48MP + 5MP ಡುಯಲ್ ಕ್ಯಾಮೆರಾದ OnePlus 7 ಸ್ಮಾರ್ಟ್ಫೋನ್ ಇಂದು ಮಧ್ಯಾಹ್ನ ಮೊದಲ ಸೇಲ್ ನಡೆಯಲಿದೆ

48MP + 5MP ಡುಯಲ್ ಕ್ಯಾಮೆರಾದ OnePlus 7 ಸ್ಮಾರ್ಟ್ಫೋನ್ ಇಂದು ಮಧ್ಯಾಹ್ನ ಮೊದಲ ಸೇಲ್ ನಡೆಯಲಿದೆ
HIGHLIGHTS

ಭಾರತೀಯ ಮಾರುಕಟ್ಟೆಯಲ್ಲಿ ಒನ್ಪ್ಲಸ್ ಬ್ರಾಂಡ್ ಸ್ಮಾರ್ಟ್ಫೋನ್ ಕಂಪನಿ ತನ್ನ ಅದ್ದೂರಿಯ ಸ್ಮಾರ್ಟ್ಫೋನ್ಗಳನ್ನು ಬಿಡುಗಡೆಗೊಳಿಸಿದೆ. ಅವೆಂದರೆ OnePlus 7 ಮತ್ತು OnePlus 7 Pro. ಇದಲ್ಲದೆ ನಿಮಗೀಗಾಲೇ ತಿಳಿದಿರುವಂತೆ OnePlus 7 Pro ಸ್ಮಾರ್ಟ್ಫೋನ್ ಲಭ್ಯವಾಗುತ್ತಿದೆ. ಆದರೆ ಇದರ ಮೊದಲ ಆವೃತ್ತಿಯಾದ OnePlus 7 ಸ್ಮಾರ್ಟ್ಫೋನ್ ಇಂದು ಮಧ್ಯಾಹ್ನ ಮೊದಲ ಸೇಲ್ ನಡೆಯಲಿದೆ. ಇದನ್ನು ನೀವು Amazon.in ಮತ್ತು OnePlus.in ನಲ್ಲಿ ಲಭ್ಯವಿರುತ್ತದೆ. ಅದನ್ನು 12:00 ಮಧ್ಯಾಹ್ನ ಪ್ರತ್ಯೇಕವಾಗಿ ಆಫ್ಲೈನ್ ಸ್ಟೋರ್ಗಳಲ್ಲು ಲಭ್ಯವಾಗಲಿದೆ. ಭಾರತದಲ್ಲಿ ಈ ಫೋನಿನ ಆರಂಭದ ಆವೃತ್ತಿಯ ಬೆಲೆ 32,999 ರಿಂದ ಆರಂಭವಾಗುತ್ತದೆ. ಇದಷ್ಟೇಯಲ್ಲದೆ ಅನೇಕ ಬಿಡುಗಡೆ ಆಫರ್ಗಳನ್ನು ಸಹ ಈ ಸ್ಮಾರ್ಟ್ಫೋನ್ ನೀಡುತ್ತಿದೆ.

OnePlus 7 ಬೆಲೆ ಮತ್ತು ಆಫರ್ಗಳು

ಈ ಸ್ಮಾರ್ಟ್ಫೋನ್ 6GB ಯ RAM ಮತ್ತು 128GB ಸ್ಟೋರೇಜ್ ರೂಪಾಂತರವು 32,999 ರೂಗಳಲ್ಲಿ ಲಭ್ಯವಾದರೆ ಅದೇ ಸಮಯದಲ್ಲಿ ಇದರ 8GB ಯ RAM ಮತ್ತು 256GB ಸ್ಟೋರೇಜ್ ರೂಪಾಂತರ 37,999 ರೂಗಳಲ್ಲಿ ಲಭ್ಯವಿರುತ್ತದೆ. ಅಲ್ಲದೆ ಇದರ 6GB ಯ RAM ಸ್ಮಾರ್ಟ್ಫೋನ್ ರೂಪಾಂತರವು ಮಿರರ್ ಗ್ರೇ ಬಣ್ಣದ ರೂಪಾಂತರದಲ್ಲಿ ಬರುತ್ತದೆ. ಅದೇ ಸಮಯದಲ್ಲಿ ಇದರ 8GB ಯ RAM ರೂಪಾಂತರಗಳನ್ನು ಮಿರರ್ ಗ್ರೇ ಮತ್ತು ರೆಡ್ ಬಣ್ಣಗಳಲ್ಲಿ ಲಭ್ಯವಾಗುವಂತೆ ಮಾಡಲಾಗುತ್ತಿದೆ. ಈ ಫೋನ್ ಮೂಲಕ ಲೈವ್ ಬಳಕೆದಾರರಿಗೆ 9,300 ರೂಗಳ ಲಾಭವನ್ನು ನೀಡಲಾಗುತ್ತಿದೆ. ಅದೇ ಸಮಯದಲ್ಲಿ ನೀವು SBI ಕಾರ್ಡ್ಗಳ ಮೂಲಕ ಆನ್ಲೈನಲ್ಲಿ ಖರೀದಿಸಿದರೆ ನಿಮಗೆ 2000 ರೂಗಳ ತ್ವರಿತ ಡಿಸ್ಕೌಂಟ್ ಪಡೆಯಬವುದು. ಅಲ್ಲದೆ ಈ ಸ್ಮಾರ್ಟ್ಫೋನ್ ನೋ ಕಾಸ್ಟ್ ಅಂದ್ರೆ ಯಾವುದೇ ಹೆಚ್ಚುವರಿಯ ವೆಚ್ಚವಿಲ್ಲದ EMI ಸೌಲಭ್ಯದೊಂದಿಗೆ ಸುಮಾರು 70% ಎಕ್ಸ್ಚೇಂಜ್ ಆಫರ್ಗಳನ್ನು ನೀಡುತ್ತಿದೆ.

https://images-eu.ssl-images-amazon.com/images/G/31/img19/Wireless/OnePlus/OnePlus7New/LandingPage/PC/01a._CB463312220_.jpg 

OnePlus 7 ಸ್ಪೆಸಿಫಿಕೇಷನ್ 

ಇದು ಡ್ಯುಯಲ್ ಸಿಮ್ ಮೂಲಕ ಆಂಡ್ರಾಯ್ಡ್ 9 ಪೈನಲ್ಲಿ ಕಾರ್ಯನಿರ್ವಹಿಸುತ್ತದೆ. ಇದು 6.41 ಇಂಚಿನ ಪೂರ್ಣ ಎಚ್ಡಿ ಪ್ಲಸ್ ಆಪ್ಟಿಕ್ ಅಮೊಲ್ಡ್ ಡಿಸ್ಪ್ಲೇಯನ್ನು ಹೊಂದಿದೆ. ಇದರ ಪಿಕ್ಸೆಲ್ ರೆಸಲ್ಯೂಶನ್ 1080×2340 ಆಗಿದೆ. ಅದರ ಅಸ್ಪೆಟ್ ರೇಷು 19.5: 9 ಆಗಿದೆ. ಈ ಫೋನ್ ಕಾರ್ನಿಂಗ್ ಗೋರಿಲ್ಲಾ ಗ್ಲಾಸ್ v6 ರೊಂದಿಗೆ ಬರುತ್ತದೆ. ಈ ಫೋನ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 ಪ್ರೊಸೆಸರ್ ಹೊಂದಿದೆ. ಇದು ಅಡ್ರಿನೊ 640 ಜಿಪಿಯು ಮತ್ತು 6/8GB ಯ RAM ಯೊಂದಿಗೆ ಬರುತ್ತದೆ.

ಫೋನಿನ ಹಿಂಭಾಗದಲ್ಲಿ ಡುಯಲ್ ಕ್ಯಾಮೆರಾ ಸೆಟಪ್ ಒಳಗೊಂಡಿದ್ದು ಪ್ರೈಮರಿ ಕ್ಯಾಮರಾ 48MP ಮೆಗಾಪಿಕ್ಸೆಲ್ಗಳಾಗಿದ್ದು ಇದರಲ್ಲಿ ಸೋನಿ IMX586 ಸೆನ್ಸರ್ ಬರುತ್ತದೆ. f/ 1.7, 1.6 ಮೈಕ್ರಾನ್ ಪಿಕ್ಸೆಲ್ಗಳು ಆಪ್ಟಿಕಲ್ ಇಮೇಜ್ ಸ್ಟಬಿಲೈಝಷನ್ ಫೇಸ್ ಡಿಟೆಕ್ಷನ್ ಮತ್ತು ಆಟೋಫೋಕಸ್ ವೈಶಿಷ್ಟ್ಯವನ್ನು ನೀಡಲಾಗಿದೆ. ಅದರ ಡುಯಲ್ ಸೆನ್ಸರ್ 5MP ಮೆಗಾಪಿಕ್ಸೆಲ್ಗಳು f/ 2.4 ಅಪರ್ಚರ್ ಮತ್ತು 1.12 ಮೈಕ್ರಾನ್ಸ್ ಪಿಕ್ಸೆಲ್ಗಳೊಂದಿಗೆ ಬರುತ್ತದೆ. ಇದರಲ್ಲಿ ಡ್ಯುಯಲ್ LED ಫ್ಲಾಷ್ ಮಾಡ್ಯೂಲ್ ಇದೆ. ಫೋನ್ ಸೆಲ್ಫಿಗಾಗಿ 16MP ಮೆಗಾಪಿಕ್ಸೆಲ್ ಸೋನಿ IMX471 ಸೆನ್ಸರ್ ಹೊಂದಿದೆ. ಇದು 1 ಮೈಕ್ರಾನ್ ಪಿಕ್ಸೆಲ್ಗಳು ಅಪರ್ಚರ್ f / 2.0 ಮತ್ತು EIS ವೈಶಿಷ್ಟ್ಯಗಳೊಂದಿಗೆ ಬರುತ್ತದೆ. 20W (5V / 4A) ಮೂಲಕ 3700mAh ಪವರ್  ಬ್ಯಾಟರಿ ವೇಗದ ಚಾರ್ಜಿಂಗ್ ಬೆಂಬಲಿತವಾಗಿದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo