ಭಾರತದಲ್ಲಿ ಸ್ಯಾಮ್‌ಸಂಗ್ ತನ್ನ ಲೇಟೆಸ್ಟ್ Samsung Galaxy A34 5G ಮತ್ತೊಮ್ಮೆ ತನ್ನ ಬೆಲೆಯಲ್ಲಿ ಭಾರಿ ಕಡಿತವನ್ನು ಕಂಡಿದೆ. ಈ ಸ್ಮಾರ್ಟ್ಫೋನ್ ತನ್ನ ಬೆಲೆಯನ್ನು 3ನೇ ಬಾರಿಗೆ ಇಳಿಸಿದ್ದು ಈ ಭಾರಿ ಬರೋಬ್ಬರಿ 3500 ರೂಗಳನ್ನು ಸ್ಮಾರ್ಟ್ಫೋನ್ ಕಡಿತಗೊಳಿಸಿದೆ. Samsung Galaxy A34 5G ಬಿಡುಗಡೆಯ ಬೆಲೆಯನ್ನು ನೋಡುವುದಾದರೆ 30,000 ರೂಗಳಿಗೆ ಬಿಡುಗಡೆ ಮಾಡಲಾಯಿತು. ಆದರೆ ಪ್ರಸ್ತುತ ಇದರ ಆರಂಭಿಕ 6GB RAM ಮತ್ತು 128GB ಸ್ಟೋರೇಜ್ ಬೆಲೆಯನ್ನು ಸುಮಾರು 23,000 ರೂಗಳೊಳಗೆ ಮಾರಾಟ ಮಾಡುತ್ತಿದೆ. ಇದರೊಂದಿಗೆ Samsung Galaxy A34 5G ಇನ್ನೂ ಕಡಿಮೆ ಬೆಲೆಗೆ ಖರೀದಿಸಲು ಬ್ಯಾಂಕ್ ಆಫರ್ ಅನ್ನು ಸಹ ಸ್ಯಾಮ್‌ಸಂಗ್ ಅಮೆಜಾನ್ ಮೂಲಕ ನೀಡುತ್ತಿದೆ.
ಭಾರತದಲ್ಲಿ ಸ್ಯಾಮ್‌ಸಂಗ್ ತನ್ನ ಈ ಸ್ಮಾರ್ಟ್ಫೋನ್ ಮೇಲೆ ಮೂರನೇ ಬಾರಿಗೆ ಅದ್ದೂರಿಯ ಡೀಲ್ ಡಿಸ್ಕೌಂಟ್‌ಗಳೊಂದಿಗೆ ಭಾರಿ ಬೆಲೆಯನ್ನು ಕಡಿತಗೊಳಿಸಿದೆ. ಈ Samsung Galaxy A34 5G ಸ್ಮಾರ್ಟ್ಫೋನ್ ಹೊಸ ಬೆಲೆಯನ್ನು ಪ್ರಸ್ತುತ ಕೇವಲ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕೆ ನೀಡಲಾಗಿದ್ದು ಇದನ್ನು ಅಮೆಜಾನ್ ಮೂಲಕ ಕೇವಲ 22,189 ರೂಗಳಿಗೆ ಪಟ್ಟಿ ಮಾಡಲಾಗಿದೆ. ಅಲ್ಲದೆ ಆಸಕ್ತರು HDFC ಮತ್ತು HSBC ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ 10% ತ್ವರಿತ ಡಿಸ್ಕೌಂಟ್ ಸಹ ಪಡೆಯಬಹುದು. ಅಲ್ಲದೆ ಆಸಕ್ತ ಖರೀದಿದಾರರು HDFC ಮತ್ತು Kotak bank ಡೆಬಿಟ್ ಕಾರ್ಡ್ ಬಳಸಿ NO Cost EMI ಸೌಲಭ್ಯವನ್ನು ಸಹ ಪಡೆಯಬಹುದು.
Samsung Galaxy A34 5G ಸ್ಮಾರ್ಟ್ಫೋನ್ 6.6 ಇಂಚಿನ FHD+ ಡಿಸ್ಟ್ರೇಯನ್ನು 1080×2400 ರೆಸಲ್ಯೂಶನ್‌ನೊಂದಿಗೆ ಹೊಂದಿದೆ. ಮತ್ತು ಟ್ರಿಪಲ್ ರಿಯರ್ ಕ್ಯಾಮೆರಾವನ್ನು ಹೊಂದಿದೆ. ಇದರಲ್ಲಿ 48MP ಮುಖ್ಯ ಕ್ಯಾಮೆರಾ f/1.8 ಅಪರ್ಚರ್ 8MP ಅಲ್ಯಾ-ವೈಡ್-ಆಂಗಲ್ ಲೆನ್ಸ್ ಕ್ಯಾಮೆರಾ f/2.2 ಅಪರ್ಚರ್ ಮತ್ತು 5MP ಮ್ಯಾಕ್ರೋ ಕ್ಯಾಮೆರಾ ಜೊತೆಗೆ f / 2.4 ಅಪರ್ಚರ್ ಹೊಂದಿದ್ದು ಇದರ ಮುಂಭಾಗದಲ್ಲಿ f/2.2 ಅಪರ್ಚರ್ 13MP ಸಲ್ಸಿ ಕ್ಯಾಮೆರಾ ಇದೆ.
Also Read: 336 ದಿನಗಳ ವ್ಯಾಲಿಡಿಟಿಯೊಂದಿಗೆ Unlimited ಕರೆ ಮತ್ತು ಡೇಟಾ ನೀಡುವ Reliance Jio ಪ್ಲಾನ್ ಬೆಲೆ ಎಷ್ಟು?
Samsung Galaxy A34 5G ಸ್ಮಾರ್ಟ್ಫೋನ್ IP68 ರೇಟಿಂಗ್‌ನೊಂದಿಗೆ ಬರುತ್ತದೆ. ಇದು ಸ್ಮಾರ್ಟ್‌ಫೋನ್ ನೀರು ಮತ್ತು ಡಸ್ಟ್ ಮತ್ತು ವಾಟರ್ ಪ್ರೊಫ್ ಆಗಿದೆ. ಸ್ಮಾರ್ಟ್‌ಫೋನ್ ಅಂಡ್ರಾಯ್ಡ್ 13 ಆಪರೇಟಿಂಗ್ ಸಿಸ್ಟಮ್ ಅನ್ನು ರನ್ ಮಾಡುತ್ತದೆ. ಸ್ಮಾರ್ಟ್‌ಫೋನ್ ಅಕ್ಷಾ-ಕೋರ್ ಮೀಡಿಯಾ ಟೆಕ್ ಡೈಮೆನ್ಸಿಟಿ 1080 ಪ್ರೊಸೆಸರ್‌ನಿಂದ ಚಾಲಿತವಾಗಿದೆ.
ಈ ಆಫರ್ ಅನ್ನು ನೀವು ಇದರ 8GB RAM ಮತ್ತು 128GB ಇಂಟರ್ನಲ್ ಸ್ಟೋರೇಜ್ ಜೋಡಿಸಬಹುದು. ಸ್ಮಾರ್ಟ್‌ಫೋನ್ 128GB ಇಂಟರ್ನಲ್ ಸ್ಟೋರೇಜ್ ಅನ್ನು ನೀಡುತ್ತದೆ ಇದನ್ನು ಮೈಕ್ರೋ SD ಕಾರ್ಡ್ ಅನ್ನು ಸ್ಥಾಪಿಸುವ ಮೂಲಕ ಮತ್ತಷ್ಟು ವಿಸ್ತರಿಸಬಹುದು. ಸ್ಮಾರ್ಟ್ಫೋನ್ 5000mAh ಬ್ಯಾಟರಿಯೊಂದಿಗೆ 25W ಫಾಸ್ಟ್ ಬೆಂಬಲದೊಂದಿಗೆ ಬರುತ್ತದೆ ಆದರೆ ಈ ಸ್ಮಾರ್ಟ್ಫೋನ್ ಜೊತೆಗೆ ಯಾವುದೇ ಚಾರ್ಜರ್ ಲಭ್ಯವಿರುವುದಿಲ್ಲ.