OnePlus 13 Series ಭಾರತದಲ್ಲಿ ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಬೆಲೆ ಮತ್ತು ಫೀಚರ್‌ಗಳೇನು ತಿಳಿಯಿರಿ!
OnePlus 13 Series ಸ್ಮಾರ್ಟ್‌ಫೋನ್‌ಗಳನ್ನು ಮುಂದಿನ ತಿಂಗಳು ಬಿಡುಗಡೆಗೊಳಿಸಲು ಸಜ್ಜಾಗಿದೆ.
ಈ ಮುಂಬರಲಿರುವ ಹೊಸ ಸ್ಮಾರ್ಟ್‌ಫೋನ್‌ಗಳು 7ನೇ ಜನವರಿ 2025 ರಂದು ಅನಾವರಣಗೊಳ್ಳಲು ಸಿದ್ಧವಾಗಿವೆ.
OnePlus 13 Series ಸ್ಮಾರ್ಟ್‌ಫೋನ್‌ಗಳ ಆರಂಭಿಕ ರೂಪಾಂತರಕ್ಕೆ 69,999 ರೂಗಳಿಂದ ಆರಂಭಿಸುವ ನಿರೀಕ್ಷಿಗಳಿವೆ.
OnePlus 13 Series India Launch: ಜನಪ್ರಿಯ ಸ್ಮಾರ್ಟ್‌ಫೋನ್ ತಯಾರಕ ಒನ್ ಪ್ಲಸ್ (OnePlus) ತನ್ನ ಮುಂಬರಲಿರುವ ಹೊಸ OnePlus 13 Series ಸ್ಮಾರ್ಟ್‌ಫೋನ್‌ಗಳನ್ನು ಮುಂದಿನ ತಿಂಗಳು ಬಿಡುಗಡೆಗೊಳಿಸಲು ಸಜ್ಜಾಗಿದೆ. ಈ 5G ಈ ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯ ಡೇಟ್ ಮತ್ತು ಒಂದಿಷ್ಟು ಮಾಹಿತಿಗಳು ಬಿಡುಗಡೆಗೂ ಮುಂಚೆ ಸೋರಿಕೆಯಾಗಿದ್ದು ಅವೇನು ಎನ್ನುವುದನ್ನು ಈ ಕೆಳಗೆ ತಿಳಿಸಲಾಗಿದೆ. ಪ್ರಸ್ತುತ OnePlus 13 Series ಸ್ಮಾರ್ಟ್‌ಫೋನ್‌ಗಳು ಭಾರತದಲ್ಲಿ 7ನೇ ಜನವರಿ 2025 ರಂದು ಬಿಡುಗಡೆಯಾಗುವುದಾಗಿ ತಿಳಿಸಲಾಗಿದೆ.
OnePlus 13 Series India Launch
ಈ ಮುಂಬರಲಿರುವ OnePlus 13 Series ಸ್ಮಾರ್ಟ್‌ಫೋನ್‌ಗಳ ಬಿಡುಗಡೆಯ ದಿನಾಂಕ ಮತ್ತು ಸಮಯದೊಂದಿಗೆ ಬೆಲೆ ಮತ್ತು ಒಂದಿಷ್ಟು ಮಾಹಿತಿಗಳು ಹೊರ ಬಂದಿದ್ದು ನೀವು ಒನ್ ಪ್ಲಸ್ ಪ್ಯಾನ್ ಆಗಿದ್ದರೆ ಇದನ್ನು ಖರೀದಿಸಲು ಯೋಚಿಸುತ್ತಿದ್ದರೆ ಇದರ ಎಲ್ಲ ಮಾಹಿತಿಯನ್ನು ಮೊದಲು ಪಡ್ದೆಯಲು ಡಿಜಿಟ್ ಕನ್ನಡವನ್ನು ಫಾಲೋ ಮಾಡಬಹುದು. ಮೊದಲಿಗೆ ಈ OnePlus 13 Series ಸ್ಮಾರ್ಟ್‌ಫೋನ್‌ಗಳು 7ನೇ ಜನವರಿ 2025 ರಂದು ಭಾರತೀಯ ಸಮಯದಲ್ಲಿ ರಾತ್ರಿ 9:00pm ಗಂಟೆಗೆ ಬಿಡುಗಡೆಗೊಳಿಸುವಂತೆ ಅಧಿಕೃತ ಟ್ವಿಟ್ಟರ್ ಪೋಸ್ಟ್ ಸಹ ಮಾಡಿದೆ. OnePlus 13 Series ಸ್ಮಾರ್ಟ್‌ಫೋನ್‌ಗಳ ಆರಂಭಿಕ ರೂಪಾಂತರಕ್ಕೆ 69,999 ರೂಗಳಿಂದ ಆರಂಭಿಸುವ ನಿರೀಕ್ಷಿಗಳಿವೆ.
OnePlus 13 Series ನಿರೀಕ್ಷಿತ ಫೀಚರ್ಗಳೇನು?
ಈಗಾಗಲೇ ಚೀನಾದಲ್ಲಿ ಬಿಡುಗಡೆಯಾಗಿರುವ ಈ OnePlus 13 ಸ್ಮಾರ್ಟ್ಫೋನ್ ಮಾದರಿಯಂತೆ ನಿರೀಕ್ಷಿಸಬಹುದಾಗಿದ್ದು ಇದರ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿದೆ. ಸೋನಿ LYT 808 ಪ್ರೈಮರಿ ಸೆನ್ಸರ್ 3x ಆಪ್ಟಿಕಲ್ ಜೂಮ್‌ನೊಂದಿಗೆ 50MP ಸೋನಿ LYT600 ಟೆಲಿಫೋಟೋ ಲೆನ್ಸ್ ಮತ್ತು 50MP Samsung JN1 ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ.
Also Read: Christmas Smart Tv Deal: ಅತಿ ಕಡಿಮೆ ಬೆಲೆಗೆ 43 ಇಂಚಿನ ಲೇಟೆಸ್ಟ್ ಸ್ಮಾರ್ಟ್ ಟಿವಿ ಮಾರಾಟ! ಬೆಲೆ ಎಷ್ಟು?
ಸೆಲ್ಫಿಗಳು ಮತ್ತು ವೀಡಿಯೊ ಕರೆಗಳಿಗಾಗಿ 32MP ಸೋನಿ IMX612 ಮುಂಭಾಗದ ಕ್ಯಾಮೆರಾವನ್ನು ಒಳಗೊಳ್ಳಲಿದೆ. ಅಲ್ಲದೆ ಇನ್-ಡಿಸ್ಪ್ಲೇ ಅಲ್ಟ್ರಾಸಾನಿಕ್ ಫಿಂಗರ್‌ಪ್ರಿಂಟ್ ಸೆನ್ಸರ್ ಸಹ ಒಳಗೊಂಡಿದೆ. OnePlus 12 ಫೋನ್ ಹೊಂದಿರುವ ಅದೇ ಕ್ಯಾಮೆರಾ ಸೆನ್ಸರ್ ಅನ್ನು ಮುಂದೂಡಿಸುವ ನಿರೀಕ್ಷೆಗಳಿವೆ.
ಈ ಸ್ಮಾರ್ಟ್ಫೋನ್ Snapdragon 8 Elite Gen 3 ಪ್ರೊಸೆಸರ್‌ನಿಂದ ಚಾಲಿತವಾಗುವ ನಿರೀಕ್ಷೆಯಾಗಿದ್ದು 12GB ವರೆಗಿನ LPDDR5X RAM ಮತ್ತು 1024GB ವರೆಗಿನ UFS 4.0 ಸ್ಟೋರೇಜ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 100W SuperVOOC ವೇಗದ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ ಬೃಹತ್ 6000 mAh ಬ್ಯಾಟರಿಯನ್ನು ಪ್ಯಾಕ್ ಮಾಡಬಹುದು. ಇದು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ ಮತ್ತು ಮ್ಯಾಗ್ನೆಟಿಕ್ ಚಾರ್ಜಿಂಗ್‌ನೊಂದಿಗೆ ಹೊಂದಾಣಿಕೆಯನ್ನು ಒಳಗೊಂಡಿದೆ. OnePlus 13 ಅನ್ನು ನೀರು ಮತ್ತು ಧೂಳಿನ ಪ್ರತಿರೋಧಕ್ಕಾಗಿ IP68 ಮತ್ತು IP69 ಹೊಂದಿರುವ ನಿರೀಕ್ಷೆ.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile