50MP Sony IMX890 ಕ್ಯಾಮೆರಾದ OnePlus 12R ಭಾರಿ ಬೆಲೆ ಕಡಿತ! ಬರೋಬ್ಬರಿ 3000 ರೂಗಳವರೆಗೆ ಡಿಸ್ಕೌಂಟ್!
OnePlus ತನ್ನ ಲೇಟೆಸ್ಟ್ 5G ಫೋನ್ ಮತ್ತು ಇತರ ಉತ್ಪನ್ನಗಳ ಮೇಲೆ ಕೆಲವು ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ.
OnePlus 12R ಸ್ಮಾರ್ಟ್ಫೋನ್ ಮೇಲೆ ಭಾರಿ ಬೆಲೆ ಕಡಿತಗೊಳಿಸಿದ್ದು 3000 ರೂಗಳ ಫ್ಲಾಟ್ ಡಿಸ್ಕೌಂಟ್ ನೀಡುತ್ತಿದೆ.
OnePlus 12R Price Cut: ದೀಪಾವಳಿ ಸಮೀಪಿಸುತ್ತಿದ್ದಂತೆ ಮಾರಾಟ ಮತ್ತು ರಿಯಾಯಿತಿಗಳ ಸದ್ದು ಪ್ರತಿಕಡೆಯಿಂದ ನಿಮ್ಮ ಕಿವಿಗಳಿಗೆ ಬಿಳುತ್ತಿರಬಹುದು. ಇದರೊಂದಿಗೆ ಪ್ರತಿ ವರ್ಷದಂತೆ ಈ ಬಾರಿಯೂ ಸಹ OnePlus ತನ್ನ ಲೇಟೆಸ್ಟ್ 5G ಫೋನ್ ಮತ್ತು ಇತರ ಉತ್ಪನ್ನಗಳ ಮೇಲೆ ಕೆಲವು ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ದೀಪಾವಳಿ ಮಾರಾಟಕ್ಕೂ ಮುಂಚೆಯೇ ಅಮೆಜಾನ್ ಈಗಾಗಲೇ ಶುರು ಮಾಡಿ ಕೊನೆಗೊಳಿಸಲಿದ್ದು ಆರಂಭಿಕ ಬೆಲೆಯೊಂದಿಗೆ ಬಿಡುಗಡೆಯಾದ OnePlus 12R ಭಾರಿ ರಿಯಾಯಿತಿಯನ್ನು ಪಡೆಯುತ್ತಿದೆ. ಅಮೆಜಾನ್ ಇತ್ತೀಚಿನ ಸ್ಮಾರ್ಟ್‌ಫೋನ್‌ಗಳು, ಟ್ಯಾಬ್ಲೆಟ್‌ಗಳ ಮೇಲೆ ಭಾರಿ ಡೀಲ್ ಮತ್ತು ಕೊಡುಗೆಗಳನ್ನು ನೀಡುತ್ತದೆ.
OnePlus 12R ಬೆಲೆ ಕಡಿತ:
ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಮಾರಾಟದಲ್ಲಿ ಈ OnePlus 12R ಸ್ಮಾರ್ಟ್ಫೋನ್ ಬರೋಬ್ಬರಿ ₹3000 ರೂಗಳವರೆಗೆ ಫ್ಲಾಟ್ ಡಿಸ್ಕೌಂಟ್ ನೀಡುತ್ತಿದೆ. ಇದರಲ್ಲಿ ಒಟ್ಟಾರೆಯಾಗಿ 3 ರೂಪಾಂತರಗಳನ್ನು ಹೊಂದಿರುವ ಈ ಫೋನ್ ಆರಂಭಿಕ 8GB + 128GB ರೂಪಾಂತರವನ್ನು ₹35,999 ರೂಗಳಿಗೆ ಪಟ್ಟಿ ಮಾಡಿದರೆ 8GB + 256GB ರೂಪಾಂತರವನ್ನು ₹37,999 ರೂಗಳಿಗೆ ಪಟ್ಟಿ ಮಾಡಲಾಗಿದ್ದು ಇದರ ಹೈಎಂಡ್ 16GB + 256GB ರೂಪಾಂತರವನ್ನು ₹40,999 ರೂಗಳಿಗೆ ಪಟ್ಟಿ ಮಾಡಲಾಗಿದೆ.
ಈ ಮೇಲಿನ ₹3000 ರೂಗಳ ಫ್ಲಾಟ್ ಡಿಸ್ಕೌಂಟ್ ಈ ಮೂರೂ ರೂಪಾಂತರಗಳಿಗೆ ಅನ್ವಯಿಸುತ್ತದೆ. ಅಲ್ಲದೆ ಈ OnePlus 12R ಸ್ಮಾರ್ಟ್ಫೋನ್ ಮೇಲೆ ಅಮೆಜಾನ್ ಸುಮಾರು ₹25,700 ರೂಗಳವೆರೆಗೆ ವಿನಿಯಮ ಆಫರ್ ಸಹ ನೀಡುತ್ತಿದ್ದು ನಿಮ್ಮ ಹಳೆಯ ಸ್ಮಾರ್ಟ್ಫೋನ್ ಸ್ಥಿತಿಯ ಮೇಲೆ ಇದನ್ನು ಬದಲಾಯಿಸಿಕೊಂಡು ಖರೀದಿಸಬಹುದು. ಅಮೆಜಾನ್ ಮಾರಾಟ ನಾಳೆ ಕೊನೆಗೊಳ್ಳಲಿದ್ದು ಕೈ ಜಾರುವ ಮುಂಚೆ ಈ ಡೀಲ್ ಅನ್ನು ನೀವು ಅಥವಾ ಬೇಕಾದರೊಂದಿಗೆ ಹಂಚಿಕೊಂಡು ಖರೀದಿಸಿಕೊಳ್ಳಿ.
Also Read: 70 ದಿನಗಳ ವ್ಯಾಲಿಡಿಟಿಯೊಂದಿಗೆ ಅನಿಯಮಿತ ಕರೆ ಮತ್ತು ಡೇಟಾ ನೀಡುವ ಈ Recharge Plan ಬೆಲೆ ಎಷ್ಟು?
OnePlus 12R ವಿಶೇಷಣಗಗಳೇನು?
ಈ ಲೇಟೆಸ್ಟ್ OnePlus 12R ಸ್ಮಾರ್ಟ್ಫೋನ್ 6.78 ಇಂಚಿನ AMOLED ProXDR ಡಿಸ್ಪ್ಲೇ ಜೊತೆಗೆ LTPO4.0 ಅನ್ನು ಹೊಂದಿದೆ. ಇದು ಡೈನಾಮಿಕ್ 120Hz ರಿಫ್ರೆಶ್ ದರವನ್ನು ನೀಡುತ್ತದೆ. ಇದರ ಕ್ಯಾಮರಾ ಸೆಟಪ್ ಟ್ರಿಪಲ್ ಕ್ಯಾಮೆರಾ ಸೆಟಪ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಜೊತೆಗೆ 50MP ಸೋನಿ IMX890 ಪ್ರೈಮರಿ ಸೆನ್ಸರ್ ಹೊಂದಿದ್ದು ಇದರ ಜೊತೆಗೆ 8MP ಅಲ್ಟ್ರಾ-ವೈಡ್ ಲೆನ್ಸ್ Sony IMX355 ಸಪೋರ್ಟ್ ಮಾಡುತ್ತದೆ ಮತ್ತು ಕೊನೆಯದಾಗಿ 2MP ಮ್ಯಾಕ್ರೋ ಲೆನ್ಸ್. ಅಲ್ಲದೆ ಡಿಸ್ಪ್ಲೇಯ ಮುಂಭಾಗದಲ್ಲಿ ವಿಡಿಯೋ ಕರೆ ಮತ್ತು ಸೆಲ್ಫಿಗಳಿಗಾಗಿ 16MP ಕ್ಯಾಮೆರಾವನ್ನು ಹೊಂದಿದೆ.
ಈ OnePlus 12R ಸ್ಮಾರ್ಟ್ಫೋನ್ Qualcomm Snapdragon 8 Gen 2 ಚಿಪ್ಸೆಟ್ ಜೊತೆಗೆ ಹೊಂದಿದೆ ಮತ್ತು ಗ್ರಾಫಿಕ್ಸ್-ತೀವ್ರವಾದ ಕಾರ್ಯಗಳನ್ನು ನಿರ್ವಹಿಸಲು Adreno 740 GPU ನೊಂದಿಗೆ ಜೋಡಿಸಲಾಗಿದೆ. ಈ OnePlus 12R ಸ್ಮಾರ್ಟ್ಫೋನ್ ಗರಿಷ್ಠ 16GB LPDDR5X RAM ಮತ್ತು 256GB UFS 3.1 ಸ್ಟೋರೇಜ್ ಅನ್ನು ನೀಡುತ್ತದೆ. ಈ ಲೇಟೆಸ್ಟ್ OnePlus 12R ಸ್ಮಾರ್ಟ್ಫೋನ್ ಬೃಹತ್ 5500 mAh ಬ್ಯಾಟರಿಯ ಇದರ ಬಾಕ್ಸ್‌ನೊಳಗೆ ಒದಗಿಸಲಾದ 100W ಅಡಾಪ್ಟರ್ ಮೂಲಕ ವೇಗವಾಗಿ ಚಾರ್ಜ್ ಮಾಡಬಹುದು.
Ravi Rao
Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile