ಸ್ಮಾರ್ಟ್ಫೋನ್ ದುನಿಯಾದಲ್ಲಿ ಬಹು ನಿರೀಕ್ಷಿತ ಮತ್ತು ಅತಿ ಹೆಚ್ಚು ಸದ್ದು ಮಾಡುತ್ತಿರುವ Nothing Phone (2) ಸ್ಮಾರ್ಟ್ಫೋನ್ ಅತಿ ಶೀಘ್ರದಲ್ಲೇ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಕಾಲಿಡಲಿದೆ. ಈವರೆಗೆ ಕಂಪನಿ ಸದ್ಯಕ್ಕೆ ಜೂಲೈ ತಿಂಗಳನ್ನು ಮಾತ್ರ ಖಚಿತಪಡಿಸಿದ್ದು ಯಾವ ದಿನದಂದು ಬಿಡುಗಡೆಯಾಗಲಿದೆ ಎಂದು ಕಂಪನಿ ಇನ್ನೂ ಖಚಿತಪಡಿಸಿಲ್ಲ. ಆದರೆ ಕಂಪನಿ ತನ್ನ ಮುಂಬರಲಿರುವ Nothing Phone (2) ಸ್ಮಾರ್ಟ್ಫೋನ್ ಬಗ್ಗೆ ಮತ್ತಷ್ಟು ಮಾಹಿತಿಗಳನ್ನು ಸಹ ಬಿಡುಗಡೆಗೊಳಿಸಿದ್ದು ಅದರಲ್ಲೂ ಮುಖ್ಯವಾಗಿ ಈಗ ಇದರ ಹಾರ್ಡ್ವೇರ್, ಸಾಫ್ಟ್ವೇರ್ ಮತ್ತು ಡಿಸೈನ್ ಈ ವಿಷಯಗಳು ನಮ್ಮನ್ನು ಹೆಚ್ಚು ಉತ್ಸಾಹಿಸುತ್ತಿದೆ.
ಈವರೆಗೆ ಮುಂಬರಲಿರುವ Nothing Phone (2) ಸ್ಮಾರ್ಟ್ಫೋನ್ ಬಗ್ಗೆ ಹೊರ ಬಂದಿರುವ ಮಾಹಿತಿಯನ್ನು ನೋಡುವುದಾದರೆ ಈಗಾಗಲೇ ಬಿಡುಗಡೆಯಾಗಿರುವ Nothing Phone (1) ಫೋನ್'ಗಿಂತ ಹೆಚ್ಚು ಉತ್ತಮವಾಗಲಿರುವುದಾಗಿ ನಿರೀಕ್ಷಿಸಲಾಗಿದೆ. ಅದರಲ್ಲೂ ಹಾರ್ಡ್ವೇರ್, ಸಾಫ್ಟ್ವೇರ್ ಮತ್ತು ಡಿಸೈನಿಂಗ್ ವಿಷಯಗಳಲ್ಲಿ ನಿಜಕ್ಕೂ ಭಾರಿ ವ್ಯತ್ಯಾಸದೊಂದಿಗೆ ಭಾರಿ ಅಪ್‌ಗ್ರೇಡ್ ಜೊತೆಗೆ ಬರುವ ನಿರೀಕ್ಷೆಯಿದೆ. Nothing Phone (1) ಅಧಿಕೃತವಾಗಲು ಇನ್ನೂ ಕೆಲವು ದಿನಗಳು ಬಾಕಿ ಉಳಿದಿವೆ. ಆದರೆ ಕಂಪನಿಯು ದೃಢಪಡಿಸಿದ ಕೆಲವು ವಿವರಗಳು ಈಗಾಗಲೇ ಇಂಟರ್ನೆಟ್ ಲೋಕದಲ್ಲಿ ಹರಡುತ್ತಿವೆ.
https://twitter.com/nothing/status/1664323425224081431?ref_src=twsrc%5Etfw
ಬಹು ನಿರೀಕ್ಷಿತ ಮುಂಬರುವ ನಥಿಂಗ್ ಫೋನ್ (2) ಅತ್ಯಂತ ಪವರ್ಫುಲ್ ಚಿಪ್ ಕ್ವಾಲ್ಕಾಮ್ ಸ್ನಾಪ್‌ಡ್ರಾಗನ್ 8 ಜನ್ 2 ಪ್ರೊಸೆಸರ್‌ನಿಂದ ನಡೆಯಲಿದೆ ಎಂದು ಕಾರ್ಲ್ ಪೀ-ಹೆಡ್ ಅಧಿಕೃತ ಟ್ವಿಟ್ಟರ್ ಮೂಲಕ ದೃಢಪಡಿಸಿದ್ದಾರೆ. ಅಂದ್ರೆ ಇದರ ಮೊದಲ ಸ್ಮಾರ್ಟ್ಫೋನ್ ಹೋಲಿಸಿದರೆ ಈ ಚಿಪ್ ನಿಜಕ್ಕೂ ಭಾರಿ ಅಪ್‌ಗ್ರೇಡ್ ಆಗಿದೆ. ಈಗಾಗಲೇ ನಾವು Nothing Phone (1) ಸ್ಮಾರ್ಟ್ಫೋನ್ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಹೊಂದಿದ್ದೇವೆ.
ಈ ಮೂಲಕ ನಥಿಂಗ್ ಫೋನ್ (2) ಬಹುಕಾರ್ಯಕವನ್ನು (Multitask) ಉತ್ತಮವಾಗಿ ನಿರ್ವಹಿಸುವ ನಿರೀಕ್ಷೆಗಳಿವೆ. ಕೆಲವು ಸೋರಿಕೆಗಳು ಮುಂಬರುವ ನಥಿಂಗ್ ಫೋನ್ 12GB RAM ಮತ್ತು ಕನಿಷ್ಠ 128GB ಇಂಟರ್ನಲ್ ಸ್ಟೋರೇಜ್ ಹೊಂದಿರುವುದಾಗಿ ಮಾಹಿತಿಗಳು ಇಂಟರ್ನೆಟ್‌ನಲ್ಲಿ ಹರಿದಾಡುತ್ತಿವೆ. ಒಂದು ವೇಳೆ ಕಂಪನಿ ಇದರ ವೇರಿಯಂಟ್ ಅನ್ನು ಮಾರುಕಟ್ಟೆಗೆ ತಂದರೆ ನಿಜಕ್ಕೂ ಹೆಚ್ಚು ಉಪಯುಕ್ತವಾಗಲಿದೆ.
ಇದರ ಮತ್ತೊಂದು ವಿಶೇಷತೆ ಅಂದ್ರೆ ಕಂಪನಿಯು ತನ್ನ ಟ್ವೀಟ್‌ಗಳಲ್ಲಿ ಮುಂಬರಲಿರುವ ಸ್ಮಾರ್ಟ್ಫೋನ್ ಬಗ್ಗೆ ಹೊಸ ಸಾಫ್ಟ್‌ವೇರ್ ವಿವರಗಳನ್ನು ಬಹಿರಂಗಪಡಿಸುವುದನ್ನು ಸಹ ಟ್ವಿಟ್ಟರ್ ಮೂಲಕ ನೀಡಿದೆ. ಏಕೆಂದರೆ ಈ ಜನಪ್ರಿಯ ಟೆಕ್ ಕಂಪನಿಯು ಇದರ ಆಂಡ್ರಾಯ್ಡ್ ಮತ್ತು ಸೆಕ್ಯೂರಿಟಿ ಪ್ಯಾಚ್ ಬಗ್ಗೆ ಮಾಹಿತಿಯನ್ನು ನೀಡಿದೆ. ಈ Nothing Phone (2) ಸ್ಮಾರ್ಟ್ಫೋನ್ ಸಹ 3 ವರ್ಷಗಳ ಆಂಡ್ರಾಯ್ಡ್ ಅಪ್‍ಡೇಟ್ ಮತ್ತು 4 ವರ್ಷಗಳ ಸೆಕ್ಯೂರಿಟಿ ಅಪ್‍ಡೇಟ್‌ಗಳನ್ನು ಸಹ ಪಡೆಯುತ್ತದೆ. ಒಟ್ಟಾರೆಯಾಗಿ ಕಂಪನಿಯು ಗ್ರಾಹಕರಿಗೆ ಸ್ಟಾಕ್ ಆಂಡ್ರಾಯ್ಡ್ ಅನುಭವವನ್ನು ನೀಡುವ ಗುರಿಯನ್ನು ಹೊಂದಿದೆ.
ಕಳೆದ ವರ್ಷ ಬಿಡುಗಡೆಯಾದ ಸ್ಮಾರ್ಟ್ಫೋನ್ ವಿಭಾಗದಲ್ಲಿ ನಥಿಂಗ್ ಫೋನ್ (1) ಅತ್ಯುತ್ತಮ ಸ್ಮಾರ್ಟ್‌ಫೋನ್ ಡೆಸೈನಿಂಗ್ ಜೊತೆಗೆ ತಲೆ ಎತ್ತಿತ್ತು ಈ ಮೂಲಕ ಕಂಪನಿಯು ಅದೇ ಮಾದರಿಯ ಕೆಲಸವನ್ನು ಮುಂಬರಲಿರುವ ಫೋನ್ಗಳಲ್ಲಿ ತೋರುವ ನಿರೀಕ್ಷೆಗಳಿವೆ. ಏಕೆಂದರೆ ಕಳೆದ ವರ್ಷ ಆ ಪರಂಪರೆ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಹೊಸ ಬದಲಾವಣೆಗಳನ್ನೇ ನೀಡಿದ ಕಾರಣ ಇದನ್ನು ಮುಂದಕ್ಕೆ ಕೊಂಡೊಯ್ಯುವ ಗುರಿಯನ್ನು ಹೊಂದಿದೆ. ಸದ್ಯಕ್ಕೆ Nothing Phone (2) ಅಂತಿಮ ವಿನ್ಯಾಸವನ್ನು ಇನ್ನೂ ದೃಢೀಕರಿಸಲಾಗಿಲ್ಲವಾದರೂ ಕೆಲವು ವರದಿಗಳ ಪ್ರಕಾರ ಇದು ಗ್ಲಿಫ್ ಪ್ಯಾಟ್ರನ್ ಮತ್ತು ಕಸ್ಟಮೈಸ್ ಜೊತೆಗಿನ ಕೆಲವು ಡಿಸೈನಿಂಗ್ ಬದಲಾವಣೆಗಳನ್ನು ಒಳಗೊಂಡಿರುವುದಾಗಿ ವದಂತಿಗಳಿವೆ.