ಭಾರತದಲ್ಲಿ ನಡೆಯುತ್ತಿರುವ ಅಮೆಜಾನ್ ಇಂಡಿಯಾದಲ್ಲಿ (Amazon Sale 2024 ) ಹಬ್ಬದ ಸೀಸನ್ ಸೇಲ್ ನಡೆಯುತ್ತಿದೆ. ಈ ಮಾರಾಟದ ಸಮಯದಲ್ಲಿ ಪ್ರಮುಖವಾಗಿ ಸ್ಮಾರ್ಟ್‌ಫೋನ್‌ಗಳಲ್ಲಿ ಅದ್ಭುತ ಕೊಡುಗೆಗಳು ಲಭ್ಯವಿವೆ. ನೀವು ಸಹ ಸ್ಮಾರ್ಟ್‌ಫೋನ್ (5G Smartphone) ಖರೀದಿಸಲು ಯೋಜಿಸುತ್ತಿದ್ದರೆ ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ಗಳಾಗಿರುವ Apple, OnePlus, iQoo ಮತ್ತು Realme ಮತ್ತು ಇತರ ಸ್ಮಾರ್ಟ್‌ಫೋನ್‌ಗಳ ಮೇಲೆ ಅಮೆಜಾನ್ ಭಾರಿ ರಿಯಾಯಿತಿಗಳನ್ನು ನೀಡುತ್ತಿದೆ. ಆದರೆ ಇಂದು ನಾವು ಅಮೆಜಾನ್ ಗ್ರೇಟ್ ಇಂಡಿಯಾ ಫೆಸ್ಟಿವಲ್ ಮಾರಾಟದ ಸಮಯದಲ್ಲಿ OnePlus 12R ಸ್ಮಾರ್ಟ್‌ಫೋನ್‌ನಲ್ಲಿ ಲಭ್ಯವಿರುವ ರಿಯಾಯಿತಿಯ ಬಗ್ಗೆ ಹೇಳುತ್ತಿದ್ದೇವೆ. ಈ ಫೋನ್ ಅನ್ನು ಪ್ರಸ್ತುತ ಬರೋಬ್ಬರಿ 8000 ರೂಪಾಯಿಗಳ ರಿಯಾಯಿತಿಯೊಂದಿಗೆ ಖರೀದಿಸಬಹುದು.
Also Read: Electric Flying Taxi: ಶೀಘ್ರದಲ್ಲೇ ಬೆಂಗಳೂರಿನ ಈ 3 ಗಂಟೆಗಳ ಪ್ರಯಾಣ ಕೇವಲ 20 ನಿಮಿಷಗಳಿಗೆ ಬದಲಾಗಲಿದೆ!
OnePlus 12R ಸ್ಮಾರ್ಟ್‌ಫೋನ್‌ನ 8GB RAM ಮತ್ತು 256GB ಸ್ಟೋರೇಜ್ ರೂಪಾಂತರವು ಪ್ರಸ್ತುತ ಅಮೆಜಾನ್‌ನಲ್ಲಿ 42,999 ರೂಗಳಲ್ಲಿ ಪಟ್ಟಿಮಾಡಲಾಗಿದೆ. ಅಮೆಜಾನ್ ಗ್ರೇಡ್ ಇಂಡಿಯನ್ ಫೆಸ್ಟಿವ್ ಸೇಲ್‌ನಲ್ಲಿ ಕಂಪನಿಯು ಈ ಫೋನ್‌ನಲ್ಲಿ ಶೇಕಡಾ 12 ರಷ್ಟು ನೇರ ರಿಯಾಯಿತಿಯನ್ನು ನೀಡುತ್ತಿದೆ. ಈ ರಿಯಾಯಿತಿಯೊಂದಿಗೆ OnePlus 13R ಸ್ಮಾರ್ಟ್‌ಫೋನ್‌ನ ಬೆಲೆ ರೂ 37,999 ಕ್ಕೆ ಇಳಿಯುತ್ತದೆ. ಇದರೊಂದಿಗೆ ಗ್ರಾಹಕರು SBI ಕ್ರೆಡಿಟ್ ಕಾರ್ಡ್‌ನಲ್ಲಿ 10% ಪ್ರತಿಶತ ತ್ವರಿತ ಕ್ಯಾಶ್‌ಬ್ಯಾಕ್ ಅನ್ನು ಸಹ ಪಡೆಯುತ್ತಿದ್ದಾರೆ. ಬ್ಯಾಂಕ್ ಕ್ಯಾಶ್ಬ್ಯಾಕ್ ನಂತರ ಈ OnePlus ಫೋನ್ ಅನ್ನು ರೂ 34,999 ಗೆ ಖರೀದಿಸಬಹುದು.
ಈ ರೀತಿಯಾಗಿ ಒನ್‌ಪ್ಲಸ್‌ನ ಕೈಗೆಟುಕುವ ಫೋನ್‌ಗಳನ್ನು ರೂ 8000 ಅಗ್ಗವಾಗಿ ಖರೀದಿಸಬಹುದು. ಖರೀದಿದಾರರು ತಮ್ಮ ಹಳೆಯ ಸ್ಮಾರ್ಟ್‌ಫೋನ್ ಅನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಹೆಚ್ಚುವರಿ ರಿಯಾಯಿತಿಯನ್ನು ಪಡೆಯಬಹುದು. ವಿನಿಮಯದಲ್ಲಿ ನೀವು ಎಷ್ಟು ಪ್ರಯೋಜನವನ್ನು ಪಡೆಯುತ್ತೀರಿ ಎಂಬುದು ಹಳೆಯ ಫೋನ್ನ ಮಾದರಿ ಮತ್ತು ಅದರ ಸ್ಥಿತಿಯನ್ನು ಅವಲಂಬಿಸಿರುತ್ತದೆ. OnePlus 12R ಫೋನ್ ಅನ್ನು ಸನ್‌ಸೆಟ್ ಡ್ಯೂನ್, ಐರನ್ ಗ್ರೇ ಮತ್ತು ಕೂಲ್ ಬ್ಲೂ ಎಂಬ ಮೂರು ಬಣ್ಣ ಆಯ್ಕೆಗಳಲ್ಲಿ ಪರಿಚಯಿಸಲಾಗಿದೆ.
ಮೊದಲಿಗೆ ಇದರ ಈ ಸ್ಮಾರ್ಟ್‌ಫೋನ್ 6.78 ಇಂಚಿನ AMOLED ಡಿಸ್‌ಪ್ಲೇಯನ್ನು ಹೊಂದಿದೆ. ಇದರ ರಿಫ್ರೆಶ್ ದರ 120Hz ಆಗಿದೆ. ಇದರ ಡಿಸ್ಪ್ಲೇ LTPO 4.0 ತಂತ್ರಜ್ಞಾನವನ್ನು ಬೆಂಬಲಿಸುತ್ತದೆ. ಈ ಸ್ಕ್ರೀನ್ ಅಡಾಪ್ಟಿವ್ ರಿಫ್ರೆಶ್ ದರದೊಂದಿಗೆ ಬರುತ್ತದೆ. ಇದರ ಗರಿಷ್ಠ ಹೊಳಪು 4500 ನಿಟ್‌ಗಳೊಂದಿಗೆ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ರಕ್ಷಣೆಯೊಂದಿಗೆ ಬರುತ್ತದೆ. OnePlus 12R ಸ್ಮಾರ್ಟ್ಫೋನ್ ಈ ಫೋನ್ ಟ್ರಿಪಲ್ ಹಿಂಬದಿಯ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಇದರ ಪ್ರೈಮರಿ ಕ್ಯಾಮೆರಾ 50MP ಸೋನಿ IMX890 ಸೆನ್ಸರ್ ಅನ್ನು ಹೊಂದಿದ್ದು ಇದರೊಂದಿಗೆ ಮ್ಯಾಕ್ರೋ ಮತ್ತು ಅಲ್ಟ್ರಾ-ವೈಡ್ ಕ್ಯಾಮೆರಾ ಲೆನ್ಸ್ ಕೂಡ ಫೋನ್‌ನಲ್ಲಿ ಲಭ್ಯವಿದೆ. ಫೋನ್ 16MP ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ.
OnePlus 12R ಸ್ಮಾರ್ಟ್ಫೋನ್ Qualcomm Snapdragon 8 Gen 2 ಚಿಪ್‌ಸೆಟ್ ಅನ್ನು ಹೊಂದಿದೆ. ಇದು 4nm ನಲ್ಲಿ ನಿರ್ಮಿಸಲಾದ ಆಕ್ಟಾ-ಕೋರ್ ಚಿಪ್‌ಸೆಟ್ ಆಗಿದೆ. ಇದು ಟ್ರಿನಿಟಿ ಎಂಜಿನ್ ಅನ್ನು ಬೆಂಬಲಿಸುತ್ತದೆ. ಈ ಫೋನ್ 8GB LPDDR5X RAM ಮತ್ತು UFS 4.0 ಸಂಗ್ರಹಣೆಯನ್ನು ಬೆಂಬಲಿಸುತ್ತದೆ. OnePlus 12R ಸ್ಮಾರ್ಟ್‌ಫೋನ್ 5500mAh ಬ್ಯಾಟರಿಯನ್ನು ಹೊಂದಿದೆ. ಇದು 100W SUPERVOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. ಈ ಫೋನ್ ಶೂನ್ಯದಿಂದ 100 ಪ್ರತಿಶತದಷ್ಟು ಚಾರ್ಜ್ ಮಾಡಲು ಕೇವಲ 26 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ.