ಭಾರತದಲ್ಲಿ ಇಂದು ಒನ್ ಪ್ಲಸ್ ತನ್ನ ಇತ್ತೀಚೆಗೆ ಬಿಡುಗಡೆಯಾದ OnePlus 12R ಮೊದಲ ಮಾರಾಟವು ಇಂದು ಅಮೆಜಾನ್ ಮೂಲಕ 12:00 ಗಂಟೆಗೆ ಶುರುವಾಗಲಿದೆ. ಈ ಒನ್ ಪ್ಲಸ್ ಸ್ಮಾರ್ಟ್‌ಫೋನ್ ಫೀಚರ್ ಮತ್ತು ವಿಶೇಷಣಗಳು ಮತ್ತು ಹಲವಾರು ಲೇಟೆಸ್ಟ್ ಅಪ್‌ಡೇಟ್‌ಗಳೊಂದಿಗೆ ಮಧ್ಯಮ ಪ್ರೀಮಿಯಂ ಶ್ರೇಣಿಯಲ್ಲಿ ಉತ್ತಮ ಆಯ್ಕೆಯಾಗಿದೆ. OnePlus 12R ಸ್ಮಾರ್ಟ್ಫೋನ್ ನಿಮಗೆ Qualcomm Snapdragon Gen 2 ಚಿಪ್‌ಸೆಟ್, ಬೃಹತ್ 5500mAh ಬ್ಯಾಟರಿ, 6.78 ಇಂಚಿನ AMOLED ರೇಟ್ ಡಿಸ್ಪ್ಲೇ ಮತ್ತು 120hz ಡಿಸ್ಪ್ಲೇಯೊಂದಿಗೆ ಬರುತ್ತದೆ. LTPO 4.0 ತಂತ್ರಜ್ಞಾನ ಮತ್ತು 50MP ಪ್ರೈಮರಿ ಕ್ಯಾಮರಾದೊಂದಿಗೆ ಬರುವ ಬೆಸ್ಟ್ ಸ್ಮಾರ್ಟ್ಫೋನ್ ಆಗಿದೆ. OnePlus 12R ಸ್ಮಾರ್ಟ್ಫೋನ್ ಖರೀದಿಸಲು 5 ಪ್ರಮುಖ ಕಾರಣಗಳು.
Also Read: JioCinema ಮತ್ತು Disney+ Hotstar ಒಂದಾಗಲಿದ್ದು ಮುಖೇಶ್ ಅಂಬಾನಿ ಮಾಲೀಕತ್ವ ಪಡೆಯುವ ನಿರೀಕ್ಷೆ
ಈ OnePlus 12R ಸ್ಮಾರ್ಟ್ಫೋನ್ 8GB RAM ಮತ್ತು 128GB ಸ್ಟೋರೇಜ್ ಮೂಲ ಮಾದರಿಗೆ 39,999 ರೂಗಳಾಗಿದೆ. ಇದರ ಕ್ರಮವಾಗಿ 16GB RAM ಮತ್ತು 256GB ಸ್ಟೋರೇಜ್‌ನೊಂದಿಗೆ ಉನ್ನತ ಮಟ್ಟದ ರೂಪಾಂತರವೂ ಇದೆ ಮತ್ತು ಇದರ ಬೆಲೆ 45,999 ರೂಗಳಾಗಿವೆ. ಇದನ್ನು ಆಸಕ್ತರು ಒನ್ ಪ್ಲಸ್ ವೆಬ್ಸೈಟ್ ಮತ್ತು ಅಮೆಜಾನ್ ಇಂಡಿಯಾದ ಮೂಲಕ ಖರೀದಿಸಬಹುದು.
OnePlus 12R ಕೆಲವು ಅತ್ಯಾಕರ್ಷಕ ಕೊಡುಗೆಗಳು ಲಭ್ಯವಿವೆ. ICICI ಕ್ರೆಡಿಟ್ ಕಾರ್ಡ್‌ಗಳು ಮತ್ತು OneCard ಅನ್ನು ಬಳಸುವ ಖರೀದಿದಾರರು ರೂ 1,000 ಬ್ಯಾಂಕ್ ರಿಯಾಯಿತಿಯನ್ನು ಪಡೆಯಬಹುದು. ಅಲ್ಲದೆ ಈ ಸ್ಮಾರ್ಟ್ಫೋನ್ ಖರೀದಿಸುವವರಿಗೆ ಹೆಚ್ಚುವರಿಯಾಗಿ 6 ತಿಂಗಳಿಗೆ ಉಚಿತ Google One ಚಂದಾದಾರಿಕೆ ಮತ್ತು 3 ತಿಂಗಳ ಉಚಿತ YouTube Premium ಚಂದಾದಾರಿಕೆಯನ್ನು ಸಹ ಸ್ವೀಕರಿಸುತ್ತಾರೆ.
ಈ ಫೋನ್ 6.78 ಇಂಚಿನ 10 ಬಿಟ್ AMOLED ಪರದೆಯೊಂದಿಗೆ 120Hz ರಿಫ್ರೆಶ್ ದರ ಮತ್ತು LTPO 4.0 ತಂತ್ರಜ್ಞಾನದೊಂದಿಗೆ ಬರುತ್ತದೆ. ಪ್ರದರ್ಶನವು ಡಾಲ್ಬಿ ವಿಷನ್ ಮತ್ತು HDR 10+ ಅನ್ನು ಬೆಂಬಲಿಸುತ್ತದೆ. OnePlus 12R ಗರಿಷ್ಠ ಹೊಳಪು 4500 nits. ಸೂರ್ಯನ ಬೆಳಕಿನಲ್ಲಿ ಎದ್ದುಕಾಣುವ ಬಣ್ಣಗಳು ಮತ್ತು ಉತ್ತಮ ಗೋಚರತೆಯನ್ನು ನೀಡುವ ಪರದೆಯು ಪ್ರಭಾವಶಾಲಿಯಾಗಿದೆ. OnePlus 11 ಗಿಂತ ಹೆಚ್ಚು ಪ್ರಕಾಶಮಾನವಾಗಿರುವ ಡಿಸ್ಪ್ಲೇ 120Hz ನಲ್ಲಿ ಸರಾಗವಾಗಿ ಕಾರ್ಯನಿರ್ವಹಿಸುತ್ತದೆ.
OnePlus 12R ಸ್ಮಾರ್ಟ್ಫೋನ್ Qualcomm Snapdragon 8 Gen 2 ಚಿಪ್‌ಸೆಟ್‌ನೊಂದಿಗೆ ಹೈ ಗ್ರಾಫಿಕ್ ಗೇಮ್ ಮತ್ತು ಮಲ್ಟಿ ಟಾಸ್ಕಿಗ್ ಅನ್ನು ಸಲೀಸಾಗಿ ನಿಭಾಯಿಸಲು ಸಜ್ಜುಗೊಂಡಿದ್ದು. ಇದು ಗೇಮಿಂಗ್‌ನಲ್ಲಿ ಯಾವುದೇ ಅಡೆತಡೆಗಳಿಲ್ಲದೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಮತ್ತು ಇದರಲ್ಲಿ ನೀವು ಯಾವುದೇ ತೊಂದರೆಗಳಿಲ್ಲದೆ ಲೈವ್ ವೀಡಿಯೊ ಸ್ಟ್ರೀಮಿಂಗ್ ಅನುಭವವನ್ನು ಸಹ ಪಡೆಯಬಹುದು.
ಸ್ಮಾರ್ಟ್ಫೋನ್ ನಿಮಗೆ ಬಹು ಬೃಹತ್ 5500mAh ಬ್ಯಾಟರಿ ಮತ್ತು 100W ಫಾಸ್ಟ್ ಚಾರ್ಜಿಂಗ್ ಬೆಂಬಲದೊಂದಿಗೆ OnePlus 12R ಆಗಾಗ್ಗೆ ರೀಚಾರ್ಜ್ ಮಾಡದೆಯೇ ವಿಸ್ತೃತ ಬಳಕೆಯನ್ನು ಖಾತ್ರಿಗೊಳಿಸುತ್ತದೆ. OnePlus 12R ದಿನನಿತ್ಯದ ಭಾರೀ ಬಳಕೆಯ ಸಮಯದಲ್ಲಿಯೂ ಸಹ ಇದು ತಾಪನ ಸಮಸ್ಯೆಗಳ ಯಾವುದೇ ಲಕ್ಷಣಗಳನ್ನು ನೀಡೋದಿಲ್ಲ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ