ಚೀನಾದ ಸ್ಮಾರ್ಟ್‌ಫೋನ್ ತಯಾರಕರಾದ ಒನ್‌ಪ್ಲಸ್ ತನ್ನ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳಾದ OnePlus 8 ಮತ್ತು OnePlus 8 Pro ಫೋನ್ಗಳನ್ನು ಕಂಪನಿಯು ಬಿಡುಗಡೆ ಮಾಡಿದೆ. ಕಳೆದ ವರ್ಷದಿಂದ ಪ್ರತಿ ಬಿಡುಗಡೆಯಲ್ಲಿ ಎರಡು ಮಾದರಿಗಳನ್ನು ಬಿಡುಗಡೆ ಮಾಡುವ ವ್ಯವಸ್ಥೆಯನ್ನು ಕಂಪನಿಯು ಅನುಸರಿಸಿದೆ. ಇದಕ್ಕೂ ಮೊದಲು OnePlus 7 ಮತ್ತು OnePlus 7 Pro ಅನ್ನು ಬಿಡುಗಡೆ ಮಾಡಿದೆ. ಮೊದಲಿನಂತೆ ಎರಡು ಸ್ಮಾರ್ಟ್‌ಫೋನ್‌ಗಳು ಗಮನಾರ್ಹ ವ್ಯತ್ಯಾಸಗಳನ್ನು ಹೊಂದಿವೆ. OnePlus 8 Pro ಉತ್ತಮ ಹಾರ್ಡವೆರ್ ಮತ್ತು ವೈಶಿಷ್ಟ್ಯಗಳನ್ನು ನೀಡುತ್ತದೆ. ಇದರ ಬೆಲೆ ಮತ್ತು ವಿಶೇಷಣಗಳಿಗೆ ಬಂದಾಗ OnePlus 8 ಮತ್ತು OnePlus 8 Pro ಪರಸ್ಪರ ಹೇಗೆ ಹೋಲಿಕೆ ಮಾಡುತ್ತವೆಂದು ನೋಡೋಣ.
OnePlus 8 Pro ಕೆಲವು ವಿಭಾಗದಲ್ಲಿ ಈ ಫೋನ್ ಉತ್ತಮ ಹಾರ್ಡವೆರ್ ಮತ್ತು ವೈಶಿಷ್ಟ್ಯಗಳನ್ನು ನೀಡುತ್ತದೆ. ಈ ಎರಡೂ ಫೋನ್‌ಗಳು ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 865 ಪ್ರೊಸೆಸರ್ ನಡೆಯುತ್ತದೆ. ಇದರಲ್ಲಿ 8GB ಅಥವಾ 12GB LPDDR5 RAM ಮತ್ತು 128GB ಮತ್ತು 256GB UFS 3.0 ಇಂಟರ್ನಲ್ ಸ್ಟೋರೇಜ್ ಒಳಗೊಂಡಿವೆ. OnePlus 8 Pro ಧೂಳು ಮತ್ತು ನೀರಿನ ಪ್ರತಿರೋಧಕ್ಕಾಗಿ IP68 ರೇಟಿಂಗ್ ಅನ್ನು ಸಹ ಹೊಂದಿದೆ. ಇವೇರಡು ಸ್ಮಾರ್ಟ್‌ಫೋನ್‌ಗಳು 5G ಸಾಮರ್ಥ್ಯ ಹೊಂದಿದ್ದು ಸಂಯೋಜಿತ X55 5G ಚಿಪ್‌ಸೆಟ್ ಹೊಂದಿವೆ. ಈ ಎರಡೂ ಫೋನ್ಗಳು ವೈ-ಫೈ 6 ಸಹ ಬೆಂಬಲಿತವಾಗಿದೆ. ಆಂಡ್ರಾಯ್ಡ್ 10 ಆಧಾರಿತ OxygenOS ಅಲ್ಲಿ ಸ್ಮಾರ್ಟ್ಫೋನ್ಗಳು ಕಾರ್ಯನಿರ್ವಹಿಸುತ್ತವೆ. ಇನ್-ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ಮತ್ತು ಫೇಸ್ ಅನ್ಲಾಕ್ ಅನ್ನು ಹೊಂದಿವೆ.
ಎರಡು ಫೋನ್ಗಳು ಫಾಸ್ಟ್ ಚಾರ್ಜಿಂಗ್ಗಾಗಿ 30T ವಾರ್ಪ್ ಚಾರ್ಜ್ ಸಪೋರ್ಟ್ ಮಾಡುತ್ತದೆ. OnePlus 8 ಫೋನಲ್ಲಿ 4300mAh ಬ್ಯಾಟರಿಗೆ ಒಳಗೊಂಡಿದ್ದು OnePlus 8 Pro ಸ್ಮಾರ್ಟ್ಫೋನಲ್ಲಿ 4510mAh ಬ್ಯಾಟರಿಯನ್ನು ಹೊಂದಿದೆ. ಇದಲ್ಲದೆ OnePlus 8 Pro ವಾರ್ಪ್ ಚಾರ್ಜ್ 30 ವೈರ್‌ಲೆಸ್ ಅನ್ನು ಬೆಂಬಲಿಸುತ್ತದೆ. ಒನ್‌ಪ್ಲಸ್ 8 ಪ್ರೊ ಮತ್ತು ಒನ್‌ಪ್ಲಸ್ ಅಭಿವೃದ್ಧಿಪಡಿಸಿದ ಹೊಸ ವೈರ್‌ಲೆಸ್ ಫಾಸ್ಟ್ ಚಾರ್ಜಿಂಗ್ ಸ್ಟ್ಯಾಂಡರ್ಡ್ ಮುಂಬರುವ ಸ್ಮಾರ್ಟ್ಫೋನ್ಗಳು. ವೈರ್‌ಲೆಸ್ ಚಾರ್ಜಿಂಗ್ ಅನ್ನು ಬೆಂಬಲಿಸುವ ಒನ್‌ಪ್ಲಸ್‌ನಿಂದ ಇದು ಮೊದಲ ಸ್ಮಾರ್ಟ್‌ಫೋನ್ ಇವಾಗಲಿವೆ.
ಈ OnePlus 8 Pro ಫೋನ್ 6.78 ಇಂಚಿನ QHD+ ಜೊತೆಗೆ 1440×3168 ಪಿಕ್ಸೆಲ್ ರೆಸಲ್ಯೂಶನ್ ಅಮೋಲೆಡ್ ಸ್ಕ್ರೀನ್ ಹೊಂದಿದ್ದು 19.8: 9 ಅಸ್ಪೆಟ್ ರೇಷು ಮತ್ತು 3D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಹೊಂದಿದೆ. OnePlus 8 ಫೋನ್ FHD+ ಜೊತೆಗೆ 1080×2400 ಪಿಕ್ಸೆಲ್ ರೆಸಲ್ಯೂಶನ್ ಅಮೋಲೆಡ್ ಸ್ಕ್ರೀನ್ ಹೊಂದಿದೆ. ಕ್ರಮವಾಗಿ ಕ್ರಮವಾಗಿ 20: 9 ಅಸ್ಪೆಟ್ ರೇಷು ಮತ್ತು 3D ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ಅನ್ನು ಹೊಂದಿದೆ. ಎರಡೂ ಸ್ಮಾರ್ಟ್‌ಫೋನ್‌ಗಳು ಪರದೆಯ ಮೇಲಿನ ಎಡ ಮೂಲೆಯಲ್ಲಿರುವ ಮುಂಭಾಗದ ಕ್ಯಾಮೆರಾಗೆ ಪಂಚ್-ಹೋಲ್ ಅನ್ನು ಹೊಂದಿವೆ.
OnePlus 8 Pro ಕ್ವಾಡ್-ಕ್ಯಾಮೆರಾ ಸೆಟಪ್‌ನೊಂದಿಗೆ ಒಂದು ಹೆಜ್ಜೆ ಮುಂದೆ ಹೋಗುತ್ತದೆ. ಪ್ರೈಮರಿ ಬ್ಯಾಕ್ ಕ್ಯಾಮೆರಾ 48MP ಮೆಗಾಪಿಕ್ಸೆಲ್ ಸೋನಿ IMX 689 ಸೆನ್ಸರ್ ಹೊಂದಿದ್ದು 1.12 ಮೈಕ್ರಾನ್‌ಗಳ ಪಿಕ್ಸೆಲ್ ಸೈಜ್ ನೀಡುತ್ತದೆ. ನಂತರ 8MP ಮೆಗಾಪಿಕ್ಸೆಲ್ ಟೆಲಿಫೋಟೋ ಕ್ಯಾಮೆರಾ ಅಲ್ಲದೆ 48MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು ಕೊನೆಯದಾಗಿ 5MP ಮೆಗಾಪಿಕ್ಸೆಲ್ ಕಲರ್ ಫಿಲ್ಟರ್ ಕ್ಯಾಮೆರಾ ಸಹ ಇದೆ. ಮುಂಭಾಗದ ಕ್ಯಾಮೆರಾ 16MP ಮೆಗಾಪಿಕ್ಸೆಲ್ ಸೋನಿ IMX 471 ಸೆನ್ಸರ್ ಪ್ಯಾಕ್ ಮಾಡುತ್ತದೆ. OnePlus 8 ಟ್ರಿಪಲ್-ಕ್ಯಾಮೆರಾ ಸೆಟಪ್ ಅನ್ನು 48MP ಮೆಗಾಪಿಕ್ಸೆಲ್ ಸೋನಿ IMX 586 ಪ್ರೈಮರಿ ಹಿಂಬದಿಯ ಕ್ಯಾಮೆರಾ ಸೆನ್ಸರ್ಗಳನ್ನು ಹೊಂದಿದ್ದು 0.8 ಮೈಕ್ರಾನ್‌ಗಳ ಪಿಕ್ಸೆಲ್ ಸೈಜ್ ನೀಡುತ್ತದೆ. ಅಲ್ಲದೆ 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾ ಮತ್ತು 16MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಸಹ ಇದೆ. ಕೊನೆಯದಾಗಿ ಮುಂಭಾಗದ ಕ್ಯಾಮೆರಾ OnePlus 8 Pro ಅಂತೆಯೇ ಇದ್ದು 16MP ಮೆಗಾಪಿಕ್ಸೆಲ್ ಸೋನಿ IMX 471 ಸೆನ್ಸರ್ ಹೊಂದಿದೆ.