಿದೆ. ಸ್ಮಾರ್ಟ್ಫೋನ್ ಕ್ಯಾಶುಯಲ್ ಗೇಮಿಂಗ್ ಆಡುವವರಿಗೆ ಈ ಪ್ರೊಸೆಸರ್ ಸಾಕಾಗಿದೆ.
ಸ್ಮಾರ್ಟ್ಫೋನ್ ಕ್ಯಾಮೆರಾದ ಬಗ್ಗೆ ಮಾತನಾಡುವುದಾದರೆ OnePlus Nord N30 5G ಸಾಮಾನ್ಯ ಕ್ಯಾಮೆರಾ ಸೆಟಪ್ ಅನ್ನು ನೀಡಲಾಗಿದೆ. ಇದು f/1.7 ಅಪರ್ಚರ್‌ನೊಂದಿಗೆ 108MP ಪ್ರೈಮರಿ ಕ್ಯಾಮೆರಾವನ್ನು EIS ಬೆಂಬಲದೊಂದಿಗೆ ಹೊಂದಿದೆ. ಫೋನ್ ಡೆಪ್ತ್ ಸೆನ್ಸಿಂಗ್‌ಗಾಗಿ 2MP ಕ್ಯಾಮೆರಾ ಮತ್ತು 2MP ಮ್ಯಾಕ್ರೋ ಸೆನ್ಸರ್ ಅನ್ನು ಸಹ ಹೊಂದಿದೆ. ಮುಂಭಾಗದ ಕ್ಯಾಮೆರಾ 16MP ಆಗಿದ್ದು ಇದು 1080p ವಿಡಿಯೋ ರೆಕಾರ್ಡಿಂಗ್ ಅನ್ನು ಸಹ ಬೆಂಬಲಿಸುತ್ತದೆ. OnePlus Nord N30 5G ಸ್ಮಾರ್ಟ್ಫೋನ್ ಉತ್ತಮ ಆಡಿಯೊ ಅನುಭವಕ್ಕಾಗಿ ಸ್ಟಿರಿಯೊ ಸ್ಪೀಕರ್‌ಗಳೊಂದಿಗೆ 3.5mm ಹೆಡ್‌ಫೋನ್ ಜ್ಯಾಕ್ ಅನ್ನು ಸಹ ಹೊಂದಿದೆ. ಫೋನ್ ಡ್ಯುಯಲ್ ಬ್ಯಾಂಡ್ Wi-Fi 5, ಬ್ಲೂಟೂತ್ 5.3, NFC ಹೊಂದಿದೆ. Nord N30 SE 5G ಫೋನ್ 33W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 5000mAh ಬ್ಯಾಟರಿಯನ್ನು ಪ್ಯಾಕ್ ಮಾಡುತ್ತದೆ.
ಒನ್ ಪ್ಲಸ್ Nord N30 5G ಬೆಲೆ ಮತ್ತು ಲಭ್ಯತೆ
ಈ ಸ್ಮಾರ್ಟ್ ಫೋನ್ ಕೇವಲ ಒಂದೇ ಒಂದು ವೇರಿಯೆಂಟ್‌ನಲ್ಲಿ ಬಿಡುಗಡೆಗೊಳಿಸಿದ್ದು 8GB LPDDR4X ಮತ್ತು 128GB ಮತ್ತು 256GB UFS2.2 ಇಂಟರ್ನಲ್ ಸ್ಟೋರೇಜ್ನೊಂದಿಗೆ ಬಿಡುಗಡೆಯಾಗಿದೆ. OnePlus Nord N30 5G ಸ್ಮಾರ್ಟ್ಫೋನ್ ಜಾಗತಿಕ ಮಾರುಕಟ್ಟೆಯಲ್ಲಿ ಅದರಲ್ಲೂ ಅಮೇರಿಕಾದಲ್ಲಿ ಇದರ ಬೆಲೆಯನ್ನು $299.99 (24,999 ರೂಗಳಿಗೆ) ನಿಗದಿಪಡಿಸಿದೆ. ಸ್ಮಾರ್ಟ್ಫೋನ್ ಕ್ರೊಮ್ಯಾಟಿಕ್ ಗ್ರೇ ಬಣ್ಣದಲ್ಲಿ ಲಭ್ಯವಿದೆ. ಭಾರತದಲ್ಲಿ OnePlus Nord N30 5G ಸ್ಮಾರ್ಟ್ಫೋನ್ ಬಿಡುಗಡೆ ಅಥವಾ ಬೆಲೆಯ ಬಗ್ಗೆ ಪ್ರಸ್ತುತ ಯಾವುದೇ ಮಾಹಿತಿಗಳಿಲ್ಲ
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile