ಭಾರತದಲ್ಲಿ ಮೊದಲ ಬಾರಿಗೆ ಪಾರದರ್ಶಕ ಸ್ಮಾರ್ಟ್ಫೋನ್ ಅನ್ನು ಪರಿಚಯಿಸಿದ ಸ್ಮಾರ್ಟ್ಫೋನ್ ಬ್ರಾಂಡ್ ನಥಿಂಗ್ (Nothing) ಈಗ ತನ್ನ ಲೇಟೆಸ್ಟ್ ಸ್ಮಾರ್ಟ್ಫೋನ್ ಆಗಿರುವ Nothing Phone (2a) Special Edition ಹೊಸ ಕಲರ್ ಲುಕ್‌ನಲ್ಲಿ ಬಿಡುಗಡೆಗೊಳಿಸಿದೆ. ಈಗಾಗಲೇ ಈ ಸ್ಮಾರ್ಟ್ಫೋನ್ ಭಾರತದಲ್ಲಿ ಕಳೆದ ಜೂನ್ ತಿಂಗಳಲ್ಲಿ ಬಿಡುಗಡೆಯಾಗಿದ್ದು ಬರೋಬ್ಬರಿ ಒಂದು ವರ್ಷದ ನಂತರ ಅದೇ ಸಮಯಕ್ಕೆ ಈ ಹೊಸ ಸ್ಮಾರ್ಟ್ಫೋನ್ ಮಾರಾಟದ ದಿನಾಂಕವನ್ನು ಘೋಷಿಸಿದೆ. ಪ್ರಸ್ತುತ ಸ್ಮಾರ್ಟ್ಫೋನ್ ನಿಮಗೆ Red, Yellow ಮತ್ತು Blue ಬಣ್ಣಗಳ ಮಿಶ್ರಣದೊಂದಿಗೆ ಮೊದಲಿಗಿಂತ ಹೆಚ್ಚಾಗಿ ಆಕರ್ಷಕವಾಗಿ ಕಾಣುವಂತೆ ಹೊಸ ಲುಕ್ ಅನ್ನು ಲೇಪಿಸಿದೆ. ಬಳಕೆದಾರರು ಗಮನಿಸಬೇಕಿರುವ ವಿಷೇಯವೆಂದ್ರೆ Nothing Phone (2a) Special Edition ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷಣಗಳಲ್ಲಿ ಯಾವುದೇ ಬದಲಾವಣೆಗಳನ್ನು ಮಾಡಿಲ್ಲ ಕೇವಲ ಇದರ ಹೊರ ಭಾಗದಲ್ಲಿ ಮಾತ್ರ ಹೊಸ ಲುಕ್ ನೀಡಿದೆ.
ಈ Nothing Phone 2a Special Edition ಕೇವಲ ಒಂದೇ ಒಂದು ರೂಪಾಂತರದಲ್ಲಿ ಬಿಡುಗಡೆಯಾಗಿದ್ದು ಇದು 12GB RAM ಮತ್ತು 256GB ಸ್ಟೋರೇಜ್ ಅನ್ನು ಸುಮಾರು 27,999 ರೂಗಳಿಗೆ ಬಿಡುಗಡೆಗೊಳಿಸಿದೆ. ಇದರೊಂದಿಗೆ ಲಿಮಿಟೆಡ್ ಟೈಮ್ ಕೊಡುಗೆಯಾಗಿ 1000 ರೂಗಳ ಡಿಸ್ಕೌಂಟ್ ಸಹ ನೀಡುತ್ತಿದೆ. ಇದರ ಮೇರೆಗೆ ಆಸಕ್ತ ಬಳಕೆದಾರರು ಕೇವಲ 26,999 ರೂಗಳಿಗೆ ಈ ಹೊಸ Nothing Phone 2a Special Edition ಸ್ಮಾರ್ಟ್ಫೋನ್ ಪಡೆಯಬಹುದು. ಅಲ್ಲದೆ ಈ ಸ್ಮಾರ್ಟ್ಫೋನ್ ಲಂಡನ್‌ನಲ್ಲಿ Nothing Soho Store ಮೂಲಕ 1ನೇ ಜೂನ್ 2024 ರಂದು ಬೆಳಿಗ್ಗೆ 11:00 ಗಂಟೆಗಳಿಂದ ಲಭ್ಯವಿರುತ್ತದೆ. ಆದರೆ ಭಾರತದಲ್ಲಿ 5ನೇ ಜೂನ್ 2024 ರಿಂದ ಮೊದಲ ಮಾರಾಟ ಶುರುವಾಗಲಿದ್ದು Flipkart ಮೂಲಕ ಖರೀದಿಸಬಹುದು.
ಮೊದಲಿಗೆ ಈ ಸ್ಮಾರ್ಟ್ಫೋನ್ ಫೀಚರ್ ಮತ್ತು ವಿಶೇಷಣಗಳ ಬಗ್ಗೆ ಮಾತನಾಡುವುದಾದರೆ ಈ Nothing Phone (2a) Special Edition ಸ್ಮಾರ್ಟ್ಫೋನ್ 6.7 ಇಂಚಿನ FHD+ ಡಿಸ್ಪ್ಲೇಯನ್ನು 1080 x 2412 ಪಿಕ್ಸೆಲ್ ರೆಸಲ್ಯೂಷನ್ನೊಂದಿಗೆ AMOLED ಡಿಸ್‌ಪ್ಲೇಯನ್ನು 30Hz ಯಿಂದ 120Hz ವರೆಗಿನ ರಿಫ್ರೆಶ್ ರೇಟ್ ಹೊಂದಿದ್ದು ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ರಕ್ಷಣೆಯನ್ನು ಹೊಂದಿದೆ. ಹುಡ್ ಅಡಿಯಲ್ಲಿ ಸ್ಮಾರ್ಟ್ಫೋನ್ ಆಕ್ಟಾ-ಕೋರ್ 4nm MediaTek ಡೈಮೆನ್ಸಿಟಿ 7200 Pro ಪ್ರೊಸೆಸರ್ ಅನ್ನು 12GB RAM ಮತ್ತು 256GB ಸ್ಟೋರೇಜ್ ಜೋಡಿಸಲಾಗಿದೆ.
Nothing Phone (2a) Special Edition ಸ್ಮಾರ್ಟ್ಫೋನ್ ಕ್ಯಾಮೆರಾದಲ್ಲಿ 1/1.56 ಇಂಚಿನ ಗಾತ್ರದೊಂದಿಗೆ 50MP ಮೆಗಾಪಿಕ್ಸೆಲ್ ಸೆನ್ಸರ್ ಮತ್ತು 50MP ಮೆಗಾಪಿಕ್ಸೆಲ್ ಅಲ್ಟ್ರಾ ವೈಡ್-ಆಂಗಲ್ ಸೆನ್ಸರ್ ಅನ್ನು ಒಳಗೊಂಡಂತೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಮುಂಭಾಗದಲ್ಲಿ ಇದು 32MP ಮೆಗಾಪಿಕ್ಸೆಲ್ ಸೆಲ್ಫಿ ಶೂಟರ್ ಅನ್ನು ಹೊಂದಿದೆ.
ನೀವು 256GB ಇಂಟರ್ನಲ್ ಸ್ಟೋರೇಜ್ ಮತ್ತು IP54 ರೇಟೆಡ್ ಧೂಳು ಮತ್ತು ನೀರು-ನಿರೋಧಕ ನಿರ್ಮಾಣವನ್ನು ಪಡೆಯುತ್ತೀರಿ. ಫೋನ್ ಇನ್-ಡಿಸ್ಪ್ಲೇ ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಅನ್ನು ಹೊಂದಿದೆ ಮತ್ತು ಫೇಸ್ ಅನ್‌ಲಾಕ್ ಅನ್ನು ಸಹ ಬೆಂಬಲಿಸುತ್ತದೆ.ಈ ಸ್ಮಾರ್ಟ್ಫೋನ್ 45W ಫಾಸ್ಟ್ ಚಾರ್ಜಿಂಗ್‌ಗೆ ಬೆಂಬಲದೊಂದಿಗೆ 5000mAh ಬ್ಯಾಟರಿಯಿಂದ ಬೆಂಬಲಿತವಾಗಿದೆ.