8GB RAM ಮತ್ತು 5500mAh ಬ್ಯಾಟರಿಯ OnePlus Nord 4 5G ಸ್ಮಾರ್ಟ್ಫೋನ್ ಬೆಲೆ ಇಳಿಕೆ! ಹೊಸ ಬೆಲೆ ಮತ್ತು ಫೀಚರ್ಗಳೇನು?

Updated on 24-Oct-2024
HIGHLIGHTS

ಪ್ರಸ್ತುತ OnePlus Nord 4 ಅಮೆಜಾನ್‌ನಲ್ಲಿ ರೂ 27,999 ರೂಗಳಿಗೆ ಪಟ್ಟಿಮಾಡಲಾಗಿದೆ.

ಲೇಟೆಸ್ಟ್ ಸ್ಮಾರ್ಟ್ಫೋನ್ ಅನ್ನು ಅಮೆಜಾನ್ ಡಿಸ್ಕೌಂಟ್ ಜೊತೆಗೆ ಕೇವಲ 25,999 ರೂಗಳಿಗೆ ಖರೀದಿಸಬಹುದು.

ಈ ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್‌ನ ಭಾಗವಾಗಿ OnePlus Nord 4 ಫೋನ್‌ಗೆ ಅತಿ ಕಡಿಮೆ ಬೆಲೆಯಲ್ಲಿ ಮಾರಾಟ.

ಭಾರತದಲ್ಲಿ ನಡೆಯುತ್ತಿರುವ ಅಮಾಂಝೋನ್ ಮಾರಾಟದಲ್ಲಿ OnePlus Nord 4 5G ಸ್ಮಾರ್ಟ್ಫೋನ್ ಭಾರೀ ರಿಯಾಯಿತಿಗಳೊಂದಿಗೆ ಭರ್ಜರಿಯಾಗಿ ಮಾರಾಟವಾಗುತ್ತಿದೆ. OnePlus Nord 4 5G ಮಧ್ಯಮ ಶ್ರೇಣಿಯ ಸ್ಮಾರ್ಟ್‌ಫೋನ್ ಅನ್ನು ದೀಪಾವಳಿ ಹಬ್ಬದ ಸಂದರ್ಭದಲ್ಲಿ ಈ ಆಕರ್ಷಿಕ ಬೆಲೆಯಲ್ಲಿ ನಿಮ್ಮ ಪ್ರೀತಿ ಪಾತ್ರರಿಗೆ ಉಡುಗೊರೆಯಾಗಿ ನೀಡಲು ಖರೀದಿಸಬಹುದು. ಪ್ರಸ್ತುತ OnePlus Nord 4 ಅಮೆಜಾನ್‌ನಲ್ಲಿ ರೂ 27,999 ರೂಗಳಿಗೆ ಪಟ್ಟಿಮಾಡಲಾಗಿದೆ. ಆದರೆ ಇದರ ಹೊರತಾಗಿ ಇತರ ಕೆಲವು ರಿಯಾಯಿತಿಗಳೊಂದಿಗೆ ಈ ಲೇಟೆಸ್ಟ್ ಸ್ಮಾರ್ಟ್ಫೋನ್ ಅನ್ನು ಕೇವಲ 25,999 ರೂಗಳಿಗೆ ಖರೀದಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

OnePlus Nord 4 5G ಆಫರ್ ಬೆಲೆ ಮತ್ತು ಲಭ್ಯತೆ:

ಈ ಲೇಟೆಸ್ಟ್ OnePlus Nord 4 5G ಫೋನ್ ಅನ್ನು ಭಾರತದಲ್ಲಿ ಒಟ್ಟಾರೆಯಾಗಿ 3 ರೂಪಾಂತರಗಳಲ್ಲಿ ಲಭ್ಯವಿದ್ದು ಪ್ರಸ್ತುತ ಅಮೆಜಾನ್ ಆರಂಭಿಕ 8GB RAM ಮತ್ತು 128GB ಸ್ಟೋರೇಜ್ ಅನ್ನು ರೂಪಾಂತರದ ಬೆಲೆ 29,999 ರೂಗಳು ಮತ್ತು 8GB RAM ಮತ್ತು 256GB ಸ್ಟೋರೇಜ್ ಬೆಲೆ 32,999 ರೂಗಳಿಗೆ ಮತ್ತು ಕೊನೆಯದಾಗಿ 12GB RAM ಮತ್ತು 256GB ಸ್ಟೋರೇಜ್ ಬೆಲೆಯನ್ನು 35,999 ರೂಗಳಿಗೆ ಪಟ್ಟಿ ಮಾಡಲಾಗಿದೆ. ಆದರೆ ಅಮೆಜಾನ್ ಸೀಮಿತ ಅವಧಿಗೆ ಆಕರ್ಷಕ ಕೊಡುಗೆಯನ್ನು ನೀಡುತ್ತಿದ್ದು ಪ್ರತಿಯೊಂದು ರೂಪಾಂತರದ ಮೇಲೆ ICICI ಮತ್ತು Axis ಬ್ಯಾಂಕ್ ಕಾರ್ಡ್‌ನೊಂದಿಗೆ ಬರೋಬ್ಬರಿ 2000 ರಿಯಾಯಿತಿಯನ್ನು ನೀಡುತ್ತಿದೆ. ಈ ಮೂಲಕ ನೀವು OnePlus Nord 4 5G ಆಫರ್ ಬೆಲೆ ಕೇವಲ 25,000 ರೂಗಳಿಗೆ ಖರೀದಿಸಬಹುದು.

OnePlus Nord 4 5G Price Cut

OnePlus Nord 4 ಫೀಚರ್ ಮತ್ತು ವಿಶೇಷಣಗಳು:

ಈ ಲೇಟೆಸ್ಟ್ OnePlus Nord 4 5G ಸ್ಮಾರ್ಟ್ಫೋನ್ 6.74 ಇಂಚಿನ AMOLED ಡಿಸ್ಪ್ಲೇ ಹೊಂದಿರುವ ಸ್ಮಾರ್ಟ್ಫೋನ್ ಆಗಿದೆ. ಫೋನ್‌ನ ಪರದೆಯು 2,150 ನಿಟ್‌ಗಳ ಗರಿಷ್ಠ ಹೊಳಪನ್ನು ಹೊಂದಿದೆ. OnePlus 120Hz ವರೆಗೆ ರಿಫ್ರೆಶ್ ದರವನ್ನು ಹೊಂದಿದೆ. ಇದು HDR10 ಬೆಂಬಲದೊಂದಿಗೆ ಬರುತ್ತದೆ. ಫೋನ್‌ನ ಡಿಸ್ಪ್ಲೇ 2772×1240 ರೆಸಲ್ಯೂಶನ್ ಹೊಂದಿದೆ. ಈ ಫೋನ್ 8MP ಸೋನಿ ಅಲ್ಟ್ರಾವೈಡ್ ಲೆನ್ಸ್ ಹೊಂದಿದೆ. ಈ OnePlus ಫೋನ್ 50MP ಸೋನಿ ಸೆನ್ಸರ್ ಜೊತೆಗೆ ಬರುತ್ತದೆ. ಈ ಲೇಟೆಸ್ಟ್ OnePlus Nord 4 5G ಸ್ಮಾರ್ಟ್ಫೋನ್ ಕ್ಯಾಮೆರಾದಲ್ಲಿ OIS ಅನ್ನು ಬೆಂಬಲಿಸುವ ಸ್ಮಾರ್ಟ್‌ಫೋನ್ ಆಗಿದೆ. ಇದು ಮುಂಭಾಗದಲ್ಲಿ 16MP ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಹೊಂದಿದೆ.

ಈ ಲೇಟೆಸ್ಟ್ OnePlus Nord 4 5G ಸ್ಮಾರ್ಟ್ಫೋನ್ 100W ವೇಗದ ಚಾರ್ಜಿಂಗ್ ಜೊತೆಗೆ 50MP OIS ಕ್ಯಾಮೆರಾವನ್ನು ವಿಶೇಷ ರಿಯಾಯಿತಿಯಲ್ಲಿ ಖರೀದಿಸಬಹುದು. OnePlus Nord 4 ಸ್ಮಾರ್ಟ್ಫೋನ್ 5,500mAh ಬ್ಯಾಟರಿಯಿಂದ ಚಾಲಿತವಾಗಿದೆ. ಇದು 100W ಚಾರ್ಜರ್ ಅನ್ನು ಸಹ ಪ್ಯಾಕ್ ಮಾಡುತ್ತದೆ. Snapdragon 7+ Gen 3 ಪ್ರೊಸೆಸರ್ ಅತ್ಯುತ್ತಮ ಕಾರ್ಯಕ್ಷಮತೆಯನ್ನು ನೀಡುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :