108MP ಕ್ಯಾಮೆರಾದ OnePlus Nord CE 3 Lite 5G ಬಿಡುಗಡೆ! ಟಾಪ್ 5 ಫೀಚರ್‌ಗಳಿಗೆ ಫಿದಾ ಆಗೋದು ಗ್ಯಾರಂಟಿ!

Updated on 05-Apr-2023
HIGHLIGHTS

OnePlus Nord CE 3 Lite 5G ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ.

OnePlus Nord CE 3 Lite 5G ಯಾವೆಲ್ಲಾ ಫೀಚರ್ಸ್ ಅನ್ನು ಒಳಗೊಂಡಿದೆ ಎನ್ನುವುದರ ಫುಲ್‌ ಡಿಟೈಲ್ಸ್‌ ಇಲ್ಲಿದೆ ನೋಡಿ.

OnePlus Nord CE 3 Lite 5G ಅತ್ಯಾಕರ್ಷಕ ಡಿಸೈನ್‌ ಹಾಗೂ ಸ್ಟೈಲಿಶ್‌ ಲುಕ್‌ನಿಂದಲೆ ಗ್ರಾಹಕರ ಗಮನ ಸೆಳೆಯುತ್ತದೆ.

ಭಾರತದಲ್ಲಿ ಬಹು ನಿರೀಕ್ಷಿತ OnePlus Nord CE 3 Lite 5G ಸ್ಮಾರ್ಟ್‌ಫೋನ್ ಲಾಂಚ್ ಆಗಿದೆ. ಇದು ತನ್ನ ಅತ್ಯಾಕರ್ಷಕ ಡಿಸೈನ್‌ ಹಾಗೂ ಸ್ಟೈಲಿಶ್‌ ಲುಕ್‌ನಿಂದಲೆ ಗ್ರಾಹಕರ ಗಮನ ಸೆಳೆಯುತ್ತದೆ. ಈ ಫೋನ್ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್ 695 ಪ್ರೊಸೆಸರ್ನಿಂದ ಚಾಲಿತವಾಗಿದ್ದು 5000mAh ಬ್ಯಾಟರಿಯನ್ನು ಒಳಗೊಂಡಿದೆ. ಈ ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಅನ್ನು ಪಡೆದುಕೊಂಡಿದೆ. ಇದರ ಮುಖ್ಯ ಕ್ಯಾಮೆರಾ 108 ಮೆಗಾಪಿಕ್ಸೆಲ್‌ ಸೆನ್ಸಾರ್‌ ಅನ್ನು ಹೊಂದಿದೆ. ಇನ್ನು ಈ ಸ್ಮಾರ್ಟ್‌ಫೋನ್ ಯಾವೆಲ್ಲಾ ಫೀಚರ್ಸ್ ಅನ್ನು ಒಳಗೊಂಡಿದೆ ಎನ್ನುವುದರ ಫುಲ್‌ ಡಿಟೈಲ್ಸ್‌ ಇಲ್ಲಿದೆ ನೋಡಿ.

OnePlus Nord CE 3 Lite 5G ಡಿಸ್ಪ್ಲೇ

OnePlus Nord CE 3 Lite 5G ಸ್ಮಾರ್ಟ್‌ಫೋನ್ 6.72 ಇಂಚಿನ LCD ಡಿಸ್‌ಪ್ಲೇ ಹೊಂದಿದೆ. ಇದು 1080×2400 ಪಿಕ್ಸೆಲ್‌ಗಳ ರೆಸಲ್ಯೂಶನ್ ಹಾಗೂ 120Hz ನ ರಿಫ್ರೆಶ್ ದರವನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಫೋನ್ 402 PPI ಡೆನ್ಸಿಟಿ ಅನ್ನು ಹೊಂದಿದೆ. ಡಿಸ್ಪ್ಲೇ ರಕ್ಷಣೆಗಾಗಿ ಇದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಅನ್ನು ಒಳಗೊಂಡಿದೆ.

OnePlus Nord CE 3 Lite 5G ಕ್ಯಾಮೆರಾ

OnePlus Nord CE 3 Lite 5G ಸ್ಮಾರ್ಟ್ಫೋನ್ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟ್ಅಪ್ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 108MP ಸ್ಯಾಮ್ಸಂಗ್ HM6 ಸೆನ್ಸಾರ್, ಎರಡನೇ ಕ್ಯಾಮೆರಾ 2MP ಮ್ಯಾಕ್ರೋ ಶೂಟರ್ ಮತ್ತು ಮೂರನೇ ಕ್ಯಾಮೆರಾ 2MP ಡೆಪ್ತ್ ಸೆನ್ಸಾರ್ ಅನ್ನು ಒಳಗೊಂಡಿದ್ದು ಸೆಲ್ಫಿಗಾಗಿ 16MP ಸೆನ್ಸಾರ್ ಕ್ಯಾಮೆರಾವನ್ನು ಹೊಂದಿದೆ. ಇನ್ನು ಕ್ಯಾಮೆರಾ ಫೀಚರ್ಸ್‌ಗಳಲ್ಲಿ AI ವಿಶ್ಯುಯಲ್‌ ಎಫೆಕ್ಟ್‌, ಸ್ಲೋ ಮೋಷನ್‌ ವಿಡಿಯೋ, ಡ್ಯುಯಲ್ ವ್ಯೂ ವಿಡಿಯೋ, HDR, ನೈಟ್‌ಸ್ಕೇಪ್, ಪೋಟ್ರೇಟ್ ಮೋಡ್ ಅನ್ನು ಈ ಫೋನ್ ಹೊಂದಿದೆ.

OnePlus Nord CE 3 Lite 5G ಪ್ರೊಸೆಸರ್

OnePlus Nord CE 3 Lite 5G ಸ್ಮಾರ್ಟ್ಫೋನ್ ಆಕ್ಟಾ-ಕೋರ್ ಸ್ನಾಪ್ಡ್ರಾಗನ್ 695 ಪ್ರೊಸೆಸರ್ ನಿಂದ ಚಾಲಿತವಾಗಿದೆ. ಇದು ಆಂಡ್ರಾಯ್ಡ್ 13 ನಲ್ಲಿ ಆಕ್ಸಿಜನ್ OS 13.1 ಬೆಂಬಲದೊಂದಿಗೆ ಕಾರ್ಯನಿರ್ವಹಿಸುತ್ತದೆ. ಹಾಗೆಯೇ 8GB RAM ಮತ್ತು 256GB ಇಂಟರ್ನಲ್ ಸ್ಟೋರೇಜ್ ಅನ್ನು ಒಳಗೊಂಡಿದೆ. ಇದರೊಂದಿಗೆ RAM ಅನ್ನು ವಾಸ್ತವಿಕವಾಗಿ 8GB ವರೆಗೆ ವಿಸ್ತರಿಸಬಹುದು. ಅಲ್ಲದೆ ಮೆಮೊರಿ ಕಾರ್ಡ್ ಬೆಂಬಲದೊಂದಿಗೆ 1TB ವರೆಗೆ ಸ್ಟೋರೇಜ್ ಕೆಪ್ಯಾಸಿಟಿಯನ್ನು ಸಹ ವಿಸ್ತರಿಸಬಹುದು.

OnePlus Nord CE 3 Lite 5G ಬ್ಯಾಟರಿ

OnePlus Nord CE 3 Lite 5G ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದೆ. ಇದು 67W ಸೂಪರ್ VOOC ವೈರ್ಡ್‌ ಚಾರ್ಜಿಂಗ್‌ ಅನ್ನು ಬೆಂಬಲಿಸುತ್ತದೆ. ಇನ್ನು ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi, 3.5mm ಆಡಿಯೋ ಜಾಕ್, ಬ್ಲೂಟೂತ್ 5.1, GPS/ A-GPS ಮತ್ತು USB ಟೈಪ್-ಸಿ ಪೋರ್ಟ್ ಅನ್ನು ಒಳಗೊಂಡಿದೆ. ಇದಲ್ಲದೆ ಅಕ್ಸಿಲೆರೊಮೀಟರ್, ಆಂಬಿಯೆಂಟ್‌ ಲೈಟ್‌, ಗೈರೊಸ್ಕೋಪ್ ಮತ್ತು ಪ್ರಾಕ್ಸಿಮಿಟಿ ಸೆನ್ಸಾರ್‌ ಅನ್ನು  ಬೆಂಬಲಿಸುತ್ತದೆ.

OnePlus Nord CE 3 Lite 5G ಬೆಲೆ & ಲಭ್ಯತೆ

OnePlus Nord CE 3 Lite 5G ಪಾಸ್ಟೆಲ್ ಲೈಮ್ ಮತ್ತು ಕ್ರೋಮ್ಯಾಟಿಕ್ ಗ್ರೇ  ಕಲರ್ಗಳ ಆಯ್ಕೆಯಲ್ಲಿ ಲಭ್ಯವಿದೆ. ಈ ಫೋನ್‌ನ ಬೇಸ್‌ ಮಾಡೆಲ್‌ 8GB RAM + 128GB ಸ್ಟೋರೇಜ್ ಆಯ್ಕೆಗೆ ರೂ 19,999 ಆಗಿದೆ. ಇದರ 8GB RAM + 256GB ಆಯ್ಕೆಯು ರೂ 21,999 ಬೆಲೆಯಲ್ಲಿ ಲಭ್ಯವಿದೆ. ಈ ಫೋನ್‌ ಅನ್ನು ನೀವು ಏಪ್ರಿಲ್ 11 ರಿಂದ OnePlus ಆನ್‌ಲೈನ್ ಸ್ಟೋರ್, ಅಮೆಜಾನ್ ಇಂಡಿಯಾದ ಮೂಲಕ ಖರೀದಿಸಬಹುದು. ಅಲ್ಲದೆ ನೀವು OnePlus Nord CE 3 Lite 5G ಸ್ಮಾರ್ಟ್‌ಫೋನ್‌ ಅನ್ನು ICICI ಕಾರ್ಡ್ ಮತ್ತು EMI ಮೂಲಕ ಖರೀದಿಸಿದರೆ 1,000 ರೂ ಗಳ ತ್ವರಿತ ರಿಯಾಯಿತಿ ಸಹ ಸಿಗಲಿದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :