ಒನ್ಪ್ಲಸ್ ತನ್ನ ಮುಂಬರುವ ಪ್ರೀಮಿಯಂ ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್ ಮುಂದಿನ ವಾರ ತನ್ನ ತಾಯ್ನಾಡಿನಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಈ ಮುಂಬರಲಿರುವ OnePlus 12 ಅನ್ನು 5ನೇ ಡಿಸೆಂಬರ್ 2023 ರಂದು ಚೀನಾದಲ್ಲಿ ಪ್ರಾರಂಭಿಸಲು ನಿರ್ಧರಿಸಲಾಗಿದೆ. ಇದರೊಂದಿಗೆ ಹೆಚ್ಚುವರಿಯಾಗಿ ಈಗಾಗಲೇ UK, US ಮತ್ತು ಭಾರತದಲ್ಲಿನ ಅಧಿಕೃತ ಒನ್ಪ್ಲಸ್ ವೆಬ್‌ಸೈಟ್‌ನಲ್ಲಿ ಈಗಾಗಲೇ ಈ ಫೋನ್ ಅನ್ನು ಕಂಪನಿ ಪಟ್ಟಿ ಮಾಡಿದೆ. ಒನ್ಪ್ಲಸ್ ಚೀನಾ ಅಧ್ಯಕ್ಷ Li Jie ಅವರು Weibo ನಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ. ಅಲ್ಲದೆ ಫೋನ್ ವೈರ್‌ಲೆಸ್ ಚಾರ್ಜಿಂಗ್ ಸಾಮರ್ಥ್ಯಗಳೊಂದಿಗೆ ಸೋನಿ ಸೆನ್ಸರ್‌ಗಳನ್ನು ಹೊಂದಿರುವುದಾಗಿ ತಿಳಿಸಿದೆ.
Also Read: 2 ವರ್ಷಗಳಿಂದ ಬಳಸದ ನಿಮ್ಮ Google Accounts ಡಿಲೀಟ್ ಮಾಡಲು ಮುಂದಾಗಿರುವ ಗೂಗಲ್!
ಇದು ಕರ್ವ್ ಬೆಝೆಲ್ ಜೊತೆಗೆ ಸ್ಲಿಮ್ ಬೆಜೆಲ್‌ಗಳು ಮತ್ತು ಮುಂಭಾಗದ ಕ್ಯಾಮೆರಾವನ್ನು ಇರಿಸಲು ಡಿಸ್‌ಪ್ಲೇಯ ಮೇಲ್ಭಾಗದಲ್ಲಿ ಜೋಡಿಸಲಾದ ಪಂಚ್ ಹೋಲ್ ಕಟೌಟ್ ಅನ್ನು ಸಹ ಹೊಂದಿದೆ. ಒನ್ಪ್ಲಸ್ 12 ನಲ್ಲಿನ ಪ್ರಮುಖ ವಿನ್ಯಾಸ ಬದಲಾವಣೆಯೆಂದರೆ ಎಚ್ಚರಿಕೆ ಸ್ಲೈಡರ್ ಅನ್ನು ಫೋನ್‌ನ ಎಡಭಾಗಕ್ಕೆ ಬದಲಾಯಿಸುವುದು. ಇದು ಒನ್ಪ್ಲಸ್ ಗೆ ಹೊಸ ಇಂಟಿಗ್ರೇಟೆಡ್ ಆಂಟೆನಾವನ್ನು ಪರಿಚಯಿಸಲು ಮತ್ತು ಹೊಸ ಸ್ಮಾರ್ಟ್‌ಫೋನ್ ಅಲರ್ಟ್ ಸ್ಲೈಡರ್ ಸಹ ಹೊಂದಿದೆ.
ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ನಲ್ಲಿ ColorOS 14 ಇಂಟರ್ಫೇಸ್‌ನೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಫೋನ್ 2K ರೆಸಲ್ಯೂಶನ್ ಮತ್ತು 2600 ನಿಟ್ಸ್ ಬ್ರೈಟ್‌ನೆಸ್ ಹೊಂದಿರುವ ProXDR ಡಿಸ್ಪ್ಲೇಯೊಂದಿಗೆ ಸಜ್ಜುಗೊಂಡಿದೆ. ಇದಲ್ಲದೆ ಡಿಸ್ಪ್ಲೇಮೇಟ್ನಿಂದ ಡಿಸ್ಪ್ಲೇ A+ ರೇಟಿಂಗ್ ಅನ್ನು ಪಡೆದುಕೊಂಡಿದೆ. ಒನ್ಪ್ಲಸ್ 12 ಅಧಿಕೃತವಾಗಿ ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್‌ನಲ್ಲಿ ಕಾರ್ಯನಿರ್ವಹಿಸಲು ದೃಢೀಕರಿಸಲ್ಪಟ್ಟಿದೆ ಮತ್ತು 4ನೇ Gen ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾದಿಂದ ಬೆಂಬಲಿತವಾದ 64MP 3X ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಜೊತೆಗೆ ಪ್ರೈಮರಿ ಬ್ಯಾಕ್ ಕ್ಯಾಮೆರಾ Sony LYTIA LYT808 ಹೊಂದಿದೆ.
ಬ್ಯಾಕ್ ಪ್ಯಾನಲ್‌ನ ಮೇಲೆ ದೊಡ್ಡ ವೃತ್ತಾಕಾರದ ಕ್ಯಾಮರಾ ಮಾಡ್ಯೂಲ್ ಮಧ್ಯದಲ್ಲಿ ಹ್ಯಾಸೆಲ್‌ಬ್ಲಾಡ್ ಲೋಗೋದೊಂದಿಗೆ ಬರುತ್ತದೆ. ಕ್ವಾಡ್ ರಿಯರ್ ಕ್ಯಾಮೆರಾ ಸಿಸ್ಟಮ್ ಸೋನಿ LYTIA LYT808 ಪ್ರೈಮರಿ ಹಿಂಬದಿಯ ಕ್ಯಾಮೆರಾ ಸೆನ್ಸರ್ ಮತ್ತು 64MP ಮೆಗಾಪಿಕ್ಸೆಲ್ ಪೆರಿಸ್ಕೋಪ್ ಟೆಲಿಫೋಟೋ ಲೆನ್ಸ್ ಅನ್ನು ಹೊಂದಿರುತ್ತದೆ. ಉಳಿದ ವಿವರಗಳನ್ನು ಕಂಪನಿಯು ಇನ್ನೂ ದೃಢೀಕರಿಸಬೇಕಾಗಿದೆ. ಒನ್ಪ್ಲಸ್ 12 ಪೇಲ್ ಗ್ರೀನ್, ರಾಕ್ ಬ್ಲ್ಯಾಕ್ ಮತ್ತು ವೈಟ್ ಬಣ್ಣಗಳಲ್ಲಿ ಬರಲಿದೆ. ಒನ್ಪ್ಲಸ್ 12 ವಿನ್ಯಾಸವನ್ನು ಇತ್ತೀಚೆಗೆ ಕಂಪನಿಯು ತನ್ನ ಚೀನಾ ಬಿಡುಗಡೆಗೆ ಮುಂಚಿತವಾಗಿ ಬಹಿರಂಗಪಡಿಸಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ