Nothing Phone 2: ಸ್ಮಾರ್ಟ್ಫೋನ್ ದುನಿಯಾಕ್ಕೆ ಕಾಲಿಟ್ಟ ನಥಿಂಗ್ ಫೋನ್ 2 ಬೆಲೆ ಮತ್ತು ಫೀಚರ್‌ಗಳನ್ನು ತಿಳಿಯಿರಿ

Updated on 14-Jul-2023
HIGHLIGHTS

ನಥಿಂಗ್ ಈಗ ತನ್ನ ಎರಡನೇ ಸ್ಮಾರ್ಟ್ಫೋನ್ ನಥಿಂಗ್ ಫೋನ್ 2 (Nothing Phone 2) ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ

ನಥಿಂಗ್ ಫೋನ್ 2 (Nothing Phone 2) ಸ್ಮಾರ್ಟ್ಫೋನ್ ಆರಂಭಿಕ ₹44,999 ರೂಗಳ ಬೆಲೆಯಲ್ಲಿ ಅನಾವರಣಗೊಂಡಿದೆ

ಫೋನ್ (2) ಅಡ್ರಿನೊ 730 GPU ಜೊತೆಗೆ ಜೋಡಿಸಲಾದ ಹೆಚ್ಚು ಪವರ್‌ಫುಲ್‌ Snapdragon 8+ Gen 1 ಪ್ರೊಸೆಸರ್ ಹೊಂದಿದೆ.

Nothing Phone 2: ಅತಿ ನಿರೀಕ್ಷಿತ ಮತ್ತು ಜನಪ್ರಿಯ ಸ್ಮಾರ್ಟ್ಫೋನ್ ಬ್ರಾಂಡ್ ನಥಿಂಗ್ ಈಗ ತನ್ನ ಎರಡನೇ ಸ್ಮಾರ್ಟ್ಫೋನ್ ನಥಿಂಗ್ ಫೋನ್ 2 (Nothing Phone 2) ಅನ್ನು ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ. ಇದರ ಆರಂಭಿಕ ₹44,999 ರೂಗಳ ಬೆಲೆಯಲ್ಲಿ ಅನಾವರಣಗೊಂಡಿದೆ. ಮತ್ತು ಜುಲೈ 21 ರಿಂದ ಫ್ಲಿಪ್‌ಕಾರ್ಟ್‌ನಲ್ಲಿ ಲಭ್ಯವಿರುತ್ತದೆ. ಫೋನ್ (2) ಅಡ್ರಿನೊ 730 GPU ಜೊತೆಗೆ ಜೋಡಿಸಲಾದ ಹೆಚ್ಚು ಪವರ್‌ಫುಲ್‌ Snapdragon 8+ Gen 1 ಪ್ರೊಸೆಸರ್ ಹೊಂದಿದೆ.

Nothing Phone 2 ಡಿಸ್ಪ್ಲೇ

ಹ್ಯಾಂಡ್‌ಸೆಟ್ 6.7 ಇಂಚಿನ ಪೂರ್ಣ HD+ (1080 x 2412 ಪಿಕ್ಸೆಲ್‌ಗಳು) LTPO OLED ಡಿಸ್‌ಪ್ಲೇ ಜೊತೆಗೆ 1Hz ಮತ್ತು 120Hz ನಡುವಿನ ಹೊಂದಾಣಿಕೆಯ ರಿಫ್ರೆಶ್ ರೇಟ್ ಅನ್ನು 240Hz ಟಚ್ ಸ್ಯಾಂಪ್ಲಿಂಗ್ ರೇಟ್ ಜೊತೆಗೆ SGS ಲೋ ಬ್ಲೂ ಲೈಟ್ ಮತ್ತು HDR10+ ಪ್ರಮಾಣೀಕರಣವನ್ನು ಹೊಂದಿದೆ.

https://twitter.com/nothing/status/1678788738971848704?ref_src=twsrc%5Etfw

Nothing Phone 2 ಕ್ಯಾಮೆರಾ

ನಥಿಂಗ್ ಫೋನ್ (2) 50MP ಪ್ರೈಮರಿ ಕ್ಯಾಮೆರಾದೊಂದಿಗೆ ಸೋನಿ IMX890 ಸೆನ್ಸರ್ ಅನ್ನು f/1.88 ಅಪರ್ಚರ್ ಜೊತೆಗೆ ಮತ್ತು 1/1.56 ಇಂಚಿನ ಸೆನ್ಸರ್ ಗಾತ್ರದೊಂದಿಗೆ ಬರುತ್ತದೆ. ಮತ್ತೊಂದು ಸಹ 50MP ಅಲ್ಟ್ರಾ ವೈಡ್ ಮತ್ತು ಮ್ಯಾಕ್ರೋ ಸೆನ್ಸರ್ ಆಪ್ಟಿಕಲ್ ಇಮೇಜ್ ಸ್ಟೆಬಿಲೈಸೇಶನ್ (OIS) ಮತ್ತು ಎಲೆಕ್ಟ್ರಾನಿಕ್ ಇಮೇಜ್ ಸ್ಟೆಬಿಲೈಸೇಶನ್ (EIS) ಜೊತೆಗೆ ಹಲವು ವೈಶಿಷ್ಟ್ಯಗಳೊಂದಿಗೆ ಬರುತ್ತದೆ. ಮುಂಭಾಗದಲ್ಲಿ ಹೊಸ ಸ್ಮಾರ್ಟ್‌ಫೋನ್ 32MP ಸೋನಿ IMX615 ಸೆನ್ಸರ್ ಜೊತೆಗೆ f/2.45 ಅಪರ್ಚರ್ ಮತ್ತು 1/2.74 ಇಂಚಿನ ಸೆನ್ಸರ್ ಗಾತ್ರದೊಂದಿಗೆ ಬರುತ್ತದೆ. ಅಂದ್ರೆ ಒಟ್ಟಾರೆಯಾಗಿ ಕ್ಯಾಮೆರಾ ವಿಭಾಗದಲ್ಲಿ ನಿಮಗೆ ನಂಬಲಾರದ 

Nothing Phone 2 ಬ್ಯಾಟರಿ ಮತ್ತು ಪ್ರೊಸೆಸರ್

ನಥಿಂಗ್ ಫೋನ್ (2) ಸ್ಮಾರ್ಟ್ಫೋನ್ 4700mAh ಬ್ಯಾಟರಿಯೊಂದಿಗೆ 45W PPS ಚಾರ್ಜಿಂಗ್‌ನೊಂದಿಗೆ ಬರುತ್ತದೆ ಇದು ಕೇವಲ 55 ನಿಮಿಷಗಳಲ್ಲಿ ಫೋನ್ ಅನ್ನು 0 ರಿಂದ 100 ವರೆಗೆ ತೆಗೆದುಕೊಳ್ಳಬಹುದು. ಫೋನ್ (2) ಗ್ಲಿಫ್ ಇಂಟರ್ಫೇಸ್‌ಗೆ ಪ್ರಮುಖ ಅಪ್‌ಗ್ರೇಡ್‌ಗಳೊಂದಿಗೆ ಬರುತ್ತದೆ. ಈಗಾಗಲೇ ಮೇಲೆ ಹೇಳಿರುವಂತೆ ಫೋನ್ ಫೋನ್ (2) ಅಡ್ರಿನೊ 730 GPU ಜೊತೆಗೆ ಜೋಡಿಸಲಾದ ಹೆಚ್ಚು ಪವರ್‌ಫುಲ್‌ Snapdragon 8+ Gen 1 ಪ್ರೊಸೆಸರ್ ಅನ್ನು 12GB RAM ಮತ್ತು 256GB ಸ್ಟೋರೇಜ್ ಜೊತೆಗೆ ಬರುತ್ತದೆ.

Nothing Phone 2 ಭಾರತದ ಬೆಲೆ ಮತ್ತು ಲಭ್ಯತೆ:

ಈ ಫೋನ್ ಜುಲೈ 21 ರಿಂದ ಫ್ಲಿಪ್‌ಕಾರ್ಟ್ ಮತ್ತು ಕೆಲವು ರಿಟೇಲ್ ಔಟ್‌ಲೆಟ್‌ಗಳಲ್ಲಿ ₹44,999 ರ ಆರಂಭಿಕ ಬೆಲೆಗೆ ನಥಿಂಗ್ ಫೋನ್ (2) ಲಭ್ಯವಿರುತ್ತದೆ. ಹೊಸ ಸ್ಮಾರ್ಟ್‌ಫೋನ್ 8GB RAM/128 GB ಸ್ಟೋರೇಜ್ ರೂಪಾಂತರಕ್ಕೆ ₹44,999 ಬೆಲೆಯಲ್ಲಿ ಲಭ್ಯವಿರುತ್ತದೆ. ಅದೇ ರೀತಿ 12 GB RAM/128 GB ಸ್ಟೋರೇಜ್ ರೂಪಾಂತರದ ಬೆಲೆ 49,999 ಮತ್ತು 12GB RAM/256 GB ಸ್ಟೋರೇಜ್ ರೂಪಾಂತರದ ಬೆಲೆ ₹54,999 ರೂಗಳಾಗಿದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :