OnePlus 7 ಮತ್ತು OnePlus 7 Pro ಫೋನ್ಗಳು ಇಂದು ಬಿಡುಗಡೆಯಾಗಲಿದ್ದು ಇಲ್ಲಿಂದ ಲೈವ್ ನೋಡಿ

Updated on 14-May-2019
HIGHLIGHTS

OnePlus 7 ಮತ್ತು OnePlus 7 Pro ಫೋನ್ಗಳು ಇಂದು ಭಾರತದಲ್ಲಿ ಮತ್ತು ಜಾಗತಿಕವಾಗಿ ಬಿಡುಗಡೆಯಾಗಲಿದೆ.

48MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು ಪಾಪ್-ಅಪ್ ಸೆಲ್ಫಿ ಕ್ಯಾಮೆರಾವನ್ನು ಒದಗಿಸುತ್ತದೆ.

ಭಾರತದಲ್ಲಿ ಐಷಾರಾಮಿಯ ಬ್ರಾಂಡ್ OnePlus ಕಂಪನಿ OnePlus 7 ಮತ್ತು OnePlus 7 Pro ಫೋನ್ಗಳು ಇಂದು ಭಾರತದಲ್ಲಿ ಮತ್ತು ಜಾಗತಿಕವಾಗಿ ಬಿಡುಗಡೆಯಾಗಲಿದ್ದು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡುವುದರ ಮೂಲಕ ಲೈವ್ ನೋಡಬವುದು. ಭಾರತೀಯ ಸಮಯದ ಪ್ರಕಾರ ಈ ಸ್ಮಾರ್ಟ್ಫೋನ್ ಇಂದು ರಾತ್ರಿ 8:15 ಕ್ಕೆ ಪ್ರಾರಂಭವಾಗುತ್ತದೆ. ಈ ಎರಡೂ ಸ್ಮಾರ್ಟ್ಫೋನ್ಗಳು ಈಗಾಗಲೇ ಲಭ್ಯವಿರುವ OnePlus 6 ಮತ್ತು OnePlus 6T ಫೋನ್ಗಳ ಯಶಸ್ವಿಯ ಹೆಜ್ಜೆಯಾಗಿದೆ. ಈ ಕಂಪನಿಯ ಪ್ರಕಾರ ಈ OnePlus 7 ಮತ್ತು OnePlus 7 Pro ಭಾರತದಲ್ಲಿ ಈಗಾಗಲೇ ಲಭ್ಯವಿರುವ ಪ್ರಮುಖ ಫೋನ್ಗಳೊಂದಿಗೆ ಸ್ಪರ್ಧಿಸಲಿದೆ. 

ಇದರ ಸರಿಸಮನಾಗಿ Samsung Galaxy S10e, iPhone XR ಮತ್ತು Google Pixel 3 ಫೋನ್ಗಳು ಎದುರಾಳಿಯಾಗಲಿವೆ. OnePlus 7 ಸರಣಿ ವೈಶಿಷ್ಟ್ಯಗಳ ಬಗ್ಗೆ ಚರ್ಚಿಸಬೇಕೆಂದರೆ ಇದು ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಚಿಪ್ಸೆಟ್ ಪ್ರೊಸೆಸರ್ನೊಂದಿಗೆ ಬರುತ್ತದೆ. ಈ ಮಾಹಿತಿಯನ್ನು ಕಳೆದ ವರ್ಷ ಡಿಸೆಂಬರ್ನಲ್ಲಿ ಈ ಪ್ರೊಸೆಸರ್ನ ಪ್ರಾರಂಭದಲ್ಲಿ ಒನ್ಪ್ಲಸ್ ಕಂಪನಿಯ CEO ಆಗಿರುವ ಪೀಟ್ ಲೌ ನೀಡಿದ್ದರು ಈ ಪ್ರೊಸೆಸರ್ ಅನ್ನು OnePlus ನ ಮುಂದಿನ ಫ್ಲ್ಯಾಗ್ಶಿಪ್ನಲ್ಲಿ ಬಳಸಲಾಗುವುದು ಎಂದು ಅಂದು ಪೀಟ್ ಲೌ ತಿಳಿಸಿದ್ದಾರೆ. ಈ ಪ್ರೊಸೆಸರ್ ಬಗ್ಗೆ ವಿಶೇಷವಾದ ವಿಷಯವೆಂದರೆ ಇದು 5G ನೆಟ್ವರ್ಕ್ಗಳಿಗೆ ಬೆಂಬಲಿಸುತ್ತದೆ.

OnePlus 7 ಮತ್ತು OnePlus 7 Pro ಸ್ಮಾರ್ಟ್ಫೋನ್ಗಳ ಲೈವ್ ಸ್ಟ್ರೀಮಿಂಗ್

OnePlus 7 Pro ನ ಫೀಚರ್ಗಳ ಪ್ರಕಾರ ಈಗಾಗಲೇ ಸೋರಿಕೆಯಾದ 48MP ಮೆಗಾಪಿಕ್ಸೆಲ್ ಹಿಂಬದಿಯ ಕ್ಯಾಮೆರಾ ಮತ್ತು ಪಾಪ್-ಅಪ್ ಸೆಲ್ಫಿ ಕ್ಯಾಮೆರಾವನ್ನು ಒದಗಿಸುತ್ತದೆ. ಇದಲ್ಲದೆ OnePlus 7 ಕೇವಲ OnePlus 6T ನಂತಹ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ಗಳನ್ನು ಒಳಗೊಂಡಿದೆ.    ಫೋನ್ ಹಿಂಭಾಗದಲ್ಲಿ ಟ್ರಿಪಲ್ ಹಿಂಬದಿಯ ಕ್ಯಾಮರಾ ಸೆಟಪ್ ಅನ್ನು LED ಫ್ಲಾಶ್ನೊಂದಿಗೆ ನೀಡಬಹುದು. ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ ಈ ಫೋನ್ ಬರುವ ನಿರೀಕ್ಷೆಯಿದೆ.

ಈ OnePlus ಸ್ಮಾರ್ಟ್ಫೋನ್ಗಳ ಪ್ರೀ ಬುಕಿಂಗ್ ಕಳೆದ ಮೇ 3 ರಿಂದ ಮೇ 7 ನಡೆಯಿತು. ಈಗ ಈ ಫೋನ್ ಮಾರಾಟಕ್ಕೆ ಲಭ್ಯವಿರುವಾಗ ಬಿಡುಗಡೆಯಾದ ನಂತರ ಮಾತ್ರ ಮಾಹಿತಿ ಲಭ್ಯವಾಗುತ್ತದೆ. OnePlus 7 Pro ಇ-ಕಾಮರ್ಸ್ ವೆಬ್ಸೈಟ್ ಅಮೆಜಾನ್ ಮೇಲೆ ಸೇಲ್  ಲಭ್ಯವಾಗುತ್ತದೆ. ನೀವು ಸೋನಿ ಮೀಡಿಯಾ ಪ್ಲಾಟ್ಫಾರ್ಮ್ನಲ್ಲಿ ಲೈವ್ ಸ್ಟ್ರೀಮ್ ಮಾಡಬಹುದು. ಕಂಪೆನಿಯ ಅಧಿಕೃತ ವೆಬ್ಸೈಟ್ ಜೊತೆಗೆ OnePlus 7 ಸರಣಿಗಳ ಬಿಡುಗಡೆ ಕಾರ್ಯಕ್ರಮವನ್ನು ನೋಡಬವುದು.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :