Nothing Phone 1 vs Nothing Phone 2: ಹಳೆ ಫೋನ್‌ಗಿಂತ ಹೊಸ ಫೋನ್‌ನಲ್ಲಿನ 5 ವ್ಯತ್ಯಾಸ ಮತ್ತು ವಿಶೇಷತೆಗಳು!

Updated on 14-Jul-2023
HIGHLIGHTS

ಡೈನಾಮಿಕ್ ಜಗತ್ತಿನಲ್ಲಿ Nothing Phone 1 vs Nothing Phone 2 ಸ್ಮಾರ್ಟ್‌ಫೋನ್‌ಗಳು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಲಭ್ಯ

ಈ ಎರಡು Nothing Phone 1 vs Nothing Phone 2 ಫೋನ್‌ಗಳ ಟಾಪ್ 5 ವಿಶೇಷ ಫೀಚರ್ಗಳ ವಿಶೇಷತೆಗಳನ್ನು ತಿಳಿಯೋಣ

ಈ Nothing ಬ್ರಾಂಡ್ ತನ್ನ ವಿಶಿಷ್ಟ ಡಿಸೈನ್ ಮತ್ತು ಸ್ಪರ್ಧಾತ್ಮಕ ಬೆಲೆಗಳಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡುತ್ತಿದೆ

ಇಂದು ಸ್ಮಾರ್ಟ್‌ಫೋನ್‌ಗಳ ಡೈನಾಮಿಕ್ ಜಗತ್ತಿನಲ್ಲಿ Nothing Phone 1 vs Nothing Phone 2 ಸ್ಮಾರ್ಟ್‌ಫೋನ್‌ಗಳು ಮಧ್ಯಮ ಶ್ರೇಣಿಯ ವಿಭಾಗದಲ್ಲಿ ಲಭ್ಯವಿದೆ. ಈ 2 ಸ್ಮಾರ್ಟ್‌ಫೋನ್‌ಗಳನ್ನು ಒನ್‌ಪ್ಲಸ್‌ ಸಹ ಸಂಸ್ಥಾಪಕ (Carl Pei) ನಿರ್ಮಿಸಿರುವ ಬ್ರ್ಯಾಂಡ್‌ ಆಗಿದೆ. ಈ ಬ್ರಾಂಡ್ ತನ್ನ ವಿಶಿಷ್ಟ ಡಿಸೈನ್ ಮತ್ತು ಸ್ಪರ್ಧಾತ್ಮಕ ಬೆಲೆಗಳಿಂದಾಗಿ ಜಾಗತಿಕ ಮಾರುಕಟ್ಟೆಯಲ್ಲಿ ಅತಿ ಹೆಚ್ಚಾಗಿ ಸದ್ದು ಮಾಡುತ್ತಿದೆ. ಈ ಲೇಖನದ ಪೂರ್ತಿ ಹೋಲಿಕೆಯಲ್ಲಿ ಈ ಎರಡು Nothing Phone 1 vs Nothing Phone 2 ಫೋನ್‌ಗಳ ಟಾಪ್ 5 ವಿಶೇಷ ಫೀಚರ್ಗಳಲ್ಲಿ ಅಂದ್ರೆ ಹಳೆ ಫೋನ್‌ಗಿಂತ ಹೊಸ ಫೋನ್‌ನಲ್ಲಿನ ಯಾವ ವ್ಯತ್ಯಾಸ ಮತ್ತು ವಿಶೇಷತೆಗಳಿವೆ ಎಂಬುದನ್ನು ತಿಳಿಯೋಣ.

Nothing Phone 1 vs Nothing Phone 2 ಡಿಸ್ಪ್ಲೇ ಕ್ವಾಲಿಟಿ

ಮೊದಲಿಗೆ Nothing Phone 1 ಡಿಸ್ಪ್ಲೇಯನ್ನು ನೋಡುವುದುದಾದರೆ 6.55 ಇಂಚಿನ Full HD+ ಡಿಸ್ಪ್ಲೇ 1080 x 2400 ಪಿಕ್ಸೆಲ್ OLED ಪ್ಯಾನಲ್  ಜೊತೆಗೆ ಬರುತ್ತದೆ. ಇದರ ಕ್ರಮವಾಗಿ Nothing Phone 2 ಸಹ ಅದೇ ಮಾದರಿಯ 6.7 ಇಂಚಿನ Full HD+ ಡಿಸ್ಪ್ಲೇ 1080 x 2400 ಪಿಕ್ಸೆಲ್ OLED ಪ್ಯಾನಲ್ ಹೊಂದಿದ್ದು ಕೇವಲ ಸೆಲ್ಫಿ ಕ್ಯಾಮೆರಾದ ಜಾಗವನ್ನು ಮಾತ್ರ ಬದಲಾಯಿಸಲಾಗಿದೆ. 

Nothing Phone 1 vs Nothing Phone 2 ಕ್ಯಾಮೆರಾ ಮತ್ತು ಸೆನ್ಸರ್

ಎರಡನೇಯದಾಗಿ ಕ್ಯಾಮೆರಾವನ್ನು ನೋಡುವುದಾದರೆ Nothing Phone 1 ಫೋನ್ ಡುಯಲ್ ಕ್ಯಾಮೆರಾ ಸೆಟಪ್ ಹೊಂದಿದ್ದು 50MP ಪ್ರೈಮರಿ ಕ್ಯಾಮೆರಾ f/1.9 ಅಪರ್ಚರ್ ಜೊತೆಗೆ ಬಂದ್ರೆ ಮತ್ತೊಂದು ಸಹ 50MP ಅಲ್ಟ್ರಾ ವೈಡ್ ಕ್ಯಾಮೆರಾ f/2.2 ಅಪರ್ಚರ್ ಜೊತೆಗೆ ಬರುತ್ತದೆ. Nothing Phone 2 ಸಹ ಇದನ್ನು ಮುಂದುವರಿಸಿದ್ದು ಯಾತ ಪ್ರಕಾರದಲ್ಲಿ 50MP ಪ್ರೈಮರಿ ಕ್ಯಾಮೆರಾ f/1.9 ಅಪರ್ಚರ್ ಜೊತೆಗೆ ಬಂದ್ರೆ ಇದರ ಮತ್ತೊಂದು ಸಹ 50MP ಅಲ್ಟ್ರಾ ವೈಡ್ ಕ್ಯಾಮೆರಾ f/2.2 ಅಪರ್ಚರ್ ಜೊತೆಗೆ ಬರುತ್ತದೆ. Nothing Phone 1 ಫೋನ್ ಸೆಲ್ಫಿಗಾಗಿ 16MP ಹೊಂದಿದ್ದರೆ Nothing Phone 2 ಫೋನ್ ಸೆಲ್ಫಿಗಾಗಿ 32MP ಹೊಂದಿದೆ. 

Nothing Phone 1 vs Nothing Phone 2 ಪ್ರೊಸೆಸರ್ ಮತ್ತು ಸ್ಟೋರೇಜ್

ಮೂರನೇಯದಾಗಿ ಪ್ರೊಸೆಸರ್ ಬಗ್ಗೆ ಮಾತನಾಡುವುದಾದರೆ Nothing Phone 1 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್ Snapdragon 778G+ ಚಿಪ್‌ಸೆಟ್‌ನಿಂದ ಚಾಲಿತವಾಗಿದ್ದು ಆಕ್ಟಾ-ಕೋರ್ ಪ್ರೊಸೆಸರ್ 2.5 GHz ನಲ್ಲಿ ಕಾರ್ಯನಿರ್ವಹಿಸುತ್ತದೆ. ನಂತರ Nothing Phone 2 ಸ್ವಲ್ಪ ಪವರ್ಫುಲ್ ಕ್ವಾಲ್‌ಕಾಮ್ Snapdragon 8+ Gen 1 ನಿಂದ ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ. ಇದು ಸುಗಮ ಮತ್ತು ಹೆಚ್ಚು ಸ್ಪಂದಿಸುವ ಬಳಕೆದಾರರ ಅನುಭವವನ್ನು ಒದಗಿಸುತ್ತದೆ. ಈ ಎರಡು Nothing Phone 1 ಮತ್ತು Nothing Phone 2 ಫೋನ್ಗಳು 8GB RAM ಜೊತೆಗೆ ಬಿಡುಗಡೆಯಾಗಿದೆ. 

Nothing Phone 1 vs Nothing Phone 2 ಬ್ಯಾಟರಿ ಮತ್ತು ಕನೆಕ್ಟಿವಿಟಿ

ನಾಲ್ಕನೇಯದಾಗಿ ಈ ಫೋನ್ಗಳ ಬ್ಯಾಟರಿಯನ್ನು ನೋಡುವುದಾದರೆ ಮೊದಲಿಗೆ Nothing Phone 1 ಫೋನ್ 4500mAh ಬ್ಯಾಟರಿಯನ್ನು ಫಾಸ್ಟ್ ಚಾರ್ಜ್ 33W ಅನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಫೋನನ್ನು ಫಾಸ್ಟ್ ವಯರ್ಲೆಸ್ ಚಾರ್ಜಿಂಗ್ 15W ಸಹ ಸಪೋರ್ಟ್ ಮಾಡುತ್ತದೆ. ಇದರ ಕ್ರಮವಾಗಿ Nothing Phone 2 ಸಹ ಸ್ವಲ್ಪ ಹೆಚ್ಚಾಗಿ ಅಂದ್ರೆ 4700mAh ಬ್ಯಾಟರಿಯನ್ನು ಫಾಸ್ಟ್ ಚಾರ್ಜ್ 33W ಅನ್ನು ಬೆಂಬಲಿಸುತ್ತದೆ. ಅಲ್ಲದೆ ಈ ಫೋನನ್ನು ಫಾಸ್ಟ್ ವಯರ್ಲೆಸ್ ಚಾರ್ಜಿಂಗ್ 15W ಸಹ ಸಪೋರ್ಟ್ ಮಾಡುತ್ತದೆ. 

Nothing Phone 1 vs Nothing Phone 2 ಬೆಲೆ ಮತ್ತು ಲಭ್ಯತೆ

ಕೊನೆಯದಾಗಿ ಈ ಎರಡು ಸ್ಮಾರ್ಟ್‌ಫೋನ್‌ಗಳ ಬೆಲೆ ಮತ್ತು ಲಭ್ಯತೆಯ ಬಗ್ಗೆ ನೋಡುವುದಾದರೆ ಮೊದಲಿಗೆ Nothing Phone 1 ಫ್ಲಿಪ್ಕಾರ್ಟ್ ಅಲ್ಲಿ ಲಭ್ಯವಿದ್ದು ಇದರ ಆರಂಭಿಕ 8GB RAM ಮತ್ತು 128GB ವೇರಿಯಂಟ್ ₹28,999 ರೂಗಳಿಂದ ಶುರುವಾಗುತ್ತದೆ. ಇದರ ಕ್ರಮವಾಗಿ Nothing Phone 2 ಸಹ ಅದೇ ಫ್ಲಿಪ್ಕಾರ್ಟ್ ಅಲ್ಲಿ ಲಭ್ಯವಾಗಲಿದ್ದು ಇದರ ಮೊದಲ ಮಾರಾಟ 21 ಜೂಲೈ ಲಭ್ಯವಾಗಲಿದ್ದು ಆರಂಭಿಕ 8GB RAM ಮತ್ತು 256GB ವೇರಿಯಂಟ್ ₹44,999 ರೂಗಳಿಂದ ಶುರುವಾಗುತ್ತದೆ.

Ravi Rao

Kannada Tech Editor: Ravi Rao is an Indian technology Journalist who has been covering day to day consumer Technology News, Features, How To and much more in Kannada since 2016.

Connect On :