Oneplus Nord CE4 Lite ಭಾರಿ ಬೆಲೆ ಕಡಿತ! FREE ನೆಕ್‌ಬ್ಯಾಂಡ್‌ನೊಂದಿಗೆ ಹೊಸ ಬೆಲೆ ಎಷ್ಟು?

Updated on 17-Dec-2024
HIGHLIGHTS

Oneplus Nord CE4 Lite 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಭಾರಿ ಕಡಿತಗೊಂಡಿದೆ.

ಭಾರಿ ಡೀಲ್ ಮತ್ತು ಡಿಸ್ಕೌಂಟ್‌ನೊಂದಿಗೆ ಉಚಿತವಾಗಿ Oneplus Bullets Z2 ನೆಕ್‌ಬ್ಯಾಂಡ್‌ ನೀಡುತ್ತಿದೆ.

ಪ್ರಸ್ತುತ ಅಮೆಜಾನ್ ಮೂಲಕ ಕೇವಲ 8GB RAM ರೂಪಾಂತರ ಕೇವಲ ₹17,999 ರೂಗಳಿಗೆ ಪಟ್ಟಿ ಮಾಡಲಾಗಿದೆ.

ಭಾರತದಲ್ಲಿ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ಒನ್ ಪ್ಲಸ್ (Oneplus) ಈಗ ತನ್ನ ಜನಪ್ರಿಯ Oneplus Nord CE4 Lite 5G ಸ್ಮಾರ್ಟ್ಫೋನ್ ಬೆಲೆಯಲ್ಲಿ ಭಾರಿ ಕಡಿತಗೊಳಿಸಿದ್ದು ಭಾರಿ ಡೀಲ್ ಮತ್ತು ಡಿಸ್ಕೌಂಟ್ನೊಂದಿಗೆ ಉಚಿತವಾಗಿ Oneplus Bullets Z2 ನೆಕ್‌ಬ್ಯಾಂಡ್‌ ನೀಡುತ್ತಿದೆ. ಈ ಸ್ಮಾರ್ಟ್ಫೋನ್ ಪ್ರಸ್ತುತ ಅಮೆಜಾನ್ ಮೂಲಕ ಕೇವಲ 8GB RAM ರೂಪಾಂತರ ಕೇವಲ ₹16,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಇದರ ಮೇಲೆ ಬ್ಯಾಂಕ್ ಆಫರ್ ಜೊತೆಗೆ 1000 ರೂಗಳ ಹೆಚ್ಚುವರಿಯ ಡಿಸ್ಕೌಂಟ್ ಸಹ ಪಡೆಯಬಹುದು. ನೀವು ಈ ಲೇಟೆಸ್ಟ್ ಈ Oneplus Nord CE4 Lite 5G ಸ್ಮಾರ್ಟ್ಫೋನ್ ಖರೀದಿಸಲು ಬಯಸಿದರೆ ಒಂದಿಷ್ಟು ಮಾಹಿತಿ ಈ ಕೆಳಗೆ ನೀಡಲಾಗಿದೆ.

Oneplus Nord CE4 Lite 5G ಬೆಲೆ ಮತ್ತು ಆಫರ್ಗಳೇನು?

ಮೊದಲಿಗೆ ಈ Oneplus Nord CE4 Lite 5G ಸ್ಮಾರ್ಟ್ಫೋನ್ ಹೊಸ ಬೆಲೆ ಮತ್ತು ಸರಳ ಲಭ್ಯತೆಯೊಂದಿಗೆ ಅಮೆಜಾನ್ ನೀಡುತ್ತಿರುವ ಆಫರ್ಗಳ ವಿಶೇಷವೆಂದರೆ ಈಗಾಗಲೇ ಮೇಲೆ ತಿಳಿಸಿರುವಂತೆ ಈ ಬೆಸ್ಟ್ 5G ಸ್ಮಾರ್ಟ್ಫೋನ್ ಜೊತೆಯಲ್ಲಿ ಅತಿ ಹೆಚ್ಚ್ಚು ಮಾರಾಟವಾಗುತ್ತಿರುವ ಸುಮಾರು 1299 ರೂಗಳ ಮೌಲ್ಯದ ಲೇಟೆಸ್ಟ್ Oneplus Bullets Z2 ನೆಕ್‌ಬ್ಯಾಂಡ್‌ ಸಹ ಉಚಿತವಾಗಿ ಪಡೆಯಬಹುದು. ಈ ಸ್ಮಾರ್ಟ್ಫೋನ್ ಅನ್ನು ನೀವು Mega Blue, Super Silver ಮತ್ತು Ultra Orange ಎಂಬ ಮೂರು ಆಕರ್ಷಕ ಬಣ್ಣಗಳಲ್ಲಿ ಖರೀದಿಸಬಹುದು.

Oneplus Nord CE4 Lite price drop

ನಿಮಗೆ ಈ ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತರಗಳಲ್ಲಿ ಬಿಡುಗಡೆಗೊಳಿಸಲಾಗಿದೆ. ಮೊದಲನೆಯದು 8GB RAM ಮತ್ತು 128GB ಸ್ಟೋರೇಜ್ ಇದನ್ನು ನೀವು ಕೇವಲ ₹16,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಇದರ ಕ್ರಮವಾಗಿ 8GB RAM ಮತ್ತು 256GB ಸ್ಟೋರೇಜ್ ಇದನ್ನು ನೀವು ಕೇವಲ ₹19,999 ರೂಗಳಿಗೆ ಖರೀದಿಸಬಹುದು. ಆದರೆ ನೀವು ICICI / OneCard / RBL HDFC ಬ್ಯಾಂಕ್ ಕಾರ್ಡ್ ಬಳಸಿಕೊಂಡು 1000 ರೂಗಳ ತ್ವರಿತ ಡಿಸ್ಕೌಂಟ್ ಪಡೆಯಬಹುದು.

Oneplus Nord CE4 Lite 5G ಫೀಚರ್ ಮತ್ತು ವಿಶೇಷತೆಗಳೇನು?

ಈ ಲೇಟೆಸ್ಟ್ ಸ್ಮಾರ್ಟ್ಫೋನ್ 6.67 ಇಂಚಿನ AMOLED ಡಿಸ್ಪ್ಲೇಯನ್ನು ಹೊಂದಿದೆ. ಇದು 120Hz ರಿಫ್ರೆಶ್ ದರವನ್ನು ಹೊಂದಿದೆ. ಹ್ಯಾಂಡ್‌ಸೆಟ್ ಪ್ರಬಲವಾದ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 695 5G ಚಿಪ್ ಅನ್ನು ಪ್ರೊಸೆಸರ್‌ನಂತೆ ಹೊಂದಿದೆ. ಈ ಫೋನ್ ಡ್ಯುಯಲ್ ಸ್ಟಿರಿಯೊ ಸ್ಪೀಕರ್ ಮತ್ತು OxygenOS 14 ಅನ್ನು ಹೊಂದಿದೆ.

Oneplus Nord CE4 Lite price drop

Oneplus Nord CE4 Lite 5G ಫೋನ್ ಫೋಟೊಗ್ರಫಿಗಾಗಿ ಹಿಂಭಾಗದ ಪ್ಯಾನೆಲ್‌ನಲ್ಲಿ ಡ್ಯುಯಲ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದು 50MP ಸೋನಿ ಪ್ರೈಮರಿ ಸೆನ್ಸರ್ ಮತ್ತು 2MP ಸೆಕೆಂಡರಿ ಸೆನ್ಸರ್ ಅನ್ನು ಹೊಂದಿದೆ. ಸೆಲ್ಫಿಗಾಗಿ 16MP ಮುಂಭಾಗದ ಕ್ಯಾಮೆರಾವನ್ನು ಸಹ ನೀಡಲಾಗಿದೆ. ಫೋನ್ 5500mAh ಬ್ಯಾಟರಿಯೊಂದಿಗೆ ಇದು 80W ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :