ಪಾರದರ್ಶಕದ ಸ್ಮಾರ್ಟ್ಫೋನ್ ತಯಾರಕ ಬ್ರಾಂಡ್ ನಥಿಂಗ್ (Nothing) ಈ ಪ್ರಸ್ತುತ ವರ್ಷ ತನ್ನ ಸ್ಮಾರ್ಟ್ಫೋನ್ ಅನ್ನು ಬಿಡುಗಡೆಗೊಳಿಸಿಲ್ಲ. ಇದರ ಮುಂಬರಲಿರುವ Nothing Phone (3) ಸ್ಮಾರ್ಟ್ಫೋನ್ Snapdragon 7s Gen 3 ಪ್ರೊಸೆಸರ್ನೊಂದಿಗೆ ಲೇಟೆಸ್ಟ್ ಆಂಡ್ರಾಯ್ಡ್ 15 ಜೊತೆಗೆ ಬರುವುದಾಗಿ ನಿರೀಕ್ಷಿಸಲಾಗಿದೆ. ಇದರ ಮಾಹಿತಿಯನ್ನು ಮೊದಲ ಬಾರಿಗೆ 91 ಮೊಬೈಲ್ಸ್ ವರದಿ ಮಾಡಿದ್ದು ಇದರ GeekBench ಫೋಟೋವನ್ನು ಬಹಿರಂಗಗೊಳಿಸಿದೆ. ಈ ಮೂಲಕ ಮುಂಬರಲಿರುವ ಈ Nothing Phone (3) ಸ್ಮಾರ್ಟ್ಫೋನ್ ಬಗ್ಗೆ ಒಂದಿಷ್ಟು ಮಾಹಿತಿಯನ್ನು ಈ ಕೆಳಗೆ ಪಟ್ಟಿ ಮಾಡಲಾಗಿದೆ.
ಇದರ ಬಗ್ಗೆ ಹೊಸ ಸ್ಮಾರ್ಟ್‌ಫೋನ್ ಅನ್ನು ಗೀಕ್‌ಬೆಂಚ್ ಪ್ಲಾಟ್‌ಫಾರ್ಮ್‌ನಲ್ಲಿ ಗುರುತಿಸಲಾಗಿದೆ. ಈ ಫೋನ್ A059 ಮಾದರಿ ಸಂಖ್ಯೆಯನ್ನು ಹೊಂದಿದೆ. ಈ ಮಾದರಿಯು ನಥಿಂಗ್ ಫೋನ್ (Nothing Phone 3) ಎಂದು ನಂಬಲಾಗಿದೆ. ಇದಕ್ಕೆ ಕಾರಣ ಇಮೇಜ್ ಒಳಗೆ ನಥಿಂಗ್ ಬಡ್ಸ್ ಕನೆಕ್ಟ್ ಆಗಿರುವುದು. ಇದು NothingOS 3.0 ಕಸ್ಟಮ್ ಸ್ಕಿನ್ ಅನ್ನು ಆಧರಿಸಿರುವ ಔಟ್ ಆಫ್ ದಿ ಬಾಕ್ಸ್ ಆಂಡ್ರಾಯ್ಡ್ 15 ಆಪರೇಟಿಂಗ್ ಸಿಸ್ಟಮ್‌ನಲ್ಲಿ ಕಾರ್ಯನಿರ್ವಹಿಸುತ್ತದೆ ಎಂದು ಪಟ್ಟಿಯು ಖಚಿತಪಡಿಸುತ್ತದೆ.
ಈಗಾಗಲೇ ಮೇಲೆ ಹೇಳಿರುವಂತೆ Nothing Phone 3 ಸ್ಮಾರ್ಟ್ಫೋನ್ Qualcomm Snapdragon 7s Gen 3 ಪ್ರೊಸೆಸರ್ ಮತ್ತು 8GB RAM ಅನ್ನು ಹೊಂದಿದೆ. ಈಗಾಗಲೇ ಬಿಡುಗಡೆಯಾಗಿರುವ Nothing Phone (2) ಸ್ಮಾರ್ಟ್ಫೋನ್ Snapdragon 8+ Gen 1 ಪ್ರೊಸೆಸರ್ನೊಂದಿಗೆ ಉನ್ನತ ಮಟ್ಟದ ಸಾಧನವಾಗಿರುವುದರಿಂದ ಈ ಮೂರನೇ ರೂಪಾಂತರ ಕಡಿಮೆ ಬೆಲೆಗೆ ತಕ್ಕಂತೆ ಪ್ರೊಸೆಸರ್ ಪಡೆಯುವುದಾಗಿ ನಿರೀಕ್ಷಿಸಲಾಗಿದೆ. ಅಲ್ಲದೆ ಒಂದೆರಡು ತಿಂಗಳ ಹಿಂದೆ IMEI ಡೇಟಾಬೇಸ್‌ನಲ್ಲಿ ಎರಡು ನಿಗೂಢ ನಥಿಂಗ್ ಫೋನ್‌ಗಳನ್ನು ಗುರುತಿಸಲಾಗಿದೆ ಅವುಗಳೆಂದರೆ A059 ಮತ್ತು A059P. ಎರಡನೆಯದು ಹೆಚ್ಚು ಶಕ್ತಿಯುತವಾದ ಪ್ರೊ ರೂಪಾಂತರವಾಗಿದೆ.
ಪ್ರಸ್ತುತ ನಮಗೆ ತಿಳಿದಿರುವ ಆಧಾರದ ಮೇಲೆ ಈ ಮುಂಬರಲಿರುವ Nothing Phone (3) ಬಿಡುಗಡೆಯನ್ನು ಮುಂದಿನ ವರ್ಷ ಅಂದ್ರೆ ಬಹುಶಃ 2025 ಸಾಲಿಗೆ ಮುಂದೂಡಲಾಗಿದೆ. ಅಲ್ಲದೆ ಈ ಫೋನಲ್ಲಿ iPhone 16 Pro ಹೊಂದಿರುವಂತಹ ಆಕ್ಷನ್ ಬಟನ್ ಅನ್ನು ಸಹ ಒಳಗೊಂಡಿರಬಹುದು. ಈ ಫೋನ್ 6.7 ಇಂಚಿನ ಡಿಸ್ಪ್ಲೇಯನ್ನು ಹೊಂದಬಹುದು. ಮತ್ತು ಈ ಪ್ರೊಸೆಸರ್‌ನೊಂದಿಗೆ ಕಂಪನಿಯು ಸಿಂಗಲ್ ಕೋರ್ ಪರೀಕ್ಷೆಯಲ್ಲಿ 1,149 ಅಂಕಗಳನ್ನು ಮತ್ತು ಮಲ್ಟಿ ಕೋರ್ ಪರೀಕ್ಷೆಯಲ್ಲಿ 2,813 ಅಂಕಗಳನ್ನು ಪಡೆದುಕೊಂಡಿದೆ.