OnePlus 11 vs OnePlus 10 Pro ಇವೇರಡರಲ್ಲಿ ಯಾವುದು ಉತ್ತಮ? ಬೆಲೆ ಮತ್ತು ಫೀಚರ್ಗಳನ್ನು ಹೋಲಿಸಿಡ್ ನೋಡಿ!

OnePlus 11 vs OnePlus 10 Pro ಇವೇರಡರಲ್ಲಿ ಯಾವುದು ಉತ್ತಮ? ಬೆಲೆ ಮತ್ತು ಫೀಚರ್ಗಳನ್ನು ಹೋಲಿಸಿಡ್ ನೋಡಿ!
HIGHLIGHTS

ಭಾರತದಲ್ಲಿ 7ನೇ ಫೆಬ್ರವರಿಗೆ ಈ ಹೊಸ OnePlus 11 ಸ್ಮಾರ್ಟ್ಫೋನ್ ಅನ್ನು ಪ್ರಾರಂಭಿಸಲು ನಿರ್ಧರಿಸಲಾಗಿದ್ದು ಅಧಿಕೃತವಾಗಿ ಬಿಡುಗಡೆಗೊಳಿಸಿದೆ

OnePlus 11 ಒಂದು ವರ್ಷದ ಹಿಂದೆ ಬಿಡುಗಡೆಯಾದ OnePlus 10 Pro ಗಿಂತ ಹೇಗೆ ಭಿನ್ನ ಎನ್ನುವುದರ ಫುಲ್‌ ಡಿಟೈಲ್ಸ್‌ ಇಲ್ಲಿದೆ ನೋಡಿ.

ಪ್ರಸ್ತುತ ಭಾರತದಲ್ಲಿ OnePlus 10 Pro 8GB + 128GB ಸ್ಟೋರೇಜ್ ವರ್ಷನ್ಗೆ ರೂ 61,999 ಮತ್ತು 12GB + 256GB ವರ್ಷನ್ಗೆ ರೂ 66,999 ಆಗಿದೆ.

OnePlus 11 vs OnePlus 10 Pro: ಭಾರತದಲ್ಲಿ 7ನೇ ಫೆಬ್ರವರಿಗೆ ಈ ಹೊಸ OnePlus 11 ಸ್ಮಾರ್ಟ್ಫೋನ್ ಅನ್ನು ಪ್ರಾರಂಭಿಸಲು ನಿರ್ಧರಿಸಲಾಗಿದ್ದು ಅಧಿಕೃತವಾಗಿ ಬಿಡುಗಡೆಗೊಳಿಸಿದೆ. ಒಂದೆರಡು ದಿನಗಳ ಹಿಂದೆ ಫ್ಲ್ಯಾಗ್‌ಶಿಪ್ ಅನ್ನು ಈಗಾಗಲೇ ಚೀನಾದಲ್ಲಿ ಬಿಡುಗಡೆ ಮಾಡಲಾಗಿದೆ. ಫೋನ್ ಅಂತರಾಷ್ಟ್ರೀಯ ಮಾರುಕಟ್ಟೆಗಳಿಗೆ ಒಂದೇ ರೀತಿಯ ಫೀಚರ್‌ಗಳೊಂದಿಗೆ ಬರಲಿದೆ ಎಂದು ನಾವು ನಿರೀಕ್ಷಿಸಬಹುದು.  OnePlus 11 ಸಾಂಪ್ರದಾಯಿಕ ಕಾರ್ಯಕ್ಷಮತೆಯ ಲಾಭದ ಜೊತೆಗೆ ಅದರ ಹಿಂದಿನ OnePlus 10 Pro ಗಿಂತ ಕ್ಯಾಮೆರಾ ವಿಭಾಗದಲ್ಲಿ ಪ್ರಮುಖ ಅಪ್ಗ್ರೇಡ್ ಗಳನ್ನು ನೀಡುತ್ತದೆ. OnePlus 11 ಒಂದು ವರ್ಷದ ಹಿಂದೆ ಬಿಡುಗಡೆಯಾದ OnePlus 10 Pro ಗಿಂತ ಹೇಗೆ ಭಿನ್ನ ಎನ್ನುವುದರ ಫುಲ್‌ ಡಿಟೈಲ್ಸ್‌ ಇಲ್ಲಿದೆ ನೋಡಿ.

OnePlus 11 vs OnePlus 10 Pro ಬೆಲೆಗಳು 

OnePlus 11 ಅನ್ನು ಚೀನಾದಲ್ಲಿ RMB 3,999 ರಿಂದ ಪ್ರಾರಂಭಿಸಲಾಗಿದೆ. ಇದು 12GB + 256GB ವರ್ಷನ್ಗೆ ಸರಿಸುಮಾರು 48,000 ರೂ ವೆಚ್ಚಾವಾಗುತ್ತದೆ. ಈ ಸ್ಮಾರ್ಟ್ಫೋನ್ ಎರಡು ಸ್ಟೋರೇಜ್ ಕಾನ್ಫಿಗರೇಶನ್‌ಗಳಲ್ಲಿ ಬರುತ್ತದೆ. RMB 4,399 (ಸುಮಾರು ರೂ 52,900) ಗಾಗಿ 16GB + 256GB ವರ್ಷನ್ ಮತ್ತು RMB 4,899 (ಸುಮಾರು ರೂ 59,000) ಗಾಗಿ 16GB + 512GB ವರ್ಷನ್ಗಳಲ್ಲಿವೆ. OnePlus 11 ಮುಂದಿನ ತಿಂಗಳು ಭಾರತದಲ್ಲಿ ಅಧಿಕೃತವಾಗಿ ಬಿಡುಗಡೆಯಾದಾಗ ಬೆಲೆ ಅಂದಾಜುಗಳಿಗಿಂತ ಸ್ವಲ್ಪ ಹೆಚ್ಚಾಗಿರುತ್ತದೆ. ಪ್ರಸ್ತುತ ಭಾರತದಲ್ಲಿ OnePlus 10 Pro 8GB + 128GB ಸ್ಟೋರೇಜ್ ವರ್ಷನ್ಗೆ ರೂ 61,999 ಮತ್ತು 12GB + 256GB ವರ್ಷನ್ಗೆ ರೂ 66,999 ಆಗಿದೆ.

OnePlus 11 vs OnePlus 10 Pro ಡಿಸೈನ್‌

OnePlus 11 ಮತ್ತು OnePlus 10 Pro ಎರಡೂ ಒಂದೇ ರೀತಿಯ ಬ್ಯಾಕ್ ಪ್ಯಾನೆಲ್ ಅನ್ನು ಹೊಂದಿವೆ. ಎರಡೂ ಸ್ಮಾರ್ಟ್‌ಫೋನ್‌ಗಳ ಕ್ಯಾಮೆರಾ ಮಾಡ್ಯೂಲ್‌ಗಳು "ಹ್ಯಾಸೆಲ್‌ಬ್ಲಾಡ್" ಟ್ರೇಡ್‌ಮಾರ್ಕ್ ಅನ್ನು ಹೊಂದಿವೆ. ಅಷ್ಟೇ ಅಲ್ಲದೆ OnePlus 11 "ಅಲರ್ಟ್ ಸ್ಲೈಡರ್" ಅನ್ನು ಮರಳಿ ತರುತ್ತದೆ. ಇದು ಈ ಫೋನ್‌ಗಳ ಪರಸ್ಪರ ವ್ಯತ್ಯಾಸದ ಪ್ರಮುಖ ಫೀಚರ್‌ ಆಗಿದೆ. ಈ ಎರಡೂ ಫೋನ್‌ಗಳ ಎಡಭಾಗದಲ್ಲಿ ವಾಲ್ಯೂಮ್ ರಾಕರ್‌ಗಳನ್ನು ಹೊಂದಿವೆ.

OnePlus 11 vs OnePlus 10 Pro ಡಿಸ್ಪ್ಲೇ

OnePlus ಕೆಲವು ಸಣ್ಣ ಸೇರ್ಪಡೆಗಳನ್ನು ಹೊರತುಪಡಿಸಿ OnePlus 10 Pro ಗಿಂತ OnePlus 11 ನ ಡಿಸ್ಪ್ಲೇಯಲ್ಲಿ ಯಾವುದೇ ಅಪ್ಗ್ರೇಡ್ ಮಾಡಿಲ್ಲ. ಮೊದಲನೆಯದಾಗಿ ಎರಡೂ ಫ್ಲ್ಯಾಗ್‌ಶಿಪ್‌ಗಳು 1,440 x 3,216 ಪಿಕ್ಸೆಲ್‌ಗಳ ರೆಸಲ್ಯೂಶನ್, 120Hz ರಿಫ್ರೆಶ್ ರೇಟ್ ಅನ್ನು ಒಳಗೊಂಡಿದ್ದು 6.7-ಇಂಚಿನ ಕರ್ವ್ಡ್ AMOLED ಡಿಸ್ಪ್ಲೇಯನ್ನು ಹೊಂದಿವೆ. OnePlus 10 Pro ಡಿಸ್ಪ್ಲೇ ರಿಫ್ರೆಶ್ ರೇಟ್ ನಡುವೆ ಮನಬಂದಂತೆ ಬದಲಾಯಿಸಲು LTPO 2.0 ಟೆಕ್ನಾಲಜಿವನ್ನು ಪಡೆಯುತ್ತದೆ. ಆದರೆ OnePlus 11 ಅಪ್ಗ್ರೇಡ್ ಮಾಡಿದ LTPO 3.0 ಪ್ಯಾನೆಲ್ ಅನ್ನು ಬಳಸುತ್ತದೆ ಇದು ಸ್ವಲ್ಪ ಮಟ್ಟಿಗೆ ಉತ್ತಮ ಬ್ಯಾಟರಿ ಅವಧಿಯನ್ನು ಒದಗಿಸಲು ಸಹಾಯ ಮಾಡುತ್ತದೆ.

OnePlus 11 vs OnePlus 10 Pro ಪ್ರೊಸೆಸರ್

OnePlus 10 Pro ನ ಕ್ವಾಲ್ಕಾಮ್ಮ್ ಸ್ನ್ಯಾಪ್ಡ್ರಾಗನ್  8 Gen 1 ಚಿಪ್‌ಸೆಟ್‌ಗೆ ಹೋಲಿಸಿದರೆ OnePlus 11 ಹೆಚ್ಚು ಪ್ರಬಲವಾದ ಸ್ನ್ಯಾಪ್ಡ್ರಾಗನ್ 8 Gen 2 ಪ್ರೊಸೆಸರ್ ಅನ್ನು ಹೊಂದಿದೆ. ಇದು 35 ಪ್ರತಿಶತದಷ್ಟು ವೇಗದ CPU ವೇಗವನ್ನು ನೀಡುತ್ತದೆ. ಈ ಎರಡೂ ಚಿಪ್‌ಸೆಟ್‌ಗಳು 5G ಅನ್ನು ಬೆಂಬಲಿಸುತ್ತವೆ ಮತ್ತು 4nm ಫ್ಯಾಬ್ರಿಕೇಶನ್ ಪ್ರಕ್ರಿಯೆಯಲ್ಲಿ ನಿರ್ಮಿಸಲಾಗಿದೆ. OnePlus 10 Pro ನ ಬೇಸ್  ವೇರಿಯಂಟ್ UFS 3.1 ಇಂಟರ್ನಲ್ ಸ್ಟೋರೇಜ್ ನೊಂದಿಗೆ 8GB RAM ಹೊಂದಿದೆ. OnePlus 11 UFS 4.0 ಸ್ಟೋರೇಜ್ ವೇಗವನ್ನು ಬಳಸುತ್ತದೆ. 12GB RAM ಜೊತೆಗೆ 256GB ROM, 16GB RAM ಜೊತೆಗೆ 256GB ROM, ಮತ್ತು 16GB RAM ಜೊತೆಗೆ 512GB ROM ಸ್ಟೋರೇಜ್ ಆಯ್ಕೆಗಳನ್ನು ಹೊಂದಿದೆ.

OnePlus 11 vs OnePlus 10 Pro ಕ್ಯಾಮರಾ

OnePlus 11 ಮತ್ತು OnePlus 10 Pro ನಲ್ಲಿ ಕ್ಯಾಮೆರಾಗಳನ್ನು ಉತ್ತಮಗೊಳಿಸಲು ಹ್ಯಾಸೆಲ್ಬ್ಲಾಡ್ ಸಹಯೋಗದೊಂದಿಗೆ ಟ್ಯೂನ್ ಮಾಡಲಾಗಿದೆ. ಫೋಟೋಗ್ರಫಿಗಾಗಿ ಕ್ಯಾಮರಾ ಮೋಡ್‌ಗಳು ಮತ್ತು ಫೀಚರ್‌ಗಳನ್ನು ಫೋನ್‌ಗಳಿಗೆ ತರುತ್ತದೆ. ಹೆಚ್ಚುವರಿಯಾಗಿ OnePlus 11 50MP ಪ್ರೈಮರಿ ಕ್ಯಾಮೆರಾ, 32MP ಟೆಲಿಫೋಟೋ ಲೆನ್ಸ್ ಮತ್ತು 115-ಡಿಗ್ರಿ 48MP ಅಲ್ಟ್ರಾ-ವೈಡ್ ಕ್ಯಾಮೆರಾ ಸೇರಿವೆ.  OnePlus 10 Pro 48MP ಪ್ರೈಮರಿ ಕ್ಯಾಮೆರಾ, 8MP ಟೆಲಿಫೋಟೋ ಲೆನ್ಸ್ ಮತ್ತು 150-ಡಿಗ್ರಿ 50MP ಅಲ್ಟ್ರಾ-ವೈಡ್ ಲೆನ್ಸ್ ಅನ್ನು ಹೊಂದಿದೆ. ಇನ್ನು ಸೆಲ್ಫಿಗಳಿಗೆ OnePlus 10 Pro ನಲ್ಲಿ ಕಂಡುಬರುವ 32MP ಫ್ರಂಟ್ ಸೆನ್ಸರ್ ಗೆ ಹೋಲಿಸಿದರೆ OnePlus 11 ಡೌನ್‌ಗ್ರೇಡ್ ಮಾಡಿದ 16MP ಫ್ರಂಟ್ ಕ್ಯಾಮೆರಾವನ್ನು ಹೊಂದಿದೆ.

OnePlus 11 vs OnePlus 10 Pro ಬ್ಯಾಟರಿ

ಈ ಹೋಲಿಕೆಯಲ್ಲಿ ಎರಡೂ OnePlus ಪ್ರಮುಖ ಫೋನ್‌ಗಳು 5000mAh ಬ್ಯಾಟರಿಗಳನ್ನು ಹೊಂದಿದ್ದರೂ OnePlus 10 Pro ಗಿಂತ OnePlus 11 ಒಂದು ಸಣ್ಣ ಪ್ರಯೋಜನವನ್ನು ಹೊಂದಿದೆ ಏಕೆಂದರೆ OnePlus 10 Pro ನ 80W SUPERVOOC ಚಾರ್ಜಿಂಗ್‌ಗೆ ವಿರುದ್ಧವಾಗಿ 100W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸುತ್ತದೆ. OnePlus ಸ್ವಂತ ವೈರ್‌ಲೆಸ್ ಚಾರ್ಜರ್ ಅನ್ನು ಬಳಸಿಕೊಂಡು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಅನುಮತಿಸುತ್ತದೆ.

Ravi Rao

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016. View Full Profile

Digit.in
Logo
Digit.in
Logo