OnePlus 13R Launched in India: ಭಾರತದಲ್ಲಿ ಒನ್‌ಪ್ಲಸ್ ಪ್ರೀಮಿಯಂ ವಿನ್ಯಾಸದೊಂದಿಗೆ ತನ್ನ ಹೊಸ OnePlus 13R ಸ್ಮಾರ್ಟ್ಫೋನ್ ಅಧಿಕೃತವಾಗಿ ಅನಾವರಣಗೊಂಡಿದೆ. ಈ ಸ್ಮಾರ್ಟ್ಫೋನ್ಗಳು ಪವರ್ಫುಲ್ ಹಾರ್ಡ್‌ವೇರ್ ಮತ್ತು ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾ ಸೆಟಪ್ ಜೊತೆಗೆ ಆಂಡ್ರಾಯ್ಡ್ 15 ಆಧಾರಿತ OxygenOS 15 ಕಾರ್ಯನಿರ್ವಹಿಸುತ್ತವೆ. ಅಲ್ಲದೆ ಫೋನ್ OnePlus 13 5G ಸ್ಮಾರ್ಟ್ ಫೋನ್ ಇದೆ 13ನೇ ಜನವರಿಯಿಂದ ಮಾರಾಟವಾಗಲಿದ್ದು ಇದರ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ ₹42,999 ರೂಗಳಾಗಿದೆ. ಪ್ರಸ್ತುತ ಭಾರತದಲ್ಲಿ ಈ OnePlus 13R ಸ್ಮಾರ್ಟ್ಫೋನ್ ಬೆಲೆ, ವಿಶೇಷಣಗಳ ವಿವರಗಳ ಮಾಹಿತಿ ಇಲ್ಲಿದೆ.
ಭಾರತದಲ್ಲಿ ಈ ಸ್ಮಾರ್ಟ್ಫೋನ್ OnePlus 13 5G ಸ್ಮಾರ್ಟ್ ಫೋನ್ ಇದೆ 13ನೇ ಜನವರಿಯಿಂದ ಮಾರಾಟವಾಗಲಿದ್ದು ಇದರ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ 42,999 ರೂಗಳಾದರೆ ಇದರ 16GB RAM ಮತ್ತು 512GB ಸ್ಟೋರೇಜ್ 49,999 ರೂಗಳಾಗಿದೆ. ಅಲ್ಲದೆ ICICI ಬ್ಯಾಂಕ್ ಕಾರ್ಡ್ ಬಳಕೆದಾರರು ರೂ 3,000 ರಿಯಾಯಿತಿ ಪಡೆಯಬಹುದು. OnePlus ಬಳಕೆದಾರರು ಹೆಚ್ಚುವರಿ ರೂ 4,000 ವಿನಿಮಯ ಬೋನಸ್ ಸಹ ಪಡೆಯಬಹುದು.
OnePlus 13R 5G ಸ್ಮಾರ್ಟ್ ಫೋನ್ 6.78 ಇಂಚಿನ 1.5K LTPO 4.1 AMOLED ಪ್ಯಾನೆಲ್ ಅನ್ನು 120Hz ರಿಫ್ರೆಶ್ ರೇಟ್ ಮತ್ತು 4500 nits ಗರಿಷ್ಠ ಹೊಳಪನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ನಿಂದ ರಕ್ಷಿಸಲ್ಪಟ್ಟಿದೆ. ಈ ಸ್ಮಾರ್ಟ್‌ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸರ್ ಮತ್ತು ಕೊನೆಯದಾಗಿ 50MP ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್ ಸಹ ಹೊಂದಿದೆ. ಸೆಲ್ಫಿಗಾಗಿ ಸ್ಮಾರ್ಟ್ಫೋನ್ 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಸ್ಮಾರ್ಟ್ಫೋನ್ Snapdragon 8 Gen 3 ಚಿಪ್‌ಸೆಟ್ ಹೊಂದಿದೆ. ಇದು ಆರಂಭಿಕ 12GB LPDDR5X RAM ಮತ್ತು 256GB UFS 4.0 ಸ್ಟೋರೇಜ್ ಹೊಂದಿದೆ. OnePlus 13R 5G ಸ್ಮಾರ್ಟ್ ಫೋನ್ 80W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6000mAh ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ 4 ವರ್ಷಗಳವರೆಗೆ ಆಂಡ್ರಾಯ್ಡ್ ಅಪ್ಡೇಟ್ ಸ್ವೀಕರಿಸುತ್ತದೆ. OnePlus 13R 5G ಸ್ಮಾರ್ಟ್ ಫೋನ್ ಡಸ್ಟ್ ಮತ್ತು ವಾಟರ್ ಪ್ರೊಫ್ ಪ್ರೊಟೆಕ್ಷನ್ಗಾಗಿ IP65 ಮೂಲಕ ಪ್ರಮಾಣೀಕರಿಸಲ್ಪಟ್ಟಿದೆ.
Also Read: Best Room Heaters: ಮೈ ಕೊರೆಯುವ ಚಳಿಗೆ ನಿಮ್ಮನ್ನು ಸದಾ ಬೆಚ್ಚಗಿರುವ ಅತ್ಯುತ್ತಮ ರೂಮ್ ಹೀಟರ್‌ಗಳು 2025