ಈ OnePlus 7 ಈಗಾಗಲೇ ಬಿಡುಗಡೆಯಾಗಿಡುವ OnePlus 6T ಸ್ಮಾರ್ಟ್ಫೋನಂತೆ ಡಿಸ್ಪ್ಲೇಯಲ್ಲಿ ವಾಟರ್ಡ್ರಾಪ್ ನಾಚ್ ಜೊತೆಗೆ ಬರುತ್ತದೆ. ಇದು 6.41 ಇಂಚಿನ ಫುಲ್ HD ಆಪ್ಟಿಕ್ ಅಮೋಲೆಡ್ ಡಿಸ್ಪ್ಲೇ 402ppi ಡೆನ್ಸಿಟಿಯೊಂದಿಗೆ 19:9 ಅಸ್ಪೆಟ್ ರೇಷುವನ್ನು ಒಳಗೊಂಡಿದೆ. OnePlus 7 Pro ಫೋನಲ್ಲಿರುವಂತೆ ಕ್ವಾಲ್ಕಾಮ್ SD 855 ಚಿಪ್ಸೆಟ್ ಒಳಗೊಂಡಿದೆ. ಇದು ಎರಡು ವೇರಿಯಂಟ್ಗಳಲ್ಲಿ ಲಭ್ಯವಾಗಲಿದ್ದು 6 ಮತ್ತು 8GB ಯ RAM ಜೊತೆಗೆ 128 ಮತ್ತು 256GB ಯ USF 3.0 ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ.
ಇದರ ಕ್ಯಾಮೆರಾದ ಬಗ್ಗೆ ಹೇಳಬೇಕೆಂದರೆ ಹಿಂಭಾಗದಲ್ಲಿ ಡುಯಲ್ ರೇರ್ ಕ್ಯಾಮೆರಾ ನೀಡಲಾಗಿದ್ದು ಒಂದು 48MP ಕ್ಯಾಮೆರಾ ಸೋನಿ IMX 586 ಸೆನ್ಸರ್ ಜೊತೆ ಬಂದರೆ ಮತ್ತೊಂದು 5MP ಕ್ಯಾಮೆರಾವನ್ನು ಒಳಗೊಂಡಿದೆ. ಇದರ ಮುಂಭಾಗದಕ್ಕೆ ಬಂದರೆ 16MP ಫ್ರಂಟ್ ಸೆಲ್ಫಿ ಕ್ಯಾಮೆರಾವನ್ನು ಸೋನಿ IMX 471 ಸೆನ್ಸರ್ ಒಳಗೊಂಡಿದೆ. ಇದರ ಬ್ಯಾಟರಿ ಬಗ್ಗೆ ಹೇಳಬೇಕೆಂದರೆ ಇದರಲ್ಲಿ 3700mAH ಧೀರ್ಘಕಾಲದ ಬ್ಯಾಟರಿ ನೀಡಿದ್ದು ಇದು ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಯಾತ ಪ್ರಕಾರ ಇನ್ ಡಿಸ್ಪ್ಲೇ ಫಿಂಗರ್ಪ್ರಿಂಟ್ ಸೆನ್ಸರ್ ನೀಡಲಾಗಿದೆ.
ಈ ಸ್ಮಾರ್ಟ್ಫೋನ್ OnePlus 7 ಬೆಲೆ ಮತ್ತು ಲಭ್ಯತೆಯ ಬಗ್ಗೆ ಮಾತನಾಡಬೇಕೆಂದರೆ ಇದರ 6GB ಯ RAM ಮತ್ತು 128GB ಯ ರೂಪಾಂತರದ ಸ್ಮಾರ್ಟ್ಫೋನ್ 32,999 ರೂಗಳಲ್ಲಿ ಲಭ್ಯವಾದರೆ ಇದರ ಮತ್ತೋಂದು 8GB ಯ RAM ಮತ್ತು 256GB ಯ ಸ್ಟೋರೇಜ್ ರೂಪಾಂತರ 37,999 ರೂಗಳಲ್ಲಿ ಲಭ್ಯವಾಗುತ್ತದೆ. ಈ ಸ್ಮಾರ್ಟ್ಫೋನ್ ನಿಮಗೆ ಮಿರರ್ ಗ್ರೇ ಮತ್ತು ರೆಡ್ ಬಣ್ಣಗಳಲ್ಲಿ ಲಭ್ಯವಾಗುತ್ತದೆ. ನಿಜಕ್ಕೂ ನೀವು ಇದನ್ನು ಮೊದಲ ಬಾರಿಗೆ ನೋಡಿದರೆ ನಿಮಗನಿಸುತ್ತೆ OnePlus 6T ಫೋನ್ ಕೆಪ್ಪು ಬಣ್ಣದ ಹೊಸ ರೂಪಾಂತರ ಎನ್ನಬವುದು. ಏಕೆಂದರೆ ಇದರ ಡಿಸೈನ್ ಸಹ ಅದೇ ರೀತಿಯಲ್ಲಿ ರಚಿಸಲಾಗಿದೆ. ಫೋನಿನ ಪ್ರೊಟೆಕ್ಷನ್ಗಾಗಿ ಗೊರಿಲ್ಲಾ ಗ್ಲಾಸ್ v6 ನೀಡಲಾಗಿದೆ.
ಇದರ ಪರ್ಫಾರ್ಮೆನ್ಸ್ ಪರೀಕ್ಷಿಸಲು ನಾವು ಇದರೊಂದಿಗೆ ಸ್ವಲ್ಪ ಸಮಯವನ್ನು ಸಹ ಕಳೆದ್ದಿದ್ದೆವೆ. ಒಟ್ಟಾರೆಯಾಗಿ ಹೇಳಬೇಕೆಂದರೆ ಇದು ಬೆಟರ್ ಸ್ಮೂತ್ ಆಗಿದೆ. ಇದರಲ್ಲಿನ ಮಲ್ಟಿಟಸ್ಕಿನ್ಗ್ ಸಹ ಹೆಚ್ಚು ಆರಾಮದಾಯಕವಾಗಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ಈಗಾಗಲೇ ಬಿಡುಗಡೆಯಾಗಿರುವ OnePlus 7 Pro ಸ್ಮಾರ್ಟ್ಫೋನ್ ನಂತೆಯೇ ಪರ್ಫಾರ್ಮೆನ್ಸ್ ನೀಡುತ್ತದೆ. ಏಕೆಂದರೆ ಅದೇ ರೀತಿಯಲ್ಲಿನ USF 3.0 ಸ್ಟೋರೇಜ್ ರೂಪಾಂತರಗಳಲ್ಲಿ ಬರುತ್ತದೆ. ಇದರಲ್ಲಿನ ಕ್ಯಾಮೆರಾ ಹೆಚ್ಚು ಫಾಸ್ಟ್ ಮತ್ತು ಅಕ್ಯುರೇಟ್ ಆಗಿದೆ ಆದರೆ ಸಂಪೂರ್ಣವಾದ ಮಾಹಿತಿಯನ್ನು ನಮ್ಮತ್ರ ಫೋನ್ ಬಂದ್ಮೇಲೆ ಟೆಸ್ಟ್ ಮಾಡಿ ನಿರ್ಧರಿಸಬವುದು.
ಮತ್ತೋಂದು ವಿಷಯ ನಾವೇಲ್ಲ ಗಮನಿಸಬೇಕಾಗಿರುವುದು ಏನಪ್ಪಾ ಅಂದರೆ OnePlus ತನ್ನ ಪ್ರತಿ ಸ್ಮಾರ್ಟ್ಫೋನ್ ಜೊತೆಗೆ ಬೆಲೆಯನ್ನು ಸ್ವಲ್ಪ ಅಧಿಕವಾಗಿ ಇಟ್ಟಿದೆ. ಇದು ಫ್ಯಾನ್ಗಳಿಗೆ ಸ್ವಲ್ಪ ನುಂಗಲಾಗದ ಕೈ ತುತ್ತಾಗಿದೆ. OnePlus ಸ್ಮಾರ್ಟ್ಫೋನ್ 50,000 ಹತ್ತಿರ ಮುಟ್ಟುತ್ತದೆ. ಇದು ನಿಜಕ್ಕೂ ಹೆಚ್ಚಾಗಿದೆ. ಈಗ ಈ ಸ್ಮಾರ್ಟ್ಫೋನ್ OnePlus 7 ಮಾರುಕಟ್ಟೆಗೆ ಬಂದ ನಂತರ ಯಾವ ರೀತಿಯಲ್ಲಿ ಈಗಾಗಲೇ ಲಭ್ಯವಿರುವ ಅಥವಾ ಮರುಕ್ಕಟೆಗೆ ಬರಲಿರುವ ಫೋನ್ಗಳಿಗೆ ಸ್ಪರ್ಧಿಸುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ.