OnePlus 13 ಟ್ರಿಪಲ್ ಕ್ಯಾಮೆರಾದೊಂದಿಗೆ ಬಿಡುಗಡೆಗೆ ಡೇಟ್ ಕಂಫಾರ್ಮ್! ನಿರೀಕ್ಷಿತ ಫೀಚರ್ ಹೈಲೈಟ್‌ಗಳೇನು?
ಈ ಮುಂಬರಲಿರುವ OnePlus 13 ಚೀನಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಕಾಣಿಸಿಕೊಂಡಿದೆ.
OnePlus 13 ಹ್ಯಾಂಡ್‌ಸೆಟ್ ಕಪ್ಪು, ನೀಲಿ ಮತ್ತು ಬಿಳಿ ಬಣ್ಣಗಳಲ್ಲಿ ಬಿಡುಗಡೆಯಾಗುವ ನಿರೀಕ್ಷೆಗಳಿವೆ.
OnePlus 13 ಸ್ಮಾರ್ಟ್ಫೋನ್ 6.82 ಇಂಚಿನ 2K LTPO ಡಿಸ್ಪ್ಲೇಯೊಂದಿಗೆ ಬರುವುದಾಗಿ ನಿರೀಕ್ಷಿಸಲಾಗಿದೆ.
ಭಾರತದಲ್ಲಿ ಪ್ರೀಮಿಯಂ ಸ್ಮಾರ್ಟ್ಫೋನ್ಗಳಿಗೆ ಹೆಸರುವಾಸಿಯಾಗಿರುವ ಒನ್‌ಪ್ಲಸ್ (OnePlus) ತನ್ನ ಮುಂಬರಲಿರುವ ಹೊಸ OnePlus 13 ಸ್ಮಾರ್ಟ್ಫೋನ್ ಚೀನಾದಲ್ಲಿ ಬಿಡುಗಡೆಗೆ ಡೇಟ್ ಫಿಕ್ಸ್ ಮಾಡಿದೆ. OnePlus 13 ಈ ತಿಂಗಳ ಕೊನೆಯಂದು ಚೀನಾದಲ್ಲಿ ತನ್ನ ಚೊಚ್ಚಲ ಪ್ರವೇಶವನ್ನು ಖಚಿತಪಡಿಸುತ್ತದೆ. ಪ್ರಸ್ತುತ ವದಂತಿಗಳ ನಂತರ ಕಂಪನಿಯು ಈ ಹ್ಯಾಂಡ್‌ಸೆಟ್‌ನ ಬಿಡುಗಡೆ ದಿನಾಂಕವನ್ನು ಪ್ರಕಟಿಸಿ ಇದರ ಡಿಸೈನಿಂಗ್ ಮತ್ತು ಫಸ್ಟ್ ಲುಕ್ ಬಣ್ಣಗಳನ್ನು ಬಹಿರಂಗಪಡಿಸಿದೆ. OnePlus 13 ಹ್ಯಾಂಡ್‌ಸೆಟ್ ಸ್ಥಳೀಯ ರಿಫ್ರೆಶ್ ರೇಟ್ ಫೀಚರ್ಗಳೊಂದಿಗೆ BOE X2 ಡಿಸ್‌ಪ್ಲೇ ಅಂದ್ರೆ ಸಿಕ್ಕಾಪಟ್ಟೆ ಬ್ರೈಟ್ ಮತ್ತು ಕಣ್ಣುಗಳಿಗೆ ಹೆಚ್ಚು ರಕ್ಷಣೆಯನ್ನು ನೀಡುವ ಸ್ಕ್ರೀನ್ ಪಡೆಯುವುದನ್ನು ಕಾನ್ಫರೋಮ್ ಮಾಡಿದೆ.
Also Read: BSNL Plan ಅನಿಯಮಿತ ಕರೆ ಮತ್ತು ಡೇಟಾ ಬರೋಬ್ಬರಿ 150 ದಿನಗಳಿಗೆ ಲಭ್ಯ! ದಿನದ ಖರ್ಚು ಕೇವಲ 2.6 ರೂಪಾಯಿ ಮಾತ್ರ!
OnePlus 13 ಬಿಡುಗಡೆಗೆ ಡೇಟ್ ಕಂಫಾರ್ಮ್!
OnePlus ತನ್ನ ಪ್ರಮುಖ ಸ್ಮಾರ್ಟ್‌ಫೋನ್ ಅನ್ನು 31ನೇ ಅಕ್ಟೋಬರ್ ರಂದು ಚೀನಾದ ಸ್ಥಳೀಯ ಸಮಯ ಸಂಜೆ 4:00pm ಗಂಟೆಗೆ ಬಿಡುಗಡೆ ಮಾಡಲಿದೆ ಎಂದು ಖಚಿತಪಡಿಸಿದೆ. ಈ ಹ್ಯಾಂಡ್‌ಸೆಟ್ ಅಪ್‌ಗ್ರೇಡ್ ಸಿಸ್ಟಮ್ ಅನುಭವ, ಆಟದ ಕಾರ್ಯಕ್ಷಮತೆ, ಡಿಸ್ಪ್ಲೇ ಮತ್ತು ಕಣ್ಣಿನ ಪ್ರೊಟೆಕ್ಷನ್, ಬ್ಯಾಟರಿ ಬಾಳಿಕೆ ಮತ್ತು ಚಾರ್ಜಿಂಗ್ ಮತ್ತು ಇಮೇಜಿಂಗ್ ಸಾಮರ್ಥ್ಯಗಳೊಂದಿಗೆ ಬರುತ್ತದೆ. OnePlus 13 ನ ಕ್ಯಾಮೆರಾ ಮಾಡ್ಯೂಲ್ ಅನ್ನು ಸ್ವಲ್ಪಮಟ್ಟಿಗೆ ಟ್ವೀಕ್ ಮಾಡಲಾಗಿದೆ ಮತ್ತು ಈಗ ಸ್ಮಾರ್ಟ್‌ಫೋನ್‌ನ ಉಳಿದ ಫ್ರೇಮ್‌ನಿಂದ ಬೇರ್ಪಟ್ಟಿದೆ. ಹ್ಯಾಂಡ್‌ಸೆಟ್‌ನ ಚಾಸಿಸ್‌ನೊಂದಿಗೆ ಸೇರಿಕೊಂಡಂತೆ ತೋರುವ ಬದಲು ಇದು ಒಂದು ವಿಶಿಷ್ಟ ವೃತ್ತದಂತೆ ಎಡಭಾಗದಲ್ಲಿ ಕುಳಿತುಕೊಳ್ಳುತ್ತದೆ.
ಈ OnePlus 13 ಸ್ಮಾರ್ಟ್ಫೋನ್ ಹ್ಯಾಸೆಲ್‌ಬ್ಲಾಡ್ ಬ್ರ್ಯಾಂಡಿಂಗ್ ಅನ್ನು ಕ್ಯಾಮರಾ ಘಟಕದಿಂದ ಹೊರಕ್ಕೆ ಸರಿಸಲಾಗಿದೆ ಮತ್ತು ಈಗ ಸಮತಲವಾದ ಅಲಂಕಾರಿಕ ಲೋಹದ ಪಟ್ಟಿಯ ಮೇಲಿನ ಬಲಭಾಗದಲ್ಲಿ ಇರಿಸಲಾಗಿದೆ. ಉಳಿದ ವಿನ್ಯಾಸವು ಅದರ ಪೂರ್ವವರ್ತಿಗೆ ಹೋಲುತ್ತದೆ. OnePlus 13 ಚೀನಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ ವೀಬೊದ ಪ್ರಕಾರ ಬಹು ಪೋಸ್ಟ್‌ಗಳಲ್ಲಿ 31ನೇ ಅಕ್ಟೋಬರ್ ದಿನವನ್ನು ಅಧಿಕೃತವಾಗಿ ಪೋಸ್ಟ್ ಮೇಲೆ ಬರೆಯಾಗಲಿದೆ. ಇದರ ಚೊಚ್ಚಲ ಪ್ರವೇಶಕ್ಕೆ ಮುಂಚಿತವಾಗಿ ಚೀನಾದಲ್ಲಿ ನಡೆದ ಪೀಸ್‌ಕೀಪರ್ ಎಲೈಟ್ ಈವೆಂಟ್‌ನಲ್ಲಿ ಇ-ಸ್ಪೋರ್ಟ್ಸ್ ಆಟಗಾರರ ಕೈಯಲ್ಲಿ OnePlus 13 ಅನ್ನು ಗುರುತಿಸಲಾಗುವುದೆಂದು ಹೇಳಲಾಗಿದೆ.
OnePlus 13 ವಿಶೇಷಣಗಳು (ನಿರೀಕ್ಷಿತ)
ಈ ಮುಂಬರಲಿರುವ OnePlus 13 ಸ್ಮಾರ್ಟ್ಫೋನ್ 6.82 ಇಂಚಿನ 2K 10-ಬಿಟ್ LTPO BOE X2 ಮೈಕ್ರೊ ಕ್ವಾಡ್ ಕರ್ವ್ಡ್ OLED ಸ್ಕ್ರೀನ್ ಜೊತೆಗೆ 120Hz ರಿಫ್ರೆಶ್ ದರವನ್ನು ಹೊಂದಿದೆ. ಹೆಚ್ಚುವರಿಯಾಗಿ ಇದು ಹೊಸ ಸ್ಥಳೀಯ ರಿಫ್ರೆಶ್ ದರ ವೈಶಿಷ್ಟ್ಯವನ್ನು ಹೊಂದಿದೆ. onePlus ನ ಹೊಸ ಸ್ಮಾರ್ಟ್‌ಫೋನ್ ಮುಂಬರುವ ಈ ಫೋನ್ Snapdragon 8 Extreme Edition + ಚಿಪ್‌ಸೆಟ್‌ನಿಂದ ನಡೆಯುವ ನಿರೀಕ್ಷೆಗಳಿವೆ. ಅಲ್ಲದೆ ಈ OnePlus 13 ಫೋನ್ 12GB LPDDR5X RAM ಮತ್ತು 1TB ವರೆಗಿನ ಆನ್‌ಬೋರ್ಡ್ ಸ್ಟೋರೇಜ್ನೊಂದಿಗೆ ಜೋಡಿಸಲ್ಪಟ್ಟಿದೆ.
ಈ ಸ್ಮಾರ್ಟ್ಫೋನ್ ಕ್ಯಾಮೆರಾದಲ್ಲಿ 50MP ಮೆಗಾಪಿಕ್ಸೆಲ್ ಸೋನಿ LYT-808 ಪ್ರೈಮರಿ ಸೆನ್ಸರ್ 50MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಆಂಗಲ್ ಯೂನಿಟ್ ಮತ್ತು 3x ಆಪ್ಟಿಕಲ್ ಜೂಮ್‌ನೊಂದಿಗೆ 50MP ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್‌ನೊಂದಿಗೆ ಟ್ರಿಪಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಒಳಗೊಂಡಿರುತ್ತದೆ. ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಾಗಿ 32MP ಕ್ಯಾಮೆರಾವನ್ನು ನಿರೀಕ್ಷಿಸಬಹುದು. ಅಲ್ಲದೆ ಕೊನೆಯದಾಗಿ ಇದರ ಬ್ಯಾಟರಿಯಲ್ಲಿ ಟೈಪ್ ಸಿ ಚಾರ್ಜಿಂಗ್ ಪೋರ್ಟ್ ಜೊತೆಗೆ ಡಿಸೆಂಟ್ ಆಗಿ 5000mAh ಬ್ಯಾಟರಿಯನ್ನು ನಿರೀಕ್ಷಿಸಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile