Oneplus 6T ಮೇಲೆ Amazon Great Indian Sale ಅಲ್ಲಿ ಸಿಗಲಿದೆ ₹3500 ರೂಗಳ ಆಫ್, ಪೂರ್ತಿ ಮಾಹಿತಿ ಇಲ್ಲಿದೆ

Oneplus 6T ಮೇಲೆ Amazon Great Indian Sale ಅಲ್ಲಿ ಸಿಗಲಿದೆ ₹3500 ರೂಗಳ ಆಫ್, ಪೂರ್ತಿ ಮಾಹಿತಿ ಇಲ್ಲಿದೆ
HIGHLIGHTS

Oneplus 6T ಮೇಲಿನ ಆಫರ್ಗಳು 20ನೇ ಜನವರಿಯಿಂದ ಸಾಮಾನ್ಯ ಎಲ್ಲಾ ಗ್ರಾಹಕರಿಗೆ ಈ ಡೀಲ್ಗಳು ಲಭ್ಯವಾಗುತ್ತದೆ.

2019 ರಲ್ಲಿ ಮೊಟ್ಟ ಮೊದಲ ಜನಪ್ರಿಯ ಆನ್ಲೈನ್ ಸ್ಟೋರ್ ಆಗಿರುವ ಅಮೆಜಾನ್ ಧಮಾಕ ಸೇಲ್ ಶುರುವಾಗಲಿದೆ. ಅಮೆಜಾನ್ ಗ್ರೇಟ್ ಇಂಡಿಯನ್ ಫೆಸ್ಟಿವಲ್ನಲ್ಲಿ ಸೀಮಿತ ಅವಧಿಗಾಗಿ OnePlus 6T ಅನ್ನು ನಂಬಲಾಗದ ರಿಯಾಯಿತಿಯಲ್ಲಿ ನೀಡಲಿದೆ. ನೀವು OnePlus 6T ತೆಗೆದುಕೊಳ್ಳುವ ಕುರಿತು ಯೋಚಿಸುತ್ತಿದ್ದರೆ ಈ ಬಾರಿಯ ಡೀಲನ್ನು 19ನೇ ಜನವರಿ ಮಧ್ಯಾಹ್ನ 12 ರಿಂದ ಮೊದಲು ಪ್ರೈಮ್ ಸದಸ್ಯರಿಗೆ ಅಮೆಝೋನ್ ನಲ್ಲಿ ಲಭ್ಯವಾಗಲಿದೆ.

ಇದರೊಂದಿಗೆ ಅದೇ ಸಮಯದಲ್ಲಿ ಈ ಆಫರ್ಗಳು 20ನೇ ಜನವರಿಯಿಂದ ಸಾಮಾನ್ಯ ಎಲ್ಲಾ ಗ್ರಾಹಕರಿಗೆ ಈ ಡೀಲ್ಗಳು ಲಭ್ಯವಾಗುತ್ತದೆ. ಈ ಸೆಲ್ನಲ್ಲಿ ಮುಖ್ಯವಾಗಿ OnePlus 6T (6GB RAM, 128GB Storage) ಸ್ಮಾರ್ಟ್ಫೋನಿನ ನೈಜ ಮೇಲೆಯಲ್ಲಿ 3500 ರೂಗಳ ಡಿಸ್ಕೌಂಟ್ ಮಾಡಿ ಕೇವಲ 37,999 ರೂಗಳಲ್ಲಿ ಈ ಸ್ಮಾರ್ಟ್ಫೋನನ್ನು ನೀಡಲಿದೆ. ಅಲ್ಲದೆ OnePlus ಈ ಫೋನ್ ಖರೀದಿಯಲ್ಲಿ 'OnePlus Assured Upgrade' ಅನ್ನು ಸಹ ಘೋಷಿಸಿದೆ.

ಇದಲ್ಲದೆ Amazon, OnePlus.in ಮತ್ತು OnePlus ಆಫ್ಲೈನ್ ಮಳಿಗೆಗಳ ವಿನಿಮಯದೊಂದಿಗೆ OnePlus 6T ಖರೀದಿಯನ್ನು ₹2000 ಹೆಚ್ಚುವರಿ ಪ್ರಯೋಜನಕ್ಕಾಗಿ ಪಡೆಯಬಹುದು. ಇದರ ಕ್ಯಾಶ್ಬ್ಯಾಕ್ ಮತ್ತು ವಿನಿಮಯ ಕಾರ್ಯಕ್ರಮಗಳಿಗೆ ಹೆಚ್ಚುವರಿಯಾಗಿ OnePlus 6T ಖರೀದಿದಾರರು ಪೂರ್ತಿ 6 ತಿಂಗಳ ಯಾವುದೇ ವೆಚ್ಚದ (No Cost) EMI ಲಾಭವನ್ನು ಸಹ ಪಡೆಯಬಹುದು.

ಫೋನ್ 6.40 ಇಂಚಿನ ಆಪ್ಟಿಕ್ AMOLED ಟಚ್ಸ್ಕ್ರೀನ್ ಡಿಸ್ಪ್ಲೇಯೊಂದಿಗೆ ಬರುತ್ತದೆ. ಆಕ್ಟಾ ಕೋರ್ ಪ್ರೊಸೆಸರೊಂದಿಗೆ 8GB ಯ RAM ಮತ್ತು 128GB ಯ ಇಂಟರ್ನಲ್ ಸ್ಟೋರೇಜಿನೊಂದಿಗೆ ಬರುತ್ತದೆ. ಇದರ ಮುಂಭಾಗದಲ್ಲಿ 16MP ಮೆಗಾಪಿಕ್ಸೆಲ್ f/ 1.7 – 1.22 ಮೈಕ್ರಾನ್ ಮತ್ತು 20MP ಮೆಗಾಪಿಕ್ಸೆಲ್ f/ 1.7 -1 ಮೈಕ್ರಾನ್ ಇದರ ಸೆಕೆಂಡರಿ ಕ್ಯಾಮರಾ ಮತ್ತು 16MP ಮೆಗಾಪಿಕ್ಸೆಲ್ ಹೊಂದಿದೆ. 

ಇದು ಆಂಡ್ರಾಯ್ಡ್ 9.0 ಅನ್ನು ಚಲಾಯಿಸುತ್ತದೆ ಮತ್ತು 3700mAh ತೆಗೆಯಾಲಾಗದ ಬ್ಯಾಟರಿ ಹೊಂದಿದೆ. OnePlus 6T ಯು ಡ್ಯುಯಲ್-ಸಿಮ್ (GSM ಮತ್ತು GSM) ಅಂದ್ರೆ ನ್ಯಾನೋ ಸಿಮ್ ಮತ್ತು ನ್ಯಾನೋ ಸಿಮ್ ಅನ್ನು ಇದರಲ್ಲಿ ಬಳಸಬವುದು. ಇದರಲ್ಲಿ ಮೈಕ್ರೋ SD ಕಾರ್ಡ್ ಬಳಸಿ ಹೆಚ್ಚಿನ ಸ್ಟೋರೇಜ್ ವಿಸ್ತರಿಸಲಾಗುವುದಿಲ್ಲ. ಅಲ್ಲದೆ ಇದರಲ್ಲಿ 3.5mm ಆಡಿಯೋ ಜಾಕಿಗೆ ಬದಲಾಗಿ ಟೈಪ್ C ಪೋರ್ಟ್ ನೀಡಲಾಗಿದೆ.

 

Ravi Rao

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in View Full Profile

Digit.in
Logo
Digit.in
Logo