OnePlus 12 Series ಸ್ಮಾರ್ಟ್‌ಫೋನ್ Powerful ಪ್ರೊಸೆಸರ್‌ನೊಂದಿಗೆ ಲಾಂಚ್! ಬೆಲೆ ಮತ್ತು ಫೀಚರ್ಗಳೇನು?

Updated on 24-Jan-2024
HIGHLIGHTS

OnePlus 12 Series ಒಟ್ಟು ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ.

ಇದ್ರಲ್ಲಿ OnePlus 12 ಮತ್ತು OnePlus 12R ಸ್ಮಾರ್ಟ್ಫೋನ್ ಸೇರಿವೆ.

ಭಾರತದಲ್ಲಿ OnePlus 12 Series ಅತ್ಯುತ್ತಮ ಕ್ಯಾಮೆರಾ, ಡಿಸ್ಪ್ಲೇ ಮತ್ತು Powerful ಪ್ರೊಸೆಸರ್‌ನೊಂದಿಗೆ ಪ್ರೀಮಿಯಂ ಸ್ಮಾರ್ಟ್‌ಫೋನ್ಗಳನ್ನು ಲೇಟೆಸ್ಟ್ ಫೀಚರ್ಗಳೊಂದಿಗೆ ಬಿಡುಗಡೆಗೊಳಿಸಿದೆ. ಈ OnePlus ಇಂದು ಒಟ್ಟು ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಇದ್ರಲ್ಲಿ OnePlus 12 ಮತ್ತು OnePlus 12R ಸ್ಮಾರ್ಟ್ಫೋನ್ ಸೇರಿವೆ. ಇವುಗಳಲ್ಲಿ ಹೆಚ್ಚು ಪ್ರೀಮಿಯಂ ಸ್ಮಾರ್ಟ್‌ಫೋನ್ OnePlus 12 ಆಗಿದ್ದು ಇದು ಸ್ನಾಪ್‌ಡ್ರಾಗನ್ 8 Gen 3 ಪ್ರೊಸೆಸರ್‌ನಿಂದ ಚಾಲಿತವಾಗಿದೆ. ಮತ್ತು 16GB RAM ಅನ್ನು ಹೊಂದಿರುತ್ತದೆ. OnePlus 12R ಅನ್ನು 16GB RAM ನೊಂದಿಗೆ ಬಿಡುಗಡೆ ಮಾಡಲಾಗಿದೆ ಆದರೆ ಕಡಿಮೆ ವೆಚ್ಚದ ರೂಪಾಂತರವಾಗಿದೆ.

Also Read: 12GB RAM ಮತ್ತು 64MP ಕ್ಯಾಮೆರಾದ ಈ ಸ್ಮಾರ್ಟ್‌ಫೋನ್‌ ಕೇವಲ 9499 ರೂಗಳಿಗೆ ಲಭ್ಯ

OnePlus 12 Series ವೈಶಿಷ್ಟ್ಯ ಮತ್ತು ಫೀಚರ್ಗಳು

OnePlus 12 ಫೋನ್ 6.82 ಇಂಚಿನ ಕ್ವಾಡ್-HD+ LTPO OLED ಸ್ಕ್ರಿನ್ ಅನ್ನು ಹೊಂದಿದೆ. ಮತ್ತು Snapdragon 8 Gen 3 ಚಿಪ್‌ಸೆಟ್‌ನಿಂದ ಚಾಲಿತವಾಗಿದೆ. ಸ್ಮಾರ್ಟ್ಫೋನ್ ಹಿಂದಿನ ರೂಪಾಂತರಗಳಿಂದ ಹೆಚ್ಚು ಸುಧಾರಿತ ರೆಸಲ್ಯೂಶನ್ ಹೊಂದಿರುವ ಹ್ಯಾಸೆಲ್‌ಬ್ಲಾಡ್ ಕ್ಯಾಮೆರಾಗಳನ್ನು ಸಹ ಹೊಂದಿದೆ. OnePlus 12R ಸ್ಮಾರ್ಟ್‌ಫೋನ್ 6.78 ಇಂಚಿನ LTPO AMOLED ಡಿಸ್ಪ್ಲೇ ಜೊತೆಗೆ ಸ್ನಾಪ್‌ಡ್ರಾಗನ್ 8 Gen 3 ಚಿಪ್‌ಸೆಟ್ ಅನ್ನು ಹೊಂದಿದೆ. OnePlus 12R ಫೋನ್ 5500mAh ಬ್ಯಾಟರಿಯನ್ನು 100W ಫಾಸ್ಟ್ ವೈರ್ಡ್ ಚಾರ್ಜಿಂಗ್ ಮೂಲಕ ಬೆಂಬಲಿಸುತ್ತದೆ.

OnePlus 12 ಕ್ಯಾಮೆರಾವು 50MP ಸೋನಿ LYT-808 ಪ್ರೈಮರಿ ಲೆನ್ಸ್, 64MP ಟೆಲಿಫೋಟೋ ಕ್ಯಾಮೆರಾ ಮತ್ತು 48MP ಅಲ್ಟ್ರಾ-ವೈಡ್ ಆಂಗಲ್ ಲೆನ್ಸ್ ಅನ್ನು ಒಳಗೊಂಡಿದೆ. ಇದು 32MP ಮುಂಭಾಗದ ಕ್ಯಾಮೆರಾವನ್ನು ಸಹ ಹೊಂದಿದೆ. 5G ಫೋನ್ 5400mAh ಬ್ಯಾಟರಿಯನ್ನು ಹೊಂದಿದ್ದು ಅದು 100W SuperVOOC ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. OnePlus 12R ನ ಟ್ರಿಪಲ್ ಹಿಂಬದಿಯ ಕ್ಯಾಮೆರಾವು 50MP ಪ್ರೈಮರಿ ಸೆನ್ಸರ್ 8MP ಅಲ್ಟ್ರಾ ವೈಡ್ ಆಂಗಲ್ ಲೆನ್ಸ್ ಮತ್ತು 2MP ಮ್ಯಾಕ್ರೋ ಲೆನ್ಸ್ ಮತ್ತು 16MP ಮುಂಭಾಗದ ಕ್ಯಾಮೆರಾವನ್ನು ಒಳಗೊಂಡಿದೆ.

ಒನ್ ಪ್ಲಸ್ 12 Series ಭಾರತದಲ್ಲಿ ಬೆಲೆ ಮತ್ತು ಲಭ್ಯತೆ

ಮೊದಲಿಗೆ ಈ OnePlus 12 ಸ್ಮಾರ್ಟ್ ಫೋನ್ ಭಾರತದಲ್ಲಿ 30ನೇ ಜನವರಿ 2024 ರಂದು ಮಾರಾಟವಾಗಲಿದೆ ಎಂದು ಹೇಳಲಾಗಿದೆ. OnePlus 12 ಸ್ಟೋರೇಜ್ ಆಧಾರದ ಮೇಲೆ ಎರಡು ರೂಪಾಂತರಗಳಲ್ಲಿ ಬರುತ್ತದೆ. ಮೊದಲನೆಯದು 12GB RAM + 256GB ರೂಪಾಂತರವು ₹64,999 ರೂಗಳಿಗೆ ಲಭ್ಯವಾದರೆ ಇದರ 16GB RAM + 512GB ಸ್ಟೋರೇಜ್ ರೂಪಾಂತರದ ಬೆಲೆ ₹69,999 ರೂಗಳಿಗೆ ಲಭ್ಯ. ಇವುಗಳಲ್ಲಿ ಲಭ್ಯವಿರುವ ಫ್ಲೋವಿ ಎಮರಾಲ್ಡ್ ಮತ್ತು ಸಿಲ್ಕಿ ಬ್ಲ್ಯಾಕ್ ಎಂಬ ಎರಡು ಬಣ್ಣಗಳಲ್ಲಿ ಲಭ್ಯ.

ಕ್ರಮವಾಗಿ OnePlus 12R ಅನ್ನು ಎರಡು ರೂಪಾಂತರಗಳಲ್ಲಿ ಬಿಡುಗಡೆ ಮಾಡಲಾಗಿದೆ. ಮೊದಲನೆಯದು 8GB RAM + 128GB ಸ್ಟೋರೇಜ್ ರೂಪಾಂತರದ ಸ್ಟೋರೇಜ್ ರೂಪಾಂತರವು ₹39,999 ರೂಗಳಿಗೆ ಲಭ್ಯವಾದರೆ ಇದರ 16GB RAM + 256GB ರೂಪಾಂತರದ ಬೆಲೆ ₹45,999 ರೂಗಳಿಗೆ ಲಭ್ಯ. ಇವುಗಳಲ್ಲಿ ಲಭ್ಯವಿರುವ ಐರನ್ ಗ್ರೇ ಮತ್ತು ಕೂಲ್ ಬ್ಲೂ ಎಂಬ ಎರಡು ಬಣ್ಣಗಳಲ್ಲಿ ಲಭ್ಯ. ಅಲ್ಲದೆ OnePlus 12R ಫೆಬ್ರವರಿಯಲ್ಲಿ ಖರೀದಿಗೆ ಲಭ್ಯವಿರುತ್ತದೆ ಮತ್ತು ಎರಡೂ ಫೋನ್‌ಗಳು ಅಮೆಜಾನ್ ಮೂಲಕ ಮಾರಾಟವಾಗುವುದು ಖಚಿತವಾಗಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :