ಭಾರತಕ್ಕೆ ಕಾಲಿಟ್ಟಿರುವ Nothing Phone 2a ಸ್ಮಾರ್ಟ್ಫೋನ್ ಖರೀದಿಸಲು ಈ ಟಾಪ್ 5 ಫೀಚರ್‌ಗಳನೊಮ್ಮೆ ತಿಳಿಯಿರಿ!

Updated on 06-Mar-2024
HIGHLIGHTS

Nothing Phone 2a 5G ಸ್ಮಾರ್ಟ್ಫೋನ್ ಅನ್ನು ಲೇಟೆಸ್ಟ್ ಫೀಚರ್‌ಗಳೊಂದಿಗೆ ಬಿಡುಗಡೆಯಾಗಿದೆ.

ನಥಿಂಗ್ ಸ್ಮಾರ್ಟ್ಫೋನ್ ಭಾರತದಲ್ಲಿ ನೆನ್ನೆ ಅಂದ್ರೆ 5ನೇ ಮಾರ್ಚ್ 2024 ರಂದು ಅಧಿಕೃತವಾಗಿ ಬಿಡುಗಡೆಯಾಗಿದೆ.

Nothing Phone 2a ಲುಕ್ ಮತ್ತು ಡಿಸೈನ್ ನೋಡಿ ಮರು ಹೋಗಿ ಖರೀದಿಸಲು ಯೋಚಿಸುತ್ತಿದ್ದರೆ ಟಾಪ್ 5 ಫೀಚರ್‌ಗಳನೊಮ್ಮೆ ಪರಿಶೀಲಸಿ

ಈ ವರ್ಷ ನಥಿಂಗ್ ಸ್ಮಾರ್ಟ್ಫೋನ್ ಬ್ರಾಂಡ್ ತನ್ನ ಹೊಸ Nothing Phone 2a 5G ಸ್ಮಾರ್ಟ್ಫೋನ್ ಅನ್ನು ಲೇಟೆಸ್ಟ್ ಫೀಚರ್‌ಗಳೊಂದಿಗೆ ಬಿಡುಗಡೆಯಾಗಿದೆ. ಈ ನಥಿಂಗ್ ಸ್ಮಾರ್ಟ್ಫೋನ್ ಭಾರತದಲ್ಲಿ ನೆನ್ನೆ ಅಂದ್ರೆ 5ನೇ ಮಾರ್ಚ್ 2024 ರಂದು ಅಧಿಕೃತವಾಗಿ ಬಿಡುಗಡೆಯಾಗಿದೆ. ನಥಿಂಗ್ ಸ್ಮಾರ್ಟ್ಫೋನ್ ವಿಶೇಷಣತೆಗಳನ್ನು ನೋಡುವುದಾದರೆ ಹೊಸ ಮೀಡಿಯಾಟೆಕ್‌ ಡೈಮೆನ್ಸಿಟಿ ಚಿಪ್ ಮತ್ತು ಅತ್ಯುತ್ತಮ ಡಿಸ್ಪ್ಲೇಯೊಂದಿಗೆ ಪಾರದರ್ಶಕ ಡಿಸೈನಿಂಗ್ ಹೊಂದಿದ್ದು 5000mAh ಬ್ಯಾಟರಿ ಮತ್ತು ಒಳ್ಳೆ ಸ್ಟೋರೇಜ್ ಜೊತೆಗೆ ಹಲವಾರು ಇಂಟ್ರೆಸ್ಟಿಂಗ್ ಫೀಚರ್ಗಳನ್ನು ಒಳಗೊಂಡಿದೆ. ನೀವು ಅಥವಾ ನಿಮಗೆ ತಿಳಿದವರು Nothing Phone 2a ಲುಕ್ ಮತ್ತು ಡಿಸೈನ್ ನೋಡಿ ಮರು ಹೋಗಿ ಖರೀದಿಸಲು ಯೋಚಿಸುತ್ತಿದ್ದರೆ ಒಮ್ಮೆ ಇದರ ಟಾಪ್ 5 ಫೀಚರ್‌ಗಳನೊಮ್ಮೆ ಪರಿಶೀಲಸಿ ನಿರ್ಧರಿಸಲು ನಾವು ಈ ಕೆಳಗೆ ಹೈಲೈಟ್ ಸ್ಪೆಸಿಫಿಕೇಷನ್ಗಳನ್ನು ಪಟ್ಟಿ ಮಾಡಿದ್ದೇವೆ.

Also Read: ವೊಡಾಫೋನ್ ಐಡಿಯಾದ ಈ ಪ್ಲಾನ್ ವ್ಯಾಲಿಡಿಟಿ 28 ದಿನಗಳು! ಆದರೆ 1 ವರ್ಷಕ್ಕೆ ಉಚಿತ Disney+ Hotstar ಚಂದಾದಾರಿಕೆ ಲಭ್ಯ

Nothing Phone 2a ಸ್ಮಾರ್ಟ್ಫೋನ್ ಡಿಸ್ಪ್ಲೇ ಡೀಟೇಲ್ಸ್

ಈ ನಥಿಂಗ್ ಸ್ಮಾರ್ಟ್ಫೋನ್ 6.7 ಇಂಚಿನ Flexible AMOLED ಡಿಸ್ಪ್ಲೇಯನ್ನು 120Hz ರಿಫ್ರೆಶ್ ರೇಟ್‌ನೊಂದಿಗೆ 10 ಬಿಟ್ ಕಾಲರ್ ಪ್ಯಾನಲ್ ಜೊತೆಗೆ 1084 x 2412 ರೆಸುಲ್ಯೂಷನ್ ಹೊಂದಿದೆ. ಅಲ್ಲದೆ ನಿಮಗೆ 1300 ನಿಟ್ಸ್ ಪೀಕ್ ಬ್ರೈಟ್‌ನೆಸ್ ಮತ್ತು 1100 ನಿಟ್ಸ್ ಔಟ್ ಡೋರ್ ಬ್ರೈಟ್‌ನೆಸ್ ಅಂದ್ರೆ ದಿನದಲ್ಲೂ ಹೊರಗಿನ ಸೂರ್ಯನ ಹಾಜರಿಯಲ್ಲಿ ಸ್ಮಾರ್ಟ್ಫೋನ್ ಅನ್ನು ಸುಲಭವಾಗಿ ಓದಲು ಬಳಸಲು ಅನುಕೂಲಕರವಾಗಿದೆ. ಸ್ಮಾರ್ಟ್ಫೋನ್ ಡಿಸ್ಪ್ಲೇಯ ರಕ್ಷಣೆಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 5 ಪ್ರೊಟೆಕ್ಷನ್ ಅನ್ನು ಹೊಂದಿದೆ. ಫಿಂಗರ್‌ಪ್ರಿಂಟ್ ಸ್ಕ್ಯಾನರ್ ಮತ್ತು ಫೇಸ್ ಅನ್ಲಾಕ್ ಫೀಚರ್ಗಳನ್ನು ಡಿಸ್ಪ್ಲೇಯೊಳಗೆ ನೀಡಲಾಗಿದೆ.

Nothing Phone 2a ಸ್ಮಾರ್ಟ್ಫೋನ್ ಕ್ಯಾಮೆರಾ ಡೀಟೇಲ್ಸ್

ಈ ನಥಿಂಗ್ ಫೋನ್ ಸ್ಮಾರ್ಟ್ಫೋನ್ ಡುಯಲ್ ಕ್ಯಾಮೆರಾ ಸೆಟಪ್ ಜೊತೆಗೆ 50MP ಪ್ರೈಮರಿ ಕ್ಯಾಮೆರಾ Sony IMX890 ಸೆನ್ಸರ್ ಅತ್ಯುತ್ತಮವಾದ ವಿಡಿಯೋ ಮತ್ತು ಇಮೇಜ್ ಸೆರೆಹಿಡಿಯಲು ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಇಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಫೀಚರ್ಗಳನ್ನು ಆಟೋ ಫೋಕಸ್‌ನೊಂದಿಗೆ ಒಳಗೊಂಡಿದೆ. ಮತ್ತೊಂದು ಸಹ ಅದೇ 50MP ಕ್ಯಾಮೆರಾ F2.2 ಅಪರ್ಚರ್ನೊಂದಿಗೆ ಅಲ್ಟ್ರಾ ವೈಡ್ ಆಂಗಲ್ ಸೆನ್ಸರ್ 114° FOV ಹೊಂದಿದೆ. ಕೊನೆಯದಾಗಿ ಫೋನ್ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 32MP ಕ್ಯಾಮೆರಾ F2.2 ಅಪರ್ಚರ್ನೊಂದಿಗೆ ಒಳಗೊಂಡಿದೆ.

ನಥಿಂಗ್ Phone 2a ಸ್ಮಾರ್ಟ್ಫೋನ್ ಹಾರ್ಡ್ವೇರ್ ಡೀಟೇಲ್ಸ್

ಸ್ಮಾರ್ಟ್ಫೋನ್ ಲೇಟೆಸ್ಟ್ MediaTek Dimensity 7200 Pro ಪ್ರೊಸೆಸರ್ ಹೊಂದಿದ್ದು ಸ್ಮಾರ್ಟ್ಫೋನ್ ಒಟ್ಟಾರೆಯಾಗಿ ನಿಮಗೆ ಮೂರು ರೂಪಾಂತರಗಳಲ್ಲಿ ಬಿಡುಗಡೆಯಾಗಿದ್ದು 8GB + 128GB, 8GB + 256GB ಮತ್ತು 12GB + 256GB ಇವೆಲ್ಲವೂ ನಿಮಗೆ LPDDR5 RAM ಮತ್ತು ಸ್ಟೋರೇಜ್‌ನೊಂದಿಗೆ ಆಕ್ಟಾ-ಕೋರ್ 4 ನಾನೋ ಮೀಟರ್ CPU ಅನ್ನು ಹೊಂದಿದೆ. ಸ್ಮಾರ್ಟ್ಫೋನ್ ಆಂಡ್ರಾಯ್ಡ್ 14 ನಲ್ಲಿ ನಿರ್ಮಿಸಲಾದ ಒಂದು ಕ್ಲೀನ್ ಸಾಫ್ಟ್‌ವೇರ್ ಅನುಭವವನ್ನು ನೀಡುತ್ತದೆ. ಫೋನ್ ಪ್ಯೂರ್ ಆಂಡ್ರಾಯ್ಡ್‌ನಲ್ಲಿ ನಡೆಯುತ್ತದೆ. ಫೋನ್ ಪೂರ್ತಿಯಾಗಿ 2.8GHz ಕ್ಲಾಕ್ ಸ್ಪೀಡ್ ಅನ್ನು ಹೊಂದಿದೆ ಅಂದ್ರೆ ನಿಮ್ಮ ಫೋನ್ ಮಲ್ಟಿ ಟಾಸ್ಕ್ ಮಾಡಿದರು ಸ್ಲೋ ಆಗದೆ ಬೆಣ್ಣೆಯಂತೆ ನಡೆಯುವುದರಲ್ಲಿ ಸಂದೇಹವಿಲ್ಲ.

ನಥಿಂಗ್ Phone 2a ಸ್ಮಾರ್ಟ್ಫೋನ್ ಬ್ಯಾಟರಿ ಮತ್ತು ಸೆನ್ಸರ್ ಡೀಟೇಲ್ಸ್

5,000mAh ಬ್ಯಾಟರಿಯು ದಿನವಿಡೀ ಇರುತ್ತದೆ ಮತ್ತು ನೀವು ಅದನ್ನು 45W ವರೆಗೆ ಚಾರ್ಜ್ ಮಾಡಬಹುದು (ನಿಮ್ಮ ವಿಲೇವಾರಿಯಲ್ಲಿ ನೀವು ಕಂಪ್ಲೈಂಟ್ ಫಾಸ್ಟ್ ಚಾರ್ಜರ್ ಹೊಂದಿದ್ದರೆ). ಹ್ಯಾಪ್ಟಿಕ್ ಪ್ರತಿಕ್ರಿಯೆಯು ಉತ್ತಮ ಮತ್ತು ಬಿಗಿಯಾದಾಗ ಡ್ಯುಯಲ್ ಸ್ಪೀಕರ್‌ಗಳು ಜೋರಾಗಿರುತ್ತವೆ. ಮೈಕ್ರೊಫೋನ್ ಗುಣಮಟ್ಟ (ಅವುಗಳಲ್ಲಿ ಎರಡು ಇವೆ) ಉತ್ತಮವಾಗಿದೆ, ಉತ್ತಮವಾಗಿಲ್ಲ. ನೀವು 5G, ಹಾಗೆಯೇ NFC, Wi-Fi 6 ಮತ್ತು ಬ್ಲೂಟೂತ್ 5.3 ಗೆ ಬೆಂಬಲವನ್ನು ಪಡೆಯುತ್ತೀರಿ.

Nothing Phone 2a ಸ್ಮಾರ್ಟ್ಫೋನ್ ಬೆಲೆ ಮತ್ತು ಲಭ್ಯತೆ ಡೀಟೇಲ್ಸ್

8GB RAM + 128GB ಸ್ಟೋರೇಜ್‌ > ₹23,999
8GB RAM + 256GB ಸ್ಟೋರೇಜ್‌ > ₹25,999
12GB RAM + 256GB ಸ್ಟೋರೇಜ್‌ > ₹27,999

ಈ ಲೇಟೆಸ್ಟ್ Nothing Phone 2a ಸ್ಮಾರ್ಟ್ಫೋನ್ ಇದನ್ನು ಆಸಕ್ತರು ಪಾರದರ್ಶಕ ಬಿಳಿ ಮತ್ತು ಪಾರದರ್ಶಕ ಕಪ್ಪು ಬಣ್ಣದ ಆಯ್ಕೆಗಳಲ್ಲಿ ನೀಡಲಾಗುತ್ತದೆ. ಈ ಫೋನ್‌ ಮೊದಲ ಮಾರಾಟವನ್ನು 12ನೇ ಮಾರ್ಚ್ 2024 ರಿಂದ ಫ್ಲಿಪ್‌ಕಾರ್ಟ್ ಮೂಲಕ ಮಾರಾಟವಾಗಲಿದೆ. ಇವುಗಳ ಬೆಲೆ ಮತ್ತು ರೂಪಾಂತರಗಳ ಬಗ್ಗೆ ಈ ಮೇಲೆ ಪಟ್ಟಿ ಮಾಡಲಾಗಿದೆ.

Also Join: ಲೇಟೆಸ್ಟ್ ಕನ್ನಡ ಟೆಕ್ನಾಲಜಿ ನ್ಯೂಸ್ ಅಪ್ಡೇಟ್‌ಗಳಿಗಾಗಿ ನಮ್ಮ ವಾಟ್ಸಾಪ್ Channel View ಮಾಡಿ ಸೇರಿಕೊಳ್ಳಿ!

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :