OnePlus 12R ಮೊದಲ ಮಾರಾಟ ಸೂಪರ್‌ಹಿಟ್! ಈ ಫೀಚರ್‌ಗಳ ಕಾರಣ ಕೆಲವೇ ಗಂಟೆಗಳಲ್ಲಿ ಎಲ್ಲ Sold Out | Tech News

OnePlus 12R ಮೊದಲ ಮಾರಾಟ ಸೂಪರ್‌ಹಿಟ್! ಈ ಫೀಚರ್‌ಗಳ ಕಾರಣ ಕೆಲವೇ ಗಂಟೆಗಳಲ್ಲಿ ಎಲ್ಲ Sold Out | Tech News
HIGHLIGHTS

OnePlus 12R ಮುಂದಿನ ಮಾರಾಟವನ್ನು 13ನೇ ಫೆಬ್ರವರಿ 2024 ಕ್ಕೆ ಪ್ರಕಟಿಸಿದೆ.

ಜನರನ್ನು ಆಕರ್ಷಿಸಲು OnePlus Buds Z2 ಇಯರ್‌ಬಡ್‌ಗಳನ್ನು ಸಹ ಈ ಮಾರಾಟದಲ್ಲಿ ಉಚಿತವಾಗಿ ನೀಡಲಾಗುತ್ತಿದೆ.

OnePlus 12R ಸ್ಮಾರ್ಟ್ಫೋನ್ ಪ್ರೈಮರಿ ಸೆನ್ಸರ್ 50MP ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸರ್ ಒಳಗೊಂಡಿದೆ.

ಭಾರತದಲ್ಲಿ ಒನ್‌ ಪ್ಲಸ್‌ ತನ್ನ ಲೇಟೆಸ್ಟ್ OnePlus 12R ಸ್ಮಾರ್ಟ್ಫೋನ್ ಅನ್ನು ಕೈಗೆಟಕುವ ಬೆಲೆಗೆ ಬಿಡುಗಡೆಗೊಳಿಸಿದ್ದು ಇದರ ಮಾರಾಟವನ್ನು ನೆನ್ನೆ ಅಂದ್ರೆ 6ನೇ ಫೆಬ್ರವರಿ 2024 ರಂದು ಹಮ್ಮಿಕೊಳ್ಳಳಾಗಿತ್ತು. ಇದರ ಮೊದಲ ಮಾರಾಟದಲ್ಲೇ ಕಂಪನಿಯ ಈ ಹೊಸ 5G ಫೋನ್ ಅತ್ಯುತ್ತಮ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಏಕೆಂದರೆ ಮಾರಾಟ ಶುರುವಾಗಿ ಕೆಲವೇ ಘಂಟೆಗಳಲ್ಲಿ ಸಂಪೂರ್ಣ ಸ್ಟಾಕ್ ಖಾಲಿಯಾಗಿದೆ. ಈ ಮಾರಾಟವನ್ನು ಅಮೆಜಾನ್ ಇಂಡಿಯಾ ಮತ್ತು ಇತರ ವೆಬ್‌ಸೈಟ್‌ಗಳಲ್ಲಿ ಮಧ್ಯಾಹ್ನ 12:00 ಗಂಟೆಗೆ ಪ್ರಾರಂಭಿಸಲಾಗಿತ್ತು ಜನರನ್ನು ಆಕರ್ಷಿಸಲು OnePlus Buds Z2 ಇಯರ್‌ಬಡ್‌ಗಳನ್ನು ಸಹ ಈ ಮಾರಾಟದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಆದರೆ ಈ ಸ್ಮಾರ್ಟ್ಫೋನ್ ಈ ರೀತಿ ತಕ್ಷಣ ಖಾಲಿಯಾಗಲು ಕಾರಣವೇನು ಎನ್ನುವುದನ್ನು ಒಂದಿಷ್ಟು ಮಾಹಿತಿ ಈ ಕೆಳಗಿದೆ.

Also Read: Valentine’s Day Realme Sale: ಪ್ರೇಮಿಗಳ ದಿನಕ್ಕೆ ಈ Narzo ಸೀರೀಸ್ ಸ್ಮಾರ್ಟ್‌ಫೋನ್‌ಗಳ ಮೇಲೆ ಭರ್ಜರಿ ಆಫರ್‌ಗಳು!

OnePlus 12R ಸ್ಮಾರ್ಟ್ಫೋನ್ ಮಾರಾಟದ ಆಫರ್!

ಒನ್‌ ಪ್ಲಸ್‌ ತನ್ನ ಹೊಸ ಫೋನ್ OnePlus 12R ಜನರನ್ನು ಆಕರ್ಷಿಸಲು OnePlus Buds Z2 ಇಯರ್‌ಬಡ್‌ಗಳನ್ನು ಸಹ ಈ ಮಾರಾಟದಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಆದರೆ ಈ ಬಾರಿ ನೀವು OnePlus Buds Z2 ಇಯರ್‌ಬಡ್‌ಗಳನ್ನು ಉಚಿತವಾಗಿ ಪಡೆಯುವುದಿಲ್ಲ. ಆದರೆ ಇದರ ಸ್ಥಾನದಲ್ಲಿ ICICI ಮತ್ತು OneCard ಬಳಕೆದಾರರಿಗೆ 1,000 ರೂಪಾಯಿಗಳ ರಿಯಾಯಿತಿಯನ್ನು ನೀಡಲಾಗುತ್ತದೆ. ಈ ಮೊದಲ ಮಾರಾಟವು ಕೇವಲ 3-4 ಗಂಟೆಗಳ ಕಾಲ ನಡೆಯಿತು ಇದನ್ನು ಅನೇಕ ಜನರು ಖರೀದಿಸಿದ್ದಾರೆ. OnePlus ಮಾರಾಟದ ಸಮಯವನ್ನು ವಿಸ್ತರಿಸಬೇಕು ಎಂದು ಕೆಲವರು ಹೇಳಿದರು. ಮೊದಲ ಮಾರಾಟದಲ್ಲಿ ಎಷ್ಟು ಫೋನ್‌ಗಳು ಮಾರಾಟವಾಗಿವೆ ಎಂಬುದರ ಕುರಿತು ಕಂಪನಿ ಪ್ರಸ್ತುತ ಇನ್ನೂ ಅಧಿಕೃತ ಮಾಹಿತಿಗಳಿಲ್ಲ.

ಒನ್‌ಪ್ಲಸ್‌ 12R ಸ್ಮಾರ್ಟ್ಫೋನ್ ಫೀಚರ್‌ಗಳು

ಆಕರ್ಷಕ ಡಿಸ್ಪ್ಲೇ: ಈ ಸ್ಮಾರ್ಟ್ಫೋನ್ ನಿಮಗೆ 6.78 ಇಂಚು ದೊಡ್ಡ ಮತ್ತು ಬಾಗಿದ AMOLED ಡಿಸ್ಪ್ಲೇಯನ್ನು ಇದು ಗಾಜಿನ ಬಲವಾದ ಪದರದಿಂದ ಗೊರಿಲ್ಲಾ ಗ್ಲಾಸ್ ವಿಕ್ಟಸ್ 2 ಮೂಲಕ ರಕ್ಷಿಸಲ್ಪಟ್ಟಿದೆ. ಸ್ಮಾರ್ಟ್ಫೋನ್ ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್ ಅನ್ನು ಸಹ ಒಳಗೊಂಡಿದೆ. ಅಲ್ಲದೆ ಸ್ಪಷ್ಟ ಮತ್ತು ತೀಕ್ಷ್ಣವಾದ ಇಮೇಜ್ ಮತ್ತು ವಿಡಿಯೋಗಳನ್ನು ವಿಸ್ಕಾಹಿಸಲು 1.5K ರೆಸಲ್ಯೂಶನ್ ಜೊತೆಗೆ ಸ್ಕ್ರೀನ್ ಅತ್ಯಂತ ವೇಗವಾಗಿ 120Hz ರಿಫ್ರೆಶ್ ಆಗುತ್ತದೆ. ಫೋನ್ ಇದು ಸ್ಕ್ರೋಲಿಂಗ್ ಮತ್ತು ಗೇಮಿಂಗ್‌ನ ಮೋಜನ್ನು ದ್ವಿಗುಣಗೊಳಿಸುತ್ತ ಇದರ ಬ್ರೈಟ್‌ನೆಸ್ 4,500 ನಿಟ್‌ಗಳವರೆಗೆ ಹೊಂದಿದೆ ಅಂದರೆ ನೀವು ಸೂರ್ಯನ ಬೆಳಕಿನಲ್ಲಿಯೂ ಸ್ಕ್ರಿನ್ ಸ್ಪಷ್ಟವಾಗಿ ಬಳಸಲು ಸಾಧ್ಯವಾಗುತ್ತದೆ.

ಫಾಸ್ಟ್ ಪ್ರೊಸೆಸರ್: ಇದರಲ್ಲಿ ಇತ್ತೀಚಿನ ಆಪರೇಟಿಂಗ್ ಸಿಸ್ಟಮ್ Android 14 ಮತ್ತು OxygenOS 1 ನೊಂದಿಗೆ ಬರುತ್ತದೆ. ನೀವು ಮುಂದಿನ 3 ಪ್ರಮುಖ ಆಂಡ್ರಾಯ್ಡ್ ಅಪ್‍ಡೇಟ್‍ಗಳನ್ನು ಮತ್ತು 4 ವರ್ಷಗಳವರೆಗೆ ಸೆಕ್ಯೂರಿಟಿ ಅಪ್‍ಡೇಟ್‍ಗಳನ್ನು ಪಡೆಯುತ್ತೀರಿ. ಫೋನ್ Qualcomm Snapdragon 8 Gen 2 ಚಿಪ್ ಅನ್ನು ಹೊಂದಿದೆ. ಇದು ಇದೀಗ ಮಾರುಕಟ್ಟೆಯಲ್ಲಿ ವೇಗವಾದ ಚಿಪ್‌ಗಳಲ್ಲಿ ಒಂದಾಗಿದೆ. ಇದರೊಂದಿಗೆ ಫೋನ್ ಉತ್ತಮ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ. ಜೊತೆಗೆ ಇದು LPDDR5x RAM ಮತ್ತು UFS 3.1 ಅಥವಾ UFS 4.0 ಸ್ಟೋರೇಜ್ ಹೊಂದಿದೆ.

ಉತ್ತಮ ಕ್ಯಾಮೆರಾ ಮತ್ತು ಬ್ಯಾಟರಿ: ಸ್ಮಾರ್ಟ್ಫೋನ್ ನಿಮಗೆ ಉತ್ತಮವಾದ ಸೆಲ್ಫೀಗಳನ್ನು ತೆಗೆಯಲು 16MP ಮೆಗಾಪಿಕ್ಸೆಲ್ ಮುಂಭಾಗದ ಕ್ಯಾಮೆರಾವನ್ನು ಹೊಂದಿದೆ. ಇದರ ಹಿಂಭಾಗದಲ್ಲಿ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಪ್ರೈಮರಿ ಸೆನ್ಸರ್ 50MP ಮೆಗಾಪಿಕ್ಸೆಲ್ ಸೋನಿ IMX890 ಸೆನ್ಸರ್ ಒಳಗೊಂಡಿದೆ. ಎರಡನೇಯದು 8MP ಮೆಗಾಪಿಕ್ಸೆಲ್ ಅಲ್ಟ್ರಾವೈಡ್ ಮತ್ತು ಕೊನೆಯದಾಗಿ 2MP ಮ್ಯಾಕ್ರೋ ಸೆನ್ಸರ್ ಒಳಗೊಂಡಿದೆ. ಸ್ಮಾರ್ಟ್ಫೋನ್ 5500mAh ದೊಡ್ಡ ಬ್ಯಾಟರಿಯನ್ನು ಹೊಂದಿದ್ದು ಇದರ ಚಾರ್ಜಿಂಗ್ ಕೂಡ ಅತ್ಯಂತ ವೇಗವಾಗಿದ್ದು 100W ಚಾರ್ಜರ್‌ನೊಂದಿಗೆ ಕೆಲವೇ ನಿಮಿಷಗಳಲ್ಲಿ ಫೋನ್ ಸಂಪೂರ್ಣವಾಗಿ ಚಾರ್ಜ್ ಮಾಡುತ್ತದೆ. ಮುಂದಿನ ಮಾರಾಟವನ್ನು 13ನೇ ಫೆಬ್ರವರಿ 2024 ಕ್ಕೆ ಪ್ರಕಟಿಸಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo