ಭಾರತದಲ್ಲಿ ಒನ್ಪ್ಲಸ್ ತನ್ನ ಜಬರ್ದಸ್ತ್ OnePlus Nord CE4 Lite 5G ಸ್ಮಾರ್ಟ್‌ಫೋನ್ ಲೇಟೆಸ್ಟ್ ಫೀಚರ್ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದ್ದು ಅತಿ ಕಡಿಮೆ ಬೆಲೆಗೆ ಪಟ್ಟಿ ಮಾಡಲಾಗಿದೆ. ಈ ಫೋನ್ ಅಮೆಜಾನ್ ಮಾರಾಟದಡಿಯಲ್ಲಿ ಸುಮಾರು ₹17,998 ರೂಗಳಿಗೆ ಪಟ್ಟಿ ಮಾಡಲಾಗಿದೆ. ಈ ಲೇಟೆಸ್ಟ್ OnePlus Nord CE4 Lite 5G ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಆಫರ್ ಬೆಲೆ ಮತ್ತು ಹೈಲೈಟ್ ಫೀಚರ್ಗಳನೊಮ್ಮೆ ಪರಿಶೀಲಿಸುವುದು ಉತ್ತಮವಾಗಿದೆ. OnePlus Nord CE4 Lite 5G ಸ್ಮಾರ್ಟ್ ಫೋನ್ ಅನ್ನು ನೀವು SBI ಕಾರ್ಡ್ ಬಳಸಿಕೊಂಡು ₹1250 ರೂಗಳ ಡಿಸ್ಕೌಂಟ್‌ಗಳೊಂದಿಗೆ ಕೇವಲ ₹16,748 ರೂಗಳಿಗೆ ಖರೀದಿಸಬಹುದು.
OnePlus Nord CE4 Lite 5G ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ಎರಡು ರೂಪಾಂತದರಲ್ಲಿ ಅಮೆಜಾನ್ ಮೂಲಕ ಲಭ್ಯವಾಗಲಿದ್ದು ಇದರ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ರೂಪಾಂತರವನ್ನು ₹17,998 ರೂಗಳಿಗೆ ಮತ್ತು ಇದರ ಮತ್ತೊಂದು 12GB RAM ಮತ್ತು 256GB ಸ್ಟೋರೇಜ್ ರೂಪಾಂತರವನ್ನು ₹20,998 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಆಸಕ್ತ ಬಳಕೆದಾರರು ಇದನ್ನು SBI ಮತ್ತು ಆಯ್ದ ಬ್ಯಾಂಕ್ಗಳ ಕಾರ್ಡ್ ಬಳಸಿಕೊಂಡು ಸುಮಾರು 1250 ರೂಗಳ ಹೆಚ್ಚುವರಿ ಡಿಸ್ಕೌಂಟ್ ಅನ್ನು ಸಹ ಪಡೆಯುವ ಮೂಲಕ ಆರಂಭಿಕ ರೂಪಾಂತರವನ್ನು ಕೇವಲ 16,748 ರೂಗಳಿಗೆ ಈ ಸ್ಮಾರ್ಟ್ಫೋನ್ ಖರೀದಿಸಬಹುದು.
ಅಲ್ಲದೆ ನೀವು ಈ ಫೋನ್ ಮೇಲೆ ಅಮೆಜಾನ್ ಹೆಚ್ಚುವರಿಯಾಗಿ ವಿನಿಮಯ ಕೊಡುಗೆಯನ್ನು ಸಹ (Exchange Offer) ಪಡೆಯಬಹುದು. ಈ OnePlus Nord CE4 Lite 5G ಸ್ಮಾರ್ಟ್‌ಫೋನ್ ಖರೀದಿಸಲು ನೀವು ನಿಮ್ಮ ಹಳೆಯ ಸ್ಮಾರ್ಟ್‌ಫೋನ್ ಇದರೊಂದಿಗೆ ವಿನಿಮಯ ಮಾಡುವುದರೊಂದಿಗೆ ಸುಮಾರು 19,350 ರೂಗಳ ವರೆಗೆ ಡಿಸ್ಕೌಂಟ್ ಪಡೆಯಬಹುದು. ಆದರೆ ಈ ಡೀಲ್ ಬೆಲೆಯನ್ನು ನಿಮ್ಮ ಹಳೆ ಫೋನಿನ ಸ್ಥಿತಿಯ ಮೇಲೆ ನಿರ್ಧರಿಸಲಾಗುತ್ತದೆ ಎಂಬುದನ್ನು ನೀವು ನೆನಪಿನಲ್ಲಿಡಿ.
Also Read: Jio ಬಳಕೆದಾರರು 5G ಡೇಟಾ ಮತ್ತು ಕರೆಗಳೊಂದಿಗೆ 2 ವರ್ಷಗಳ FREE YouTube Premium ಪಡೆಯುವುದು ಹೇಗೆ?
ಈ ಲೇಟೆಸ್ಟ್ OnePlus Nord CE4 Lite 5G ಸ್ಮಾರ್ಟ್ಫೋನ್ 6.67 ಇಂಚಿನ ಪೂರ್ಣ HD+ AMOLED ಸ್ಕ್ರೀ ಡಿಸ್ಪ್ಲೇಯನ್ನು 1080 x 2400 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 120Hz ವರೆಗೆ ರಿಫ್ರೆಶ್ ದರ 2100 ನಿಟ್‌ಗಳ ಗರಿಷ್ಠ ಹೊಳಪು ಮತ್ತು 20:9 ಆಕಾರ ಅನುಪಾತವನ್ನು ಹೊಂದಿದೆ. ಇದು Qualcomm Snapdragon 695 5G ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ. ಸ್ಮಾರ್ಟ್ಫೋನ್ Adreno 619 GPU ಜೊತೆಗೆ 8GB LPDDR4X RAM ಮತ್ತು 256GB ವರೆಗಿನ UFS 2.2 ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. ಆಂಡ್ರಾಯ್ಡ್ 14 ಆಧಾರಿತ ಆಕ್ಸಿಜನ್ಓಎಸ್ 14 ನಲ್ಲಿ ಸ್ಮಾರ್ಟ್ಫೋನ್ ಕಾರ್ಯನಿರ್ವಹಿಸುತ್ತದೆ.
ಈ OnePlus Nord CE4 Lite ಸ್ಮಾರ್ಟ್ಫೋನ್ ಕ್ಯಾಮೆರಾ ಸಾಮರ್ಥ್ಯಗಳ ವಿಷಯದಲ್ಲಿ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು 2MP ಡೆಪ್ತ್ ಸೆನ್ಸಾರ್ ಜೊತೆಗೆ 50MP ಸೋನಿ LYT-600 ಪ್ರೈಮರಿ ಸೆನ್ಸರ್ ಒಳಗೊಂಡಿದೆ. ಮುಂಭಾಗದ ಕ್ಯಾಮೆರಾವು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ನಿಂದ ಬೆಂಬಲಿತವಾದ 16MP ಸೆನ್ಸರ್ ಅನ್ನು ಹೊಂದಿದೆ. ಫೋನ್ 5500mAh ಬ್ಯಾಟರಿಯು 80W ವೈರ್ಡ್ SuperVOOC ವೇಗದ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ.