3 ದಿನಗಳ Powerful ಬ್ಯಾಟರಿಯೊಂದಿಗೆ Nokia G42 5G ಕೈಗೆಟಕುವ ಬೆಲೆಗೆ ಲಾಂಚ್ | Tech News

Updated on 11-Oct-2023
HIGHLIGHTS

Nokia G42 5G ಸ್ಮಾರ್ಟ್ಫೋನ್ (16GB + 256GB ) ಎಡಿಷನ್ ಬಿಡುಗಡೆಗೊಳಿಸಿದೆ.

Nokia G42 5G ಮೊಬೈಲ್ ಸ್ಟೋರ್ ಮತ್ತು nokia.com ವೆಬ್‌ಸೈಟ್‌ನಲ್ಲಿ ಕೇವಲ 16,999/- ರೂಗಳಿಗೆ ಲಭ್ಯ

999 ರೂ.ಗಳ ಮೌಲ್ಯದ ಸೀಮಿತ ಅವಧಿಯ ಕಾಂಪ್ಲಿಮೆಂಟರಿ ಬ್ಲೂಟೂತ್ ಹೆಡ್‌ಫೋನ್ ಸಹ ಪಡೆಯುತ್ತೀರಿ.

ಭಾರತದಲ್ಲಿ ಜನಪ್ರಾಯ ಸ್ಮಾರ್ಟ್ಫೋನ್ ಬ್ರಾಂಡ್ Nokia G42 5G ಸ್ಮಾರ್ಟ್ಫೋನ್ (16GB + 256GB ) ಎಡಿಷನ್ ಬಿಡುಗಡೆಗೊಳಿಸಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ನಿಮ್ಮ ಹತ್ತಿರದ ಮೊಬೈಲ್ ಸ್ಟೋರ್ ಮತ್ತು nokia.com ವೆಬ್‌ಸೈಟ್‌ನಲ್ಲಿ ವಿಶೇಷವಾಗಿ ಕೇವಲ 16,999/- ರೂಗಳಿಗೆ ಲಭ್ಯವಿದೆ. ಫೋನ್ ಸೋ ಗ್ರೇ, ಸೋ ಪರ್ಪಲ್ ಮತ್ತು ಸೋ ಪಿಂಕ್ ಸ್ಟೈಲಿಶ್ ಬಣ್ಣಗಳೊಂದಿಗೆ ಲಭ್ಯವಿದೆ. ಈ ಫೋನ್‌ ಪವರ್ಫುಲ್ ಫೀಚರ್ಗಳ ಜೊತೆಗೆ ಆಕರ್ಷಕವಾಗಿ ಸೀಮಿತ ಅವಧಿಯ ಆರಂಭಿಕ ಕೊಡುಗೆಗಳೊಂದಿಗೆ ಲಭ್ಯವಿದೆ. ನೋಕಿಯಾ ಜಿ42 5ಜಿ ಖರೀದಿಸಿದಾಗ 999 ರೂ.ಗಳ ಮೌಲ್ಯದ ಕಾಂಪ್ಲಿಮೆಂಟರಿ ಬ್ಲೂಟೂತ್ ಹೆಡ್‌ಫೋನ್ ಸಹ ಪಡೆಯುತ್ತೀರಿ.

Nokia G42 5G ಬೆಲೆ ಮತ್ತು ಲಭ್ಯತೆ ಯ ವಿವರ

ಈ ನೋಕಿಯಾ ಜಿ42 5ಜಿ ಸ್ಮಾರ್ಟ್ಫೋನ್ (16GB + 256GB ) ಎಡಿಷನ್ ಬಿಡುಗಡೆಗೊಳಿಸಿದೆ. ಅಲ್ಲದೆ ಈ ಸ್ಮಾರ್ಟ್ಫೋನ್ ನಿಮ್ಮ ಹತ್ತಿರದ ಮೊಬೈಲ್ ಸ್ಟೋರ್ ಮತ್ತು ನೋಕಿಯಾ ವೆಬ್‌ಸೈಟ್‌ನಲ್ಲಿ ವಿಶೇಷವಾಗಿ ಕೇವಲ 16,999/- ರೂಗಳಿಗೆ ಲಭ್ಯವಿದೆ. ಫೋನ್ ಸೋ ಗ್ರೇ, ಸೋ ಪರ್ಪಲ್ ಮತ್ತು ಸೋ ಪಿಂಕ್ ಸ್ಟೈಲಿಶ್ ಬಣ್ಣಗಳೊಂದಿಗೆ ಲಭ್ಯವಿದೆ. ಈ ಫೋನ್‌ ಪವರ್ಫುಲ್ ಫೀಚರ್ಗಳ ಜೊತೆಗೆ ಆಕರ್ಷಕವಾಗಿ ಸೀಮಿತ ಅವಧಿಯ ಆರಂಭಿಕ ಕೊಡುಗೆಗಳೊಂದಿಗೆ ಲಭ್ಯವಿದೆ. ನೋಕಿಯಾ ಜಿ42 5ಜಿ ಸ್ಮಾರ್ಟ್ಫೋನ್ ಖರೀದಿಸಿದಾಗ 999 ರೂ.ಗಳ ಮೌಲ್ಯದ ಸೀಮಿತ ಅವಧಿಯ ಕಾಂಪ್ಲಿಮೆಂಟರಿ ಬ್ಲೂಟೂತ್ ಹೆಡ್‌ಫೋನ್ ಅನ್ನು ಸಹ ಪಡೆಯುತ್ತೀರಿ.

ಇದನ್ನೂ ಓದಿ: 108MP ಕ್ಯಾಮೆರಾ ಮತ್ತು 256GB ಸ್ಟೋರೇಜ್‌ನ ಈ 5G ಕಡಿಮೆ ಬೆಲೆಗೆ ಲಭ್ಯ

ನೋಕಿಯಾ ಜಿ42 5ಜಿ ಡಿಸ್ಪ್ಲೇ ಮತ್ತು ಪ್ರೊಸೆಸರ್ ವಿವರ

ಈ ಸ್ಮಾರ್ಟ್ಫೋನ್ 6.56 ಇಂಚಿನ HD+ ಡಿಸ್ಪ್ಲೇಯೊಂದಿಗೆ 90hz ರಿಫ್ರೆಶ್ ರೇಟ್ ಮತ್ತು 720×1612 ರೆಸುಲ್ಯೂಷನ್ ಜೊತೆಗೆ ಪ್ರೊಟೆಕ್ಷನ್‌ಗಾಗಿ ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3 ಸ್ಕ್ರೀನ್ ಅನ್ನು ಯುನಿಬಾಡಿ ಡಿಸೈನಿಂಗ್ ಹೊಂದಿದೆ. ಮತ್ತು 65% ಮರುಬಳಕೆ ಮಾಡಿದ ಪ್ಲಾಸ್ಟಿಕ್‌ನಿಂದ ತಯಾರಿಸಿದ ಇದರ ಬ್ಯಾಕ್ ಕವರ್ ಹೊಂದಿಸಲಾಗಿದೆ. ಈ ನೋಕಿಯಾ ಫೋನಿಗೆ Qualcomm Snapdragon 480+ 5G ಚಿಪ್ಸೆಟ್ ಪವರ್ ತುಂಬುತ್ತದೆ. ಇದರಲ್ಲಿ ಫಾಸ್ಟ್ 5G ತಂತ್ರಜ್ಞಾನವನ್ನು ವಿಶಾಲ ಬಳಕೆದಾರರ ವ್ಯಾಪ್ತಿಗೆ ಒದಗಿಸಲು ಒಂದು ಮಹತ್ವದ ಹೆಜ್ಜೆಯಾಗಿದೆ. ಆಂಡ್ರಾಯ್ಡ್ 13 ಬೆಂಬಲದೊಂದಿಗೆ 16GB RAM (8GB + 8GB ವರ್ಚುಲ್ RAM) ಮತ್ತು ವಿಶಾಲವಾದ 256GB ಸ್ಟೋರೇಜ್ ಹೊಂದಿದೆ.

ನೋಕಿಯಾ ಜಿ42 5ಜಿ ಕ್ಯಾಮೆರಾ ಮತ್ತು ಬ್ಯಾಟರಿ ವಿವರ

ಈ ಲೇಟೆಸ್ಟ್ ನೋಕಿಯಾ ಸ್ಮಾರ್ಟ್ಫೋನ್ ಟ್ರಿಪಲ್ ಕ್ಯಾಮೆರಾ ಸೆಟಪ್ ಹೊಂದಿದ್ದು ಪ್ರೈಮರಿ ಕ್ಯಾಮೆರಾ 50MP f/1.8 ಅಪರ್ಚರ್ನೊಂದಿಗೆ ಬಂದ್ರೆ ಎರಡನೇಯದು 2MP ಮ್ಯಾಕ್ರೋ ಮತ್ತು 2MP ಡೆಪ್ತ್ ಸೆನ್ಸರ್ ಹೊಂದಿದೆ. ಇದರ ಕ್ರಮವಾಗಿ ಮುಂಭಾಗದಲ್ಲಿ ಸೆಲ್ಫಿ ಮತ್ತು ವಿಡಿಯೋ ಕರೆಗಳಿಗಾಗಿ 8MP ಕ್ಯಾಮೆರಾ ಸೆಟಪ್ ಅನ್ನು ಹೊಂದಿದೆ. ಕೊನೆಯದಾಗಿ ಟೈಪ್ ಸಿ ಪೋರ್ಟ್ ಜೊತೆಗಿನ ಈ 5000mAh ಪವರ್ಫುಲ್ ಬ್ಯಾಟರಿ ಒಮ್ಮೆ ಚಾರ್ಜ್ ಆದ್ರೆ 3 ದಿನಗಳ ಬ್ಯಾಕಪ್ ನೀಡುವುದಾಗಿ ಕಂಪನಿ ಹೇಳಿದೆ. ಇದರೊಂದಿಗೆ 20W ಫಾಸ್ಟ್ ಚಾರ್ಜ್ ಅನ್ನು ಸಹ ಫೋನ್ ಸಪೋರ್ಟ್ ಮಾಡುತ್ತದೆ.

Ravi Rao

Ravi Rao is an Indian technology journalist who has been covering consumer technology news and reviews since 2016. He is a Senior Editor for Kannada at Digit.in

Connect On :