ಭಾರತದಲ್ಲಿ ಪರ್ಫಾರ್ಮೆನ್ಸ್ ವಲಯದಲ್ಲಿ ಹೆಚ್ಚು ಸದ್ದು ಮಾಡುವ ಒನ್‌ಪ್ಲಸ್ (OnePlus) ತನ್ನ ಮುಂಬರಲಿರುವ ಹೊಸ 5G ಸ್ಮಾರ್ಟ್ಪೊನ್ ಬಿಡುಗಡೆಯ ಬಗ್ಗೆ ಒಂದಿಷ್ಟು ಮಾಹಿತಿಯನ್ನು ನೀಡಿದೆ. ಈ ಸ್ಮಾರ್ಟ್ಫೋನ್ ಅನ್ನು 4ನೇ ಡಿಸೆಂಬರ್ 2023 ರಂದು OnePlus ತನ್ನ ಹತ್ತನೇ ವಾರ್ಷಿಕೋತ್ಸವವನ್ನು ಗುರುತಿಸುವ ಸಲುವಾಗಿ ಚೀನಾದಲ್ಲಿ ಪ್ರಮುಖ ಆಚರಣೆಯನ್ನು ಆಯೋಜಿಸಿದೆ. ಕಂಪನಿಯು ಈ ವಾರ್ಷಿಕೋತ್ಸವದಲ್ಲಿ ತನ್ನ ಮುಂಬರಲಿರುವ OnePlus 12 ಅನ್ನು ಪ್ರಾರಂಭಿಸುವುದಾಗಿ ದೃಢಪಡಿಸಿದೆ. ಈ ಈವೆಂಟ್‍ಗೂ ಮೊದಲೇ ಚೀನಾ ವೆರಿಯೆಂಟ್‌ನ ಮೊದಲ ಲುಕ್ ಸಹ ತೋರಿಸಿ ತಮ್ಮ ಫ್ಯಾನ್‌ಗಳಿಗೆ ಭಾರಿ ಕುತೂಹಲವನ್ನು ಕೆರಳಿಸಿದೆ. ಈಗ ವಿಶ್ವಾಸಾರ್ಹ ಮೂಲದಿಂದ ಹೊಸ ಸೋರಿಕೆಯು ಟ್ವಿಟ್ಟರ್‌ನಲ್ಲಿ ಕಾಣಿಸಿಕೊಂಡಿದೆ.
Also Read: 365 ದಿನಗಳಿಗೆ ಪ್ರತಿದಿನ 2GB ಡೇಟಾದೊಂದಿಗೆ Unlimited ಕರೆಗಳನ್ನು ನೀಡುವ BSNL ಪ್ಲಾನ್ ಬೆಲೆ ಎಷ್ಟು?
ಮೊದಲಿಗೆ ಈ ಮುಂಬರಲಿರುವ OnePlus 12 ಬೆಲೆ ಮತ್ತು ಲಭ್ಯತೆ ಬಗ್ಗೆ ಮಾತನಾಡುವುದಾದರೆ ಸದ್ಯಕ್ಕೆ ಕಂಪನಿ ಇದರ ಮಾಹಿತಿಯನ್ನು ಬಹಿರಂಗಪಡಿಸಿಲ್ಲ ಆದರೆ ಈಗಾಗಲೇ ಬಿಡುಗಡೆಯಾಗಿರುವ ಫೋನ್ OnePlus 11 ಅಂತೆಯೇ ಕೊಂಚ ಮೇಲೆ ಕೆಳಗೆ ವೆಚ್ಚವಾಗಬಹುದು ಎಂಬ ವದಂತಿಗಳಿವೆ. ಒನ್‌ಪ್ಲಸ್ ವೈರ್‌ಲೆಸ್ ಚಾರ್ಜಿಂಗ್ ಮತ್ತು ಅಧಿಕೃತ IP ರೇಟಿಂಗ್ ಅನ್ನು ಸೇರಿಸಿದರೆ ಕಂಪನಿಯು ಫೋನ್‌ನ ಬೆಲೆಯನ್ನು ಸ್ವಲ್ಪ ಹೆಚ್ಚಿಸಬೇಕಾಗಬಹುದು. ಆದರೆ OnePlus 12 ಮುಂದಿನ 4ನೇ ಡಿಸೆಂಬರ್ 2023 ರಂದು ಚೀನಾದಲ್ಲಿ ಬಿಡುಗಡೆ ಮಾಡಲು ಸಿದ್ಧವಾಗಿದೆ. ಆದರೆ ಕಂಪನಿಯು ಫೋನ್ ಅನ್ನು ಯಾವಾಗ ಜಾಗತಿಕ ಅಥವಾ ಭಾರತೀಯ ಮಾರುಕಟ್ಟೆಗೆ ತರುತ್ತದೆ ಎಂಬುದರ ಕುರಿತು ಯಾವುದೇ ಮಾತುಗಳಿಲ್ಲ.
ಇತ್ತೀಚಿನ ಆನ್‌ಲೈನ್ ಸೋರಿಕೆಯಲ್ಲಿ ಮುಂಬರುವ OnePlus 12 ಸ್ಮಾರ್ಟ್‌ಫೋನ್ ಕುರಿತು ವಿವರಗಳು ಹೊರಬಿದ್ದಿವೆ. ಕ್ವಾಡ್-ಎಚ್‌ಡಿ ರೆಸಲ್ಯೂಶನ್‌ನೊಂದಿಗೆ ವಿಸ್ತಾರವಾದ 6.7 ಇಂಚಿನ OLED ಸ್ಕ್ರೀನ್ ಅನ್ನು 2K ಡಿಸ್ಪ್ಲೇಯೊಂದಿಗೆ ಪ್ರಭಾವಶಾಲಿ 120Hz ರಿಫ್ರೆಶ್ ದರವನ್ನು ಹೊಂದಿರಬಹುದು. ಈ ಫೋನ್ 8GB RAM ಮತ್ತು 128GB ಸ್ಟೋರೇಜ್‌ನೊಂದಿಗೆ ಆಕ್ಟಾ-ಕೋರ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 3 ಚಿಪ್‌ಸೆಟ್ ಜಿನ್‌ಸೆಟ್‌ನೊಂದಿಗೆ ಸಜ್ಜುಗೊಂಡಿರುವ ನಿರೀಕ್ಷೆ. ಇದರ ಬ್ಯಾಟರಿ ಸಾಮರ್ಥ್ಯದ ವಿಷಯದಲ್ಲಿ OnePlus 12 ಸ್ಮಾರ್ಟ್ಫೋನ್ 100W ಫಾಸ್ಟ್ ಚಾರ್ಜಿಂಗ್ ಬೆಂಬಲದ ಅನುಕೂಲದೊಂದಿಗೆ 5000mAh ಬ್ಯಾಟರಿಯನ್ನು ಹೊಂದಿದೆ ಎಂದು ವದಂತಿಗಳಿವೆ.
ಈ ಫೋನ್ ಹ್ಯಾಸೆಲ್‌ಬ್ಲಾಡ್‌ನೊಂದಿಗೆ ಸಹ-ಇಂಜಿನಿಯರಿಂಗ್ ಮಾಡಲಾದ ಟ್ರಿಪಲ್ ರಿಯರ್ ಕ್ಯಾಮೆರಾ ಸಿಸ್ಟಮ್‌ನ ವದಂತಿಗಳಿವೆ. ಮೊದಲಾಗಿ 48MP ಸೋನಿ ಲಿಟಿಯಾ 808 ಪ್ರೈಮರಿ ಕ್ಯಾಮೆರಾವನ್ನು ಹೊಂದಿರುತ್ತದೆ. ಇದು ಕಂಪನಿಯ ಮೊದಲ ಫೋಲ್ಡಬಲ್ ಫೋನ್ ಇತ್ತೀಚೆಗೆ ಬಿಡುಗಡೆಯಾದ ಒನ್‌ಪ್ಲಸ್ ಓಪನ್‌ನಂತೆಯೇ ಇರುತ್ತದೆ. ನಾವು 3x ಆಪ್ಟಿಕಲ್ ಜೂಮ್ ಮತ್ತು 48MP ಸೋನಿ IMX966 ಅಲ್ಟ್ರಾವೈಡ್ ಸೆನ್ಸರ್ ಅನ್ನು ಒದಗಿಸುವ ಓಮ್ನಿ ವಿಷನ್‌ನಿಂದ 64MP OV64B ಪೆರಿಸ್ಕೋಪ್ ಲೆನ್ಸ್ ಅನ್ನು ಸಹ ನೋಡಬಹುದು. ಸ್ನಾಪ್‌ಡ್ರಾಗನ್ 8 Gen3 ಸುಧಾರಿತ ISP ಯೊಂದಿಗೆ ಸಂಯೋಜಿಸಲ್ಪಟ್ಟ ಹೊಸ ಹ್ಯಾಸೆಲ್‌ಬ್ಲಾಡ್-ಟ್ಯೂನ್ಡ್ ಸೆನ್ಸರ್ಗಳು ಅತ್ಯುತ್ತಮ ಇಮೇಜ್ ಕ್ವಾಲಿಟಿಯನ್ನು ತರುವ ನಿರೀಕ್ಷೆಯಿದೆ.
Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ WhatsApp ಚಾನಲ್ ಸೇರಿಕೊಳ್ಳಿ