OnePlus Nord CE 4 Lite ಭಾರತದಲ್ಲಿ ಬಿಡುಗಡೆ! ಬೆಲೆಯೊಂದಿಗೆ ಟಾಪ್ 5 ಫೀಚರ್ಗಳನೊಮ್ಮೆ ಪರಿಶೀಲಿಸಿ!

OnePlus Nord CE 4 Lite ಭಾರತದಲ್ಲಿ ಬಿಡುಗಡೆ! ಬೆಲೆಯೊಂದಿಗೆ ಟಾಪ್ 5 ಫೀಚರ್ಗಳನೊಮ್ಮೆ ಪರಿಶೀಲಿಸಿ!
HIGHLIGHTS

ಭಾರತದಲ್ಲಿ OnePlus Nord CE 4 Lite ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆಯಾಗಿದೆ.

ಈ ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್ ಸುಮಾರು ₹19,999 ರೂಗಳಿಂದ ಆರಂಭ.

OnePlus Nord CE 4 Lite ಫೋನ್ 27ನೇ ಜೂನ್ 2024 ರಿಂದ ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ನಲ್ಲಿ ಮೊದಲ ಮಾರಾಟ.

ಭಾರತದಲ್ಲಿ ಒನ್​ಪ್ಲಸ್ ತನ್ನ ನಾರ್ಡ್ (Nord) ಸರಣಿಗೆ ಮತ್ತೊಂದು ಹೊಸ OnePlus Nord CE4 Lite ಸ್ಮಾರ್ಟ್‌ಫೋನ್ ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಈ ಪ್ರಮುಖ ಕಿಲ್ಲರ್‌ ಸ್ಮಾರ್ಟ್ಫೋನ್ ಲೇಟೆಸ್ಟ್ ಫೀಚರ್ಗಳೊಂದಿಗೆ ಭಾರತೀಯ ಮಾರುಕಟ್ಟೆಯಲ್ಲಿ ಭಾರಿ ಸದ್ದು ಮಾಡುತ್ತಿದೆ. ಇದು ಕಂಪನಿಯ ಇತ್ತೀಚಿನ ಬಜೆಟ್ ಶ್ರೇಣಿಯ ಫೋನ್ ಆಗಿದ್ದು ಸುಮಂರು ₹19,999 ರೂಗಳಿಂದ ಆರಂಭಿಸಿದೆ. ನೀವು ಈ ಲೇಟೆಸ್ಟ್ OnePlus Nord CE 4 Lite ಸ್ಮಾರ್ಟ್ಫೋನ್ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಒಂದಿಷ್ಟು ಹೈಲೈಟ್ ಫೀಚರ್ಗಳನೊಮ್ಮೆ ಪರಿಶೀಲಿಸುವುದು ಉತ್ತಮವಾಗಿದೆ. OnePlus Nord CE4 Lite ಫೋನ್ 27ನೇ ಜೂನ್ 2024 ರಿಂದ ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ನಲ್ಲಿ ಮೊದಲ ಮಾರಾಟ ಶುರುವಾಗಲಿದೆ.

Also Read: ರಿಲಯನ್ಸ್ JioCinema ಬಳಕೆದಾರರಿಗೆ ತಲೆನೋವು! ಸಖತ್ತಾಗಿದ್ದ ಈ ಪ್ಲಾನ್ ಅಚಾನಕ್ ಆಗಿ ಬಂದ್!

OnePlus Nord CE4 Lite 5G ಬೆಲೆ ಆಫರ್ ಮತ್ತು ಲಭ್ಯತೆ

OnePlus ಭಾರತದಲ್ಲಿ OnePlus Nord CE4 Lite 5G ಫೋನ್ ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಿದೆ. ಈ ಫೋನ್‌ನ 8GB RAM + 128GB ಸ್ಟೋರೇಜ್ ರೂಪಾಂತರವನ್ನು 19,999 ರೂಗಳಲ್ಲಿ ಬಿಡುಗಡೆ ಮಾಡಲಾಗಿದೆ. ಆದ್ದರಿಂದ ಫೋನ್‌ನ 8GB RAM + 256GB ಸ್ಟೋರೇಜ್ ಮಾಡೆಲ್ ಬೆಲೆ 22,999 ರೂಗಳಾಗಿವೆ. ಫೋನ್ ಮೆಗಾ ಬ್ಲೂ, ಸೂಪರ್ ಸಿಲ್ವರ್ ಮತ್ತು ಅಲ್ಟ್ರಾ ಆರೆಂಜ್ ಬಣ್ಣದ ಆಯ್ಕೆಗಳಲ್ಲಿ ಲಭ್ಯವಿರುತ್ತದೆ. OnePlus Nord CE4 Lite ಫೋನ್ 27ನೇ ಜೂನ್ 2024 ರಿಂದ ಮಧ್ಯಾಹ್ನ 12 ಗಂಟೆಗೆ ಅಮೆಜಾನ್‌ನಲ್ಲಿ ಮೊದಲ ಮಾರಾಟ ಶುರುವಾಗಲಿದೆ. ಈ ಸ್ಮಾರ್ಟ್ಫೋನ್ ಖರೀದಿಸಲು ಆಸಕ್ತಿ ಹೊಂದಿರುವ ಗ್ರಾಹಕರು ICICI ಮತ್ತು OneCard ಬಳಸಿ ತ್ವರಿತ 1000 ರೂಗಳ ಡಿಸ್ಕೌಂಟ್ ಪಡೆಯಬಹುದು.

OnePlus Nord CE 4 Lite launched in India
OnePlus Nord CE 4 Lite launched in India

OnePlus Nord CE 4 Lite ಡಿಸ್ಪ್ಲೇ ಮಾಹಿತಿ

ಈ ಲೇಟೆಸ್ಟ್ OnePlus Nord CE4 Lite ಸ್ಮಾರ್ಟ್ಫೋನ್ 6.67 ಇಂಚಿನ ಪೂರ್ಣ HD+ AMOLED ಸ್ಕ್ರೀ ಡಿಸ್ಪ್ಲೇಯನ್ನು 1080 x 2400 ಪಿಕ್ಸೆಲ್ ರೆಸಲ್ಯೂಶನ್ ಜೊತೆಗೆ 120Hz ವರೆಗೆ ರಿಫ್ರೆಶ್ ದರ 2100 ನಿಟ್‌ಗಳ ಗರಿಷ್ಠ ಹೊಳಪು ಮತ್ತು 20:9 ಆಕಾರ ಅನುಪಾತವನ್ನು ಹೊಂದಿದೆ.

OnePlus Nord CE 4 Lite ಹಾರ್ಡ್ವೇರ್ ಡೀಟೇಲ್ಸ್

OnePlus Nord CE4 Lite ಸ್ಮಾರ್ಟ್ಫೋನ್ ಇದು Qualcomm Snapdragon 695 ಚಿಪ್‌ಸೆಟ್‌ನಿಂದ ನಿಯಂತ್ರಿಸಲ್ಪಡುತ್ತದೆ. ಸ್ಮಾರ್ಟ್ಫೋನ್ Adreno 619 GPU ಜೊತೆಗೆ 8GB LPDDR4X RAM ಮತ್ತು 256GB ವರೆಗಿನ UFS 2.2 ಇಂಟರ್ನಲ್ ಸ್ಟೋರೇಜ್‌ನೊಂದಿಗೆ ಜೋಡಿಸಲಾಗಿದೆ. ಆಂಡ್ರಾಯ್ಡ್ 14 ಆಧಾರಿತ ಆಕ್ಸಿಜನ್ಓಎಸ್ 14 ನಲ್ಲಿ ಸ್ಮಾರ್ಟ್ಫೋನ್ ಕಾರ್ಯನಿರ್ವಹಿಸುತ್ತದೆ.

OnePlus Nord CE4 Lite ಕ್ಯಾಮೆರಾ ಹೇಗಿದೆ?

ಈ OnePlus Nord CE4 Lite ಸ್ಮಾರ್ಟ್ಫೋನ್ ಕ್ಯಾಮೆರಾ ಸಾಮರ್ಥ್ಯಗಳ ವಿಷಯದಲ್ಲಿ ಫೋನ್ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಇದು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು 2MP ಡೆಪ್ತ್ ಸೆನ್ಸಾರ್ ಜೊತೆಗೆ 50MP ಸೋನಿ LYT-600 ಪ್ರೈಮರಿ ಸೆನ್ಸರ್ ಒಳಗೊಂಡಿದೆ. ಮುಂಭಾಗದ ಕ್ಯಾಮೆರಾವು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ನಿಂದ ಬೆಂಬಲಿತವಾದ 16MP ಸೆನ್ಸರ್ ಅನ್ನು ಹೊಂದಿದೆ.

OnePlus Nord CE 4 Lite launched in India
OnePlus Nord CE 4 Lite launched in India

OnePlus Nord CE4 Lite ಬ್ಯಾಟರಿ ಮತ್ತು ಪೋರ್ಟ್

Nord CE 4 Lite 5G ಸ್ಮಾರ್ಟ್ಫೋನ್ ​5500mAh ಬ್ಯಾಟರಿಯು 80W ವೈರ್ಡ್ SuperVOOC ವೇಗದ ಚಾರ್ಜಿಂಗ್ ಮತ್ತು 5W ರಿವರ್ಸ್ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, Wi-Fi 5, GPS, ಬ್ಲೂಟೂತ್ 5.1 ಮತ್ತು USB ಟೈಪ್-C ಸೇರಿವೆ. ಹೆಚ್ಚುವರಿಯಾಗಿ ಫೋನ್ ಧೂಳು ಮತ್ತು ಸ್ಪ್ಲಾಶ್ ಪ್ರತಿರೋಧಕ್ಕಾಗಿ IP54-ರೇಟೆಡ್ ಆಗಿದೆ ಮತ್ತು ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು 3.5mm ಆಡಿಯೊ ಜಾಕ್ ಅನ್ನು ಒಳಗೊಂಡಿದೆ.

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo