ಭಾರತೀಯ ಮಾರುಕಟ್ಟೆಯಲ್ಲಿ ಒನ್ಪ್ಲಸ್ ಬ್ರಾಂಡ್ ಸ್ಮಾರ್ಟ್ಫೋನ್ ಕಂಪನಿ ತನ್ನ ಅದ್ದೂರಿಯ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಅವೆಂದರೆ OnePlus 7 ಮತ್ತು OnePlus 7 Pro. ಇದಲ್ಲದೆ ನಿಮಗೀಗಾಲೇ ತಿಳಿದಿರುವಂತೆ OnePlus 7 Pro ಸ್ಮಾರ್ಟ್ಫೋನ್ ಲಭ್ಯವಾಗುತ್ತಿದೆ. ಆದರೆ ಇದರ ಮೊದಲ ಆವೃತ್ತಿಯಾದ OnePlus 7 ಸ್ಮಾರ್ಟ್ಫೋನ್ ಇಂದು ಮಧ್ಯಾಹ್ನ ಮೊದಲ ಸೇಲ್ ನಡೆಯಲಿದೆ. ಇದನ್ನು ನೀವು Amazon.in ಮತ್ತು OnePlus.in ನಲ್ಲಿ ಲಭ್ಯವಿರುತ್ತದೆ. ಅದನ್ನು 12:00 ಮಧ್ಯಾಹ್ನ ಪ್ರತ್ಯೇಕವಾಗಿ ಆಫ್ಲೈನ್ ಸ್ಟೋರ್ಗಳಲ್ಲು ಲಭ್ಯವಾಗಲಿದೆ. ಭಾರತದಲ್ಲಿ ಈ ಫೋನಿನ ಆರಂಭದ ಆವೃತ್ತಿಯ ಬೆಲೆ 32,999 ರಿಂದ ಆರಂಭವಾಗುತ್ತದೆ. ಇದಷ್ಟೇಯಲ್ಲದೆ ಅನೇಕ ಬಿಡುಗಡೆ ಆಫರ್ಗಳನ್ನು ಸಹ ಈ ಸ್ಮಾರ್ಟ್ಫೋನ್ ನೀಡುತ್ತಿದೆ.
ಈ ಸ್ಮಾರ್ಟ್ಫೋನ್ 6GB ಯ RAM ಮತ್ತು 128GB ಸ್ಟೋರೇಜ್ ರೂಪಾಂತರವು 32,999 ರೂಗಳಲ್ಲಿ ಲಭ್ಯವಾದರೆ ಅದೇ ಸಮಯದಲ್ಲಿ ಇದರ 8GB ಯ RAM ಮತ್ತು 256GB ಸ್ಟೋರೇಜ್ ರೂಪಾಂತರ 37,999 ರೂಗಳಲ್ಲಿ ಲಭ್ಯವಿರುತ್ತದೆ. ಅಲ್ಲದೆ ಇದರ 6GB ಯ RAM ಸ್ಮಾರ್ಟ್ಫೋನ್ ರೂಪಾಂತರವು ಮಿರರ್ ಗ್ರೇ ಬಣ್ಣದ ರೂಪಾಂತರದಲ್ಲಿ ಬರುತ್ತದೆ. ಅದೇ ಸಮಯದಲ್ಲಿ ಇದರ 8GB ಯ RAM ರೂಪಾಂತರಗಳನ್ನು ಮಿರರ್ ಗ್ರೇ ಮತ್ತು ರೆಡ್ ಬಣ್ಣಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈ ಫೋನ್ ಮೂಲಕ ಲೈವ್ ಬಳಕೆದಾರರಿಗೆ 9,300 ರೂಗಳ ಲಾಭವನ್ನು ನೀಡಲಾಗುತ್ತಿದೆ. ಅದೇ ಸಮಯದಲ್ಲಿ ನೀವು SBI ಕಾರ್ಡ್ಗಳ ಮೂಲಕ ಆನ್ಲೈನಲ್ಲಿ ಖರೀದಿಸಿದರೆ ನಿಮಗೆ 2000 ರೂಗಳ ತ್ವರಿತ ಡಿಸ್ಕೌಂಟ್ ಪಡೆಯಬವುದು. ಅಲ್ಲದೆ ಈ ಸ್ಮಾರ್ಟ್ಫೋನ್ ನೋ ಕಾಸ್ಟ್ ಅಂದ್ರೆ ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದ EMI ಸೌಲಭ್ಯದೊಂದಿಗೆ ಸುಮಾರು 70% ಎಕ್ಸ್ಚೇಂಜ್ ಆಫರ್ಗಳನ್ನು ನೀಡುತ್ತಿದೆ.
ಇದು ಡ್ಯುಯಲ್ ಸಿಮ್ ಮೂಲಕ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.41 ಇಂಚಿನ ಪೂರ್ಣ ಎಚ್ಡಿ ಪ್ಲಸ್ ಆಪ್ಟಿಕ್ ಅಮೊಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇದರ ಪಿಕ್ಸೆಲ್ ರೆಸಲ್ಯೂಶನ್ 1080×2340 ಆಗಿದೆ. ಅದರ ಅಸ್ಪೆಟ್ ರೇಷು 19.5: 9 ಆಗಿದೆ. ಈ ಫೋನ್ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ v6 ರೊಂದಿಗೆ ಬರುತ್ತದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಪ್ರೊಸೆಸರ್ ಹೊಂದಿದೆ. ಇದು ಅಡ್ರಿನೊ 640 ಜಿಪಿಯು ಮತ್ತು 6/8GB ಯ RAM ಯೊಂದಿಗೆ ಬರುತ್ತದೆ.
ಫೋನಿನ ಹಿಂಭಾಗದಲ್ಲಿ ಡುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿದ್ದು ಪ್ರೈಮರಿ ಕ್ಯಾಮರಾ 48MP ಮೆಗಾಪಿಕ್ಸೆಲ್ಗಳಾಗಿದ್ದು ಇದರಲ್ಲಿ ಸೋನಿ IMX586 ಸೆನ್ಸರ್ ಬರುತ್ತದೆ. f/ 1.7, 1.6 ಮೈಕ್ರಾನ್ ಪಿಕ್ಸೆಲ್ಗಳು ಆಪ್ಟಿಕಲ್ ಇಮೇಜ್ ಸ್ಟಬಿಲೈಝಷನ್ ಫೇಸ್ ಡಿಟೆಕ್ಷನ್ ಮತ್ತು ಆಟೋಫೋಕಸ್ ವೈಶಿಷ್ಟ್ಯವನ್ನು ನೀಡಲಾಗಿದೆ. ಅದರ ಡುಯಲ್ ಸೆನ್ಸರ್ 5MP ಮೆಗಾಪಿಕ್ಸೆಲ್ಗಳು f/ 2.4 ಅಪರ್ಚರ್ ಮತ್ತು 1.12 ಮೈಕ್ರಾನ್ಸ್ ಪಿಕ್ಸೆಲ್ಗಳೊಂದಿಗೆ ಬರುತ್ತದೆ. ಇದರಲ್ಲಿ ಡ್ಯುಯಲ್ LED ಫ್ಲಾಷ್ ಮಾಡ್ಯೂಲ್ ಇದೆ. ಫೋನ್ ಸೆಲ್ಫಿಗಾಗಿ 16MP ಮೆಗಾಪಿಕ್ಸೆಲ್ ಸೋನಿ IMX471 ಸೆನ್ಸರ್ ಹೊಂದಿದೆ. ಇದು 1 ಮೈಕ್ರಾನ್ ಪಿಕ್ಸೆಲ್ಗಳು ಅಪರ್ಚರ್ f / 2.0 ಮತ್ತು EIS ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 20W (5V / 4A) ಮೂಲಕ 3700mAh ಪವರ್ ಬ್ಯಾಟರಿ ವೇಗದ ಚಾರ್ಜಿಂಗ್ ಬೆಂಬಲಿತವಾಗಿದೆ.