OnePlus 13 Series Launched in India: ಭಾರತದಲ್ಲಿ ಅತಿ ನಿರೀಕ್ಷಿತ OnePlus 13 Series ಪ್ರೀಮಿಯಂ ವಿನ್ಯಾಸದೊಂದಿಗೆ 7ನೇ ಜನವರಿ 2025 ರಂದು ಅಧಿಕೃತವಾಗಿ ಅನಾವರಣಗೊಂಡಿದೆ. ಈ ಸರಣಿಯಲ್ಲಿ OnePlus 13 ಮತ್ತು OnePlus 13R ಎಂಬ ಎರಡು ಜಬರ್ದಸ್ತ್ 5G ಸ್ಮಾರ್ಟ್ ಫೋನ್ಗಳು Snapdragon ಚಿಪ್‌ಸೆಟ್‌ಗಳೊಂದಿಗೆ ಬಿಡುಗಡೆಯಾಗಿವೆ. ಈ ಎರಡು ಪ್ರೀಮಿಯಂ ಸ್ಮಾರ್ಟ್ಫೋನ್ಗಳು ಪವರ್ಫುಲ್ ಹಾರ್ಡ್‌ವೇರ್ ಮತ್ತು ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾ ಸೆಟಪ್ ಜೊತೆಗೆ ಆಂಡ್ರಾಯ್ಡ್ 15 ಆಧಾರಿತ OxygenOS 15 ಮೂಲಕ ಕಾರ್ಯನಿರ್ವಹಿಸುತ್ತವೆ. ಈ ಮೂಲಕ ಭಾರತದಲ್ಲಿ OnePlus 13 ಮತ್ತು OnePlus 13R ಲಾಂಚ್ ಬೆಲೆ, ವಿಶೇಷಣಗಳು ಮತ್ತು ಇತರ ವಿವರಗಳನೊಮ್ಮೆ ತಿಳಿಯಿರಿ.
ಈ OnePlus 13 5G ಸ್ಮಾರ್ಟ್ ಫೋನ್ HDR10+ ಜೊತೆಗೆ 6.82 ಇಂಚಿನ QHD+ LTPO 3K ಪ್ಯಾನೆಲ್ ಮತ್ತು 120Hz ಡೈನಾಮಿಕ್ ರಿಫ್ರೆಶ್ ದರವನ್ನು ಹೊಂದಿದೆ. ಸ್ಮಾರ್ಟ್ಫೋನ್ 50MP Sony LYT 808 ಪ್ರೈಮರಿ ಕ್ಯಾಮೆರಾ ಸೆನ್ಸರ್ ಹೊಂದಿದ್ದು 3x ಆಪ್ಟಿಕಲ್ ಜೂಮ್‌ನೊಂದಿಗೆ 50MP Sony LYT 600 ಟೆಲಿಫೋಟೋ ಲೆನ್ಸ್ ಅನ್ನು ಹೊಂದಿದೆ. ಅಲ್ಲದೆ 120x ಡಿಜಿಟಲ್ ಜೂಮ್ ಸಹ ಇದರಲ್ಲಿ ಅಳವಡಿಸಲಾಗಿದ್ದು ಕೊನೆಯಾಗಿ 50MP ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್ ಸಹ ಹೊಂದಿದೆ. ಸೆಲ್ಫಿಗಾಗಿ ಸ್ಮಾರ್ಟ್ಫೋನ್ 32MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
OnePlus 13 5G ಸ್ಮಾರ್ಟ್ ಫೋನ್ Adreno 830 GPU ಜೊತೆಗೆ Snapdragon 8 Elite ಚಿಪ್‌ಸೆಟ್ ಹೊಂದಿದೆ. ಇದು ಆರಂಭಿಕ 12GB LPDDR5X RAM ಮತ್ತು 256GB UFS 4.0 ಸ್ಟೋರೇಜ್ ಹೊಂದಿದೆ. OnePlus 13 5G ಸ್ಮಾರ್ಟ್ ಫೋನ್ 100W ಫಾಸ್ಟ್ ಚಾರ್ಜಿಂಗ್ ಬೆಂಬಲ ಮತ್ತು 50W ವೈರ್ಲೆಸ್ ಚಾರ್ಜಿಂಗ್ ಬೆಂಬಲದೊಂದಿಗೆ 6000mAh ಸಾಮರ್ಥ್ಯವನ್ನು ಹೊಂದಿದೆ. OnePlus 13 5G ಸ್ಮಾರ್ಟ್ ಫೋನ್ ಡಸ್ಟ್ ಮತ್ತು ವಾಟರ್ ಪ್ರೊಫ್ ಪ್ರೊಟೆಕ್ಷನ್ಗಾಗಿ IP68 ಮತ್ತು IP69 ಮೂಲಕ ಪ್ರಮಾಣೀಕರಿಸಲ್ಪಟ್ಟಿದೆ.
OnePlus 13R 5G ಸ್ಮಾರ್ಟ್ ಫೋನ್ 6.78 ಇಂಚಿನ 1.5K LTPO 4.1 AMOLED ಪ್ಯಾನೆಲ್ ಅನ್ನು 120Hz ರಿಫ್ರೆಶ್ ರೇಟ್ ಮತ್ತು 4500 nits ಗರಿಷ್ಠ ಹೊಳಪನ್ನು ಹೊಂದಿದೆ. ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 7i ನಿಂದ ರಕ್ಷಿಸಲ್ಪಟ್ಟಿದೆ. ಈ ಸ್ಮಾರ್ಟ್‌ಫೋನ್ 50MP ಮೆಗಾಪಿಕ್ಸೆಲ್ ಪ್ರೈಮರಿ ಕ್ಯಾಮೆರಾದೊಂದಿಗೆ 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸರ್ ಮತ್ತು ಕೊನೆಯದಾಗಿ 50MP ಅಲ್ಟ್ರಾ-ವೈಡ್-ಆಂಗಲ್ ಸೆನ್ಸರ್ ಸಹ ಹೊಂದಿದೆ. ಸೆಲ್ಫಿಗಾಗಿ ಸ್ಮಾರ್ಟ್ಫೋನ್ 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
ಸ್ಮಾರ್ಟ್ಫೋನ್ Snapdragon 8 Gen 3 ಚಿಪ್‌ಸೆಟ್ ಹೊಂದಿದೆ. ಇದು ಆರಂಭಿಕ 12GB LPDDR5X RAM ಮತ್ತು 256GB UFS 4.0 ಸ್ಟೋರೇಜ್ ಹೊಂದಿದೆ. OnePlus 13R 5G ಸ್ಮಾರ್ಟ್ ಫೋನ್ 80W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ 6000mAh ಸಾಮರ್ಥ್ಯವನ್ನು ಹೊಂದಿದೆ. ಈ ಫೋನ್ 4 ವರ್ಷಗಳವರೆಗೆ ಆಂಡ್ರಾಯ್ಡ್ ಅಪ್ಡೇಟ್ ಸ್ವೀಕರಿಸುತ್ತದೆ. OnePlus 13R 5G ಸ್ಮಾರ್ಟ್ ಫೋನ್ ಡಸ್ಟ್ ಮತ್ತು ವಾಟರ್ ಪ್ರೊಫ್ ಪ್ರೊಟೆಕ್ಷನ್ಗಾಗಿ IP65 ಮೂಲಕ ಪ್ರಮಾಣೀಕರಿಸಲ್ಪಟ್ಟಿದೆ.
ಮೊದಲು OnePlus 13 5G ಸ್ಮಾರ್ಟ್ ಫೋನ್ ಇದೆ 10ನೇ ಜನವರಿಯಿಂದ ಮಾರಾಟವಾಗಲಿದ್ದು ಇದರ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ 69,999 ರೂಗಳಾದರೆ ಇದರ 16GB RAM ಮತ್ತು 512GB ಸ್ಟೋರೇಜ್ 76,999 ರೂಗಳಾಗಿದೆ. ಕೊನೆಯಾದಾಗಿ 24GB RAM ಮತ್ತು 1024GB ಸ್ಟೋರೇಜ್ 89,999 ರೂಗಳಾಗಿದೆ. ಅಲ್ಲದೆ ICICI ಬ್ಯಾಂಕ್ ಕಾರ್ಡ್ ಬಳಕೆದಾರರು ರೂ 5,000 ರಿಯಾಯಿತಿ ಪಡೆಯಬಹುದು. OnePlus ಬಳಕೆದಾರರು ಹೆಚ್ಚುವರಿ ರೂ 7,000 ವಿನಿಮಯ ಬೋನಸ್ ಸಹ ಪಡೆಯಬಹುದು. ಕಂಪನಿಯು 180 ದಿನಗಳ ಫೋನ್ ಬದಲಿ ಆಫರ್ ಜೊತೆಗೆ ಲೈಫ್‌ಟೈಮ್ ಡಿಸ್ಪ್ಲೇ ವಾರಂಟಿಯ ಭರವಸೆಯನ್ನು ಸಹ ನೀಡುತ್ತದೆ.
Also Read: Moto G05 ಸ್ಮಾರ್ಟ್‌ಫೋನ್ 50MP ಕ್ಯಾಮೆರಾದೊಂದಿಗೆ ಸದ್ದಿಲ್ಲದೇ ಬಿಡುಗಡೆ! ಬೆಲೆ ಮತ್ತು ಫೀಚರ್ಗಳೇನು?
OnePlus 13 5G ಸ್ಮಾರ್ಟ್ ಫೋನ್ ಇದೆ 13ನೇ ಜನವರಿಯಿಂದ ಮಾರಾಟವಾಗಲಿದ್ದು ಇದರ ಆರಂಭಿಕ 12GB RAM ಮತ್ತು 256GB ಸ್ಟೋರೇಜ್ 42,999 ರೂಗಳಾದರೆ ಇದರ 16GB RAM ಮತ್ತು 512GB ಸ್ಟೋರೇಜ್ 49,999 ರೂಗಳಾಗಿದೆ. ಅಲ್ಲದೆ ICICI ಬ್ಯಾಂಕ್ ಕಾರ್ಡ್ ಬಳಕೆದಾರರು ರೂ 3,000 ರಿಯಾಯಿತಿ ಪಡೆಯಬಹುದು. OnePlus ಬಳಕೆದಾರರು ಹೆಚ್ಚುವರಿ ರೂ 4,000 ವಿನಿಮಯ ಬೋನಸ್ ಸಹ ಪಡೆಯಬಹುದು.