ಸದ್ದಿಲ್ಲದೇ OnePlus 12R Genshin Impact Edition ಆವೃತ್ತಿ ಬಿಡುಗಡೆ! ಬೆಲೆ ಮತ್ತು ವಿಶೇಷತೆಗಳೇನು?

ಸದ್ದಿಲ್ಲದೇ OnePlus 12R Genshin Impact Edition ಆವೃತ್ತಿ ಬಿಡುಗಡೆ! ಬೆಲೆ ಮತ್ತು ವಿಶೇಷತೆಗಳೇನು?
HIGHLIGHTS

OnePlus 12R ಅನ್ನು ಕಳೆದ ತಿಂಗಳು ಅಂದ್ರೆ 23ನೇ ಜನವರಿ 2024 ರಂದು ಅಧಿಕೃತವಾಗಿ ಬಿಡುಗಡೆಗೊಳಿಸಿತು.

OnePlus 12R Genshin Impact Edition ಎಂಬ ಹೊಸ ಆವೃತ್ತಿಯೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ.

ಏಕೈಕ ವೇರಿಯೆಂಟ್ 16GB RAM ಮತ್ತು 256GB ಸ್ಟೋರೇಜ್ ಮಾದರಿಗೆ ಬರೋಬ್ಬರಿ 49,999 ರೂಗಳಾಗಿವೆ.

OnePlus 12R Genshin Impact Edition: ಭಾರತದಲ್ಲಿ ಒನ್​ಪ್ಲಸ್ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ OnePlus 12R ಅನ್ನು ಕಳೆದ ತಿಂಗಳು ಅಂದ್ರೆ 23ನೇ ಜನವರಿ 2024 ರಂದು ಅಧಿಕೃತವಾಗಿ ಬಿಡುಗಡೆಗೊಳಿಸಿತು. ಇದರ ಮೊದಲ ಮಾರಾಟ ಸಿಕ್ಕಾಪಟ್ಟೆ ಅದ್ದೂರಿಯಾಗಿದ್ದು ಬಳಕೆದಾರರೆ ಮತ್ತೊಂದು ಸೇಲ್ ಆರಂಭಿಸಲು ಸೋಶಿಯಲ್ ಮೀಡಿಯಾಗಳ ಮೂಲಕ ಒನ್​ಪ್ಲಸ್ ಕಂಪನಿಗೆ ಕೇಳಿಕೊಳ್ಳಗಿತ್ತು ಇದರಿಂದಾಗಿ ಕಂಪನಿಯೂ ಮತ್ತೆ 72 ಗಂಟೆಯ ನಂತರ ಪುನಃ OnePlus 12R ಫ್ಲಾಶ್ ಸೇಲ್ ಆರಂಭಿಸಿ ತಮ್ಮ ಫ್ಯಾನ್‌ಗಳ ಖುಷಿಗೆ ಕಾರಣವಾಗಿತ್ತು.

Also Read: ಎಲ್ಲ ಕಡೆ WhatsApp ನಂಬರ್ ನೀಡುವ ಅಗತ್ಯವಿಲ್ಲ! QR Code ಮಾದರಿಯಲ್ಲಿ ಶೇರ್ ಮಾಡಲು ಹೊಸ ಫೀಚರ್!

ಹಾಗಾದ್ರೆ ನೀವೇ ಯೋಚನೇ ಮಾಡಿ ಈ ಸ್ಮಾರ್ಟ್ಫೋನ್ ಅದೆಷ್ಟು ಫೀಚರ್ ಮತ್ತು ವಿಶೇಷತೆಗಳನ್ನು ಹೊಂದಿರಬಹುದು. ಈ ಮೂಲಕ ಒನ್​ಪ್ಲಸ್ ಈಗ ಸದ್ದಿಲ್ಲದೇ ಇದರ Genshin Impact Edition ಭಾರತದಲ್ಲಿ ಬಿಡುಗಡೆಗೊಳಿಸಿ ಮಾರಾಟ ಮಾಡುತ್ತಿದೆ. ಕಂಪನಿ ಅದೇ ಫೋನ್ ಅನ್ನು OnePlus 12R Genshin Impact Edition ಎಂಬ ಹೊಸ ಆವೃತ್ತಿಯೊಂದಿಗೆ ಮಾರುಕಟ್ಟೆಗೆ ಕಾಲಿಟ್ಟಿದೆ. ಇದನ್ನು ಮುಖ್ಯವಾಗಿ ಗೇಮರ್‌ಗಳಿಗೆ ಗುರಿಯನ್ನಾಗಿಸಿಕೊಂಡಿದ್ದು ಇದರ ಲುಕ್ ಡಿಸೈನಿಂಗ್, ಬೆಲೆ ಮತ್ತು ಫೀಚರ್ಗಳ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಮುಂದೆ ತಿಳಿಯಿರಿ.

OnePlus 12R Genshin Impact Edition

ಭಾರತದಲ್ಲಿ ಒನ್​ಪ್ಲಸ್ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಲೇಟೆಸ್ಟ್ OnePlus 12R Genshin Impact Edition ಅನ್ನು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಇದನ್ನು ತರಲು ಕಂಪನಿ miHoYo ಆಕ್ಷನ್ ರೋಲ್-ಪ್ಲೇಯಿಂಗ್ ಗೇಮ್ ಮೂಲಕ ಪ್ರೇರಿತವಾದ ವಿಶಿಷ್ಟ ವಿನ್ಯಾಸವನ್ನು ಫೋನ್ ಹೊಂದಿದೆ. ಅಲ್ಲದೆ ಹ್ಯಾಂಡ್‌ಸೆಟ್ ಗೇಮಿಂಗ್-ಫೋಕಸ್ಡ್ ಆಪ್ಟಿಮೈಸೇಶನ್‌ಗಳೊಂದಿಗೆ ಬರುತ್ತದೆ. ಮತ್ತು ಕಸ್ಟಮೈಸೇಶನ್‌ಗಾಗಿ ಫೋನ್ ಹಿಂಭಾಗದಲ್ಲಿ Keqing ಥೀಮ್ ಕೇಸ್‌ನಂತಹ ಬಿಡಿಭಾಗಗಳೊಂದಿಗೆ ಈ ಆವೃತ್ತಿಯು ಎಲೆಕ್ಟ್ರಿಕ್-ಥೀಮ್ ಫಿನಿಶ್ ಹೊಂದಿದೆ.

ಭಾರತದಲ್ಲಿ OnePlus 12R Genshin Impact Edition ಬೆಲೆ

ಒನ್​ಪ್ಲಸ್ ಕಂಪನಿ ಈ ಆವೃತ್ತಿಯಲ್ಲಿ ಕೇವಲ ಒಂದೇ ಒಂದು ಸ್ಮಾರ್ಟ್ಫೋನ್ ರೂಪಾಂತರವನ್ನು ಮಾತ್ರ ಬಿಡುಗಡೆಗೊಳಿಸಿದೆ. ಅಂದ್ರೆ ನಿಮಗೆ OnePlus 12R Genshin Impact Edition ಬೆಲೆ ಏಕೈಕ ವೇರಿಯೆಂಟ್ 16GB RAM ಮತ್ತು 256GB ಸ್ಟೋರೇಜ್ ಮಾದರಿಗೆ ಬರೋಬ್ಬರಿ 49,999 ರೂಗಳಾಗಿವೆ. ಈ ಸ್ಮಾರ್ಟ್ಫೋನ್ ಎಲೆಕ್ಟ್ರೋ ವೈಲೆಟ್ ಬಣ್ಣದ ಆಯ್ಕೆಯಲ್ಲಿ ಬರುತ್ತದೆ. ಅಲ್ಲದೆ ಪ್ರಸ್ತುತ ಕಂಪನಿಯ ಇಂಡಿಯಾ ವೆಬ್‌ಸೈಟ್ ಮೂಲಕ ಮಾರಾಟಕ್ಕೆ ಇದೆ. ಆದರೆ ನೀವು ನೆನಪಿಟ್ಟುಕೊಳ್ಳಲು ಇದರ ಸಾಮಾನ್ಯ ರೂಪಾಂತರದ OnePlus 12R ಆವೃತ್ತಿಯನ್ನು ಅಂದ್ರೆ 8GB RAM +128GB ಸ್ಟೋರೇಜ್ ಕಾನ್ಫಿಗರೇಶನ್‌ಗಾಗಿ 39,999 ಬೆಲೆಯೊಂದಿಗೆ ಪ್ರಾರಂಭಿಸಲಾಯಿತು.

ಒನ್​ಪ್ಲಸ್ 12R Genshin Impact Edition ವಿಶೇಷಣಗಳು

ಈ ಹೊಸ OnePlus 12R Genshin Impact Edition ಮಾದರಿಗೆ ಯಾವುದೇ ಹೆಚ್ಚುವರಿಯ ಹಾರ್ಡ್ವೇರ್ ಬದಲಾವಣೆಗಳಿಲ್ಲ ಸಾಮಾನ್ಯ ರೂಪಾಂತರದಂತೆ ಎಲ್ಲ ಫೀಚರ್ ಮತ್ತು ವಿಶೇಷಣಗಳನ್ನು ಹೊಂದಿದೆ. OnePlus 12R Genshin Impact Edition ಸ್ಮಾರ್ಟ್ಫೋನ್ ನಿಮಗೆ ಅದೇ Snapdragon 8 Gen 2 ಪ್ರೊಸೆಸರ್ನೊಂದಿಗೆ ಫೋನ್ 16GB LPDDR5x RAM ಮತ್ತು 256GB UFS 3.1 ಸ್ಟೋರೇಜ್‌ನೊಂದಿಗೆ ಚಲಿಸುತ್ತದೆ. ಸ್ಮಾರ್ಟ್ಫೋನ್ ಫೋನ್ ಆಂಡ್ರಾಯ್ಡ್ 14 ಆಧಾರಿತ OxygenOS 14 ನಲ್ಲಿ ಕಾರ್ಯನಿರ್ವಹಿಸುತ್ತದೆ. ಇನ್ ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸೆನ್ಸರ್‌ನೊಂದಿಗೆ ಬರುತ್ತದೆ.

OnePlus 12R Genshin Impact Edition ಸ್ಮಾರ್ಟ್ಫೋನ್ 6.78 ಇಂಚಿನ 1.5K (1264 x 2780 ಪಿಕ್ಸೆಲ್‌ ರೆಸುಲ್ಯೂಷನ್ ಜೊತೆಗೆ LTPO 4.0 AMOLED ಡಿಸ್ಪ್ಲೇಯನ್ನು ಹೊಂದಿದೆ. ಅಲ್ಲದೆ ಫೋನ್ ನಿಮಗೆ ಇದರಲ್ಲಿ ಟ್ರಿಪಲ್ ಬ್ಯಾಕ್ ಹಿಂಬದಿಯ ಕ್ಯಾಮೆರಾಗಳನ್ನು ಹೊಂದಿದೆ. ಫೋನ್ ಟ್ರಿಪಲ್ ಬ್ಯಾಕ್ ಕ್ಯಾಮೆರಾದಲ್ಲಿ 50MP ಮೆಗಾಪಿಕ್ಸೆಲ್ ಪ್ರೈಮರಿ ಲೆನ್ಸ್ ಸೋನಿ IMX890 ಸೆನ್ಸರ್‌ನೊಂದಿಗೆ ಮತ್ತೊಂದು 8MP ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್-ಆಂಗಲ್ ಕ್ಯಾಮೆರಾ ಮತ್ತು ಕೊನೆಯದಾಗಿ 2MP ಮೆಗಾಪಿಕ್ಸೆಲ್ ಮ್ಯಾಕ್ರೋ ಕ್ಯಾಮೆರಾವನ್ನು ಒಳಗೊಂಡಿದೆ. ಅಲ್ಲದೆ ಫೋನ್ 16MP ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್ಫೋನ್ 5500mAh ಬ್ಯಾಟರಿಯನ್ನು 100W SUPERVOOC ಫಾಸ್ಟ್ ಚಾರ್ಜ್ ಸಪೋರ್ಟ್ ಮಾಡುತ್ತದೆ. ಇದರ ಕನೆಕ್ಟಿವಿಟಿ ಆಯ್ಕೆಗಳಲ್ಲಿ 5G, 4G LTE, Wi-Fi 7, ಬ್ಲೂಟೂತ್ 5.3, GPS ಮತ್ತು NFC ಸೇರಿವೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo